Latest Videos

ಅಪ್ಪು ಸಾವಿನ ಹಿಂದಿನ ರಾತ್ರಿ, ರಮೇಶ್ ಅರವಿಂದ್ ಜೊತೆಗಿನ ಚರ್ಚೆಯಲ್ಲಿ ಬುದ್ಧ ಬಂದಿದ್ದು ಯಾಕೆ?

By Shriram BhatFirst Published Jun 23, 2024, 6:22 PM IST
Highlights

ನೀವು ಇಷ್ಟಪಡುವ ಎಲ್ಲಾ ವಿಷಯಗಳನ್ನೂ ಒಂದಲ್ಲ ಒಂದಿನ ನೀವು ಕಳೆದುಕೊಳ್ಳಲೇಬೇಕು. ಅದೇ ಬುದ್ಧ ಹೇಳಿದ್ದು. ನಾನು ಅದನ್ನ ಅಪ್ಪು ಜೊತೆ ಶೇರ್ ಮಾಡ್ತಾ ಇದ್ದೆ. ನೀವು ಏನೇ ಹೇಳಿ, ನಮಗಿಷ್ಟವಾದ ಎಲ್ಲವೂ ಒಂದಿನ ನಮ್ಮಿಂದ ದೂರ ಆಗ್ತವೆ ಎಂದು ನಾನು ಅಂದಿದ್ದಕ್ಕೆ ಅಪ್ಪು..

'ವೀಕ್‌ ಎಂಡ್ ವಿತ್ ರಮೇಶ್ ಕಾರ್ಯಕ್ರಮದ ಕೆಂಪು ಕುರ್ಚಿಯಲ್ಲಿ ಅಪ್ಪು ಅವ್ರನ್ನ ಕೂರಿಸಿ, ಅವ್ರ ಕಥೆನ ನಿಮ್ಗೆಲ್ಲಾ ಹೇಳಿದೀನಿ. ನಮ್ಮ ವೀಕೆಂಡ್‌ ವಿತ್ ಕಾರ್ಯಕ್ರಮದ ಮೊದಲ ಸೀಸನ್‌ನ ಮೊದಲ ಸಾಧಕರು ಅವರು, ಪುನೀತ್ ರಾಜ್‌ಕುಮಾರ್ (Puneeth Rajkumar). ಇವತ್ತು ಈ ಚೇರ್‌ನಲ್ಲಿ ನಾನು ಅಪ್ಪು ಅವ್ರ ಫೋಟೋ ಇಟ್ಕೊಂಡು ಮಾತಾಡ್ಬೇಕು ಅಂದ್ರೆ, ಇದು ನನ್ನ ಮಗಳ ಮದ್ವೆನಲ್ಲಿ ಅಪ್ಪು ಬಂದಾಗ ತಗೊಂಡಿದ್ದ ಫೋಟೋ. ಅದಕ್ಕೆ 'ಪ್ರೀತಿಯ ಅಪ್ಪು ಸರ್ ಸವಿನೆನಪುಗಳಿಗೆ' ಅಂತ ಹಾಕೋ ತರಹ ಆಯ್ತಲ್ಲಾ' ಬಟ್, ಇದೇ ಲೈಪ್ ಏನೂ ಮಾಡೋಕೆ ಆಗಲ್ಲ. 

ಆದ್ರೆ, ಇಷ್ಟೊಂದು ನೋವು ಎಲ್ಲರಿಗೂ ಆಗ್ತಿದೆ. ಕಾರಣ, ಅವ್ರು ಅಷ್ಟೊಂದು ಖುಷಿ ಕೊಟ್ಟಿದಾರೆ ಆ ವ್ಯಕ್ತಿ' ಎಂದಿದ್ದಾರೆ ನಟ ರಮೇಶ್ ಅರವಿಂದ್. ಆವತ್ತು ಅಂದ್ರೆ ಹಿಂದಿನ ದಿನ ರಾತ್ರಿ ನೀವು ಮತ್ತು ಅಪ್ಪು ಸರ್ ಒಂದಿಷ್ಟು ಜೀವನದ ಘಟನಾವಳಿಗಳ ಬಗ್ಗೆ ಮಾತನಾಡ್ತಾ ಇದ್ರಿ. ಬುದ್ದನ ಒಂದು ಸಂದೇಶ ಕೂಡ ಮಾತಾಡಿದ್ರಿ, ವೈರಾಗ್ಯದ ಬಗ್ಗೆ ಮಾತಾಡಿದ್ರಿ, ಯಾವುದೂ ಶಾಶ್ವತ ಅಲ್ಲ ಅಂತ ಚರ್ಚೆ ಆಯ್ತು. ಅದೆಲ್ಲವೂ ಎಷ್ಟು ಕಾಕತಾಳೀಯ ಅನ್ಸುತ್ತೆ' ಎಂಬ ಪ್ರಶ್ನೆಗೆ ನಟ ರಮೇಶ್ ಅರವಿಂದ್ (Ramesh Aravind) ಅವರು ಉತ್ತರಿಸಿದ್ದಾರೆ. 

ಕೊಲೆ ಆರೋಪಿ ದರ್ಶನ್ ಬಗ್ಗೆ 'ಕಾಟೇರ' ನಾಯಕಿ ಮಾಲಾಶ್ರೀ ಮಗಳು ಆರಾಧನಾ ಹೇಳಿದ್ದೇನು?

ಅದು ಟೋಟಲಿ ಕಾಕತಾಳೀಯ, ಕೋ ಇನ್‌ಸಿಡೆಂಟ್. ಒಂದು ಪಾರ್ಟಿ ಅಂದ್ಮೇಲೆ ಎಲ್ಲಾ ವಿಷ್ಯನೂ ಮಾತಾಡ್ತೀವಿ. ಅದು ಬರುತ್ತೆ, ಐಪಿಎಲ್‌ ಬಗ್ಗೆ ಮಾತಾಡ್ತೀವಿ, ಸಿನಿಮಾ ರಿಲೀಸ್ ಬಗ್ಗೆ ಮಾತಾಡ್ತೀವಿ, ಯಾರೋ ವೇಟ್ ಲಾಸ್ ಮಾಡಿದ್ದರ ಬಗ್ಗೆ ಮಾತಾಡ್ತೀವಿ, ಸಿಕ್ಸ್ ಪ್ಯಾಕ್ ಬಗ್ಗೆ ಮಾತಾಡ್ತೀವಿ. ಆ ಥರ ಮಧ್ಯದಲ್ಲಿ ಫಿಲಾಸಪಿ ಎಲ್ಲಾ ಬರುತ್ತೆ. ಎಲ್ಲಾ ಬರುತ್ತಲ್ಲಾ ಹಾಗೇ ಬಂದಿದ್ದು ಬುದ್ಧನ ವಿಚಾರ. ಬಟ್ ಅದು ಯಾಕೆ ಕಾಡ್ತಿದೆ ಅಂದ್ರೆ, ಬುದ್ಧ ಹೇಳಿದ್ದ ಮಾತು ಮತ್ತು ನೆಕ್ಸ್ಟ್ ಡೇ ನಡೆದ ವಿಷಯ. 

ಈ ಫ್ಯಾಮಿಲಿಗೆ ಸೇರಿರ್ಲಿಲ್ಲಾ ಅಂದ್ರೆ ಇಂಥ ಪ್ರಿವಿಲೇಜ್ ಸಿಗ್ತಿತ್ತಾ? ಡಿಕೆಶಿ ಮಗಳು ಹೀಗ್ ಹೇಳಿದ್ರಾ, ರಿಯಲೀ?

ನೀವು ಇಷ್ಟಪಡುವ ಎಲ್ಲಾ ವಿಷಯಗಳನ್ನೂ ಒಂದಲ್ಲ ಒಂದಿನ ನೀವು ಕಳೆದುಕೊಳ್ಳಲೇಬೇಕು. ಅದೇ ಬುದ್ಧ ಹೇಳಿದ್ದು. ನಾನು ಅದನ್ನ ಅಪ್ಪು ಜೊತೆ ಶೇರ್ ಮಾಡ್ತಾ ಇದ್ದೆ. ನೀವು ಏನೇ ಹೇಳಿ, ನಮಗಿಷ್ಟವಾದ ಎಲ್ಲವೂ ಒಂದಿನ ನಮ್ಮಿಂದ ದೂರ ಆಗ್ತವೆ ಎಂದು ನಾನು ಅಂದಿದ್ದಕ್ಕೆ ಅಪ್ಪು 'ಹೌದು ಸರ್, ಕತ್ತಲೆ ಆದ್ಮೇಲೆ ಬೆಳಕು, ಬೆಳಕು ಅದ್ಮೇಲೆ ಕತ್ತಲೆ ಬರುತ್ತೆ, ಹೀಗೇ' ಅಂತ ಅಪ್ಪು ಕೂಡ ನನ್ ಮಾತಿಗೆ ಫಾಲೋ ಅಪ್‌ ಕೊಟ್ಟಿದ್ದರು. 
ಹಿಂದಿನ ದಿನ ರಾತ್ರಿ ಅಷ್ಟೆಲ್ಲಾ ಮಾತಾಡಿದೀವಿ, ಆದ್ರೆ ಮಾರನೇ ದಿನ ಅಪ್ಪುನೆ ಕಳ್ಕೊಳ್ತೀವಿ ನಾವು.. '

ಯಾರೂ ಕೂಡ ಹುಟ್ಟುವಾಗ್ಲೇ ಹೀರೋನೂ ಅಲ್ಲ ವಿಲನ್ನೂ ಅಲ್ಲ; ಹೀಗಂದ್ರಲ್ಲ ವಸಿಷ್ಠ ಸಿಂಹ!

ಈ ಮಾತುಕತೆ ಮತ್ತು ಆ ಘಟನೆ ಬೇರೆ ದಿನ ನಡೆದಿದ್ದಿದ್ರೆ ಅದಕ್ಕೆ ಅಷ್ಟೇನೂ ವ್ಯಾಲ್ಯೂ ಇರ್ತಿರ್ಲಿಲ್ಲ. ಹೀಗೆ, ಹಿಂದಿನ ದಿನ ರಾತ್ರಿ ಮಾತು, ಮರುದಿನ ಬೆಳಿಗ್ಗೆ ಪುನೀತ್ ಸಾವು ಸಂಭವಿಸಿದ್ದರಿಂದ ನಮ್ಮ ಮೈಂಡ್ ಅವೆರಡಕ್ಕೂ ಸಂಬಂಧ ಕಲ್ಪಿಸಿಕೊಳ್ಳುತ್ತೆ. ಆದರೆ ಅದು ಜಸ್ಟ್ ಕೋ ಇನ್ಸಿಡೆಂಟ್ ಅಷ್ಟೇ' ಎಂದಿದ್ದಾರೆ ನಟ-ನಿರ್ದೇಶಕ ರಮೇಶ್ ಅರವಿಂದ್. 

ಕೊನೆಯ ಸಂದರ್ಶನದಲ್ಲಿ ಪುನೀತ್‌ ನಟರಾದ ದರ್ಶನ್-ಸುದೀಪ್ ಬಗ್ಗೆ ಏನ್ ಹೇಳಿದ್ರು? ನಂಬೋದಕ್ಕೇ ಆಗಲ್ಲ!

ಸ್ಯಾಂಡಲ್‌ವುಡ್ ನಟ-ನಿರ್ದೇಶಕರಾದ ರಮೇಶ್ ಅರವಿಂದ್ ಅವರು ನಮ್ಮನ್ನಗಲಿರುವ ನಟ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಮಾತನಾಡಿದ್ದಾರೆ. ಅಪ್ಪು ಸಾಯುವ ಹಿಂದನ ದಿನ, ಸಂಗೀತ ನಿರ್ದೇಶಕ ಗುರುಕಿರಣ್ ಮನೆಯಲ್ಲಿ ನಡೆದ ಪಾರ್ಟಿಯ ವೇಳೆ ರಾತ್ರಿ ರಮೇಶ್ ಅರವಿಂದ್ ಹಾಗು ಅಪ್ಪು ಭೇಟಿಯಾಗಿದ್ದರು. ಈ ವೇಳೆ ನಡೆದ ಚರ್ಚೆ, ಮಾತುಕತೆ ಬಗ್ಗೆ ಹೇಳಿಕೊಂಡಿರುವ ರಮೇಶ್ ಅರವಿಂದ್ ಅವರು ಅದೊಂದು ಕೋ ಇನ್ಸಿಡೆಂಟ್ ಅಷ್ಟೇ ಎಂದಿದ್ದಾರೆ. 

ಭವಿಷ್ಯ ಮೊದಲೇ ಗೊತ್ತಿತ್ತಾ? ಹೇಗಿದ್ರೂ ಇಲ್ಲಿ ಏನ್ ಬೇಕಾದ್ರೂ ಆಗ್ಬಹುದು ಅಂದಿದ್ರು ಧನಂಜಯ್‌!

ಅಂದಹಾಗೆ, ಡಾ ರಾಜ್‌ಕುಮಾರ್ ಮಗ, ಪುನೀತ್ ರಾಜ್‌ಕುಮಾರ್ ಅವರು 17 ಮಾರ್ಚ್ 1975 ರಂದು (17 March 1975) ಚೆನ್ನೈನಲ್ಲಿ ಜನಿಸಿದ್ದರು. ತಮ್ಮ 46ನೇ ವಯಸ್ಸಿನಲ್ಲಿ 29 ಅಕ್ಟೋಬರ್ 2021 (29 October 2021) ರಲ್ಲಿ ಹೃದಯ ಸ್ಥಂಭನದಿಂದ ಅಸುನೀಗಿದರು. ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಮಕ್ಕಳಾದ ವಂದಿತಾ ಹಾಗೂ ಧೃತಿ ಅವರು ನಟ ಪುನೀತ್ ರಾಜ್‌ಕುಮಾರ್ ಅವರಿಂದ ದೂರವಾದರು. ದೊಡ್ಮನೆ ಕುಡಿ ಅಪ್ಪು ಖ್ಯಾತಿಯ ಪುನೀತ್ ರಾಜ್‌ಕುಮಾರ್ ಅವರನ್ನು ಕರುನಾಡು ಎಂದಿಗೂ ಮರೆಯಲು ಸಾಧ್ಯವಿಲ್ಲ. 

ಹಿರಿಯ ನಟ ಅನಂತ್‌ ನಾಗ್ ಬಗ್ಗೆ 'ಮೀಟೂ' ಖ್ಯಾತಿ ನಟಿ ಶ್ರುತಿ ಹರಿಹರನ್ ಹೇಳಿದ್ದೇನು?

click me!