ಅಪ್ಪು ಜೊತೆ ಅಪ್ಪು ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾದ ಯುವ ರಾಜ್‌ಕುಮಾರ್. ಶೂಟಿಂಗ್ ಸಮಯ ಹೇಗಿತ್ತು? ಎಲ್ಲೆಲ್ಲಿ ಶೂಟಿಂಗ್ ಮಾಡಿದ್ದು ಎಂದು ಹಂಚಿಕೊಂಡಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ಅಪ್ಪು ಸಿನಿಮಾ ಇಂದು ರಿಲೀಸ್. ಚಿತ್ರದಲ್ಲಿದ್ದ ಪ್ರತಿಯೊಬ್ಬ ಕಲಾವಿದರು ತಮ್ಮ ಫ್ಯಾಮಿಲಿ ಜೊತೆ ಆಗಮಿಸಿ ಸಿನಿಮಾ ನೋಡಿದ್ದಾರೆ. ಈ ವೇಳೆ ಮಾವನ ಚಿತ್ರ ನೋಡಲು ಯುವ ರಾಜ್‌ಕುಮಾರ್ ಭಾಗಿಯಾಗಿದ್ದರು.
'ನಾನು ಯೋಚನೆ ಮಾಡುತ್ತಿದ್ದೆ ಇದು ರಿಲೀಸಾ ಅಥವಾ ರೀ-ರಿಲೀಸಾ ಅಂತ. ಯಾಕಂದ್ರೆ ಈ ಸಿನಿಮಾ ರಿಲೀಸ್ ಆದಾಗ ಫಸ್ಟ್ ಡೇ ಫಸ್ಟ್ ಶೋ ನೋಡಿದ್ದೆ. ಈಗ ಸಿನಿಮಾ ರೀ ರಿಲೀಸ್ ಆದಾಗಲೂ ಫಸ್ಟ್ ಡೇ ಫಸ್ಟ್ ಶೋ ನೋಡುತ್ತಿದ್ದೇನೆ. ಅದೇ ಎನರ್ಜಿ ಇದೆ. ಅದೇ ಜೋಷ್ ಇದೆ. ಈ ಸಿನಿಮಾ ಮೊದಲ ಬಾರಿಗೆ ನೋಡಿದಾಗ ಎಷ್ಟು ಖುಷಿ ಆಯ್ತೋ ಅಷ್ಟೇ ಖುಷಿಯಾಗಿದೆ. ಫ್ಯಾನ್ಸ್ ಎಂಜಾಯ್ ಮಾಡುತ್ತಿದ್ದಾರೆ. ಮ್ಯೂಸಿಕ್ ಆಗಲಿ ಸ್ಟೋರಿಯಾಗಲಿ ಈಗ ನೋಡಿದರೂ ಹೊಸತು ಅಂತ ಅನಿಸುತ್ತಿದೆ' ಎಂದು ಯುವ ರಾಜ್‌ಕುಮಾರ್ ಸಿನಿಮಾ ನೋಡಿ ಮಾತನಾಡಿದ್ದಾರೆ.
ರಂಜಾನ್ ಉಪವಾಸ ಬಿಟ್ಟು ಕಾಟೇರಮ್ಮ ದೇವಸ್ಥಾನಕ್ಕೆ ಓಡಿ ಬಂದ ರೀಲ್ಸ್ ರೇಶ್ಮಾ ಆಂಟಿ!
'ಅಪ್ಪು ಸಿನಿಮಾ ಶೂಟಿಂಗ್ ದಿನಗಳನ್ನು ನೆನಪಿಸಿಕೊಡರೆ. ಈ ಸಿನಿಮಾ ಇಡೀ ಶೂಟಿಂಗ್ ಮಾಡುವಾಗ ಇದ್ದೀನಿ. ರಾಮಯ್ಯ ಕಾಲೇಜ್‌ನಲ್ಲಿ ಶೂಟಿಂಗ್ ಮಾಡಿದರು. ನಮ್ಮ ಮನೆಯ ಹತ್ತಿರ ಶೂಟ್ ಮಾಡಿದ್ದಾರೆ. ಸದಾಶಿವನಗರದಲ್ಲಿ ಸಿಕ್ಕಾಪಟ್ಟೆ ಶೂಟ್ ಮಾಡಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಶೂಟಿಂಗ್ ಮಾಡಿದ್ದಾರೆ. ಎಲ್ಲಿಂದಲ್ಲೋ ಆರಂಭವೀ ಹಾಡನ್ನು ಕುಲುಮನಾಲಿಯಲ್ಲಿ ಶೂಟಿಂಗ್ ಮಾಡಿದ್ವಿ. ನಾನು ಆ ಹಾಡನ್ನು ಇಡೀ ಶೂಟಿಂಗ್‌ನಲ್ಲಿ ಜೊತೆಗೆ ಇದ್ದೆ. ನಾನು ಮೊದಲ ಬಾರಿ ಅಲ್ಲಿನ ಬೆಟ್ಟ ಹಾಗೂ ಸ್ನೋ ನೋಡಿದ್ದು ಅದು ಈ ಹಾಡಿನ ಮುಖಾಂತರವೇ. ಎಲ್ಲಾ ನೆನಪುಗಳು ವಾಪಸ್ ಬರುತ್ತಿದೆ'ಎಂದು ಯುವರಾಜ್‌ಕುಮಾರ್ ಹೇಳಿದ್ದಾರೆ.
ದೇವರ ಮುಂದೆ ಯಾರೂ ಸೂಪರ್ ಸ್ಟಾರ್ ಅಲ್ಲ...: ಧ್ರುವ ಸರ್ಜಾ ಪತ್ನಿ ಹೇಳಿಕೆ ವೈರಲ್
'ಪ್ರತಿ ವರ್ಷ ಅವರ ಹುಟ್ಟುಹಬ್ಬ ಆಚರಣೆ ಜೋರಾಗಿ ಆಗುತ್ತಲೇ ಇದೆ. 50ನೇ ವರ್ಷವನ್ನಂತೂ ತುಂಬಾನೇ ಜೋರಾಗಿ ಮಾಡುತ್ತಿದ್ದಾರೆ. ಪ್ರತಿಯೊಂದು ಏರಿಯಾ, ಊರು, ಹಳ್ಳಿ ಫ್ಯಾನ್ಸ್ ಎಲ್ಲರೂ ಅವರವರ ಮಟ್ಟಿಗೆ ಏನಾಗುತ್ತಿದೆಯೋ ಎಲ್ಲರೂ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಅನ್ನದಾನ, ರಕ್ತದಾ, ಕ್ರಿಕೆಟ್ ಮ್ಯಾಚ್ ಹಾಗೂ ಕಬಡ್ಡಿ ಮ್ಯಾಚ್ ನಡೆಯುತ್ತಿದೆ. ಪ್ರತಿ ವರ್ಷ ಅವರನ್ನು ಮೆರೆಸುವುದಂತೂ ನಡೀತಾನೇ ಇದೆ. ಆ ಸಾಂಗ್ ಮತ್ತು ಜನರು ಎನರ್ಜಿ ಇದೆಯಲ್ಲ ಅದು ಕೂರುವುದಕ್ಕೆ ಬಿಡುವುದಿಲ್ಲ. ಎಲ್ಲರನ್ನು ಎಬ್ಬಿಸುತ್ತಿದೆ. ಸಖತ್ ಎಂಜಾಯ್ ಮಾಡುತ್ತಿದ್ದೇನೆ. ಎಲ್ಲರೂ ಅಷ್ಟೇ ಎಂಜಾಯ್ ಮಾಡುತ್ತಿದ್ದಾರೆ. ಪ್ರತಿಯೊಬ್ಬರು ಬಂದು ನೋಡಲೇಬೇಕು. ಯಾವಾಗಲೂ ಹೇಳೋದು ಒಂದೇ ಡೈಲಾಗ್. ಬೆಂಗಳೂರಿಗೆ ಸಾವಿರ ಜನ ಬರ್ತಾರೆ ಹೋಗ್ತಾರೆ ಇಲ್ಲಿ ಇರೋದು ಅವರು ಒಬ್ಬರೇ ಅಪ್ಪು..ಲೋಕಲ್' ಎಂದಿದ್ದಾರೆ ಯುವ.
ಫ್ಯಾನ್ಸ್ ಎದುರು ಆ ಹುಡುಗನಿಗೆ 'ಏಯ್ ಮನೆ ಹಿಂದೆ ಏನೋ ಇದೆ' ಎಂದು ಪುನೀತ್ ಗದರಿದ್ದು ಯಾಕೆ; ವಿಡಿಯೋ ವೈರಲ್