ಬಾಗಿ ಬೀಳುವ ಹಂತಕ್ಕೆ ತಲುಪಿದ ದರ್ಶನ್; ನರಕ 'ದರ್ಶನ' ಮಾಡಿಸುತ್ತಿರುವ ಬೆನ್ನುನೋವು!

By Shriram BhatFirst Published Oct 21, 2024, 12:39 PM IST
Highlights

ದರ್ಶನ್​ಗೆ ಅದ್ಯಾಪರಿ ಬೆನ್ನುನೋವು ಕಾಡ್ತಾ ಇದೆ ಅಂದ್ರೆ ದರ್ಶನ್ ಕೊಂಚ ದೂರ ನಡೆಯೋದಕ್ಕೂ ಪರದಾಡ್ತಾ ಇದ್ದಾರೆ. ತನ್ನ ಸೆಲ್​ನಿಂದ ಸಂದರ್ಶಕರ ಕೋಠಡಿಗೆ ನಡೆದು ಬಂದ ದರ್ಶನ್​ ಸ್ಥಿತಿ ನೋಡಿದರೇ ಅಯ್ಯೋ ಪಾಪ ಅನ್ನಿಸದೇ ಇರಲ್ಲ...

ಬಳ್ಳಾರಿ ಜೈಲಿನಲ್ಲಿರೋ ದರ್ಶನ್ ಬೆನ್ನು ನೋವಿನಿಂದ ಪರದಾಡ್ತಾ ಇರೋ ವಿಷ್ಯ ಗೊತ್ತೇ ಇದೆ. ಇತ್ತೀಚಿಗೆ ಲಾಯರ್ ಭೇಟಿ ಮಾಡೋದಕ್ಕೆ ಬಂದಾಗ ದರ್ಶನ್ ಸಂದರ್ಶಕರ ಕೋಠಡಿಗೆ ಬಂದಿದ್ದು, ದರ್ಶನ್ ಅದೆಷ್ಟು ಚಿತ್ರಹಿಂಸೆ ಪಡ್ತಾ ಇದ್ದಾರೆ ಅನ್ನೋದು ರಿವೀಲ್ ಆಗಿದೆ. ಹಾಗಾದ್ರೆ ದಾಸನ  ಪರದಾಟಕ್ಕೆ ಪರಿಹಾರವೇ ಇಲ್ವಾ..? ಈ ಹಿಂಸೆ ದರ್ಶನ್​ಗೆ ತಪ್ಪಲ್ವಾ..? ಆ ಕುರಿತ ಎಕ್ಸ್​​ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.

ಬೆನ್ನುನೋವಿನಿಂದ ಚಿತ್ರಹಿಂಸೆ.. ದಾಸನ​ ಪರದಾಟಕ್ಕಿಲ್ವಾ ಪರಿಹಾರ..!?
ಯೆಸ್ ಬಳ್ಳಾರಿ ಜೈಲಲ್ಲಿರೋ ದರ್ಶನ್ ಬೆನ್ನು ನೋವಿನಿಂದ ಅನುದಿನವೂ ನರಕದ ದರ್ಶನ ಮಾಡ್ತಾ ಇದ್ದಾರೆ. ಅಸಲಿಗೆ ಬೇಗ ಬೇಲ್ ಸಿಗಲಿ ಅಂತ ದರ್ಶನ್ ಬೆನ್ನು ನೋವಿನ ನಾಟಕ ಮಾಡ್ತಾ ಇದ್ದಾರೆ ಅಂತಾ ಕೆಲವರು ಅನುಮಾನ ವ್ಯಕ್ತಡಿಸಿದ್ರು. ಆದ್ರೆ ದಾಸನಿಗೆ ಬೆನ್ನುನೋವು ಚಿತ್ರಹಿಂಸೆ ಕೊಡ್ತಾ ಇರೋದು ಸುಳ್ಳಲ್ಲ. ಅದಕ್ಕೆ ಸಾಕ್ಷಿ ಇಲ್ಲಿಯೇ ಇದೆ ನೋಡಿ.

Latest Videos

ಸುದೀಪ್ ನಟರಾಗಲು ಸರೋಜಮ್ಮ ಕಾರಣ; ಏಳುತ್ತ ಬೀಳುತ್ತ ಗೆದ್ದ ಕಿಚ್ಚನಿಗೆ ಅಮ್ಮನೇ ಶಕ್ತಿ!

ಬೆಂಬಿಡದ ಬೆನ್ನುನೋವು.. ನಡೆದಾಡಲು ಕಷ್ಟಪಡ್ತಿರೋ ದರ್ಶನ್
ಹೌದು ದರ್ಶನ್​ಗೆ ಅದ್ಯಾಪರಿ ಬೆನ್ನುನೋವು ಕಾಡ್ತಾ ಇದೆ ಅಂದ್ರೆ ದರ್ಶನ್ ಕೊಂಚ ದೂರ ನಡೆಯೋದಕ್ಕೂ ಪರದಾಡ್ತಾ ಇದ್ದಾರೆ. ಶನಿವಾರ ಬೇಲ್ ಬಗ್ಗೆ ಚರ್ಚೆ ಮಾಡೋದಕ್ಕೆ ದರ್ಶನ್ ಪರ ವಕೀಲ ರಾಮ್ ಸಿಂಗ್ ಬಳ್ಳಾರಿ ಜೈಲಿಗೆ ಭೇಟಿ ಕೊಟ್ಟಿದ್ರು. ಆಗ ತನ್ನ ಸೆಲ್​ನಿಂದ ಸಂದರ್ಶಕರ ಕೋಠಡಿಗೆ ನಡೆದು ಬಂದ ದರ್ಶನ್​ ಸ್ಥಿತಿ ನೋಡಿದರೇ ಅಯ್ಯೋ ಪಾಪ ಅನ್ನಿಸದೇ ಇರಲ್ಲ.

ದರ್ಶನ್ ಇರೋ ಸೆಲ್​ನಿಂದ ಸಂದರ್ಶಕರ ಕೋಠಡಿಗೆ ಜಸ್ಟ್ 80 ಮೀಟರ್ ಅಂತರ ಇದೆ. ಇಷ್ಟು ಹತ್ತಿರ ನಡೆದುಬರೋದಕ್ಕೂ ದರ್ಶನ್ ಪರದಾಡಿದ್ದಾರೆ. ಪದೇ ಪದೇ ಬೆನ್ನು ಮುಟ್ಟಿಕೊಂಡು ಸಾವರಿಸಿಕೊಂಡಿದ್ದಾರೆ. ಒಂದು ಹಂತದಲ್ಲಿ ಬಾಗಿ ಬೀಳುವ ಹಂತಕ್ಕೆ ತಲುಪಿದ್ದಾರೆ.

ಏಷ್ಯಾನೆಟ್‌ ಸುವರ್ಣಗೆ ರಂಜಿತ್ ಎಕ್ಸ್‌ಕ್ಲೂಸಿವ್ ಪ್ರಶ್ನೆ: ನನಗಾದ ನಷ್ಟ ಯಾರು ಕೊಡ್ತಾರೆ?

ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್, ಸರ್ಜರಿಗೆ ಒಪ್ಪದ ದರ್ಶನ್..!
ಇದನ್ನ ನೋಡ್ತಾ ಇದ್ರೆ ದರ್ಶನ್ ಸ್ಥಿತಿ ಹೇಗಿದೆ ಅನ್ನೋದು ಗೊತ್ತಾಗುತ್ತೆ. ಅಸಲಿಗೆ ದರ್ಶನ್​ಗೆ ಬೆನ್ನು ನೋವು ಶುರುವಾದ ಮೇಲೆ ಜೈಲಿನ ವೈದ್ಯರು ತಪಾಸಣೆ ಮಾಡಿ, ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸಿಕೊಂಡು, ಅಗತ್ಯ ಬಿದ್ರೆ ಸರ್ಜರಿ ಮಾಡಿಸಿಕೊಳ್ಳುವಂತೆ ಸೂಚನೆ ಕೊಟ್ಟಿದ್ರು. ಆದ್ರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯೋದಕ್ಕೆ ದರ್ಶನ್ ಸುತಾರಾಂ ರೆಡಿ ಇಲ್ಲ.

ತನಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲೇ ಟ್ರೀಟ್​​ಮೆಂಟ್ ಆಗಬೇಕು ಅಂತ ದರ್ಶನ್ ಪಟ್ಟು   ಹಿಡಿದಿದ್ದಾರೆ. ಬೇಲ್ ಸಿಕ್ಕ ಮೇಲೆಯೇ ಟ್ರೀಟ್​​ಮೆಂಟ್ ತಗೋತಿನಿ ಎಂದಿದ್ದಾರೆ. ಈಗಾಗ್ಲೇ ದರ್ಶನ್ ಗೆ L1, L5 ನಲ್ಲಿ ಊತ ಕಾಣಿಸಿಕೊಂಡಿದ್ದು, ,  ವೈದ್ಯರ ಸಲಹೆ ಮೇರೆಗೆ ಮೆಡಿಕಲ್ ಬೆಡ್, ದಿಂಬು, ಮತ್ತು ಚೇರ್ ಕೊಡಲಾಗಿದೆ. 

ದರ್ಶನ್ ಪರೀಕ್ಷೆ ಮಾಡಿರೋ ನ್ಯೂರೋ ಹಾಗೂ ಆರ್ಥೋಪಿಡಿಷನ್ ವೈದ್ಯರು ಸ್ಕ್ಯಾನಿಂಗ್, ಸರ್ಜರಿ  ವಿಳಂಬವಾದ್ರೇ,..ಕನಿಷ್ಠ ಫಿಸಿಯೋಥೆರಪಿ ಮಾಡಿಸುವಂತೆ ಸಲಹೆ ನೀಡಿದ್ರು. ಸೋ ಶುಕ್ರವಾರ ಸಂಜೆ ದರ್ಶನ್​ಗೆ ವಿಮ್ಸ್ ಆಸ್ಪತ್ರೆ ವೈದ್ಯರಿಂದ ಫಿಸಿಯೋಥೆರಪಿ ಕೊಡಿಸಲಾಗಿದೆ.

ಲಾಯರ್ ಜಗದೀಶ್‌ಗೆ  ಮಹಾನ್ ಶಿವಭಕ್ತರೇ? ಭರತ್ ಬೊಮ್ಮಾಯಿ ವಿರುದ್ಧ ಟಿಕೆಟ್ ಸಿಗುತ್ತಾ?

ಆದ್ರೆ ಫಿಸಿಯೋಥೆರಪಿ ದರ್ಶನ್ ಬೆನ್ನು ನೋವನ್ನ ಕಡಿಮೆ ಮಾಡಿಲ್ಲ. ಈಗಾಗ್ಲೇ ಹೈಕೋರ್ಟ್ ಕೂಡ ದರ್ಶನ್ ಆರೋಗ್ಯ ಸ್ಥಿತಿ ಗಮನಿಸಿ ತ್ವರಿತ ವಿಚಾರಣೆಗೆ ಯೆಸ್ ಅಂದಿದೆ. ಆದ್ರೆ ದರ್ಶನ್​ಗೆ ಅಷ್ಟು ಬೇಗ ಬೇಲ್ ಸಿಕ್ಕಿಬಿಡುತ್ತೆ ಅನ್ನೋದು ಕನಸಿನ ಮಾತು. ಒಂದು ವೇಳೆ ಬೆನ್ನು ನೋವಿನಿಂದ ಮುಕ್ತಿ ಪಡೀಬೇಕು ಅಂದ್ರೆ ದರ್ಶನ್ ಸರ್ಕಾರಿ ಆಸ್ಪತ್ರೆಯಲ್ಲೇ ಟ್ರೀಟ್​​ಮೆಂಟ್ ತಗೋಬೇಕು,.ಇಲ್ಲದೇ ಹೋದ್ರೆ ಇದೇ ರೀತಿ ಅನುದಿನ ನರಕ ದರ್ಶನ ಮಾಡಲೇಬೇಕು. ಮಾಡಿದ್ದುಣ್ಣೋ ಮಹರಾಯ ಅನ್ನೋ ಮಾತಿನಂತೆ ನೋವು ಅನುಭವಿಸಲೇಬೇಕು. 

click me!