ನಟಿ ಸೌಂದರ್ಯಗಿತ್ತು ಕ್ಲಾಸ್ಟ್ರೋಫೋಬಿಯಾ ಎಂದ ರಮೇಶ್; ಏನೀ ಕಾಯಿಲೆ?

By Suvarna NewsFirst Published Apr 16, 2024, 5:10 PM IST
Highlights

ಮಹಾನಟಿ ಕಾರ್ಯಕ್ರಮದಲ್ಲಿ ನಟ ರಮೇಶ್ ಅರವಿಂದ್, ನಟಿ ಸೌಂದರ್ಯಗೆ ಕ್ಲಾಸ್ಟ್ರೋಫೋಬಿಯಾ ಇತ್ತು ಎಂದು ಹೇಳಿದ್ದಾರೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ಕೂಡಾ ಈ ಸಮಸ್ಯೆ ಹೊಂದಿದ್ದರು. 

'ಆಪ್ತಮಿತ್ರ' ಚಿತ್ರದಲ್ಲಿ ನಟಿ ಸೌಂದರ್ಯ ನಾಗವಲ್ಲಿ ಅಭಿನಯ ಮೆಚ್ಚದವರಿಲ್ಲ. ಕಳೆದ ವಾರ ಮಹಾನಟಿ ಕಾರ್ಯಕ್ರಮದ ಜಜ್ ಆಗಿರುವ ರಮೇಶ್ ಅರವಿಂದ್ ಕೂಡಾ ಸೌಂದರ್ಯ ಅವರು ನಾಗವಲ್ಲಿಯಾಗಿ ಪರಕಾಯ ಪ್ರವೇಶ ಮಾಡಿದ್ದರು ಎಂದು ಆ ಸಮಯವನ್ನು ಸ್ಮರಿಸಿಕೊಂಡರು. ಇದೇ ಸಂದರ್ಭದಲ್ಲಿ ನಟ ಸೌಂದರ್ಯ ಕುರಿತು ವಿಷಯವೊಂದನ್ನು ಬಹಿರಂಗಪಡಿಸಿದರು- ಅದೇ ನಟಿಗೆ ಕ್ಲಾಸ್ಟ್ರೋಫೋಬಿಯಾ ಇತ್ತು ಎಂಬುದು. 

ಸಾವಿಗೀಡಾದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್‌ಗೆ ಕೂಡಾ ಕ್ಲಾಸ್ಟ್ರೋಫೋಬಿಯಾ ಇತ್ತು ಎಂದು ಆತನ ಗೆಳತಿಯರಾದ ಅಂಕಿತಾ ಲೋಕಂಡೆ ಮತ್ತು ರಿಯಾ ಚಕ್ರವರ್ತಿ ಹೇಳಿದ್ದರು. ಇದಲ್ಲದೆ, ಬಾಲಿವುಡ್ ನಟ ಅಜಯ್ ದೇವಗನ್ ಕೂಡಾ ತಮಗೆ ಈ ಸಮಸ್ಯೆ ಇರುವುದಾಗಿ ಹೇಳಿಕೊಂಡಿದ್ದಾರೆ. ಅದರಲ್ಲೂ ಒಮ್ಮೆ ಲಿಫ್ಟ್ ಬಿದ್ದದ್ದನ್ನು ನೋಡಿದ ಮೇಲಂತೂ ಅಜಯ್‌ಗೆ ಲಿಫ್ಟ್ ಒಳ ಹೋಗುವುದೆಂದರೆ ಭಯವಂತೆ. 

ಕೌನ್ ಬನೇಗಾ ಕರೋಡ್‌ಪತಿ 16ಗೆ ಮತ್ತೆ ಅಮಿತಾಬ್ ನಿರೂಪಕ; ನೋಂದಣಿ ಮಾಡ್ಕೊಳೋದು ಹೇಗೆ?
 

ಇಷ್ಟಕ್ಕೂ ಈ ಕ್ಲಾಸ್ಟ್ರೋಫೋಬಿಯಾ ಎಂದರೇನು?
ಕ್ಲಾಸ್ಟ್ರೋಫೋಬಿಯಾ ಅತ್ಯಂತ ಸಾಮಾನ್ಯವಾದ ಫೋಬಿಯಾಗಳಲ್ಲಿ ಒಂದಾಗಿದೆ. ಕ್ಲಾಸ್ಟ್ರೋಫೋಬಿಯಾ ಎಂದರೆ ಬಿಗಿಯಾದ ಅಥವಾ ಕಿಕ್ಕಿರಿದ ಸ್ಥಳಗಳಲ್ಲಿ ಇರುವ ಭಯ. ಪ್ರಚೋದಿಸಿದಾಗ, ಫೋಬಿಯಾ ಪ್ಯಾನಿಕ್ ಅಟ್ಯಾಕ್ಗೆ ಕಾರಣವಾಗಬಹುದು. 
ಕಿಟಕಿಯಿಲ್ಲದ ಕೋಣೆಯಲ್ಲಿ ಲಾಕ್ ಆಗಿರುವುದು, ಕಿಕ್ಕಿರಿದ ಲಿಫ್ಟ್‌ನಲ್ಲಿ ಸಿಲುಕಿಕೊಳ್ಳುವುದು, ದಟ್ಟಣೆಯ ಹೆದ್ದಾರಿಯಲ್ಲಿ ಚಾಲನೆ ಮಾಡಿವುದು, ಸಣ್ಣ ಜಾಗದಲ್ಲಿ ಸಿಲುಕಿಕೊಳ್ಳುವುದು, ಸುರಂಗದಲ್ಲಿ ಹೋಗುವುದು, ಸ್ಕ್ಯಾನ್ ಮಾಡಿಸುವುದು, ಸಾರ್ವಜನಿಕ ಶೌಚಾಲಯಗಳ ಬಳಕೆ- ಇಂಥವು ಅತಿಯಾದ ಭಯ ತಂದರೆ, ಭಯದಿಂದ ಬೆವರುವುದು, ನಡುಗುವುದು, ತಲೆ ತಿರುಗಿ ಬೀಳುವುದು, ಉಸಿರಾಟ ಏರುಪೇರಾಗುವುದು, ವಾಕರಿಕೆ ಬರುವುದು, ಹೃದಯ ಬಡಿತ ಏರುಪೇರಾಗುವುದು, ಮೂರ್ಚೆ ಹೋಗುವುದು ಇತ್ಯಾದಿ ಲಕ್ಷಣಗಳು ಕಾಣಿಸಿಕೊಂಡರೆ ಅದು ಕ್ಲಾಸ್ಟ್ರೋಫೋಬಿಯಾ ಎಂದರ್ಥ. 

ಅಬ್ಬಬ್ಬಾ! ಮಗಳನ್ನು ಬೆಳ್ಳಿತೆರೆಗೆ ತರೋಕೆ ಈ ಚಿತ್ರಕ್ಕೆ ಶಾರೂಖ್ ಖಾನ್ ಮಾಡ್ತಿರೋ ಹೂಡಿಕೆ ಇಷ್ಟೊಂದಾ!
 

ಈ ರೋಗಲಕ್ಷಣಗಳು ಸೌಮ್ಯ ಅಥವಾ ತೀವ್ರವಾಗಿರಬಹುದು. ನೀವು ಕ್ಲಾಸ್ಟ್ರೋಫೋಬಿಯಾವನ್ನು ಅನುಭವಿಸುತ್ತಿದ್ದರೆ, ಅದಕ್ಕೆ ಮನೋತಜ್ಞರ ಬಳಿ ಚಿಕಿತ್ಸೆ ಪಡೆಯಿರಿ. 

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!