ನಾಯಿ ನೋಡಿ ಆಕ್ಟಿಂಗ್‌ ಕಲ್ತಿದ್ದೀನಿ; ಮಗ ಹಾವು ಹಿಡಿಯಬಾರದೆಂದು ಕುಕ್ಕೆ ಸುಬ್ರಹ್ಮಣ್ಯಗೆ ಓಡಿದ ನಟಿ ಪದ್ಮಜಾ ರಾವ್

By Vaishnavi ChandrashekarFirst Published Mar 21, 2023, 2:22 PM IST
Highlights

 ಮಗ ಸಂಜೀವಿ ಪ್ರಾಣಿ ಪಕ್ಷಿಗಳನ್ನು ತುಂಬಾ ಇಷ್ಟ ಪಡಲು ಕಾರಣವೇನು? 40 ಜನರಿಗೆ ಕೆಲಸ ಕೊಟ್ಟಿರುವ ಮಗನ ಬಗ್ಗೆ ತಾಯಿ ಪದ್ಮಜಾ ರಾವ್ ಹೆಮ್ಮೆಯ ಮಾತು ...

ಕನ್ನಡ ಚಿತ್ರರಂಗದ ಹಿರಿಯ ನಟಿ ಪದ್ಮಜಾ ರಾವ್ ಪುತ್ರ ಸಂಜೀವ್ ಸುಮಾರು 800 ಪ್ರಾಣಿ ಪಕ್ಷಿಗಳ ರಕ್ಷಣೆ ಮಾಡಿ ಆಶ್ರಯಾ ನೀಡಿದ್ದಾರೆ. ಮಗನ ಸಾಧನೆ ಬಗ್ಗೆ ಪದ್ಮಜಾ ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ.

'ನನ್ನ ಮಗ ಚಿಕ್ಕ ವಯಸ್ಸಿನಿಂದ ಆಟ ಸಾಮಾನುಗಳನ್ನು ಇಟ್ಟಿಕೊಳ್ಳುತ್ತಿರಲಿಲ್ಲ ಆತನಿಗೆ ಪ್ರಾಣಿ ಹುಚ್ಚು ಒಂದೇ ಇದ್ದಿದ್ದು. ನಿಜವಾದ ಜಿರಳೆ ಹಿಡಿಯುವುದು, ಇಲಿ ಹಿಂದೆ ಓಡುವುದು...ಬೆಕ್ಕು ಮತ್ತು ನಾಯಿ ಕಂಡರೆ ತರುತ್ತಿದ್ದ...ಆತನಿಗೆ ಭಯ ಅನ್ನೋದೆ ಇರಲಿಲ್ಲ. ಪ್ರಾಣಿ ಪಕ್ಷಿಗಳ ವಿಚಾರಕ್ಕೆ ಬಂದ್ರೆ ಹುಚ್ಚ ಆಗ್ತಾನೆ.. ಏನೋ ನಾಯಿ ಬೆಕ್ಕು ಗಿಣಿ ಸಾಕುತ್ತಾನೆ ಅಂದುಕೊಂಡರೆ 13 ವರ್ಷ ಆಗುತ್ತಿದ್ದಂತೆ ಹಾವು ಹಿಡಿಯುವುದಕ್ಕೆ ಶುರು ಮಾಡಿದ. ನಮ್ಮಲ್ಲಿ ಹಾವು ಹಿಡಿಯುವುದಕ್ಕೆ ಟ್ರೈನಿಂಗ್ ಇಲ್ಲ ಏನೋ ಇಲ್ಲ ಇರೋನು ಒಬ್ಬ ಮಗ ಹಾವು ಹಿಡಿದುಕೊಂಡು ಬಂದರೆ ಎಷ್ಟು ಭಯ ಆಗುತ್ತದೆ? ನನ್ನ ಮಗ ಸಾಮಾನ್ಯ ಹಾವು ತರುವುದಿಲ್ಲ ಈ ನಾಗರ ಹಾವುಗಳನ್ನೇ ಇರುವುದು. ಆರಂಭದಲ್ಲಿ ನಮ್ಮ ಮನೆಯಲ್ಲಿ ಹೇಗಿತ್ತು ಅಂದ್ರೆ ಅವನು ಹಾವು ತರುವುದು ನೋಡಮ್ಮ ಇದರಲ್ಲಿ ವಿಷ ಇಲ್ಲ ಅಂತ ಹೇಳುತ್ತಿದ್ದ ನಾನು ಕಿರುಚಾಡುವುದು ಎಪ್ಪಾ!!' ಎಂದು ಕನ್ನಡ ಖಾಸಗಿ ಮಾಧ್ಯಮವೊಂದರಲ್ಲಿ ಪದ್ಮಜಾ ಮಾತನಾಡಿದ್ದಾರೆ.

`ಪ್ರಾಣಿ' ಪ್ರಿಯೆ, ಪ್ರೀತಿಯ ಅಮ್ಮ ಪದ್ಮಜಾ ರಾವ್ ಪ್ರಾರ್ಥನೆ..!

'ಫೇಮಸ್ ಆದ್ಮೇಲೆ ಪದ್ಮಜಾ ರಾವ್ ಮಗ ಹಾವು ಹಿಡಿಯುತ್ತಾನೆ ಎನ್ನುವರು. ಅಕ್ಕ ಪಕ್ಕದ ಮನೆಯವರು ಹಾವು ಕಂಡರೆ ನಮಗೆ ಕರೆ ಮಾಡಿ ನಿಮ್ಮ ಮಗನನ್ನು ಕಳುಹಿಸಬಹುದಾ ಎಂದು ಕೇಳುತ್ತಿದ್ದರು. ಒಮ್ಮೊಮ್ಮೆ ನಾನು ಹೇಳುತ್ತಿರಲಿಲ್ಲ ಅವನಿಗೆ ತಿಳಿದ ನಂತರ ಮನೆಗೆ ಬಂದು ಯಾಕೆ ನನಗೆ ಹೇಳಿಲ್ಲ ಎಂದು ಜಗಳ ಮಾಡುತ್ತಿದ್ದ. ಈ ಭಯದಿಂದ ನಾನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ ಇವನು ಸರಿಯಾಗಿ ಓಡುತ್ತಿಲ್ಲ ಹಾವು ಹಿಡಿಯುವುದು ಎಲ್ಲಾ ಮಾಡುತ್ತಿದ್ದಾನೆ ಎಂದು ಕೇಳಿದೆ. ಅಗ ಅಲ್ಲಿರುವವರು ಹೇಳಿದರು ನೀವು ನಿಮ್ಮ ಮಗನ ಬಗ್ಗೆ ಹೆದರಿಕೊಳ್ಳಬೇಡಿ ಅವನು ಹಾವುಗಳನ್ನು ಹಿಡಿದು ಕಾಪಾಡುತ್ತಾನೆ ಅದಕ್ಕೆ ತೊಂದರೆ ಕೊಡುವುದಿಲ್ಲ ಅದಕ್ಕೆ ಮುಕ್ತಿ ಸಿಗುತ್ತದೆ..ಹಾವುಗಳು ಇವನನ್ನು ರಕ್ಷಣೆ ಮಾಡುತ್ತೆ. ನೀವು ಏನೇ ಮಾಡಿದ್ದರೂ ಹಾವು ಹಿಡಿಯುವುದನ್ನು ನಿಲ್ಲಿಸುವುದಕ್ಕೆ ಆಗಲ್ಲ ಅಂತ ಹೇಳಿದರು. ಅವರ ಮಾತುಗಳನ್ನು ಕೇಳಿಸಿಕೊಂಡು ಭಯ ಆಯ್ತು ಮನೆಯಲ್ಲಿ ಚೆನ್ನಾಗಿ ಅತ್ತಿರುವೆ.' ಎಂದು ಪದ್ಮಜಾ ರಾವ್ ಹೇಳಿದ್ದಾರೆ.

'ನನ್ನ ಮಗ ಇಂಜಿನಿಯರ್ ಅಥವಾ ಡಾಕ್ಟರ್ ಆಗಬೇಕು ಅನ್ನೋ ಆಸೆ ನನಗೆ ಇಲ್ಲ ನಟ ಆಗಬೇಕು ಅನ್ನೋದು ಇಲ್ಲ ಆದರೆ ಒಂದು ಸಲ ಹಠ ಮಾಡಿ ಫೋಟೋ ಶೂಟ್ ಮಾಡಿಸಿ ಯೋಗರಾಜ್‌ ಭಟ್ರು ಅವರ ಕೈಗೆ ಕೊಟ್ಟೆದ್ದೆ. ನನ್ನ ಮಗ ಆಕ್ಟಿಂಗ್‌ ಕಡೆ ಹೋದರೆ ಈ ಹಾವು ಪ್ರಾಣಿ ಪಕ್ಷಿಗಳನ್ನು ಗಮನ ಕಳೆದುಕೊಳ್ಳಬಹುದು ಅಂದುಕೊಂಡೆ ಆದರೆ ಆಗಲಿಲ್ಲ. ಮಗ ಚೆನ್ನಾಗಿ ಓದಬೇಕು ಅನ್ನೊ ಆಸೆ ತುಂಬಾ ಇತ್ತು ಒಳ್ಳೆ ಕೆಲಸದಲ್ಲಿ ಇರಬೇಕಿತ್ತು ಅಂತ ಆಸೆ ಇತ್ತು. ಈಗ 6-8 ವರ್ಷಗಳಿಂದ ನನ್ನ ಮಗನ ಬಗ್ಗೆ ತುಂಬಾ ಹೆಮ್ಮೆ ಇದೆ. ಒಂದು ಪೆಟ್‌ ಸ್ಯಾಂಚುರಿ ಅರಂಭಿಸಿದ್ದಾರೆ ಪ್ರತಿಯೊಂದು ಪ್ರಾಣಿ ಪಕ್ಷಿಗಳ ಬಗ್ಗೆ ವಿವರಿಸುತ್ತಾನೆ. ಅದು Zoo ರೀತಿ ಅಲ್ಲ ಜನರು ಪ್ರಾಣಿ ಪಕ್ಷಿಗಳ ಜೊತೆ ಸಂಪರ್ಕ ಬೆಳೆಸಿಕೊಳ್ಳಲು ಮಾಡುತ್ತಿರುವ ಸಂಸ್ಥೆ. ಇಲ್ಲಿ ಅವರನ್ನು ಮುಟ್ಟಿ ನೋಡಿ ತಿಳಿದುಕೊಳ್ಳಬಹುದು ಎನ್ನುತ್ತಾನೆ.' ಎಂದಿದ್ದಾರೆ ಪದ್ಮಜಾ ರಾವ್.

'ಪ್ರಾಣಿಗಳಿಂದ ನಾವು ತುಂಬಾ ವಿಚಾರಗಳನ್ನು ಕಲಿಯಬಹುದು. ನಾಯಿಗಳಿಂದ ಆಕ್ಟಿಂಗ್ ಕಲಿಯುತ್ತೀವಿ, ಭಾಷೆ ಇಲ್ಲದ ಅಂದ್ರೆ ಮೂಕ ಪ್ರಾಣಿಗಳು ಭಾವೆನಗಳನ್ನು ಹೇಗೆ ಹಂಚಿಕೊಳ್ಳುತ್ತಾರೆ ಅನ್ನೋದು ಕಲಿಯಬಹುದು. 100 ರಿಂದ 150 ಪಕ್ಷಿಗಳಿದೆ ಕಲರ್‌ ಕಲರ್‌ ಪಕ್ಷಿಗಳು ಕೈ ಮೇಲೆ ಬಂದು ಕುಳಿತುಕೊಳ್ಳುತ್ತದೆ. ಮನೆಯಲ್ಲಿ ಬರೀ ಟಿವಿ ನೋಡುವುದಲ್ಲ ಪರಿಸರವನ್ನು ಎಂಜಾಯ್ ಮಾಡಬೇಕು. ನನ್ನ ಮಗ ಪಿಎಚ್‌ಡಿ ಮಾಡಿಲ್ಲ ಎರಡು ಮೂರು ಪದವಿಗಳು ಇಲ್ಲ ದೊಡ್ಡ ಕೆಲಸದಲ್ಲಿ ಇಲ್ಲ ಅಂತ ನನಗೆ ಅನಿಸಿತ್ತು ಅಲ್ವಾ? ಅದು ತಪ್ಪು ಎಂದು ನನಗೆ ಈಗ ತಿಳಿಯಿತ್ತು ಏಕೆಂದರೆ IISE ನನ್ನ ಮಗನನ್ನು ಟಾಕ್‌ಗೆ ಕರೆದಿದ್ದರು. ಮೂರು ದಿನಗಳ ಕಾರ್ಯಕ್ರಮಕ್ಕೆ 10 ಜನರನ್ನು ಕರೆದಿದ್ದರು ಎಲ್ಲಾ ಚೆನ್ನಾಗಿ ಓದಿರುವವರು ಮೂರ್ನಾಲ್ಕು ಡಿಗ್ರಿಗಳಿತ್ತು ಅವರ ಹೆಸರಿನ ನಂತರ ಆದರೆ ನನ್ನ ಮಗನ ಹೆಸರಿನ ಹಿಂದೆ ಏನೂ ಇಲ್ಲ. ಹಣದ ವಿಚಾರದಲ್ಲಿ ಹೇಳಬೇಕು ಅಂದ್ರೆ ದೊಡ್ಡ ಸಂಸ್ಥೆಗಳ ನಡೆಸುತ್ತಿಲ್ಲ ಅವರು 800 ಪಕ್ಷಿಗಳನ್ನು ಸಾಕುತ್ತಿದ್ದಾನೆ 40 ಜನರಿಗೆ ಕೆಲಸ ಕೊಟ್ಟಿದ್ದಾನೆ'ಎಂದು ಪದ್ಮಜಾ ಹೇಳಿದ್ದಾರೆ. 

click me!