ಈ ಚಿತ್ರ ನಿರ್ಮಾಣವಾಗುವ ಹಂತದಲ್ಲಿ ಅದಕ್ಕೆ ಬಹಳಷ್ಟು ಅಡ್ಡಿ-ಆತಂಕಗಳು ಎದುರಾಗಿದ್ದವು. ಭಾರತೀಯ ಸೈನ್ಯದ ಸಂಪೂರ್ಣ ಸಹಕಾರ ಇಲ್ಲದೇ ಆ ಚಿತ್ರವನ್ನು ಡಾ ರಾಜೇಂದ್ರ ಸಿಂಗ್ ಬಾಬು ಅವರು ನಿರ್ದೇಶನ ಮಾಡುವಂತೆಯೇ ಇರಲಿಲ್ಲ. ಹೀಗಾಗಿ ಸಿನಿಮಾ ಶೂಟಿಂಗ್‌ಗೆ ಎಲ್ಲವೂ ರೆಡಿಯಾಗಿದ್ದರೂ ಇಂಡಿಯನ್ ಆರ್ಮಿ ಪರ್ಮಿಷನ್ ಸಿಕ್ಕಿರಲಿಲ್ಲ..
ಕನ್ನಡದ ಮೇರು ನಟ ವಿಷ್ಣುವರ್ಧನ್ ಅವರು ನಟಿಸಿರುವ 'ಮುತ್ತಿನಹಾರ' ಚಿತ್ರದ ಮೇಕಿಂಗ್ ಸಮಯದಲ್ಲಿ ಸಾಕಷ್ಟು ಘಟನೆಗಳು ನಡೆದಿದ್ದವು. ಅವು ಅಂದು ಹೊರಜಗತ್ತಿಗೆ ಅಷ್ಟಾಗಿ ತಿಳಿದರಲಿಲ್ಲ. ಆದರೆ, ಇಂದು ಅವು ಯೂಟ್ಯೂಬ್ ಹಾಗು ಸೋಷಿಯಲ್ ಮೀಡಿಯಾಗಳ ಮೂಲಕ ಜಗತ್ತಿನ ತುಂಬಾ ವ್ಯಾಪಿಸುತ್ತಿದೆ. ರಾಜೇಂದ್ರಸಿಂಗ್ ಬಾಬು ನಿರ್ದೇಶನ, ಡಾ ವಿಷ್ಣುವರ್ಧನ್ ನಾಯಕತ್ವದ 'ಮುತ್ತಿನಹಾರ' ಚಿತ್ರವು ಅಂದು ಅಭೂತಪೂರ್ವ ಯಶಸ್ಸು ಗಳಿಸಿತ್ತು. ಆ ಚಿತ್ರಕ್ಕೆ ಹಂಸಲೇಖ ಅವರು ಸಂಗೀತ ನೀಡಿದ್ದಾರೆ.
ಆದರೆ, ಈ ಚಿತ್ರ ನಿರ್ಮಾಣವಾಗುವ ಹಂತದಲ್ಲಿ ಅದಕ್ಕೆ ಬಹಳಷ್ಟು ಅಡ್ಡಿ-ಆತಂಕಗಳು ಎದುರಾಗಿದ್ದವು. ಭಾರತೀಯ ಸೈನ್ಯದ ಸಂಪೂರ್ಣ ಸಹಕಾರ ಇಲ್ಲದೇ ಆ ಚಿತ್ರವನ್ನು ಡಾ ರಾಜೇಂದ್ರ ಸಿಂಗ್ ಬಾಬು ಅವರು ನಿರ್ದೇಶನ ಮಾಡುವಂತೆಯೇ ಇರಲಿಲ್ಲ. ಹೀಗಾಗಿ ಸಿನಿಮಾ ಶೂಟಿಂಗ್‌ಗೆ ಎಲ್ಲವೂ ರೆಡಿಯಾಗಿದ್ದರೂ ಇಂಡಿಯನ್ ಆರ್ಮಿ ಪರ್ಮಿಷನ್ ಸಿಕ್ಕಿರಲಿಲ್ಲ. ಹೀಗಾಗಿ ಚಿತ್ರದ ಶೂಟಿಂಗ್ ಸಲುವಾಗಿ ಸಾಕಷ್ಟು ಟೈಮ್ ಕಾಯಬೇಕಾಗಿ ಬಂತು. ಸಾಕಷ್ಟು ಸಮಯದ ಬಳಿಕ ಭಾರತೀಯ ಸೇನೆ ಕಡೆಯಿಂದ ಸೂಚನೆ ಸಿಕ್ಕ ಬಳಿಕ ಶೂಟಿಂಗ್ ಶುರುವಾಯ್ತು.
undefined
ರಾಕಿಂಗ್ ಸ್ಟಾರ್ ಯಶ್ ವಿಡಿಯೋ ವೈರಲ್ ಆಗ್ತಿದೆ; ಅಂಥಾದ್ದೇನಿದೆ ಅದ್ರಲ್ಲಿ ಗುರೂ!
ಇನ್ನು, ಮುತ್ತಿರಹಾರ ಚಿತ್ರಕ್ಕೆ ರಾಜೇಂದ್ರಸಿಂಗ್ ಬಾಬು ಅವರು ಸಂಗೀತ ಕೊಡಿಸಬೇಕು ಎಂದು ಸಂಕಲ್ಪ ಮಾಡಿದ್ದು ಇಳಯರಾಜಾ ಅವರಿಂದ. ಆದರೆ, ಅಂದು ಇಳೆಯರಾಜಾ ಅವರು ತುಂಬಾ ಬ್ಯುಸಿ ಇದ್ದ ಕಾರಣಕ್ಕೋ ಏನೋ, ಮೊದಲೇ ಮಾಡಿಟ್ಟಿದ್ದ ಟ್ಯೂನ್‌ಗಳನ್ನು ಬಳಿಸಿಕೊಳ್ಳುವಂತೆ ಹೇಳಿದರಂತೆ. ಆದರೆ, ಮುತ್ತಿನಹಾರ ಚಿತ್ರವನ್ನು ತುಂಬಾ ವಿಭಿನ್ನವಾಗಿ ಕಟ್ಟಿಕೊಡಬೇಕು ಎಂದುಕೊಂಡಿದ್ದ ರಾಜೇಂದ್ರಸಿಂಗ್ ಬಾಬು ಅವರಿಗೆ ಮೊದಲೇ ಮಾಡಿಟ್ಟಿದ್ದ ಟ್ಯೂನ್‌ಗಳು ಸರಿಬರಲಿಲ್ಲ.
ಈ ಕಾರಣಕ್ಕೆ ಇಳಯರಾಜಾ ಅವರಿಗೆ ಕಮಿಟ್ ಆಗದೇ ರಾಜೇಂದರಸಿಂಗ್ ಬಾಬು ಅವರು ಹಂಸಲೇಖಾರ ಬಳಿ ಸಂಗೀನ ನೀಡಲು ಮನವಿ ಮಾಡಿಕೊಂಡರು. ಹೀಗೆ ಮುತ್ತಿನಹಾರ ಚಿತ್ರಕ್ಕೆ ಇಳಯರಾಜಾ ಸಂಗೀತದ ಬದಲು ಹಂಸಲೇಕ ಸಂಗೀತ ನೀಡಿದ್ದಾರೆ. ಇನ್ನು ಆ ಚಿತ್ರದಲ್ಲಿ ಮೂಡಿಬಂದಿರುವ ಹಿರಿಯ ಗಾಯಕ 'ಎಂ ಬಾಲಮುರಳಿಕೃಷ್ಣ' ಹಾಡಿರುವ ಹಾಡು 'ದೇವರು ಹೊಸೆದಾ ಪ್ರೇಮದ ದಾರ..' ಹಾಡು ಕೂಡ ಅಚ್ಚರಿ ಬೆಳವಣಿಗೆಯಲ್ಲಿ ಬಾಲಮುರಳಿ ಕಂಠಸಿರಿ ಅದಕ್ಕೆ ದಕ್ಕಿದೆ.
ಮೊದಲು ತಾವು ಸಿನಿಮಾ ಹಾಡನ್ನು ಹಾಡುವುದಿಲ್ಲ, ಅದು ನನ್ನ ಕ್ಷೇತ್ರವಲ್ಲ ಎಂದಿದ್ದರಂತೆ ಎಂ ಬಾಲಮುರಳಿಕೃಷ್ಣ. ಆದರೆ, 'ನೀವು ಒಮ್ಮೆ ಕಥೆ ಕೇಳಿ.. ಕಥೆಯಲ್ಲಿ ಇದು ಮೂರು ತಲೆಮಾರಿಗೆ ಹೊಂದಿಕೆಯಾಗಬೇಕಾದ ಹಾಡು. ನಿಮಗೆ ಓಕೆ ಅನ್ನಿಸಿದರೆ ಮಾತ್ರ ಹಾಡಿ, ಇಲ್ಲದಿದ್ದರೆ ನಾವು ವಾಪಸ್ ಹೋಗುತ್ತೇವೆ' ಎಂದು ರಾಜೇಂದ್ರಸಿಂಗ್ ಬಾಬು ಅವರು ಮನವಿ ಮಾಡಿಕೊಂಡರು. ಆಗ, ಕತೆ ಕೇಳಿ ಓಕೆ ಅಂತ ಹೇಳಿ ಹಾಡಿದ್ದಾರೆ ಎಂ ಬಾಲಮುರಳಿಕೃಷ್ಣ ಅವರು ಎಂಬ ಮಾಹಿತಿಯಿದೆ.
ಇನ್ನು ವಿಷ್ಣುವರ್ಧನ್-ಸಹಾಸಿನಿ ನಟನೆಯ ಈ ಚಿತ್ರದ ಮಹೂರ್ತಕ್ಕೆ ಬಂದು ಕ್ಲಾಪ್ ಮಾಡಿದ್ದು ಪಾರ್ವತಮ್ಮ ರಾಜ್‌ಕುಮಾರ್. ವಿಷ್ಣುವರ್ಧನ್ ಅವರನ್ನು ಕಂಡರೆ ಪಾರ್ವತಮ್ಮ ಅವರಿಗೆ ಅಗಿಬರುವುದಿಲ್ಲ ಎಂದು ಹೇಳುತ್ತಿದ್ದ ಕಾಲದಲ್ಲೇ ಬಂದು ಆಶೀರ್ವಾದ ಮಾಡಿ ಹೋಗದ್ದಾರೆ ಪಾರ್ವತಮ್ಮನವರು. ಗಾಳಿಸುದ್ದಿಗೆ ಯಾವುದೇ ಆಧಾರ ಇರುವುದಿಲ್ಲ ಎಂಬುವುದಕ್ಕೆ ಇದೂ ಒಂದು ಸಾಕ್ಷಿ ಎನ್ನಬಹುದು. ಇನ್ನು ಚಿತ್ರದ ನಾಯಕಿ ಸುಹಾಸಿನಿಗೆ ಚೆನ್ನೈನಿಂದ ಬರುವುದು ಲೇಟ್ ಆದ ಕಾರಣಕ್ಕೆ ಅವರು ಮುಹೂರ್ತದ ವೇಳೆಯಲ್ಲಿ ಬರಲಾಗದೇ ಬಳಿಕ ಬಂದು ಟೀಮ್ ಸೇರಿಕೊಂಡಿದ್ದರು.
ಇವ್ರು ಮುಂದೆ ಒಳ್ಳೆಯ ಖಳನಾಯಕ ಆಗ್ತಾರೆ; ಚಂದನ್ ಶೆಟ್ಟಿ ಈ ಮಾತನ್ನು ಯಾರಿಗೆ ಎಲ್ಲಿ ಹೇಳಿದರು..?
ಹೌದು, ಮುತ್ತಿನಹಾರ ಚಿತ್ರಕ್ಕೆ ಸಂಬಂಧಿಸಿದ ಇವಿಷ್ಟೂ ಘಟನೆಗಳು ಈಗ ಸೋಷಿಯಲ್ ಮೀಡಿಯಾಗಳ ಮೂಲಕ ಸುದ್ದಿಯಾಗುತ್ತಿವೆ. ಅಂದೆಲ್ಲಾ ಸಿನಿಮಾ ಪ್ರಚಾರಕಾರ್ಯಕ್ಕೆ ಇದ್ದ ಲಿಮಿಟೆಡ್ ಸೋರ್ಸ್‌ನಲ್ಲಿ ಯಾವುದೂ ಅಷ್ಟೇನೂ ಸುದ್ದಿಯಾಗುತ್ತಿರಲಿಲ್ಲ. ಆದರೆ, ಇಂದು ಹಾಗಲ್ಲ, ಸೋಷಿಯಲ್ ಮೀಡಿಯಾ ಎಂಬುದು ಅದೆಷ್ಟು ಪವರ್‌ಫುಲ್ ಆಗಿದೆ ಎಂದರೆ, ಪ್ರಪಂಚದ ಯಾವುದೋ ಮೂಲೆಯಲ್ಲಿ ನಡೆದ ಘಟನೆ ಇನ್ನೊಂದು ಮೂಲೆಯನ್ನು ಕ್ಷಣಮಾತ್ರದಲ್ಲಿ ರೀಚ್ ಆಗಿಬಿಡುತ್ತದೆ.