ಕನ್ನಡ ಚಿತ್ರರಂಗದ ತಾರೆಯರು, ರಾಜಕೀಯ ಲೋಕದ ಗಣ್ಯರು ಅಂತಿಮ ದರ್ಶನ ಪಡೆದು, ಅಮ್ಮನನ್ನ ಕಳೆದುಕೊಂಡ ಕಿಚ್ಚನಿಗೆ ಸಾಂತ್ವನ ಹೇಳಿದ್ದಾರೆ. ಸದಾ ಎಲ್ಲರನ್ನೂ ನಗಿಸೋ ಸುದೀಪ್ ಇವತ್ತು ಚಿಕ್ಕ ಮಗುವಿನಂತೆ ಅತ್ತು ಅಮ್ಮನನ್ನ ಬೀಳ್ಕೊಟ್ಟಿದ್ದಾರೆ..
ಕಿಚ್ಚ ಸುದೀಪ್ (Kichcha Sudeep) ಇಂದು ಪ್ಯಾನ್ ಇಂಡಿಯಾ ಹೀರೀ. ಆದರೆ ಶುರುವಿನ್ನಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಾ ಚಿತ್ರರಂಗಕ್ಕೆ ಬಂದವರು ಇವತ್ತು ಕನ್ನಡ ಸಿನಿರಂಗದಲ್ಲಿ ಅಭಿನಯ ಚಕ್ರವರ್ತಿ ಅಂತ ಕರೆಸಿಕೊಂಡಿದ್ದಾರೆ. ಕಿಚ್ಚನ ಪ್ರತಿಭೆಗೆ ಸ್ಯಾಂಡಲ್ವುಡ್ ಮಾತ್ರ ಅಲ್ಲ ಪ್ಯಾನ್ ಇಂಡಿಯಾ ಫ್ಯಾನ್ಸ್ ಇದ್ದಾರೆ. ಸುದೀಪ್ ಇಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದರ ಹಿಂದಿನ ಶಕ್ತಿಯೇ ಅವರ ತಾಯಿ ಸರೋಜಮ್ಮ. ಇವತ್ತು ಸುದೀಪ್ ಆ ಶಕ್ತಿಯನ್ನ ಕಳೆದುಕೊಂಡಿದ್ದಾರೆ.
ಕಿಚ್ಚ ಸುದೀಪ್ ಸಕ್ಸಸ್ ಹಿಂದಿನ 'ಸ್ತ್ರೀ' ಶಕ್ತಿ ಕಣ್ಮರೆ..; ಅಭಿನಯ ಚಕ್ರವರ್ತಿಗೆ ಮಾತೃವಿಯೋಗದ ನೋವು..!
ಹೌದು ಕಿಚ್ಚ ಸುದೀಪ್ ಪಾಲಿನ ಅಸಲಿ ಶಕ್ತಿಯಾಗಿದ್ದ ಸರೋಜಮ್ಮ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದ ಹಿನ್ನೆಲೆ ಸುದೀಪ್ ತಾಯಿ ಸರೋಜಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಾ ಇದ್ರು. ಇಂದು ಬೆಳಗಿನ ಜಾವ ಸರೋಜಾ ಸಂಜೀವ ಇಹಲೋಕದ ಯಾತ್ರೆಯನ್ನ ಮುಗಿಸಿದ್ದಾರೆ.
ಸುದೀಪ್ ಹಳೆಯ ಪೋಸ್ಟ್ ಈಗ ಭಾರೀ ವೈರಲ್, ಅಮ್ಮನ ಬಗ್ಗೆ ಏನ್ ಹೇಳಿದ್ರು ಕಿಚ್ಚ?!
ಕನ್ನಡ ಚಿತ್ರರಂಗದ ತಾರೆಯರು, ರಾಜಕೀಯ ಲೋಕದ ಗಣ್ಯರು ಅಂತಿಮ ದರ್ಶನ ಪಡೆದು, ಅಮ್ಮನನ್ನ ಕಳೆದುಕೊಂಡ ಕಿಚ್ಚನಿಗೆ ಸಾಂತ್ವನ ಹೇಳಿದ್ದಾರೆ. ಸದಾ ಎಲ್ಲರನ್ನೂ ನಗಿಸೋ ಸುದೀಪ್ ಇವತ್ತು ಚಿಕ್ಕ ಮಗುವಿನಂತೆ ಅತ್ತು ಅಮ್ಮನನ್ನ ಬೀಳ್ಕೊಟ್ಟಿದ್ದಾರೆ.
ಸುದೀಪ್ ನಟನಾಗಲು ಕಾರಣವೇ ಸರೋಜಮ್ಮನ ಬೆಂಬಲ, ಏಳು ಬೀಳಿನ ನಡುವೆಯೂ ಗೆದ್ದ ಕಿಚ್ಚನಿಗೆ ಅಮ್ಮನೇ ಶಕ್ತಿ!
ಹೌದು ಸುದೀಪ್ ಇವತ್ತು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ ಅಂದ್ರೆ ಅದರ ಹಿಂದಿನ ಶಕ್ತಿಯೇ ಅವರ ತಾಯಿ ಸರೋಜಮ್ಮ. ಸುದೀಪ್ ಚಿಕ್ಕವಯಸ್ಸಿನಿಂದಲೂ ಸಿನಿಮಾ ನಟರುಗಳನ್ನ ನೋಡ್ತಾ ಬೆಳೆದವರು. ಸುದೀಪ್ ತಂದೆ ಉದ್ಯಮಿಯಾಗಿದ್ದು ಅವರಿಗೆ ಚಿತ್ರರಂಗದ ಒಡನಾಟ ಇತ್ತು. ಅವರ ಸರೋವರ ಹೊಟೆಲ್ನಲ್ಲಿ ಅನೇಕ ಚಿತ್ರೀಕರಣ ನಡೀತಾ ಇದ್ವು. ಮನೆಗೆ ಅನೇಕ ನಟರುಗಳು ಬರ್ತಾ ಇದ್ರು.
ಏಷ್ಯಾನೆಟ್ ಸುವರ್ಣಗೆ ರಂಜಿತ್ ಎಕ್ಸ್‌ಕ್ಲೂಸಿವ್ ಪ್ರಶ್ನೆ: ನನಗಾದ ನಷ್ಟ ಯಾರು ಕೊಡ್ತಾರೆ?
ಇದೆಲ್ಲವನ್ನ ನೋಡಿ ಸುದೀಪ್ ತಾವು ನಟನಾಗ್ತೀನಿ ಅಂತ ಆಸೆ ಪಟ್ರು. ಆ ಆಸೆಗೆ ನೀರೆರೆದು ಪ್ರೋತ್ಸಾಹ ಕೊಟ್ಟಿದ್ದು ತಾಯಿ ಸರೋಜಾ.
ಸುದೀಪ್ ಆರಂಭದಲ್ಲಿ ನಟಿಸಿದ ಮೂರು ಸಿನಿಮಾಗಳ ಪೈಕಿ ಎರಡು ನಿಂತುಹೋದ್ವು. ಮತ್ತೊಂದು ಥಿಯೇಟರ್ನಲ್ಲಿ ನಿಲ್ಲಲಿಲ್ಲ. ಆಗ ಸಿನಿಮಾ ತನ್ನ ಕೈ ಹಿಡಿಯೋದಿಲ್ಲ ಅಂತ ನಿರಾಶನಾಗಿದ್ದ ಸುದೀಪ್ಗೆ ಭರವಸೆ ತುಂಬಿ ಹೋಮ್ ಪ್ರೊಡಕ್ಷನ್ನಿಂದ ಸ್ಪರ್ಶ ಸಿನಿಮಾ ನಿರ್ಮಿಸಿದ್ದು ಸರೋಜಮ್ಮನವರೇ.
ಸ್ಪರ್ಶ, ಹುಚ್ಚ ಸಿನಿಮಾಗಳ ಬಳಿಕ ಸುದೀಪ್ ಕನ್ನಡದಲ್ಲಿ ನಟನಾಗಿ ನೆಲೆನಿಂತ್ರು.. ಸ್ಟಾರ್ ಆದ್ರು. ಆದರೆ ಒಂದು ಹಂತದಲ್ಲಿ ಕರೀಯರ್ ಗ್ರಾಫ್ ಇಳಿಯತೊಡಗಿದಾಗ, ತಾವೇ ನಿರ್ದೇಶನ ಮಾಡೋದಕ್ಕೆ ಮುಂದಾದ್ರು. ಮೈ ಆಟೋಗ್ರಾಫ್ ಸಿನಿಮಾವನ್ನ ನಿರ್ಮಿಸಿ, ನಿರ್ದೇಶಿಸಿ ಸುದೀಪ್ ಮತ್ತೊಂದು ಹೆಜ್ಜೆ ಇಟ್ರು. ಆಗ ಮನೆಪತ್ರವನ್ನ ಅಡವಿಟ್ಟು ಹಣಹೂಡಿ ಸುದೀಪ್ ಬೆನ್ನು ತಟ್ಟಿದ್ದು ಇದೇ ಸರೋಜಮ್ಮ.
ಒಟ್ಟಾರೆ ಸುದೀಪ್ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯೋದಕ್ಕೆ ಅಮ್ಮನ ಕೊಡುಗೆ ತುಂಬಾನೇ ಇದೆ. ಸುದೀಪ್ ಕೂಡ ಅಮ್ಮನಿಗೆ ತಕ್ಕ ಮಗ. ಯಾವುದೇ ದೊಡ್ಡ ಕೆಲಸ ಮಾಡುವ ಮುನ್ನವೂ ಸುದೀಪ್ ಅಮ್ಮನ ಆಶಿರ್ವಾದ ಪಡೆಯದೇ ಹೆಜ್ಜೆ ಇಡ್ತಾ ಇರಲಿಲ್ಲ.
ಮಹಾನ್ ಶಿವಭಕ್ತ ಲಾಯರ್ ಜಗದೀಶ್‌ಗೆ ಭರತ್ ಬೊಮ್ಮಾಯಿ ವಿರುದ್ಧ ಟಿಕೆಟ್ ಸಿಗುತ್ತಾ?
ಈ ಸಾರಿ ಬರ್ತ್ಡೇ ದಿನ ಅನಾರೋಗ್ಯದಲ್ಲಿರೋ ಅಮ್ಮನಿಗೆ ತೊಂದರೆ ಆಗೋದು ಬೇಡ ಅಂತ ಮನೆಯಿಂದ ದೂರ ಬರ್ತ್ಡೇ ಸೆಲೆಬ್ರೇಟ್ ಮಾಡಿಕೊಂಡಿದ್ರು ಸುದೀಪ್. ಅಮ್ಮನ ಆರೋಗ್ಯಕ್ಕಾಗಿ ಹರಕೆ ಕಟ್ಟಿದ್ದ ಸುದೀಪ್ ಇತ್ತೀಚಿಗೆ ಬಿಗ್ ಬಾಸ್ ಶೋಗೂ ಚಪ್ಪಲಿ ಧರಿಸದೇ ಬಂದಿದ್ರು. ಆದ್ರೆ ಕಿಚ್ಚನ ಈ ಹರಕೆ ಫಲಿಸಲಿಲ್ಲ. ಹೆತ್ತಮ್ಮನನ್ನ ಸುದೀಪ್ ಕಳೆದುಕೊಂಡಿದ್ದಾರೆ. ತನ್ನ ಹಿಂದಿನ ಅಸಲಿ ಶಕ್ತಿಯನ್ನೇ ಕಳೆದುಕೊಂಡವರಂತೆ ಮಂಕಾಗಿದ್ದಾರೆ.