ರಾಕಿ ಭಾಯ್ ಯಶ್‌ಗೆ ಸದ್ಯ ಒಂದು ಭಯ ಆವರಿಸಿದೆಯಂತೆ. ಆ ಭಯ ಅವರನ್ನು ಸದ್ಯ ಅಲ್ಲಾಡಿಸುತ್ತಿದೆ. ಇನ್ನೊಂದು ಕಡೆ ಯಶ್ ಟಾಕ್ಸಿಕ್‌ನಲ್ಲಿ ಹಾಡು ಹಾಡ್ತಿದ್ದಾರೆ ಅನ್ನೋ ವಿಚಾರ ನಿಜನಾ?
ಸದ್ಯ ಎಲ್ಲೆಲ್ಲೂ ರಾಕಿಂಗ್ ಸ್ಟಾರ್ ಯಶ್‌ದೇ ಸುದ್ದಿ. ಇದಕ್ಕೆ ಕಾರಣ ಅಪರೂಪದಲ್ಲಿ ಅಪರೂಪಕ್ಕೆ ಅವರು ಕೊಟ್ಟಿರೋ ಇಂಟರ್‌ವ್ಯೂ. ಇದನ್ನು ಬಹಳ ಮಂದಿ ಯಶ್ ಅಭಿಮಾನಿಗಳನ್ನು ನೋಡಿದ್ದಾರೆ. ಇದರಲ್ಲಿ ರಾಕಿಭಾಯ್ ಆಡಿರುವ ಮಾತುಗಳು ದೇಶಾದ್ಯಂತ ಸದ್ದು ಮಾಡಿವೆ. ಸಖತ್ ಸ್ಟೈಲಿಶ್ ಲುಕ್‌ನಲ್ಲಿ ಯಶ್ ಕಾಣಿಸಿಕೊಂಡಿದ್ದು ಅವರ ಮಾತು, ಲುಕ್ ಎಲ್ಲ ಟಾಕ್ಸಿಕ್ ಬಗೆಗಿನ ನಿರೀಕ್ಷೆ ನೆಕ್ಸ್ಟ್ ಲೆವೆಲ್‌ಗೆ ಏರುವಂತೆ ಮಾಡಿದೆ.
ಈ ಇಂಟರ್‌ವ್ಯೂ ನಲ್ಲಿ ಯಶ್ ಸಿನಿಮಾ ಬಗ್ಗೆ ಒಂದಿಷ್ಟು ಹಿಂಟ್ ಬಿಟ್ಟುಕೊಟ್ಟಿದ್ದಾರೆ. ಟಾಕ್ಸಿಕ್ ರಿಲೀಸ್ ಲೇಟ್ ಆಗುತ್ತೆ ಅಂತ ಅವರು ಹೇಳಿದ ಈ ಮಾತು ಈಗಾಗಲೇ ಜನರಿಗೆ ಗೊತ್ತಿರೋದೆ. ಅವರೇ ಹೇಳಿರೋ ಕಾರಣ ಇದಕ್ಕೊಂದು ಅಧಿಕೃತ ಸ್ಟಾಂಪ್ ಬಿದ್ದಿದೆ. ಇದರ ಜೊತೆಗೆ ಸಿನಿಮಾ ಬಗ್ಗೆ ಮಾತಾಡ್ತಾ, 'ಬರೀ ಮಕ್ಕಳಿಗೇ ಫೆರಿಟೇಲ್ ಹೇಳೋದಾಯ್ತು, ದೊಡ್ಡೋರಿಗೆ ಬೇಡ್ವಾ? ಅದಕ್ಕಾಗಿ ಈ ಸಿನಿಮಾ ದೊಡ್ಡೋರಿಗಾಗಿ ನಾವು ಕೊಡ್ತಿರೋ ಮನರಂಜನೆ. ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ಬಗೆಯಲ್ಲಿ ಟಾಕ್ಸಿಕ್ ಸನ್ನಿವೇಶ ಎದುರಿಸಿಯೇ ಎದುರಿಸಿರುತ್ತಾರೆ. ಅವರು ಬೇರೆ ಬೇರೆ ರೀತಿಯಲ್ಲಿರುತ್ತೆ ಅಷ್ಟೇ. ನೀವು ಒಂದು ಪಿಯಾನೊ ತಂದಿಟ್ಟುಕೊಂಡಿದ್ದೀರಿ ಅಂದುಕೊಳ್ಳಿ. ಅದನ್ನು ನುಡಿಸೋದು ನಿಮಗೆ ಗೊತ್ತಿಲ್ಲ. ಆದರೆ ಇನ್ನೊಬ್ಬರು ನುಡಿಸಿದಾಗ ನಿಮಗದು ಇಷ್ಟ ಆಗುತ್ತೆ. ಈ ಸಿನಿಮಾನೂ ಹಾಗೇ. ನಿಮಗೆ ನೇರವಾಗಿ ಸಂಬಂಧಿಸಿದ ವಿಚಾರ ಆಗಿರದೇ ಇರಬಹುದು. ಆದರೆ ಸಿನಿಮಾವನ್ನು ನೀವು ಖಂಡಿತಾ ಆನಂದಿಸುತ್ತೀರಿ. ಎಲ್ಲರಿಗೂ ಕನೆಕ್ಟ್ ಆಗುವ ಸಿನಿಮಾ. ನಿರ್ದೇಶಕಿ ಗೀತು ಮೋಹನ್‌ದಾಸ್, ಛಾಯಾಗ್ರಾಹಕ ರಾಜೀವ್ ರವಿ ಹಾಗೂ ನನಗೆ ಜನರಿಗೆ ಹೇಗೆ ಮನರಂಜನೆ ನೀಡಬೇಕು ಎಂಬ ಬಗ್ಗೆ ಸ್ಪಷ್ಟ ಕಲ್ಪನೆ ಇದೆ. ಮೂವರ ಥಾಟ್ ಒಂದೇ ಆಗಿರುವುದರಿಂದ ಸಿನಿಮಾ ಸೊಗಸಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಅನುಮಾನವಿಲ್ಲ’ ಅಂತ ಯಶ್ ಹೇಳಿದ್ದಾರೆ.
ಈ ಟೈಮಲ್ಲಿ ಕ್ರಿಕೆಟಿಗ ಶುಭಮನ್ ಗಿಲ್ ಸಂದರ್ಶಕಿಗೆ ಯಶ್ ಹತ್ರ ಹೇಳಲು ಪ್ರಶ್ನೆ ಕಳಿಸಿದ್ದು ಮಜವಾಗಿತ್ತು. ಅವರು ಕೆಜಿಎಫ್‌ನ ದೊಡ್ಡ ಫ್ಯಾನ್ ಅವರ ಪ್ರಶ್ನೆ ಕೆಜಿಎಫ್ 3 ಯಾವಾಗ ಅಂತ. ಅದಕ್ಕೂ ಮೊದಲು ಕೆಜಿಎಫ್ 3 ಸಿನಿಮಾ ಬರುತ್ತಾ?’ ಅಂತಲೂ ಕೇಳಿದ್ರು. ಇದಕ್ಕೆ ನಮ್ಮ ರಾಕಿಭಾಯ್, ಕೆಜಿಎಫ್‌ನ ರಾಕಿಭಾಯ್‌ನನ್ನು ನೀವೆಲ್ಲ ಬಹಳ ಇಷ್ಟಪಟ್ಟಿದ್ದೀರಿ. ಆ ಪಾತ್ರವನ್ನು ನಿಮಗೆ ನಿರಾಸೆ ಆಗದ ಹಾಗೆ ಕಟ್ಟಿಕೊಡುತ್ತೇವೆ. ಬೇರೆ ಲೆವೆಲ್‌ನಲ್ಲಿ ‘ಕೆಜಿಎಫ್ 3’ ಕಥೆ ಇರುತ್ತದೆ. ಸದ್ಯ ಕೈಯಲ್ಲಿರುವ ಪ್ರಾಜೆಕ್ಟ್ ಮುಗಿದ ಮೇಲೆ ಆ ಬಗ್ಗೆ ಅಪ್‌ಡೇಟ್ ಕೊಡುತ್ತೇನೆ’ ಅಂದರು ಯಶ್.
undefined
ಆರು ತಿಂಗಳ ಕಂದನ ಮುದ್ದು ಫೋಟೋ ಶೇರ್ ಮಾಡಿದ ನಟಿ ಅದಿತಿ ಪ್ರಭುದೇವ: ನಗುವಿಗೆ ಫ್ಯಾನ್ಸ್ ಫಿದಾ
ಈ ವೇಳೆ ರಾಮಾಯಣದಲ್ಲಿ ತಾನು ರಾವಣನಾಗಿ ಅಬ್ಬರಿಸೋದು ನಿಜ ಅಂತನೂ ಹೇಳಿದ್ರು. ರಾಧಿಕಾ ಬಗ್ಗೆ ಅವರು ಯಾವಾಗಲೂ ಇಂಟರೆಸ್ಟಿಂಗ್ ಆಗಿ ಮಾತಾಡ್ತಾರೆ. ಈ ಬಾರಿಯೂ ಆಕೆಯಂಥಾ ಹೆಂಡತಿ ಸಿಕ್ಕಿರೋದು ನನ್ನ ಪುಣ್ಯ. ನಾವಿಬ್ರೂ ಇಂಡಸ್ಟ್ರಿಯಲ್ಲಿ ಜೊತೆಯಾಗಿ ಬಂದು ಒಟ್ಟಿಗೆ ಬೆಳೆದವರು. ಆಕೆ ನನ್ನ ಸ್ಟ್ರೆಂಥ್. ಮೊದಲಿಗೆ ಫ್ರೆಂಡ್, ಆಮೇಲೆ ಹೆಂಡ್ತಿ, ನನ್ನ ಮಕ್ಕಳ ತಾಯಿ ಎಲ್ಲ. ನನ್ನ ಬಗ್ಗೆ ಅವಳಿಗೆ ಎಲ್ಲವೂ ಗೊತ್ತು. ಇಲ್ಲದೇ ಹೋದರೆ ನನ್ನಂಥಾ ಕ್ರೇಜಿ ವ್ಯಕ್ತಿಯ ಜೊತೆ ಬದುಕೋದು ಬಹಳ ಕಷ್ಟವಿತ್ತು. ನಾನೊಂದು ಸಿನಿಮಾ ಒಪ್ಪಿಕೊಂಡರೆ ಆಕೆ ಈ ಸಿನಿಮಾ ಎಷ್ಟು ದುಡ್ಡು ಮಾಡಬಹುದು ಅಂತೆಲ್ಲ ಕೇಳಲ್ಲ, ಬದಲಿಗೆ ನೀನು ಖುಷಿಯಾಗಿದ್ದೀಯಾ ಅಂತಷ್ಟೇ ಕೇಳ್ತಾಳೆ. ಆದರೆ ಅವಳು ನನ್ನ ಅಟೆನ್ಶನ್ ಮತ್ತು ಟೈಮ್ ಕೇಳ್ತಾಳೆ. ನಂಗೆ ಕೊಡೋಕೆ ಕಷ್ಟ ಆಗುತ್ತೆ ಎಂದಿದ್ದಾರೆ.
ಯಶ್ ಇದರಲ್ಲಿ ತನಗಿರೋ ಭಯದ ಬಗ್ಗೆ ಹೇಳಿದ್ದಾರೆ. ಅವರಿಗೆ ಎಲ್ಲಿ ಟೈಮ್ ಕಳೆದುಹೋಗುತ್ತೋ, ಎಲ್ಲಿ ತಾನು ತಡಮಾಡಿ ಬಿಡುತ್ತೇನೋ ಅನ್ನೋ ಭಯವಂತೆ. ಇದರಿಂದ ಇಡೀ ಪ್ರಾಜೆಕ್ಟ್‌ಗೆ ಏನಾದರೂ ಸಮಸ್ಯೆ ಆದರೆ ಅನ್ನೋದು ಅವರನ್ನು ಚಿಂತೆಗೀಡು ಮಾಡುತ್ತಂತೆ. ಇನ್ನು ಈ ಸಿನಿಮಾದಲ್ಲಿ ಯಶ್ ಹಾಡೋದನ್ನು ನಾವು ಕೇಳಬಹುದಾ ಅನ್ನೋ ಬಗ್ಗೆ ಅವರಿನ್ನೂ ಸ್ಪಷ್ಟನೆ ಕೊಟ್ಟಿಲ್ಲ. ಈ ಇಂಟರ್‌ವ್ಯೂ ಮಾಡಿರೋರು ಖ್ಯಾತ ಸಿನಿಮಾ ಪತ್ರಕರ್ತೆ ಅನುಪಮ ಚೋಪ್ರಾ. ಹಾಲಿವುಡ್ ರಿಪೋರ್ಟರ್ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿದೆ ಇದು.
ಸಾಯಿ ಪಲ್ಲವಿಯನ್ನ ನಟಿ ಸೌಂದರ್ಯಗೆ ಹೋಲಿಕೆ ಮಾಡಿದ ಫ್ಯಾನ್ಸ್... ಅಂದದಲ್ಲೂ, ಪ್ರತಿಭೆಯಲ್ಲೂ ಪರ್ಫೆಕ್ಟ್ ಮ್ಯಾಚ್ ?!