ಮತ್ತೆ ರಿಲೀಸ್ ಆಗ್ತಿದೆ ಡಾ.ರಾಜ್‌ ನಟನೆಯ 'ಭಾಗ್ಯವಂತರು'; ಯಾವಾಗ, ವಿಶೇಷ ಏನು?

Published : Jun 27, 2022, 12:02 PM IST
ಮತ್ತೆ ರಿಲೀಸ್ ಆಗ್ತಿದೆ ಡಾ.ರಾಜ್‌ ನಟನೆಯ 'ಭಾಗ್ಯವಂತರು'; ಯಾವಾಗ, ವಿಶೇಷ ಏನು?

ಸಾರಾಂಶ

ವರನಟ ಡಾ. ರಾಜಕುಮಾರ್ (Dr Rajkumar) ನಟನೆಯ ಕ್ಲಾಸಿಕ್ ಹಿಟ್ ಭಾಗ್ಯವಂತರು (Bhagyavantharu) ಸಿನಿಮಾ ರಿರಿಲೀಸ್ ಆಗುತ್ತಿದೆ. ಡಾ.ರಾಜ್ ಕುಮಾರ್ ನಟನೆಯ ಭಾಗ್ಯವಂತರು ಸಿನಿಮಾವನ್ನು ಇಂದಿನ ಯುವ ಜನತೆ ಚಿತ್ರಮಂದಿರಗಳಲ್ಲಿ ನೋಡಿ ಆನಂದಿಸಬಹುದು.  ಭಾಗ್ಯವಂತರು ಸಿನಿಮಾದಲ್ಲಿ ರಾಜ್ ಕುಮಾರ್ ಜೊತೆ ಬಿ.ಸರೋಜಾದೇವಿ (B Saroja Devi) ನಾಯಕಿಯಾಗಿ ನಟಿಸಿದ್ದರು. 

ವರನಟ ಡಾ. ರಾಜಕುಮಾರ್ (Dr Rajkumar) ನಟನೆಯ ಕ್ಲಾಸಿಕ್ ಹಿಟ್ ಭಾಗ್ಯವಂತರು (Bhagyavantharu) ಸಿನಿಮಾ ರಿರಿಲೀಸ್ ಆಗುತ್ತಿದೆ. ಡಾ.ರಾಜ್ ಕುಮಾರ್ ನಟನೆಯ ಭಾಗ್ಯವಂತರು ಸಿನಿಮಾವನ್ನು ಇಂದಿನ ಯುವ ಜನತೆ ಚಿತ್ರಮಂದಿರಗಳಲ್ಲಿ ನೋಡಿ ಆನಂದಿಸಬಹುದು.  ಭಾಗ್ಯವಂತರು ಸಿನಿಮಾದಲ್ಲಿ ರಾಜ್ ಕುಮಾರ್ ಜೊತೆ ಬಿ.ಸರೋಜಾದೇವಿ (B Saroja Devi) ನಾಯಕಿಯಾಗಿ ನಟಿಸಿದ್ದರು. ಕನ್ನಡ ಚಿತ್ರರಸಿಕರ ಹೃದಯ ಗೆದ್ದಿದ್ದ ಭಾಗ್ಯನಂತರು ಸಿನಿಮಾಗೆ ಖ್ಯಾತ ನಿರ್ದೇಶಕ ಭಾರ್ಗವ (Director Bhargava) ಆಕ್ಷನ್ ಕಟ್ ಹೇಳಿದ್ದರು. ಖ್ಯಾತ ನಿರ್ಮಾಪಕ ದ್ವಾರಕೀಶ್ (Dwarakish) ನಿರ್ಮಾಣದಲ್ಲಿ ಸಿನಿಮಾ ಮೂಡಿಬಂದಿತ್ತು. ರಾಜನ್ ನಾಂಗೇಂದ್ರ ಅವರ ಸಂಗೀತ ಸಿನಿಮಾಗಿದೆ. 
 
1977ರಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಅಂದಹಾಗೆ ಇದೀಗ ಬರೋಬ್ಬರಿ 45 ವರ್ಷಗಳ ಬಳಿಕ ಮತ್ತೆ ಚಿತ್ರಮಂದಿರಗಳಲ್ಲಿ ರಾರಾಜಿಸುತ್ತಿದೆ. ಹೊಸ ತಂತ್ರಕ್ಷಾಮದೊಂದಿಗೆ ಈ ಸಿನಿಮಾವನ್ನು ಮತ್ತೆ ರಿಲೀಸ್ ಮಾಡುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ ಮುನಿರಾಜು.ಎಂ.ಕೆ
 
7.1 ಡಿಜಿಟಲ್ ಸೌಂಡ್, ಕಲರಿಂಗ್, ಡಿಟಿಎಸ್ ಮುಂತಾದ ಆಧುನಿಕ ಸೌಲಭ್ಯಗಳೊಂದಿಗೆ ಈ ಚಿತ್ರ ಮತ್ತೆ ತೆರೆಗೆ ಬರಲು ಸಿದ್ಧವಾಗಿದೆ. ಅಂದಹಾಗೆ ವೀಕರಣಗೊಂಡಿರುವ ಭಾಗ್ಯವಂತರು ಸಿನಿಮಾ ಜುಲೈ 8ರಂದು ರಾಜ್ಯಾದ್ಯಂತ 50ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. ಅಧುನಿಕ ತಂತ್ರಜ್ಞಾನದ ಮೂಲಕ ಬರ್ತಿರುವ ಭಾಗ್ಯವಂತರು ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡಬಹುದು ಎಂದು ಮುನಿರಾಜು ತಿಳಿಸಿದ್ದಾರೆ. 

ಅಂದಹಾಗೆ ಭಾಗ್ಯವಂತರು ಸಿನಿಮಾ ತಮಿಳಿನ ದೀರ್ಘ ಸುಮಂಗಲಿ ಸಿನಿಮಾದ ರಿಮೇಕ್ ಆಗಿದೆ. 1974ರಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾದಲ್ಲಿ ಕೆ.ಆರ್ ವಿಜಯ್ ಮತ್ತು ಮುತ್ತುರಾಮನ್ ನಟಿಸಿದ್ದರು. ತಮಿಳಿನಲ್ಲಿ ಈ ಸಿನಿಮಾ ರಿಲೀಸ್ ಆಗಿ ಎರಡು ವರ್ಷಗಳ ಬಳಿಕ ಕನ್ನಡದಲ್ಲಿ ಭಾಗ್ಯವಂತರು ಹೆಸರಿನಲ್ಲಿ ಬಿಡುಗಡೆಯಾಯಿತು. ಡಾ.ರಾಜ್ ಕುಮಾರ್ ಕುಮಾರ್ ನಾಯಕನಾಗಿ ಮಿಂಚಿದರು. ಕುಮಾರ್ ಪಾತ್ರದಲ್ಲಿ ಡಾ.ರಾಜ್ ನಟಿಸಿದ್ದರು. ನಾಯಕಿ ಸರೋಜದೇವಿ ಪಾರ್ವತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಂದು ಸಿನಿ ಪ್ರಿಯರನ್ನು ರಂಜಿಸಿದ್ದ ಈ ಸಿನಿಮಾ ಇದೀಗ ಮತ್ತೆ 45 ವರ್ಷಗಳ ಬಳಿಕ ಚಿತ್ರಮಂದಿಕ್ಕೆ ಬರ್ತಿರುವುದು ರಾಜ್ ಅಭಿಮಾನಿಗಳಿಗೆ ಖುಷಿಯ ವಿಚಾರವಾಗಿದೆ.

ಅಣ್ಣಾವ್ರಿಗೆ ಕ್ರಿಕೆಟ್‌ ಇಷ್ಟ, ಅವರನ್ನು ನೋಡಬೇಕು ಅಂತ ದೊಡ್ಡ ಆಸೆ ಇತ್ತು: ಅನಿಲ್ ಕುಂಬ್ಳೆ

 
ಅಂದಹಾಗೆ ಮುನಿರಾಜು ರಾಜ್ ಕುಮಾರ್ ಅವರ ಸಿನಿಮಾಗಳನ್ನು ನೀವುಕರಣ ಮಾಡಿ ರಿರಿಲೀಸ್ ಮಾಡುತ್ತಿರುವುದು ಇದೇ ಮೊದಲಲ್ಲ. ಡಾ. ರಾಜಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ಮುನಿರಾಜು, ಈ  ಮೊದಲು ಆಪರೇಷನ್ ಡೈಮೆಂಡ್ ರಾಕೇಟ್, ನಾನೊಬ್ಬ ಕಳ್ಳ, ದಾರಿ ತಪ್ಪಿದ ಮಗ ಸೇರಿದಂತೆ ಕೆಲವು ಚಿತ್ರಗಳನ್ನು ಹೊಸ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಿದ್ದಾರೆ. ಈಗ ಭಾಗ್ಯವಂತರು ಚಿತ್ರವನ್ನು ತೆರೆಗೆ ತರುತ್ತಿದ್ದಾರೆ.

ಅಣ್ಣಾವರನ್ನು ನೋಡಿದ ತಕ್ಷಣ Amitabh Bachchan ಮಾಡಿದ್ದೇನು ಗೊತ್ತಾ?

 ಇಲ್ಲಿಗೆ ನಿಲ್ಲಿಸದೆ ಇನ್ಮುಂದೆ ರಾಜ್ ಕುಮಾರ್ ಅವರ ಹುಲಿ ಹಾಲಿನ ಮೇವು ಸೇರಿದಂತೆ  ಇನ್ನಷ್ಟು ಚಿತ್ರಗಳನ್ನು ಹೊಸ ತಂತ್ರಜ್ಞಾನದೊಂದಿಗ ಬಿಡುಗಡೆ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಸದ್ಯ ಚಿತ್ರಮಂದಿರಕ್ಕೆ ಮತ್ತೆ ಬರ್ತಿರುವ ಅಣ್ಣಾವ್ರ ಭಾಗ್ಯವಂತರು ಸಿನಿಮಾವನ್ನು ಮತ್ತೆ ನೋಡಿ ಆನಂದಿಸಬಹುದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?