ಮಂಗಳವಾರ ನಿಧನರಾದ ಕನ್ನಡದ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಏ.16): ಪ್ರಧಾನಿ ನರೇಂದ್ರ ಮೋದಿ ನಟ ದ್ವಾರಕೀಶ್ ಅವರ ನಿಧನಕ್ಕೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಹಿರಿಯ ನಟ ದ್ವಾರಕೀಶ್ ಅವರು ತಮ್ಮ 81ನೇ ವರ್ಷದಲ್ಲಿ ಸಾವು ಕಂಡರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಸ್ವಗೃಹದಲ್ಲಿ ಬೆಳಗ್ಗೆ ನಿಧನರಾದರು. ನಟರಾಗಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದ ಅವರು ಚಿತ್ರ ನಿರ್ಮಾಣ ಹಾಗೂ ನಿರ್ದೇಶನದಲ್ಲಿಯೂ ಹೆಸರು ಮಾಡಿದ್ದರು. ಅವರ ನಿಧನಕ್ಕೆ ಸಂತಾಪ ಸೂಚಿಸಿ ಟ್ವೀಟ್ ಮಾಡಿರುವ ಮೋದಿ, 'ಚಲನಚಿತ್ರೋದ್ಯಮಕ್ಕೆ ದ್ವಾರಕೀಶ್ ಜಿ ಅವರ ಕೊಡುಗೆ ಅಪಾರವಾಗಿದೆ, ದಶಕಗಳ ಕಾಲ ಮರೆಯಲಾಗದ ಪಾತ್ರಗಳಲ್ಲಿ ಅವರು ನಟಿಸಿದ್ದಾರೆ ಮತ್ತು ಮಹೋನ್ನತ ಚಲನಚಿತ್ರಗಳನ್ನು ಅವರು ನೀಡಿದ್ದಾರೆ. ಪ್ರೇಕ್ಷಕರನ್ನು ಆಕರ್ಷಿಸುವ ಮತ್ತು ಯುವ ಪ್ರತಿಭೆಗಳನ್ನು ಬೆಂಬಲಿಸುವ ಅವರ ಸಾಮರ್ಥ್ಯವು ಕನ್ನಡ ಚಿತ್ರರಂಗವನ್ನು ರೂಪಿಸುವಲ್ಲಿ ಅವರ ಬಹುಮುಖಿ ಪಾತ್ರದ ಒಂದು ನೋಟವನ್ನು ನೀಡಿತು. ಅವರ ನಿಧನದಿಂದ ದುಃಖವಾಗಿದೆ. ಅವರ ಅಪೂರ್ವ ಪ್ರಯಾಣವನ್ನು ನಾವು ಸದಾ ಸ್ಮರಿಸುತ್ತೇವೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ದ್ವಾರಕೀಶ್ ಅನಾರೋಗ್ಯಕ್ಕೆ ತುತ್ತಾಗಿದ್ದರು. 1942 ಆಗಸ್ಟ್ 19 ರಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಜನಿಸಿದ್ದ ದ್ವಾರಕೀಶ್ ಅವರ ತಂದೆ ಶಾಮರಾವ್ ಹಾಗೂ ತಾಯಿ ಜಯಮ್ಮ. ಮೈಸೂರಿನ ಶಾರದಾ ವಿಲಾಸ್ ಹಾಗೂ ಬನುಮಯ್ಯ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ದ್ವಾರಕೀಶ್ ಮುಗಿಸಿದ್ದರು. ಸಿಪಿಸಿ ಪಾಕಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿದ್ದ ದ್ವಾರಕೀಶ್ ಬಳಿಕ ತಮ್ಮ ಸೋದರನ ಜೊತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಆರಂಭಿಸಿದ್ದರು.
undefined
Breaking: ಕಳ್ಳ ಕುಳ್ಳ ಖ್ಯಾತಿಯ ನಟ ದ್ವಾರಕೀಶ್ ನಿಧನ
1963ರ ಸುಮಾರಿಗೆ ವ್ಯಾಪಾರ ಉದ್ಯಮ ಬಿಟ್ಟು ನಟನೆಯತ್ತ ಮುಖಮಾಡಿದ ದ್ವಾರಕೀಶ್ ಆ ಬಳಿಕ ಹಿಂದೆ ನೋಡಿದ್ದೇ ಇಲ್ಲ. ಸೋದರ ಮಾವ ಹುಣಸೂರು ಕೃಷ್ಣಮೂರ್ತಿ ಅವರ ಮೂಲಕ 1964ರಲ್ಲಿ ‘ವೀರ ಸಂಕಲ್ಪ’ ಚಲನಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ದ್ವಾರಕೀಶ್, ನಟರಾಗಿ, ಹಾಸ್ಯ ಕಲಾವಿದರಾಗಿ, ಪೋಷಕ ನಟನಾಗಿ ಈವರೆಗೂ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.
ವಿಷ್ಣುವರ್ಧನ್ ಜೊತೆಗೆ ಬಿರುಕು ಮೂಡಿದ್ಯಾಕೆ? ದಾದಾ ಬಗ್ಗೆ ದ್ವಾರಕೀಶ್ ನಿಜವಾಗ್ಲೂ ಆ ಮಾತು ಹೇಳಿದ್ರಾ!
Dwarakish Ji’s contributions to the film industry are immense, spanning decades of unforgettable performances and groundbreaking films. His ability to captivate audiences and support young talent gave a glimpse of his multifaceted role in shaping Kannada cinema. Saddened by his…
— Narendra Modi (@narendramodi)