ನಮ್ಮದೇ ಕೆಜಿಎಫ್‌ ಎಂದ ಇಂಗ್ಲೆಂಡ್‌ನ ಮ್ಯಾನ್‌ಸಿಟಿ ಫುಟ್‌ಬಾಲ್‌ ಕ್ಲಬ್‌

By Kannadaprabha News  |  First Published Apr 21, 2022, 12:24 PM IST

ನಮ್ಮದೇ ಕೆಜಿಎಫ್‌ ಎಂದ ಇಂಗ್ಲೆಂಡ್‌ನ ಮ್ಯಾನ್‌ಸಿಟಿ ಫುಟ್‌ಬಾಲ್‌ ಕ್ಲಬ್‌

ಅಮುಲ್‌ ಜಾಹೀರಾತಿನಲ್ಲಿ ರಾಕಿಭಾಯ್‌ ಯಶ್‌ ಹವಾ


ಜಗತ್ತಿನ ಟಾಪ್‌ ಫುಟ್‌ಬಾಲ್‌ ಕ್ಲಬ್‌ ಎಂದೇ ಹೆಸರಾಗಿರುವ ಮ್ಯಾಂಚೆಸ್ಟರ್‌ ಸಿಟಿ ಫುಟ್‌ಬಾಲ್‌ ಕ್ಲಬ್‌ ಅರ್ಥಾತ್‌ ಮ್ಯಾನ್‌ಸಿಟಿ ಎಫ್‌ಸಿ, ತನ್ನ ಸೋಷಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ ಕೆಜಿಎಫ್‌ ಹೆಸರು ಬಳಸಿದೆ. ತನ್ನ ಕ್ಲಬ್‌ನ ಫುಟ್‌ಬಾಲ್‌ ಆಟಗಾರರಾದ ಕೆವಿನ್‌, ಗುಂಡೊಕನ್‌, ಫೆäಡೆನ್‌ ಎಂಬ ಹೆಸರಿನ ಮೊದಲಕ್ಷರವನ್ನು ಕೆಜಿಎಫ್‌ ಎಂಬ ಬೋಲ್ಡ್‌ ಅಕ್ಷರದಲ್ಲಿ ಪ್ರಕಟಿಸಿದೆ. ಜೊತೆಗೆ ‘ಮ್ಯಾನ್‌ಸಿಟಿಯಲ್ಲಿ ನಮ್ಮದೇ ಕೆಜಿಎಫ್‌’ ಅನ್ನುವ ಸ್ಟೇಟ್‌ಮೆಂಟ್‌ ನೀಡಿದೆ. ಇದು ವಿಶ್ವಾದ್ಯಂತ ಇರುವ ಭಾರತೀಯರು ಹೆಮ್ಮೆ ಪಡುವಂತೆ ಮಾಡಿದೆ. ಇದನ್ನು ಹೊಂಬಾಳೆ ಫಿಲಂಸ್‌ ರೀಟ್ವೀಟ್‌ ಮಾಡಿದ್ದು, ಸೋಷಿಯಲ್‌ ಮೀಡಿಯಾ ಪೇಜ್‌ನಲ್ಲಿ ಶೇರ್‌ ಮಾಡಿದೆ.

ಈ ಪೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಕನ್ನಡ ಸಿನಿಮಾದ ಕ್ರೇಜ್‌ ವಿಶ್ವಮಟ್ಟದಲ್ಲೂ ಯಾವ ಲೆವೆಲ್‌ಗೆ ಏರಿದೆ ಅನ್ನೋದು ಈ ಪೋಸ್ಟ್‌ನಿಂದ ಗೊತ್ತಾಗುತ್ತೆ ಅಂತ ಫ್ಯಾನ್ಸ್‌ ಪ್ರತಿಕ್ರಿಯೆ ನೀಡಿದ್ದಾರೆ.

Tap to resize

Latest Videos

undefined

ಅಮುಲ್‌ ಜಾಹೀರಾತಿನಲ್ಲಿ ರಾಕಿಭಾಯ್‌

ಹಾಲು, ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ಅಮುಲ್‌ ಸಂಸ್ಥೆ ತನ್ನ ಜಾಹೀರಾತಿನಲ್ಲಿ ಯಶ್‌ ನಟನೆಯ ‘ಕೆಜಿಎಫ್‌ 2’ ಚಿತ್ರದ ರಾಕಿಭಾಯ್‌ ಪಾತ್ರವನ್ನು ಕ್ರಿಯೇಟಿವ್‌ ಆಗಿ ಬಳಸಿಕೊಂಡಿದೆ. ರಾಕಿಭಾಯ್‌ ತನ್ನ ಬೈಕ್‌ಗೆ ಒರಗಿ ನಿಂತು ಅಮುಲ್‌ ಬೆಣ್ಣೆ ಹಚ್ಚಿರುವ ಬ್ರೆಡ್‌ ಹಿಡಿದುಕೊಂಡಿರುವ ಪೋಸ್ಟರಿನಲ್ಲಿ, ‘ಕೂಲರ್‌ನಲ್ಲಿ ಗೋಲ್ಡ್‌ ಇಡಿ, ಆಮೇಲೆ ಯಶ್‌ಗೆ ಹೇಳಿ’ ಅಂತ ಡೈಲಾಗ್‌ ಬಳಸಲಾಗಿದೆ. ಈ ಮೂಲಕ ಅಮುಲ್‌ ‘ಕೆಜಿಎಫ್‌ 2’ ಚಿತ್ರದ ಯಶಸ್ಸಿಗೆ ಅಭಿನಂದನೆ ತಿಳಿಸಿದೆ.

ರಾಕಿಂಗ್ ಸ್ಟಾರ್ ಯಶ್(Yash) ನಟನೆಯ ‘ಕೆಜಿಎಫ್ 2’(KGF 2) ಚಿತ್ರ ಬಿಡುಗಡೆಯಾದ ಐದೇ ದಿನದಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಒಂದು ವಾರದಲ್ಲಿ 600 ಕೋಟಿ ರೂ.ಗಳಷ್ಟು ಕಲೆಕ್ಷನ್ ಮಾಡುವ ಮೂಲಕ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಮಾಡಲು ಹೊರಟಿದೆ. ಬಾಲಿವುಡ್‌ನಲ್ಲಿ ಕಡಿಮೆ ಅವಧಿಯಲ್ಲಿ ಅಧಿಕ ಕಲೆಕ್ಷನ್ ಮಾಡಿದ ಚಿತ್ರ ಅನ್ನೋ ಹೆಗ್ಗಳಿಕೆಗೂ ಭಾಜನವಾಗಿದೆ. ಈ ಮೂಲಕ ಅಮೀರ್ ಖಾನ್‌ ನಟನೆಯ ‘ದಂಗಲ್’(Dangal) ಚಿತ್ರದ ದಾಖಲೆ ನೆಲಸಮ ಮಾಡಿದೆ. ಒಂದು ವಾರದೊಳಗೇ ‘ಕೆಜಿಎಫ್ 2’ ಹಿಂದಿ ವರ್ಷನ್ 219.56 ರೂ. ಕೋಟಿ ಸಂಗ್ರಹ ಮಾಡಿದೆ. ಬಾಲಿವುಡ್‌ನಲ್ಲಿ ಅತ್ಯಧಿಕ ಗಳಿಕೆ ಮಾಡಿದ್ದ ‘ದಂಗಲ್’ ಚಿತ್ರ ಮೊದಲ ವಾರದಲ್ಲಿ 197.54 ಕೋಟಿ ರೂ. ಸಂಗ್ರಹಿಸಿತ್ತು.

KGF 2 ಯಶ್ ಕಾಸ್ಟ್ಯೂಮ್ ಡಿಸೈನ್ ಮಾಡ್ತಿರೋದು ಈ ಹೆಣ್ಮಗಳು! ಯಾರೀಕೆ?

ಸದ್ಯ ಎಲ್ಲಾ ಕಡೆ ಕೆಜಿಎಫ್-2 ಸಿನಿಮಾದೆ ಸದ್ದು. ಎಲ್ಲಾ ಭಾಷೆಯಲ್ಲೂ ಕೆಜಿಎಫ್-2 ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಭಿಮಾನಿಗಳ ಜೊತೆಗೆ ಸಿನಿಮಾ ಗಣ್ಯರು ಸಹ ಕೆಜಿಎಫ್-2 ನೋಡಿ ಹಾಡಿಹೊಗಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಂತೂ ಕೆಜಿಎಫ್2 ಸಿನಿಮಾದ್ದೇ ಸದ್ದು. ಸಿನಿಮಾ ಬಿಡುಗಡೆಯಾಗಿ 7ದಿನಗಳಾದರೂ ಟ್ವಿಟ್ಟರ್ ನಲ್ಲಿ ಯಶ್ ಮತ್ತು ಕೆಜಿಎಫ್2 ಹೆಸರು ಟ್ರೆಂಡಿಂಗ್ ನಲ್ಲಿದೆ.

ಪ್ರಶಾಂತ್ ನೀಲ್ ನಿರ್ದೇಶನ, ಯಶ್ ಮತ್ತು ಸಂಜಯ್ ದತ್ ನಟನೆ, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಅರ್ಚನಾ ಜೋಯಿಶ್ ಹೀಗೆ ಪ್ರತಿಯೊಂದು ಪಾತ್ರಗಳು ಅಭಿಮಾನಿಗಳ ಹೃದಯ ಗೆದ್ದಿದೆ. ಆಕ್ಷನ್ ದೃಶ್ಯ, ಸಂಗೀತ ಮಾಸ್ ಎಲಿಮೆಂಟ್, ತಾಯಿ ಸೆಂಟಿಮೆಂಟ್ ಪ್ರತಿಯೊಂದು ವಿಭಾಗದಲ್ಲೂ ಕೆಜಿಎಫ್-2 ಅಭಿಮಾನಿಗಳ ಹೃದಯ ಗೆದ್ದಿದೆ. 

"

click me!