ಅದೇ ಫೇಕ್ ಐಡಿಯಿಂದ ನನಗೂ ಅಶ್ಲೀಲ ಮೆಸೇಜ್ ಬಂದಿತ್ತು; ಕಿರುತೆರೆ ನಟಿಯೊಬ್ಬರ ಆರೋಪ!

Published : Jun 23, 2024, 07:39 PM ISTUpdated : Jun 23, 2024, 09:40 PM IST
ಅದೇ ಫೇಕ್ ಐಡಿಯಿಂದ ನನಗೂ ಅಶ್ಲೀಲ ಮೆಸೇಜ್ ಬಂದಿತ್ತು; ಕಿರುತೆರೆ ನಟಿಯೊಬ್ಬರ ಆರೋಪ!

ಸಾರಾಂಶ

'ನನಗೆ ಅಶ್ಲೀಲವಾದ ಮೆಸೇಜ್‌, ಫೋಟೋಗಳನ್ನು ಕಳುಹಿಸಿದರೆ, ನಾನು ಅಂಥ ಅಕೌಂಟ್‌ಗಳನ್ನು ಬ್ಲಾಕ್ ಮಾಡುತ್ತೇನೆ. goutham_ks_1990 ಈ ಐಡಿ ಬಗ್ಗೆ ಗೊತ್ತಾದಾಗ ಈ ಐಡಿಯನ್ನು ಎಲ್ಲೋ ನೋಡಿದ್ದೇನೆ ಅಲ್ವಾ ಎಂದು ಅನ್ನಿಸಿತು. ನನ್ನ ಬ್ಲಾಕ್ ಲಿಸ್ಟ್ ಅನ್ನು ಚೆಕ್ ಮಾಡಿದಾಗ..

ಅಶ್ಲೀಲ ಮೆಸೇಜ್ (Obscene Message) ಕಳುಹಿಸಿದ್ದ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ (Renukaswamy) ಬೆಂಗಳೂರಿನಲ್ಲಿ ಕೊಲೆಯಾಗಿ ಹೋಗಿದ್ದು ಗೊತ್ತೇ ಇದೆ. ನಟಿ, ದರ್ಶನ್ (Darshan) ಗೆಳತಿ ಪವಿತ್ರಾ ಗೌಡಗೆ (Pavithra Gowda) ಅಶ್ಲೀಲ ಕಾಮೆಂಟ್ ಮಾಡುತ್ತಿದ್ದ ಮತ್ತು ಫೋಟೋ ಕಳುಹಿಸಿದ್ದ ಎಂಬ ಕಾರಣಕ್ಕೆ ಆತನನ್ನು ಬೆಂಗಳೂರಿಗೆ ಕರೆಸಿ, ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಈಗ ನಟ ದರ್ಶನ್ ಸೇರಿದಂತೆ 17 ಮಂದಿ ಅರೆಸ್ಟ್ ಆಗಿ, ಜೈಲಿಗೆ ಹೋಗಿದ್ದಾರೆ. ಈ ಘಟನೆ ಇಡೀ ಕರ್ನಾಟಕ ಸೇರಿದಂತೆ ದೇಶಾದ್ಯಂತ ಸುದ್ದಿಯಾಗಿದೆ.

ಇದೀಗ ಈ ಬಗ್ಗೆ ಕಿರುತೆರೆ ನಟಿಯೊಬ್ಬರು 'ಅದೇ ರೇಣುಕಾ ಸ್ವಾಮಿ ಕ್ರಿಯೆಟ್ ಮಾಡಿದ್ದ ಫೇಕ್ ಅಕೌಂಟ್‌ಗಳಿಂದ ನನಗೂ ಅಶ್ಲೀಲ ಮೆಸೇಜ್ ಬಂದಿತ್ತು' ಎಂದಿದ್ದಾರೆ. ಈ ಮೊದಲು ಕೂಡ ಇನ್ನಿಬ್ಬರು ಕಿರುತೆರೆ ನಟಿಯರಿಗೆ ಇದೇ ಐಡಿಯಿಂದ ಅಶ್ಲೀಲ ಮೆಸೇಜ್ ಬಂದಿತ್ತು ಎಂಬ ಸುದ್ದಿಯಾಗಿದ್ದು, ಅವರು ಬಸವೇಶ್ವರ ನಗರ ಪೊಲೀಸ್ ಸ್ಟೇಷನ್‌ಗೆ ದೂರು ನೀಡಲು ಹೋಗಿದ್ದೆವು' ಎಂದಿದ್ದರು.

ಅಪ್ಪು ಸಾವಿನ ಹಿಂದಿನ ರಾತ್ರಿ, ರಮೇಶ್ ಅರವಿಂದ್ ಜೊತೆಗಿನ ಚರ್ಚೆಯಲ್ಲಿ ಬುದ್ಧ ಬಂದಿದ್ದು ಯಾಕೆ?

ಈ ಕುರಿತು ನಟಿಯೊಬ್ಬರು 'ಸದ್ಯ ಏನು ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ನಾನು ಯಾರಿಗೂ ಸಪೋರ್ಟ್ ಮಾಡುವುದಕ್ಕೆ ಬಂದಿಲ್ಲ. ರೇಣುಕಾ ಸ್ವಾಮಿ ಫ್ಯಾಮಿಲಿಗೆ ದೇವರು ಸಹಿಸುವ ಶಕ್ತಿ ಕೊಡಲಿ. ಆದರೆ ಈ ರೇಣುಕಾ ಸ್ವಾಮಿ ಇನ್ನೂ ಒಂದಿಬ್ಬರಿಗೆ ಇದೇ ಮೆಸೇಜ್ ಕಳುಹಿಸಿದ್ದರು, ಅದಕ್ಕೆ ಸಂಬಂಧಿಸಿದಂತೆ ದೂರು ಕೂಡ ದಾಖಲಾಗಿತ್ತು. ಅವರು ಮೆಸೇಜ್ ಕಳುಹಿಸುತ್ತಿದ್ದ ಅಕೌಂಟ್‌ goutham_ks_1990 ಹೆಸರಿನಲ್ಲಿ ಇತ್ತು ಎಂಬುದನ್ನು ನಾನು ನ್ಯೂಸ್‌ನಲ್ಲಿ ನೋಡಿದ್ದೆ' ಎಂದಿದ್ದಾರೆ. 

ಕೊಲೆ ಆರೋಪಿ ದರ್ಶನ್ ಬಗ್ಗೆ 'ಕಾಟೇರ' ನಾಯಕಿ ಮಾಲಾಶ್ರೀ ಮಗಳು ಆರಾಧನಾ ಹೇಳಿದ್ದೇನು?

'ನನಗೆ ಅಶ್ಲೀಲವಾದ ಮೆಸೇಜ್‌, ಫೋಟೋಗಳನ್ನು ಕಳುಹಿಸಿದರೆ, ನಾನು ಅಂಥ ಅಕೌಂಟ್‌ಗಳನ್ನು ಬ್ಲಾಕ್ ಮಾಡುತ್ತೇನೆ. goutham_ks_1990 ಈ ಐಡಿ ಬಗ್ಗೆ ಗೊತ್ತಾದಾಗ ಈ ಐಡಿಯನ್ನು ಎಲ್ಲೋ ನೋಡಿದ್ದೇನೆ ಅಲ್ವಾ ಎಂದು ಅನ್ನಿಸಿತು. ನನ್ನ ಬ್ಲಾಕ್ ಲಿಸ್ಟ್ ಅನ್ನು ಚೆಕ್ ಮಾಡಿದಾಗ, ಈ ಅಕೌಂಟ್ ಅದರಲ್ಲಿದೆ. ಇದನ್ನು ನೋಡಿ ನನಗೂ ಭಯ ಆಯ್ತು. ನಿಮ್ಮ ಬ್ಲಾಕ್ ಲಿಸ್ಟ್‌ನಲ್ಲಿ ಈ ಅಕೌಂಟ್ ಇದೆಯಾ ಎಂದು ನೀವು ಒಮ್ಮೆ ಚೆಕ್ ಮಾಡಿಕೊಳ್ಳಿ' ಎಂದಿದ್ದಾರೆ ನಟಿ.

ಈ ಫ್ಯಾಮಿಲಿಗೆ ಸೇರಿರ್ಲಿಲ್ಲಾ ಅಂದ್ರೆ ಇಂಥ ಪ್ರಿವಿಲೇಜ್ ಸಿಗ್ತಿತ್ತಾ? ಡಿಕೆಶಿ ಮಗಳು ಹೀಗ್ ಹೇಳಿದ್ರಾ, ರಿಯಲೀ?

ಮುಂದುವರೆದು 'ಇದಕ್ಕೆ ಏನು ಹೇಳಬೇಕೆಂದೇ ಗೊತ್ತಾಗುತ್ತಿಲ್ಲ. ಅಷ್ಟೊಂದು ಚೆನ್ನಾಗಿರುವ ಹೆಂಡತಿ ಇರುವಾಗ, ಬೇರೆಯವರಿಗೆ ಈ ರೀತಿ ಮೆಸೇಜ್ ಕಳುಹಿಸುವುದು ಯಾಕೆ? ಬಹಳಷ್ಟು ಜನರು ಇವೆಲ್ಲಾ ಕಾಮನ್ ಎನ್ನಬಹುದು. ಆದರೆ ಆ ರೀತಿ ಮೆಸೇಜ್‌ಗಳನ್ನು ನೋಡಿದಾಗ, ಸಂಬಂಧಪಟ್ಟವರಿಗೆ ಛೇ, ಥೂ ಅಂತ ಅನ್ನಿಸುತ್ತದೆ. ನಾನು ಯಾರ ಪರವಾಗಿಯೂ ಸಪೋರ್ಟ್ ಮಾಡುತ್ತಿಲ್ಲ. ಆದರೆ ಇನ್ನೊಬ್ಬರ ಪರ್ಸನಲ್ ವಿಷಯಗಳ ಬಗ್ಗೆ ಯಾರೂ ಕೂಡ ಕಾಮೆಂಟ್‌ ಸೆಕ್ಷನ್‌ನಲ್ಲಿ ಕಾಮೆಂಟ್ ಹಾಕಿ ಜಡ್ಜ್‌ ಮಾಡುವುದಕ್ಕೆ ಹೋಗಬೇಡಿ. ನಿಮ್ಮ ಜೀವನವನ್ನು ನೀವು ನೋಡಿಕೊಳ್ಳಿ, ಸಾಕು' ಎಂದು ಹೇಳಿದ್ದಾರೆ.

ಯಾರೂ ಕೂಡ ಹುಟ್ಟುವಾಗ್ಲೇ ಹೀರೋನೂ ಅಲ್ಲ ವಿಲನ್ನೂ ಅಲ್ಲ; ಹೀಗಂದ್ರಲ್ಲ ವಸಿಷ್ಠ ಸಿಂಹ!

'ನನ್ನ ಬ್ಲಾಕ್ ಲಿಸ್ಟ್ ಅಲ್ಲೂ ಆ ಅಕೌಂಟ್ ಇದೆ ಎಂದರೆ, ನನಗೆ ಅದರಿಂದ ಅಶ್ಲೀಲವಾದ ಮೆಸೇಜ್ ಅಥವಾ ಫೋಟೋ ಖಂಡಿತವಾಗಿ ಬಂದಿರುತ್ತದೆ. ಆ ಕಾರಣಕ್ಕೇ ನಾನು ಅದನ್ನು ಬ್ಲಾಕ್ ಮಾಡಿರುತ್ತೇನೆ. ಆ ಅಕೌಂಟ್‌ನಿಂದ ಅಶ್ಲೀಲವಾದ ಮೆಸೇಜ್ ಬರದೇ ನಾನು ಅದನ್ನು ಬ್ಲಾಕ್ ಮಾಡಿರುವುದಿಲ್ಲ' ಎಂದಿದ್ದಾರೆ ಈ ನಟಿ.

ಕೊನೆಯ ಸಂದರ್ಶನದಲ್ಲಿ ಪುನೀತ್‌ ನಟರಾದ ದರ್ಶನ್-ಸುದೀಪ್ ಬಗ್ಗೆ ಏನ್ ಹೇಳಿದ್ರು? ನಂಬೋದಕ್ಕೇ ಆಗಲ್ಲ!

'ರೇಣುಕಾ ಸ್ವಾಮಿ ಬೇರೆ ಬೇರೆ ಅಕೌಂಟ್‌ಗಳಿಂದಲೂ ಅಶ್ಲೀಲ ಮೆಸೇಜ್ ಕಳುಹಿಸುವ ಕೆಲಸ ಮಾಡುತ್ತಿದ್ದರಂತೆ. ಇವರು ಸತತವಾಗಿ ನನಗೆ ಆ ರೀತಿಯ ಮೆಸೇಜ್‌ ಅಥವಾ ಫೋಟೋ ಕಳುಹಿಸಿದ್ದ ಕಾರಣಕ್ಕೇ ನಾನು ಬ್ಲಾಕ್ ಮಾಡಿರುತ್ತೇನೆ. ಆದರೆ ಏನು ಕಳುಹಿಸಿದ್ದರು ಎಂದು ನನಗೆ ಈಗ ನೆನಪಾಗುತ್ತಿಲ್ಲ. ನಾನು ಯಾವಾಗ ಬ್ಲಾಕ್ ಮಾಡಿದ್ದೆ ಎಂಬುದು ಕೂಡ ನೆನಪಿಲ್ಲ' ಎಂದಿದ್ದಾರೆ ಕಿರುತೆರೆ ನಟಿ. 

ಭವಿಷ್ಯ ಮೊದಲೇ ಗೊತ್ತಿತ್ತಾ? ಹೇಗಿದ್ರೂ ಇಲ್ಲಿ ಏನ್ ಬೇಕಾದ್ರೂ ಆಗ್ಬಹುದು ಅಂದಿದ್ರು ಧನಂಜಯ್‌!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?
Karna Serial: ಸಂಜಯ್‌ ಕುತಂತ್ರಕ್ಕೆ ಬಲಿಯಾದ ನಿತ್ಯಾ: ಈಗ ಕರ್ಣನ ಜೊತೆ ಅಸಲಿ ಮದುವೆ ಆಗ್ಲೇಬೇಕು! ನಿಧಿ ಕಥೆ ಏನು?