ಅಬ್ಬಬ್ಬಾ! ಡಿಫರೆಂಟ್ ಆಗಿ ತಲೆ ಬಳಸಿದ ರೈತ. ಟೊಮೆಟೋ ಮೇಲೆ ಕಣ್ಣು ಬೀಳದಂತೆ ಸುರ ಸುಂದರಿಯರ ಫೋಟೋ ಹಾಕಿದ್ದಾನೆ.....
ಸಾಮಾನ್ಯವಾಗಿ ಯಾವುದೇ ಒಳ್ಳೆ ಕೆಲಸ ಮಾಡುವಾಗಲು ಕೆಟ್ಟ ಕಣ್ಣು ಅಥವಾ ದೃಷ್ಠಿ ತಡೆಯಬೇಕು ಅಂದ್ರೆ ಕಪ್ಪು ದಾರ, ದೃಷ್ಠಿ ಗೊಂಬೆ, ಶಕ್ತಿ ಗಣಪತಿ ಕಟ್ಟುವುದು ಮಾಡುತ್ತಾರೆ. ಹೀಗೆ ಒಂದೊಂದು ಊರಿನಲ್ಲಿ ಒಂದೊಂದು ರೀತಿಯನ್ನು ಪಾಲಿಸುತ್ತಾರೆ. ಹೊಸ ಮನೆ ಕಟ್ಟುವಾದ ದೃಷ್ಠಿ ಆಗಬಾರದು ಎಂದು ಇತ್ತೀಚಿಗೆ ಬೆಂಗಾಲಿ ಆಂಟಿ ಫೋಟೋ ಹಾಕುತ್ತಿದ್ದಾರೆ, ದೊಡ್ಡದಾಗಿ ಕಣ್ಣು ಬಿಟ್ಟು ನೋಡುತ್ತಿರುವ ಹಾಗೆ. ಇದೆಲ್ಲಾ ಸಿಟಿ ಜನರಲ್ಲಿ ತುಂಬಾನೇ ಕಾಮನ್ ಆದರೆ ಚಿಕ್ಕಬಳ್ಳಾಪುರದ ರೈತ ತಮ್ಮ ತೋಟವನ್ನು ರಕ್ಷಣನೆ ಮಾಡಲು ಸಖತ್ ಡಿಫರೆಂಟ್ ಆಗಿ ಯೋಚನೆ ಮಾಡಿದ್ದಾನೆ.
ಹೌದು! ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳ ಗ್ರಾಮದ ಯುವ ರೈತ ದೀಪಕ್ 5 ಎಕರೆ ಭೂಮಿಯಲ್ಲಿ ಟೊಮೆಟೊ ಬೆಳೆಯುತ್ತಿದ್ದಾನೆ. ಈಗ ಕಾಯಿ ಬಿಡುವ ಸಮಯ ಆಗಿದ್ದು ಬೆಳೆ ಮೇಲೆ ಯಾರ ಕೆಟ್ಟ ಕಣ್ಣು ಬೀಳದಿರಲಿ, ಒಳ್ಳ ಫಲ ಸಿಗಲಿ ಒಳ್ಳ ಲಾಭ ಬರಲಿ ಎನ್ನುವ ಕಾರಣಕ್ಕೆ ತುಂಬಾ ಪವರ್‌ಫುಲ್ ಆಗಿರುವ ದೃಷ್ಠಿಬೊಂಬೆ ಫೋಟೋಗಳನ್ನು ಹಾಕಿದ್ದಾನೆ. ಆ ಎಕರೆಯ ಸುತ್ತ ಅಥವಾ ಆ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಪ್ರತಿಯೊಬ್ಬರೂ ಆ ದೃಷ್ಠಿಬೊಂಬೆ ಫೋಟೋ ನೋಡಿ ಶಾಕ್ ಆಗಿದ್ದಾರೆ. ಫೋಟೋ ಕ್ಲಿಕ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ.
ಮನೆಯಲ್ಲಿ ಪ್ರೆಗ್ನೆನ್ಸಿ ಟೆಸ್ಟ್ ಮಾಡಿದ ಹರ್ಷಿಕಾ ಪೂಣಚ್ಚ; ಪಾಸಿಟಿವ್ ಎಂದು ಕಣ್ಣೀರಿಟ್ಟ ನಟಿ!
ಯಾವ ಬೊಂಬೆ ಫೋಟೋ:
ಪ್ರಾಣಿಪಕ್ಷಿಗಳನ್ನು ಬೆಳೆ ಹಾಳು ಮಾಡಬಾರದು ಎಂದು ಹೊಲ, ಗದ್ದೆಗಳ್ಲಿ ಮನುಷ್ಯನ ರೀತಿಯಲ್ಲಿ ಬಟ್ಟೆ ಸುತ್ತಿರುವ ಬೊಂಬೆ ಮಾಡಿ ಹಾಕುತ್ತಾರೆ ಆದರೆ ದೀಪಕ್ ಇಲ್ಲಿ ಇಬ್ಬು ಖ್ಯಾತ ನಟಿಯರ ಫೋಟೋ ಹಾಕಿದ್ದಾರೆ. ಹೌದು! ಮಾದಕ ನಟಿ ಸನ್ನಿ ಲಿಯೋನ್ ಫೋಟೋ ಮತ್ತು ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಫೋಟೋವನ್ನು ಬ್ಯಾನರ್ ರೂಪದಲ್ಲಿ ಹಾಕಿದ್ದಾರೆ. ಒಂದು ದಿಕ್ಕಿನಲ್ಲಿ ಸನ್ನಿ ಇದ್ದರೆ ಮತ್ತೊಂದು ದಿಕ್ಕಿನಲ್ಲಿ ರಚಿತಾ ರಾಮ್ ಇದ್ದಾರೆ. ಊರಿನ ಜನರಿಗೆ ಒಂದು ಖುಷಿ ಏನೆಂದರೆ ಇಬ್ಬರು ನಟಿಯರು ನಮ್ಮ ಭಾರತೀಯ ಸಂಪ್ರದಾಯದಂತೆ ಸೀರೆ ಧರಿಸಿ ನಗು ಮುಖದಲ್ಲಿ ಇರುವ ಫೋಟೋ ಹಾಕಿರುವುದ.
ದರ್ಶನ್ ಪ್ರಕರಣದ ಬಗ್ಗೆ ವಿಡಿಯೋ ಹಾಕಿ ಡಿಲೀಟ್ ಮಾಡಿದ ಕೆಜಿಎಫ್ ನಟಿ ರೂಪಾ ರಾಯಪ್ಪ; ಟ್ರೋಲಿಗರಿಗೆ ಬುದ್ಧಿ ಪಾಠ!
ಯಾರೇ ತಮ್ಮ ಹೊಲದ ಕಡೆ ತಿರುಗಿ ನೋಡಿದರೂ ಮೊದಲು ರಚಿತಾ ರಾಮ್ ಅಥವಾ ಸನ್ನಿ ಲಿಯೋನ್ ಫೋಟೋ ನೋಡಿ ಶಾಕ್ ಆಗುತ್ತಾರೆ. ಫೋಟೋದಲ್ಲಿರುವ ನಟಿಯರ ನಗು ಮುಖ ನೋಡಿ ನಗುತ್ತಾರೆ ಆಮೇಲೆ ಸುಮ್ಮನೆ ಹೋಗುತ್ತಾರೆ ಆಗ ನನ್ನ ಟೊಮೆಟೊ ಬೆಲೆ ಕಡೆ ಗಮನ ಕೊಡುವುದಿಲ್ಲ ಅನ್ನೋದು ಈ ರೈತನ ಲೆಕ್ಕಾಚಾರ.