ಡಾ ರಾಜ್‌ಕುಮಾರ್ ಜಗತ್ತಿನಲ್ಲೇ ಶ್ರೇಷ್ಠ ನಟ ಯಾಕೆ, ಅಂಥದ್ದೇನಿದೆ 'ಅಣ್ಣಾವ್ರ' ಸಾಧನೆ?

By Shriram BhatFirst Published Oct 21, 2024, 5:05 PM IST
Highlights

1992ರಲ್ಲಿ ಡಾ ರಾಜ್‌ ಅವರಿಗೆ 'ಕರ್ನಾಟಕ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಭಾರತೀಯ ಚಲನಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಪೌರಾಣಿಕ ಹಾಗು ಐತಿಹಾಸಿಕ ಪ್ರಶಸ್ತಿ ಪಡೆದ ನಟ ಎಂಬ ಹೆಗ್ಗಳಿಕೆ ಡಾ ರಾಜ್‌ಕುಮಾರ್ ಹೆಸರಲ್ಲಿದೆ. ಅಷ್ಟೇ ಅಲ್ಲ, ಒಂದೇ ವರ್ಷದಲ್ಲಿ..

ಕನ್ನಡಿಗರಿಂದ 'ಅಣ್ಣಾವ್ರು' ಎಂದೇ ಕರೆಸಿಕೊಳ್ಳುತ್ತಿದ್ದ ಡಾ ರಾಜ್‌ಕುಮಾರ್ (Dr Rajkumar) ಅವರು, ಕನ್ನಡದ ಮೇರು ನಟ. ಅವರ ಜನಪ್ರಿಯತೆ ಕರ್ನಾಟಕವನ್ನೂ ಮೀರಿ ದೇಶಾದ್ಯಂತ ಹಾಗು ಪ್ರಪಂಚದಾದ್ಯಂತ ಹಬ್ಬಿತ್ತು. ಪದ್ಮಭೂಷಣ ಪ್ರಶಸ್ತಿಯನ್ನು ಪಡೆದಿದ್ದ ಡಾ ರಾಜ್‌ಕುಮಾರ್ ಅವರು ಗಾನ ಗಂಧರ್ವ ಎಂಬ ಬಿರುದನ್ನು ಸಹ ಪಡೆದಿದ್ದರು. ಕನ್ನಡದ ಕಣ್ಮಣಿ ಡಾ ರಾಜ್‌ಕುಮಾರ್ ಅವರು ತಮ್ಮ ಸರಳ ಜೀವನ ಹಾಗೂ ಆದರ್ಶಮಯ ವ್ಯಕ್ತಿತ್ವದಿಂದ ಬಹಳಷ್ಟು ಖ್ಯಾತಿ ಪಡೆದವರು. ಇಂಥ ನಟ ಡಾ ರಾಜ್‌ಕುಮಾರ್ ಹೆಸರಲ್ಲಿ ಹಲವಾರು ಸಾಧನೆಗಳ ಪಟ್ಟಿ ಇದೆ. 

ಡಾ ರಾಜ್‌ಕುಮಾರ್ ಅವರ ಹೆಸರಲ್ಲಿ ಜಗತ್ತಿನಾದ್ಯಂತ ಸುಮಾರು 5000 ಕ್ಕೂ ಹೆಚ್ಚು ಅಭಿಮಾನಿ ಸಂಘಗಳು ಹಾಗೂ 2000 ಕ್ಕೂ ಹೆಚ್ಚು ಪ್ರತಿಮೆಗಳಿವೆ. ಸಮಾಜ ಸೇವೆ ಮತ್ತು ಚಲನಚಿತ್ರ ಸೇವೆಗೆ ನೀಡುವ ಅತ್ಯುತ್ತಮ ಪ್ರಶಸ್ತಿಯಾದ ಕೆಂಟುಕಿ ಕೊಲೊನೆಲ್ (Kentucky Colonel award) ಪ್ರಶಸ್ತಿಯನ್ನು 1985 ರಲ್ಲಿ ಗಳಿಸಿದ್ದಾರೆ. ಈ ಪ್ರಶಸ್ತಿಯನ್ನು ಪಡೆದ ಭಾರತದ ಏಕೈಕ ನಟ ಕನ್ನಡದ ಕಣ್ಮಣಿ ಡಾ ರಾಜ್‌ಕುಮಾರ್. ಚಲನಚಿತ್ರದ ಹಾಡಿಗೆ ಅತ್ಯುತ್ತಮ ಹಿನ್ನೆಲೆ ಗಾಯಕ 'ರಾಷ್ಟ್ರೀಯ' ಪ್ರಶಸ್ತಿ ಪಡೆದ ನಟ ಕೂಡ ಡಾ ರಾಜ್‌ಕುಮಾರ್ ಅವರೊಬ್ಬರೇ ಎಂಬುದು ವಿಶೇಷ. ಜೀವನ ಚೈತ್ರ ಚಿತ್ರದ 'ನಾದಮಯ ಈ ಲೋಕವೆಲ್ಲಾ..' ಹಾಡಿಗೆ ಅವರಿಗೆ 1992ರಲ್ಲಿ 'ರಾಷ್ಟ್ರೀಯ' ಪ್ರಶಸ್ತಿ ಲಭಿಸಿದೆ. 

Latest Videos

ಸುದೀಪ್‌ಗೆ ಕನ್ನಡದಲ್ಲೇ ಪತ್ರ ಬರೆದು ಸಾಂತ್ವನ ಹೇಳಿದ ಆಂಧ್ರ ಡಿಸಿಎಂ ಪವನ್ ಕಲ್ಯಾಣ್!

ಅದೇ ವರ್ಷ, ಅಂದರೆ 1992ರಲ್ಲಿ ಡಾ ರಾಜ್‌ ಅವರಿಗೆ 'ಕರ್ನಾಟಕ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಭಾರತೀಯ ಚಲನಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಪೌರಾಣಿಕ ಹಾಗು ಐತಿಹಾಸಿಕ ಪ್ರಶಸ್ತಿ ಪಡೆದ ನಟ ಎಂಬ ಹೆಗ್ಗಳಿಕೆ ಕೂಡ ಡಾ ರಾಜ್‌ಕುಮಾರ್ ಅವರ ಹೆಸರಲ್ಲಿದೆ. ಅಷ್ಟೇ ಅಲ್ಲ, ಒಂದೇ ವರ್ಷದಲ್ಲಿ ಹದಿನಾಲ್ಕು ಚಿತ್ರಗಳಲ್ಲಿ ನಟಿಸಿದ ಅಪರೂಪದ ಸಾಧನೆ ಕೂಡ ಮೇರು ನಟ ಡಾ ರಾಜ್‌ಕುಮಾರ್ ಅವರದ್ದಾಗಿದೆ. 1964 ರಲ್ಲಿ ಒಮ್ಮೆ ಹಾಗೂ 1968ರಲ್ಲಿ ಮತ್ತೊಮ್ಮೆ ಒಂದೇ ವರ್ಷದಲ್ಲಿ ಬರೋಬ್ಬರಿ 14 ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲಿಗೇ ಡಾ ರಾಜ್‌ಕುಮಾರು ಎರಡೇ ವರ್ಷಗಳಲ್ಲಿ 28 ಚಿತ್ರಗಳಲ್ಲಿ ನಟಿಸಿದ್ದಾರೆ ಎಂದಹಾಗಾಯ್ತು!

ಡಾ ರಾಜ್‌ಕುಮಾರ್ ಅವರು ಚಲನಚಿತ್ರದ ನಟನೆಗಾಗಿ ಡಾಕ್ಟರೇಟ್ ಪಡೆದ ಮೊದಲ ನಟ. 1976ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಅವರು ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಡಾ ರಾಜ್ ಶಾಲೆಯಲ್ಲಿ ಓದಿದ್ದು ಕೇವಲ 3ನೇ ಕ್ಲಾಸ್ ಎಂಬುದನ್ನು ಮರೆಯುವ ಹಾಗಿಲ್ಲ! 

ವೀರಪ್ಪನ್‌ನಿಂದ ಡಾ ರಾಜ್‌ಕುಮಾರ್ ಬಿಡಿಸಿಕೊಳ್ಳಲು 'ಸಂಗ್ರಾಮ್' ಸಂಗ್ರಹಿಸಿದ್ದ ಹಣವೆಷ್ಟು?

ಇನ್ನು ಡಾ ರಾಜ್‌ಕುಮಾರ್ ಅವರು ತಮ್ಮ ಎಲ್ಲ ಸಿನಿಮಾಗಳಿಗೆ ಯು () ಸರ್ಟಿಫಿಕೇಟ್ ಪಡೆದಿದ್ದಾರೆ. ಹೀಗೆ ನಟಿಸಿದ ಎಲ್ಲಾ ಚಿತ್ರಗಳಿಗೆ ಯು ಸೆನ್ಸಾರ್ ಪತ್ರ ಪಡೆದ ಏಕೈಕ ನಟ ಡಾ ರಾಜ್‌ಕುಮಾರ್ ಎಂಬುದು ವಿಶೇಷ! ಡಾ ರಾಜ್‌ಕುಮಾರ್ ಅವರ ಬಗ್ಗೆ ಪ್ರಕಟಗೊಂಡ ಪುಸ್ತಕ ಬ್ರಿಟಿಷ್ ಲೈಬ್ರರಿಯಲ್ಲಿ ಇದೆ. 'ಡಾ ರಾಜ್‌ಕುಮಾರ್, ದಿ ಪರ್ಸನ್ ಬಿಹಂಡ್ ಪರ್ಸನಾಲಿಟಿ' () ಎಂಬ ಹೆಸರಿನ ಈ ಪುಸ್ತಕ ಬ್ರಿಟನ್ನಿನ ಲಂಡನ್‌ ಲೈಬ್ರರಿಯಲ್ಲಿ ಅಧಿಕೃತವಾಗಿ ಸೇರ್ಪಡೆಯಾಗಿದೆ ಎಂಬುದು ಕನ್ನಡಿಗರ ಹೆಮ್ಮೆ. 

ಇನ್ನು ಡಾ ರಾಜ್‌ಕುಮಾರ್ ಅವರ 39 ಸಿನಿಮಾಗಳನ್ನು 34 ನಟರು 9 ಭಾಷೆಗಳಲ್ಲಿ 63 ಸಿನಿಮಾಗಳನ್ನು ಮಾಡಿದ್ದಾರೆ. ಡಾ ರಾಜ್ ಚಿತ್ರಗಳನ್ನು 5ಕ್ಕೂ ಹೆಚ್ಚು ಬಾರಿ ರೀಮೇಕ್ ಮಾಡಲಾಗಿದೆ, ಹಾಗೂ, 9 ಭಾಷೆಗಳಲ್ಲಿ ರೀಮೇಕ್ ಮಾಡಿರುವುದು ಕೂಡ ದಾಖಲೆಯಾಗಿದೆ. 200ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿರುವ ಡಾ ರಾಜ್‌ ಚಿತ್ರಗಳಲ್ಲಿ ಬಹಳಷ್ಟು ಚಿತ್ರಗಳು ಸೂಪರ್ ಹಿಟ್ ಹಾಗೂ ಆ ವರ್ಷದ ಸೂಪರ್ ಹಿಟ್ ಚಿತ್ರಗಳಾಗಿ ಹೊರಹೊಮ್ಮಿವೆ. 

ಬೀಳುವ ಹಂತಕ್ಕೆ ತಲುಪಿದ ದರ್ಶನ್; ನರಕ 'ದರ್ಶನ' ಮಾಡಿಸುತ್ತಿರುವ ಬೆನ್ನುನೋವು!

ಒಂದೇ ಒಂದು ತೆಲುಗು ಚಿತ್ರವನ್ನು ಬಿಟ್ಟರೆ ಮಿಕ್ಕೆಲ್ಲವನ್ನೂ ಕನ್ನಡದಲ್ಲಿಯೇ ಮಾಡಿದ್ದಾರೆ ಡಾ ರಾಜ್‌ಕುಮಾರ್. ನಾಯಕ-ಗಾಯಕರಾಗಿ ಕನ್ನಡದ ನಟ ಡಾ ರಾಜ್‌ಕುಮಾರ್ ಅವರು ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದರು. ಡಾ ರಾಜ್‌ಕುಮಾರ್ ಅವರು 24 ಏಪ್ರಿಲ್ 1929ರಲ್ಲಿ ಗಾಜನೂರಿನಲ್ಲಿ ಜನಿಸಿ (24 April 1929- Gajanur), 12 ಏಪ್ರಿಲ್ 2006ರಲ್ಲಿ ಬೆಂಗಳೂರಿನಲ್ಲಿ (12 April 2006) ನಿಧನರಾದರು. ಅವರು 76 ವರ್ಷ ಬದುಕಿದ್ದರು. 

click me!