ಅನು ಪ್ರಭಾಕರ್ ಕಿಡ್ನ್ಯಾಪ್ ಆಗಿದ್ದು ನಿಜವೇ?; ರೋಚಕ ಕಥೆ ಬಿಚ್ಚಿಟ್ಟ ನಟಿ

By Vaishnavi Chandrashekar  |  First Published Mar 22, 2023, 10:31 AM IST

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ನಟಿ ಅನು ಪ್ರಭಾಕರ್ ಕಿಡ್ನ್ಯಾಪ್ ಸ್ಟೋರಿ.... ಯಾವಾಗ? ಎಲ್ಲಿ? ಹೇಗೆ? ಸಂಪೂರ್ಣ ಮಾಹಿತಿ ಇರಲ್ಲಿದೆ ನೋಡಿ... 


ಕನ್ನಡ ಚಿತ್ರರಂಗದಲ್ಲಿ ಮುದ್ದು ಮುಖದ ಚೆಲುವೆ ಅನು ಪ್ರಭಾಕರ್ ಬಾಲ್ಯದಲ್ಲಿ ಕಿಡ್ನ್ಯಾಪ್ ಆಗಿದ್ದರಂತೆ. ಅರ್ಧ ಗಂಟೆಯಲ್ಲಿ ಏನೆಲ್ಲಾ ಆಯ್ತು ಎಂದು ಹಂಚಿಕೊಂಡಿದ್ದಾರೆ. 

'ನನ್ನ ಕಿಡ್ನ್ಯಾಪ್ ಸ್ಟೋರಿಯನ್ನು ಅಜ್ಜಿ ಹೇಳುತ್ತಿದ್ದರು. ನಾನು ಒಂದು ವರ್ಷದ ಮಗು ಆಗಿದ್ದಾಗ ತುಂಬಾ ದಪ್ಪಗಿದ್ದೆ ಹಾಗೂ ಕರ್ಲಿ ಕೂದಲು ಇತ್ತು. ಮೊದಲ ಮುಡಿ ಕೊಟ್ಟ ಮೇಲೆ ಕೂದಲ ಸಾಫ್ಟ್‌ ಆಯ್ತು. ನಾನು ನೋಡಲು ನನ್ನ ತಂದೆಯವರ ತಾಯಿ ರೀತಿ ಇರುವುದು. ನಾನು ಪುಟ್ಟ ಮಗು ಇದ್ದಾಗ ನನ್ನನ್ನು ನೋಡಿಕೊಂಡು ಅಮ್ಮನಿಗೆ ಸಹಾಯ ಮಾಡಲು ಮನೆಯಲ್ಲಿ ಒಬ್ರು ಕೆಲಸದವರು ಇದ್ದರು. ಮಗು ಮಲಗಿಕೊಂಡಿದೆ ನೀನು ಮಗು ನೋಡಿಕೋ ನಾನು ಹಿಟ್ಟುಗಳನ್ನು ಮಿಲ್‌ಗೆ ಹಾಕಿಸಿಕೊಂಡು ಬರುತ್ತೀನಿ ಎಂದು ಹೇಳಿ ಕೇತಮಾರನಹಳ್ಳಿಗೆ ಹೋಗಿದ್ದಾರೆ. ಕೆಲವು ನಿಮಿಷಗಳ ನಂತರ ನಾನು ನಡೆದುಕೊಂಡು ಮನೆಯಿಂದ ಹೊರ ಬಂದಿದ್ದೀನಿ. ಕೆಲಸ ಮುಗಿಸಿಕೊಂಡು ಅಮ್ಮ ಮನೆಗೆ ಬಂದಿದ್ದಾರೆ ಆ ಹುಡುಗಿ ಮಲಗಿಕೊಂಡಿದ್ದಾಳೆ ಆದರೆ ನಾನು ಕಾಣಿಸುತ್ತಿರಲಿಲ್ಲ' ಎಂದು ಅನು ಪ್ರಭಾಕರ್ ಕನ್ನಡದ ಖಾಸಗಿ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.

Tap to resize

Latest Videos

ಗಂಡನ ಜತೆ ಖುಷಿಯಾಗಿಲ್ಲ ಅಂದ್ರೆ ತಂದೆ-ತಾಯಿ ಮಗಳಿಗೆ ಸಪೋರ್ಟ್‌ ಮಾಡಿ; ಡಿವೋರ್ಸ್‌ ಬಗ್ಗೆ ಮೌನ ಮುರಿದ ಅನು ಪ್ರಭಾಕರ್

'ಅವತ್ತು ರವಿ ಮಾಮ ಮನೆಯಲ್ಲಿ ಇರಲಿಲ್ಲ ನನ್ನ ತಂದೆ ಫ್ಯಾಕ್ಟರಿಗೆ ಹೋಗಿದ್ದರು. ಆಗ ಮೊಬೈಲ್‌ಗಳು ಇರಲಿಲ್ಲ ಲ್ಯಾಂಡ್‌ಲೈನ್‌ಗಳು ಮಾತ್ರ ಇತ್ತು ಅದರೆ ನಮ್ಮ ಮನೆಯಲ್ಲಿ ಇರಲಿಲ್ಲ. ಮನೆಯಿಂದ ಹೊರ ಬಂದು ಅಮ್ಮ ರವಿ ಮಾಮ ಸ್ನೇಹಿತರು ಕೇತಮಾರನಹಳ್ಳಿಯಲ್ಲಿ ಗ್ಯಾಂಗ್ ಮಾಡಿಕೊಂಡಿದ್ದರು ಅವರಿಗೆ ಹೋಗಿ ಮಗು ಕಾಣಿಸುತ್ತಿಲ್ಲ ಎಂದು ತಿಳಿಸಿದ್ದಾರೆ. ಕೃಷ್ಣ ಮತ್ತು ಮಂಜು ಅಂಕಲ್ ಎರಡು ಗಾಡಿ ತೆಗೆದುಕೊಂಡು ನನ್ನನ್ನು ಹುಡುಕಲು ಶುರು ಮಾಡಿದ್ದಾರೆ. ಮಂಜು ಅಂಕಲ್ ನವರಂಗ್ ಸೈಡ್‌ಗೆ ಹೋಗಿದ್ದಾರೆ ಕೃಷ್ಣ ಅಂಕಲ್ ಸುಬ್ರಹ್ಮಣ್ಯ ನಗರ ಕಡೆ ಹೋಗಿದ್ದಾರೆ.  ಇಬ್ಬರೂ ರಸ್ತೆಯಲ್ಲಿ ಹುಡುಕುತ್ತಿದ್ದರು ...ಸುಬ್ರಹ್ಮಣ್ಯ ನಗರದ ಮುಖ್ಯ ರಸ್ತೆಯಲ್ಲಿ ಒಂದು ಪೆಟ್ರೋಲ್ ಬಂಕ್ ಇದೆ ಆ ಜಾಗದಲ್ಲಿ ಒಬ್ಬ ಮಹಿಳೆ ನನ್ನನ್ನು ಎತ್ತಿಕೊಂಡು ಹೋಗುತ್ತಿದ್ದರಂತೆ ನಾನು ತುಂಬಾ ಅಳುತ್ತಿದ್ದೆ. ತಕ್ಷಣ ಅಂಕಲ್‌ ಆ ಮಾಹಿಳೆಯನ್ನು ನಿಲ್ಲಿಸಿ ಮಗುವನ್ನು ಎತ್ತಿಕೊಂಡು ಪ್ರಶ್ನೆ ಮಾಡಿದ್ದಾರೆ...ಆಗ ಆಕೆ ಇಲ್ಲ ರಸ್ತೆಯಲ್ಲಿ ಮಗು ಒಂದೇ ಇತ್ತು ನಾನು ಮನೆ ದಾರಿ ತೋರಿಸುವುದಾಗಿ ಹೇಳಿತ್ತು ಅದಿಕ್ಕೆ ಕರೆದುಕೊಂಡು ಹೋಗುತ್ತಿರುವೆ ಎಂದಿದ್ದಾರೆ. ಕೋಪದಲ್ಲಿ ಒಂದು ಕಪ್ಪಾಳಕ್ಕೆ ಹೊಡೆದಿದ್ದಾರೆ. ನಾನು ಸಿಕ್ಕಿದೆ ಅನ್ನೋ ಗಡಿಬಿಡಿಯಲ್ಲಿ ಆ ಮಹಿಳೆಯನ್ನು ಪೊಲೀಸರಿಗೆ ಕೊಡುವ ಯೋಚನೆ ಬಂದಿಲ್ಲ ಹಾಗೆ ಅಷ್ಟರಲ್ಲಿ ಆಕೆ ಓಡಿ ಹೋಗಿದ್ದಾಳೆ' ಎಂದು ಅನು ಹೇಳಿದ್ದಾರೆ.

'ಕೊನೆಗೂ ಕೃಷ್ಣ ಅಂಕಲ್ ನನ್ನನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ.  ಅರ್ಧ ಗಂಟೆ ಸಮಯದಲ್ಲಿ ನನ್ನ ತಾಯಿ ಅತ್ತು ಕರೆದು ರಂಪಾಟ ಮಾಡಿ ರವಿ ಮಾಮ ಮತ್ತು ನನ್ನ ತಂದೆ ಅವರನ್ನು ಅಷ್ಟರಲ್ಲಿ ಮನೆಗೆ ಕರೆಸಿದ್ದರು. ನನ್ನ ಪುಣ್ಯಕ್ಕೆ ನಾನು ಸಿಕ್ಕಿದೆ ಇಲ್ಲದಿದ್ದರೆ ಅದೆಲ್ಲ ಇದ್ದು ಏನು ಮಾಡುತ್ತಿದ್ದೆ ಗೊತ್ತಿರಲಿಲ್ಲ' ಎಂದಿದ್ದಾರೆ ಅನು.

ಬಂಡಿಪುರದಲ್ಲಿ ಮಗಳ ಮೊದಲ ಸಫಾರ್; ಕ್ಯೂಟ್‌ ಫೋಟೋ ಹಂಚಿಕೊಂಡ ಅನು ಪ್ರಭಾಕರ್!

'ಮಕ್ಕಳ ವಿಚಾರದಲ್ಲಿ ಈ ನಡುವೆ ತುಂಬಾ ಹಾರರ್ ಕಥೆಗಳನ್ನು ಕೇಳುತ್ತೀವಿ. ಆಗಿನ ಕಾಲದಲ್ಲಿ ನನ್ನನ್ನು ಏನು ಮಾಡುತ್ತಿದ್ದರು ಗೊತ್ತಿಲ್ಲ. ತಂದೆ ತಾಯಿ ಆಶೀರ್ವಾದ ದೇವರ ಭಕ್ತಿಯಿಂದ ನಾನು ಮನೆಗೆ ವಾಪಸ್ ಬಂದಿರುವೆ ಇಲ್ಲದಿದ್ದರೆ ಅನು ಪ್ರಭಾಕರ್ ಆಗಿ ನಿಮ್ಮ ಮುಂದೆ ಇರುತ್ತಿರಲಿಲ್ಲ. ಈಗ ಕಥೆ ಕೇಳಿದರೆ ನಗು ಬರುತ್ತದೆ ಆದರೆ ಆ ಸಮಯದಲ್ಲಿ ಅವರಿಗೆ ತುಂಬಾ ಭಯ ಆಗಿರುತ್ತೆ ಈಗಲೂ ನನ್ನ ತಾಯಿ ಈ ವಿಚಾರದ ಬಗ್ಗೆ ಕೇಳಿದರೆ ಕಣ್ಣೀರು ಹಾಕುತ್ತಾರೆ. ಈಗ ನನ್ನ ಮಗಳು ನಂದನಾ ಬಗ್ಗೆ ಕೂಡ ನಾನು ತುಂಬಾ ಯೋಚನೆ ಮಾಡುತ್ತೀನಿ. ನನ್ನ ಮಗಳು ಎಲ್ಲಾದರೂ ರೀತಿ ಫ್ರೀಡಮ್‌ನ  ನಾನು ರಘು ಕೊಟ್ಟಿದ್ದೀವಿ. ಇತ್ತೀಚಿನ ದಿನಗಳಲ್ಲಿ ನಂದನಾ ಒಬ್ಬಳೇ ಮಲಗುವುದಕ್ಕೆ ಶುರು ಮಾಡಿದ್ದಾಳೆ' ಎಂದು ಅನು ಪ್ರಭಾಕರ್ ಹೇಳಿದ್ದಾರೆ.  

click me!