KGF 2 Movie ಕೆಜಿಎಫ್ 2 ಪ್ರದರ್ಶನದ ವೇಳೆ ಗುಂಡಿನ ದಾಳಿ, ಗಾಯಳು ಸ್ಥಿತಿ ಗಂಭೀರ!

Published : Apr 20, 2022, 04:40 AM IST
KGF 2 Movie ಕೆಜಿಎಫ್ 2 ಪ್ರದರ್ಶನದ ವೇಳೆ ಗುಂಡಿನ ದಾಳಿ, ಗಾಯಳು ಸ್ಥಿತಿ ಗಂಭೀರ!

ಸಾರಾಂಶ

ಕೆಜಿಎಫ್‌-2 ಸಿನಿಮಾ ನೋಡುತ್ತಿದ್ದ ವೇಳೆ ಸಿಡಿದ ಗುಂಡು ಗಾಯಾಳು ಸ್ಥಿತಿ ಗಂಭೀರ, ಹುಬ್ಬಳ್ಳಿ ಕಿಮ್ಸ್‌ಗೆ ದಾಖಲು ಹೊರಗೋಡಿದ ಚಿತ್ರಮಂದಿರದಲ್ಲಿದ್ದ ಜನ

ಹಾವೇರಿ(ಏ.20): ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ರಾಜಶ್ರೀ ಚಿತ್ರಮಂದಿರದಲ್ಲಿ ಮಂಗಳವಾರ ರಾತ್ರಿ ಯಶ್‌ ಅಭಿನಯದ ಕೆಜಿಎಫ್‌-2 ಸಿನಿಮಾ ಪ್ರದರ್ಶನದ ವೇಳೆ ಗುಂಡಿನ ದಾಳಿ ನಡೆದಿದ್ದು, ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ.

ಚಿತ್ರಮಂದಿರದಲ್ಲಿ ರಾತ್ರಿ ಶೋ ನಡೆಯುತ್ತಿದ್ದ ವೇಳೆಯ ಭಾರೀ ಶಬ್ದದೊಂದಿಗೆ ಗುಂಡಿನ ಸದ್ದು ಕೇಳಿ ಬಂದಿದೆ. ಶಿಗ್ಗಾಂವಿ ತಾಲೂಕಿನ ಮುಗಳಿ ಗ್ರಾಮದ ವಸಂತಕುಮಾರ ಶಿವಪುರ ಎಂಬ ಯುವಕನ ಹೊಟ್ಟೆಯ ಭಾಗಕ್ಕೆ ಎರಡು ಗುಂಡು ಸೇರಿದ್ದವು. ತೀವ್ರ ರಕ್ತದ ಮಡುವಿನಲ್ಲಿ ಬಿದ್ದಿದ್ದ ಆತನನ್ನು ತಕ್ಷಣ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ಸೇರಿಸಲಾಗಿದೆ. ಘಟನೆ ನಡೆಯುತ್ತಿದ್ದಂತೆಯೇ ಚಿತ್ರಮಂದಿರದಲ್ಲಿದ್ದ ಜನರೆಲ್ಲಾ ಗಾಬರಿಯಿಂದ ಚೆಲ್ಲಾಪಿಲ್ಲಿಯಾಗಿ ಹೊರಗೋಡಿ ಬಂದಿದ್ದಾರೆ.

ಬ್ಲಾಕ್ ಬಸ್ಟರ್ KGF 2 ವೀಕ್ಷಿಸಿದ RCB; ಕೊಹ್ಲಿ ಎಲ್ಲಿ ಎನ್ನುತ್ತಿರುವ ಫ್ಯಾನ್ಸ್

ಏನೋ ಭಾರೀ ಸೌಂಡ್‌ ಕೇಳ್ತರಿ. ಸ್ಫೋಟ ಆಗೈತಿ ಎಂದು ಹೆದ್ರಿ ನಾವೆಲ್ಲ ಹೊರಕ್ಕೆ ಓಡ ಬಂದ್ವರಿ. ಆ ಮ್ಯಾಗ್‌ ಗೊತ್ತಾತ್ರಿ, ಗುಂಡು ಹಾರಸ್ಯಾರ್‌ ಎಂದ. ನಾವು ಬಾಂಬ್‌ ಸ್ಫೋಟ್‌ ಆಗೈತಿ ಎಂದೇ ತಿಳಿದಿದ್ವಿ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಚಿತ್ರಮಂದಿರದಲ್ಲಿ ಇಬ್ಬರು ಯುವಕರ ನಡುವೆ ಗಲಾಟೆ ನಡೆದಿತ್ತು. ಆ ಸಂದರ್ಭದಲ್ಲಿ ಗುಂಡು ಹಾರಿಸಿದ ಯುವಕ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ವಸಂತಕುಮಾರಗೆ ಧಮಕಿ ನೀಡಿ ಚಿತ್ರಮಂದಿರದಿಂದ ಹೊರ ಹೋಗಿದ್ದ. ಸ್ವಲ್ಪವೇ ಸಮಯದಲ್ಲಿ ಮತ್ತೆ ವಾಪಸ್‌ ಬಂದು ಗುಂಡು ಹಾರಿಸಿ ಪರಾರಿಯಾಗಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಗುಂಡು ಹಾರಿಸಿದ ವ್ಯಕ್ತಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಗುಂಡು ಹಾರಿಸಿದ ವ್ಯಕ್ತಿ ಯಾರೆಂಬ ಕುರಿತೂ ಸಹ ಮಾಹಿತಿ ಇನ್ನೂ ಸಿಕ್ಕಿಲ್ಲ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ. ಶಿಗ್ಗಾಂವಿ ಪೊಲೀಸ್‌ರು ಸ್ಥಳಕ್ಕೆ ತೆರಳಿದ್ದು, ಪರಿಶೀಲಿಸುತ್ತಿದ್ದಾರೆ. ಚಿತ್ರಮಂದಿರದ ವ್ಯವಸ್ಥಾಪಕ ಸೇರಿದಂತೆ ಹಲವರನ್ನು ವಿಚಾರಿಸಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಮಾಹಿತಿ ತಿಳಿದ ಎಸ್ಪಿ ಹನುಮಂತರಾಯ ಚಿತ್ರಮಂದಿರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

KGF Chapter 2: ರಾಕಿಭಾಯ್ ಆರ್ಭಟಕ್ಕೆ ಬಾಲಿವುಡ್ ಢರ್‌ಗಯಾ!

ಶಿಗ್ಗಾಂವಿ ಪಟ್ಟಣದ ರಾಜಶ್ರೀ ಚಿತ್ರಮಂದಿರದಲ್ಲಿ ಚಲನಚಿತ್ರ ವೀಕ್ಷಣೆ ಮಾಡುತ್ತಿದ್ದ ವೇಳೆ ಯುವಕನಿಗೆ 2 ಗುಂಡು ತಗುಲಿದ್ದು, ಯಾರು ಗುಂಡು ಹಾರಿಸಿದ್ದಾರೆ ಎಂಬುದು ಇನ್ನೂ ಪತ್ತೆಯಾಗಿಲ್ಲ. ಈ ಕುರಿತು ತನಿಖೆ ಮುಂದುವರೆದಿದ್ದು, ಗಾಯಾಳು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಕೆಜಿಎಫ್‌2; ಮತ್ತಷ್ಟುದಾಖಲೆ ಪುಡಿಪುಡಿ
ಯಶ್‌ ನಟನೆಯ ‘ಕೆಜಿಎಫ್‌ 2’ ಚಿತ್ರ ಬಿಡುಗಡೆಯಾದ ಐದೇ ದಿನದಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಒಂದು ವಾರದಲ್ಲಿ 600 ಕೋಟಿ ರು.ಗಳಷ್ಟುಕಲೆಕ್ಷನ್‌ ಮಾಡುವ ಮೂಲಕ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಮಾಡಲು ಹೊರಟಿದೆ. ಬಾಲಿವುಡ್‌ನಲ್ಲಿ ಕಡಿಮೆ ಅವಧಿಯಲ್ಲಿ ಅಧಿಕ ಕಲೆಕ್ಷನ್‌ ಮಾಡಿದ ಚಿತ್ರ ಅನ್ನೋ ಹೆಗ್ಗಳಿಕೆಗೂ ಭಾಜನವಾಗಿದೆ. ಈ ಮೂಲಕ ಅಮೀರ್‌ ಖಾನ್‌ ನಟನೆಯ ‘ದಂಗಲ್‌’ ಚಿತ್ರದ ದಾಖಲೆ ನೆಲಸಮ ಮಾಡಿದೆ. ಒಂದು ವಾರದೊಳಗೇ ‘ಕೆಜಿಎಫ್‌ 2’ ಹಿಂದಿ ವರ್ಶನ್‌ 219.56 ರು. ಕೋಟಿ ಸಂಗ್ರಹ ಮಾಡಿದೆ. ಬಾಲಿವುಡ್‌ನಲ್ಲಿ ಅತ್ಯಧಿಕ ಗಳಿಕೆ ಮಾಡಿದ್ದ ‘ದಂಗಲ್‌’ ಚಿತ್ರ ಮೊದಲ ವಾರದಲ್ಲಿ 197.54 ಕೋಟಿ ರು. ಸಂಗ್ರಹಿಸಿತ್ತು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?