ಅದು ಹೇಗೆ ಡಾ ರಾಜ್‌ಕುಮಾರ್ ಅಲ್ಲಿಗೆ ಬಂದಿದ್ದರು? ಇಂದು ನಮ್ಮೊಂದಿಗೇ ಇಲ್ಲದ ಡಾ ರಾಜ್‌ಕುಮಾರ್ ಅಲ್ಲಿಗೆ ಬಂದಿದ್ದಾದರೂ ಹೇಗೆ ಎಂಬ ನಿಮ್ಮ ಕುತೂಹಲದ ಪ್ರಶ್ನೆಗೆ ಮುಂದಿದೆ ಉತ್ತರ.. ಹೌದು, ತೇಜಸ್ವಿ ಹಾಗೂ ಶಿವಶ್ರೀ ಮದುವೆಗೆ ಡಾ ರಾಜ್‌ಕುಮಾರ್ ಶರೀರದ ರೂಪದಲ್ಲಿ..
ಸಂಸದ ತೇಜಸ್ವಿ ಸೂರ್ಯ (Tejasvi Surya) ಹಾಗೂ ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ (Sivasri Skandaprasad) ಮದುವೆಯಲ್ಲಿ ಕೂಡ ಅಣ್ಣಾವ್ರು ಬಂದಿದ್ದರು. ಹೌದು, ಅಲ್ಲಿ ಡಾ ರಾಜ್‌ಕುಮಾರ್ ಬಂದಿದ್ದು ದೈಹಿಕವಾಗಿ ಅಲ್ಲ, ಆದರೆ ಬೇರೆ ರೂಪದಲ್ಲಿ ಬಂದಿದ್ದರು. ತೇಜಸ್ವಿ ಸೂರ್ಯ ಹಾಗೂ ಶಿವಶ್ರೀ ಮದುವೆ ಸರಳ ಹಾಗು ಸುಮಧುರ ಎನ್ನುವಂತೆ ಮುಗಿದಿದೆ. ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಯಡ್ಯೂರಪ್ಪ ಸೇರಿದಂತೆ ಬಹಳಷ್ಟು ಗಣ್ಯರು ಮದುವೆಗೆ ಆಗಮಿಸಿ ಶುಭ ಕೋರಿದ್ದಾರೆ. ಆದರೆ, ಅಲ್ಲೂ ಕೂಡ ಕನ್ನಡದ ಮೇರು ನಟ ಡಾ ರಾಜ್‌ಕುಮಾರ್ (Dr Rajkumar) ಹಾಜರಿ ಇತ್ತು.
ಅದು ಹೇಗೆ ಡಾ ರಾಜ್‌ಕುಮಾರ್ ಅಲ್ಲಿಗೆ ಬಂದಿದ್ದರು? ಇಂದು ನಮ್ಮೊಂದಿಗೇ ಇಲ್ಲದ ಡಾ ರಾಜ್‌ಕುಮಾರ್ ಅಲ್ಲಿಗೆ ಬಂದಿದ್ದಾದರೂ ಹೇಗೆ ಎಂಬ ನಿಮ್ಮ ಕುತೂಹಲದ ಪ್ರಶ್ನೆಗೆ ಮುಂದಿದೆ ಉತ್ತರ.. ಹೌದು, ತೇಜಸ್ವಿ ಹಾಗೂ ಶಿವಶ್ರೀ ಮದುವೆಗೆ ಡಾ ರಾಜ್‌ಕುಮಾರ್ ಶರೀರದ ರೂಪದಲ್ಲಿ ಬಂದಿಲ್ಲ. ಆದರೆ ಶಾರೀರದ ರೂಪದಲ್ಲಿ ಬಂದಿದ್ದಾರೆ. ಅಂದರೆ, ಅಣ್ಣಾವ್ರ ನಟನೆಯ 'ರಾಜ ನನ್ನ ರಾಜ' ಚಿತ್ರದ 'ನಿನದೇ ನೆನಪು ದಿನವೂ ಮನದಲ್ಲಿ..' ಹಾಡನ್ನು ಹಾಡಿದ್ದಾರೆ ನವಜೋಡಿ ತೇಜಸ್ವಿ ಸೂರ್ಯ ಹಾಗೂ ಶಿವಶ್ರೀ ಸ್ಕಂದ ಪ್ರಸಾದ್. ಆ ಹಾಡಿಗೆ ಸಿನಿಮಾದಲ್ಲಿ ಧ್ವನಿಯಾಗಿದ್ದು ಗಾಯಕ ಪಿಬಿ ಶ್ರೀನಿವಾಸ್.
ಇದು.. ಇದು.. ವೈರಲ್ ಆಗ್ಬೇಕಾಗಿರೋದು! ಡಾ ರಾಜ್‌ಕುಮಾರ್ ಬಗ್ಗೆ ಕಿಶೋರ್ ಹೇಳಿದ್ದೇನು?
ನವದಂಪತಿಗಳು 'ನಿನದೆ ನೆನಪು ದಿನವೂ ಮನದಲ್ಲಿ..' ಡ್ಯೂಯೆಟ್ ಸಾಂಗ್ ಹಾಡಿ ಅಲ್ಲಿದ್ದ ಎಲ್ಲರ ಮುಖದಲ್ಲಿ ಖುಷಿಯನ್ನು ಮೂಡಿಸಿದ್ದಲ್ಲದೇ ಸ್ವತಃ ತಾವೂ ಕೂಡ ಖುಷಿಪಟ್ಟರು. ಈ ಮೂಲಕ ಅಲ್ಲೂ ಕೂಡ ಕನ್ನಡದ ಕಂಪು ಬೀರಿದ್ದೂ ಅಲ್ಲದೇ, ಕನ್ನಡದ ಮೇರು ನಟ ಡಾ ರಾಜ್‌ಕುಮಾರ್ ನೆನಪು ಎಲ್ಲರ ಮನದಲ್ಲಿ ಮೂಡುವಂತೆ ಮಾಡಲಾಯ್ತು. ಒಟ್ಟಿನಲ್ಲಿ ಅಲ್ಲೂ ಕೂಡ ಕನ್ನಡದ ಆಸ್ತಿ ಅಣ್ಣಾವ್ರ ನೆನಪು ಮತ್ತೆ ಮೂಡಿ ಬಂದಿದೆ. ಯಾವತ್ತೂ ಕನ್ನಡ ನಾಡು ಮರೆಯದಂತೆ ಡಾ ರಾಜ್‌ಕುಮಾರ್ ಅವರು ತಮ್ಮ ಹಾಡು ಹಾಗೂ ಸಿನಿಮಾ ಮೂಲಕ ಕನ್ನಡಿಗರ ಮನದಲ್ಲಿ ಅಚ್ಚಳಿಯದೇ ಇರುತ್ತಾರೆ.
ಅಂದಹಾಗೆ, ಸಂಸದ ತೇಜಸ್ವಿ ಸೂರ್ಯ ಹಾಗೂ ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಜೋಡಿ ತಮ್ಮ ಮದುವೆಯಲ್ಲಿ (9 ಮಾರ್ಚ್ 2025) ಹಾಡಿದ್ದಾರೆ. ಶಿವಶ್ರೀ ಅವರು ವೃತ್ತಿಪರವಾಗಿ ಗಾಯಕಿಯೇ ಆಗಿದ್ದಾರೆ. ಆದರೆ ತೇಜಸ್ವಿ ಸೂರ್ಯ ಅವರು ಗಾಯಕರು ಅಲ್ಲದಿದ್ದರೂ ತುಂಬಾ ಚೆನ್ನಾಗಿ ಹಾಡುತ್ತಾರೆ. ಹಲವು ಸಭೆ-ಸಮಾರಂಭಗಳಲ್ಲಿ, ವೇದಿಕೆಗಳಲ್ಲಿ ಸಂಸದ ತೇಜಸ್ವಿ ಸೂರ್ಯ ಹಾಡಿದ್ದಾರೆ. ಅವರು ಹಾಡನ್ನು ಮೆಚ್ಚಿ ಅಲ್ಲಿದ್ದವರು ಮಾತ್ರವಲ್ಲ, ಆ ವಿಡಿಯೋ ನೋಡಿದವರೂ ಕೂಡ ಹೊಗಳಿ ಕಾಮೆಂಟ್ ಹಾಕಿದ್ದಾರೆ. ತೇಜಸ್ವಿ-ಶಿವಶ್ರೀ ಮದುವೆಯಲ್ಲಿ ಕೂಡ ಡಾ ರಾಜ್‌ಕುಮಾರ್ ಹಾಡು ಕೇಳಿಬಂದಿದ್ದು ಇದೀಗ ಸುದ್ದಿಯಾಗಿದೆ.
Appu: ವೀರೇಶ್ ಥಿಯೇಟರ್‌ಗೆ ಬಂದ ರಕ್ಷಿತಾ ಪ್ರೇಮ್, ಬಂದ ದಾರಿ ಮರೆಯದೇ 'ಅಪ್ಪು' ಮರುಬಿಡುಗಡೆಗೆ ಹಾಜರಿ!