
ಸ್ಯಾಂಡಲ್‌ವುಡ್ ಖ್ಯಾತ ನಿರ್ಮಾಪಕ ಸೂರಪ್ಪ ಬಾಬು (Producer Soorappa Babu) ಚಲಾಯಿಸುತ್ತಿದ್ದ ಕಾರು ಅಘಾತಕ್ಕೀಡಾಗಿದೆ (car met with accident). ಕುಟುಂಬದ (Family) ಜೊತೆ ತಮಿಳುನಾಡಿಗೆ ಚಲಾಯಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು ಯಾರಿಗೂ ಏನು ಆಗಿಲ್ಲ ಎಂದು ನಿರ್ಮಾಪಕ ಸೂರಪ್ಪ ಬಾಬು ತಿಳಿಸಿದ್ದಾರೆ.
ಭಾನುವಾರ ಬೆಳಗ್ಗೆ (ಜೂನ್ 27) ಸೂರಪ್ಪ ಬಾಬು ಕುಟುಂಬದವರ ಜೊತೆ ತಮಿಳುನಾಡಿನ (Tamil Nadu) ದೇವಸ್ಥಾನಕ್ಕೆ ಹೋಗುತ್ತಿದ್ದರು. ಆ ವೇಳೆ ತಮಿಳುನಾಡಿನ ಹೊಸೂರಿನ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಒಟ್ಟು 7 ಜನ ಪ್ರಯಾಣಿಸುತ್ತಿದ್ದು ಯಾರಿಗೂ ಏನು ಆಗಿಲ್ಲ ಎಂದಿದ್ದಾರೆ. ಸೂರಪ್ಪ ಬಾಬು ಕಾರಿನ ಮುಂಭಾಗದಲ್ಲಿ ಕುಳಿತಿದ್ದರಿಂದ ಕಾಲಿಗೆ ಸ್ವಲ್ಪ ಏಟಾಗಿದ್ದು ಅಲ್ಲೇ ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬೆಂಗಲೂರಿಗೆ ವಾಪಾಸ್ ಆಗಿದ್ದಾರೆ.
ಬೆಳಗಾವಿ ಅಪಘಾತ: ಮಗನನ್ನು ಕಳೆದುಕೊಂಡಿದ್ದೀನ್ರಿ, ಅಣ್ಣನ ಮಕ್ಕಳು ಅನಾಥರಾದ್ರು, ಕುಟುಂಬಸ್ಥರ ಆಕ್ರಂದನ
ಈ ಬಗ್ಗೆ ಮಾತನಾಡಿರುವ ಸೂರಪ್ಪ ಬಾಬು ಈ ರೀತಿಯ ಅವಘಡ ಸಂಭವಿಸಿದ್ದು ಇದೇ ಮೊದಲು ಎಂದು ಹೇಳಿದ್ದಾರೆ. ಅಪಘಾತವಾದಾಗ ಅನೇಕರು ಬಂದು ಸಹಾಯ ಮಾಡಿದರು. ತಮಿಳುನಾಡಿನಿಂದ ಬೆಂಗಳೂರಿಗೆ ಪಾವಾಸ್ ಆಗಲು ಸಹಾಯ ಮಾಡಿದರು. ಕಾಲಿಗೆ ಸ್ವಲ್ಪ ಏಟಾಗಿದೆ. ವೈದ್ಯರನ್ನು ಸಂಪರ್ಕಮಾಡಿ ಚಿಕಿತ್ಸೆ ಪಡೆದಿದ್ದೀನಿ. ಸದ್ಯ ಬ್ಯಾಂಡೇಜ್ ಹಾಕಿದ್ದಾರೆ. ಈಗ ಆರಾಮಾಗಿ ಇದ್ದೀನಿ. ಇನ್ನು ಸ್ವಲ್ಪ ದಿನಗಳು ವಿಶ್ರಾಂತಿ ಪಡೆಯಲು ವೈದ್ಯರ ಹೇಳಿದ್ದಾರೆ ಎಂದು ಸೂರಪ್ಪ ಬಾಬು ಹೇಳಿದ್ದಾರೆ.
ಬೆಳಗಾವಿ ಬಳಿ ಭೀಕರ ಅಪಘಾತ: ಕೂಲಿ ಕೆಲಸಕ್ಕೆ ತೆರಳುತ್ತಿದ್ದ 7 ಕಾರ್ಮಿಕರ ದುರ್ಮರಣ
ಸ್ಯಾಂಡಲ್‌ವುಡ್‌ನಲ್ಲಿ ಅನೇಕ ಹಿಟ್ ಸಿನಿಮಾಗಳನ್ನು ನೀಡಿರುವ ಸೂರಪ್ಪ ಬಾಬು ಪವರ್ ಸ್ಟಾರ್ ಪುನೀತ್ ರಾಜು ಕುಮಾರ್ ನಟನೆಯ ಪೃಥ್ವಿ, ಸುದೀಪ್ ನಟನೆಯ ಕೋಟಿಗೊಬ್ಬ-2 ಮತ್ತು ಕೋಟಿಗೊಬ್ಬ-3 ಹಾಗು ರವಿಚಂದ್ರನ್ ನಟನೆಯ ದಶಮುಖ ಸಿನಿಮಾಗಳು ಸೇರಿದಂತೆ ಅನೇಕ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.