ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್‌ಕುಮಾರ್ ಅವರ ಸಮಾಧಿಗೆ ಟಾಲಿವುಡ್ ಹಾಗೂ ಬಾಲಿವುಡ್‌ನ ಜನಪ್ರಿಯ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ.
ಬೆಂಗಳೂರಿನ (Bengaluru) ಕಂಠೀರವ ಸ್ಟುಡಿಯೋದಲ್ಲಿರುವ (Kanteerava Studio) ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಸಮಾಧಿಗೆ ಟಾಲಿವುಡ್ ಹಾಗೂ ಬಾಲಿವುಡ್‌ನ ಜನಪ್ರಿಯ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ಆರ್‌ಜಿವಿ, ‘ನಾನು ಶಿವಣ್ಣ ಅವರಿಗೆ ಕಿಲ್ಲಿಂಗ್ ವೀರಪ್ಪನ್ ಸಿನಿಮಾ ನಿರ್ದೇಶಿಸುತ್ತಿದ್ದ ಸಮಯದಿಂದಲೂ ಡಾ. ರಾಜ್ ಕುಟುಂಬವನ್ನು ಹತ್ತಿರದಿಂದ ಕಂಡಿದ್ದೇನೆ, ಒಡನಾಡಿದ್ದೇನೆ. ಪುನೀತ್ ಅವರನ್ನೂ ಹಲವು ಬಾರಿ ಭೇಟಿಯಾಗಿದ್ದೇನೆ.
ಅವರು ಅಗಲಿ ಇಷ್ಟುತಿಂಗಳಾದರೂ ನನಗಿನ್ನೂ ಅವರ ಹಠಾತ್ ಅಗಲಿಕೆ ಶಾಕಿಂಗ್ ಆಗಿಯೇ ಉಳಿದಿದೆ. ಅವರನ್ನು ಹೀಗೆ ಇಲ್ಲಿ ನೋಡುತ್ತೇನೆ ಅಂದುಕೊಂಡಿರಲಿಲ್ಲ. ಬಹುಶಃ ದೇವರ ಪ್ಲಾನ್ ಬೇರೆಯೇ ಇರಬೇಕು. ಆದರೂ ಅವರು ಚಿರನಿದ್ರೆಯಲ್ಲಿರುವ ಈ ಜಾಗದಲ್ಲಿ ದೈವಿಕ ಅನುಭೂತಿ ಇದೆ, ಇಡೀ ಪರಿಸರ ಆಶ್ರಮದಂತೆ ಭಾಸವಾಗುತ್ತದೆ. ಪ್ರತಿಯೊಬ್ಬರೂ ಅವರನ್ನು ಇಷ್ಟಪಡುತ್ತಿದ್ದರು. ಅವರು ಕರ್ನಾಟಕ ಜನತೆಗೆ ನೀಡಿದ ಪ್ರೀತಿ, ಕೊಡುಗೆಗಳು ಅವರನ್ನು ಅಜರಾಮರವಾಗಿಸಿದೆ’ ಎಂದರು.
ಪರೀಕ್ಷೆಯಲ್ಲಿ ಪುನೀತ್ ಬಗ್ಗೆ ಪ್ರಶ್ನೆ; ವೈರಲ್ ಆದ ಪ್ರಶ್ನೆಪತ್ರಿಕೆ
ಅಪ್ಪು ಸಮಾಧಿಗೆ ನಮನ: ಇಂದು ಪುನೀತ್ ರಾಜ್‌ಕುಮಾರ್ ಅವರು ಅಗಲಿ 5 ತಿಂಗಳಾದ ಹಿನ್ನೆಲೆಯಲ್ಲಿ ಡಾ. ರಾಜ್ ಕುಟುಂಬಸ್ಥರು (Family) ಪುನೀತ್ ಸಮಾಧಿಗೆ ತೆರಳಿ ನಮನ ಸಲ್ಲಿಸಿದ್ದಾರೆ. ಪತ್ನಿ ಅಶ್ವಿನಿ ಶಿವರಾಜ್ ಕುಮಾರ್, ಪುತ್ರಿ ವಂದಿತಾ ಮೊದಲಾದವರು ಅಪ್ಪು ಅವರ ಸಮಾಧಿಗೆ ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ವಿನಯ್ ರಾಜ್‌ಕುಮಾರ್ ಹಾಗೂ ಯುವ ರಾಜ್‌ಕುಮಾರ್ ಹಾಜರಿದ್ದರು. ಅಪ್ಪು ಸಮಾಧಿಗೆ ಭೇಟಿ ನೀಡುವವರ ಸಂಖ್ಯೆ ಏನು ಕಡಿಮೆ ಆಗಿಲ್ಲ. ಅದರಲ್ಲೂ ಇಂದು ಅಭಿಮಾನಿಗಳ ಸಾಗರವೇ ಅಪ್ಪು ಸಮಾಧಿಗೆ ಭೇಟಿ ನೀಡಿ ನಮಿಸಿತು.
ಪ್ರಕಾಶ್ ರೈ ಅಪ್ಪು ಎಕ್ಸ್‌ಪ್ರೆಸ್: ನಟ ಪ್ರಕಾಶ್ ರೈ (Prakash Rai) ಅವರು ಪುನೀತ್‌ರಾಜ್‌ಕುಮಾರ್ ನೆನಪಿನಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡಲು ಮುಂದಾಗಿದ್ದಾರೆ. ಇದಕ್ಕಾಗಿ ಈಗಾಗಲೇ ತಮ್ಮ ಪ್ರಕಾಶ್ ರಾಜ್ ಫೌಂಡೇಶನ್‌ನಿಂದ ಅಪ್ಪು ಎಕ್ಸ್‌ಪ್ರೆಸ್ ಹೆಸರಿನ ಲೋಗೋ ಕೂಡ ಬಿಡುಗಡೆ ಮಾಡಿದ್ದಾರೆ. ತಮ್ಮ ಹುಟ್ಟು ಹಬ್ಬದ (ಮಾ.26) ಅಂಗವಾಗಿ ಅಪ್ಪು ಎಕ್ಸ್‌ಪ್ರೆಸ್ ಲೋಗೋ ಬಿಡುಗಡೆ ಮಾಡಲಾಗಿದೆ. ‘ನಟ ಪುನೀತ್‌ರಾಜ್‌ಕುಮಾರ್ ಅವರ ಹೆಸರಿನಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಲು ನನಗೆ ತುಂಬಾ ಖುಷಿ ಮತ್ತು ಹೆಮ್ಮೆ ಆಗುತ್ತಿದೆ.
Record Break ಮಾಡಿದ ಜೇಮ್ಸ್: ಮೊದಲ ದಿನವೇ 20 ಕೋಟಿ ಕಲೆಕ್ಷನ್..!
ನೆರವು, ಸಹಾಯಗಳ ರೂಪಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಲಿದ್ದೇವೆ. ಆ ಬಗ್ಗೆ ಸಂಪೂರ್ಣವಾದ ವಿವರಣೆಗಳನ್ನು ಸದ್ಯದಲ್ಲೇ ಹೇಳಲಾಗುವುದು’ ಎಂದು ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ. ಈಗಾಗಲೇ ನಟ ಪ್ರಕಾಶ್ ರೈ ಅವರು ತಮ್ಮ ಪ್ರಕಾಶ್ ರಾಜ್ ಫೌಂಡೇಶನ್ ಮೂಲಕ ಹತ್ತಾರು ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದಾರೆ. ಆಂಧ್ರ, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಶಾಲೆ ಹಾಗೂ ಗ್ರಾಮಗಳನ್ನು ದತ್ತು ತೆಗೆದುಕೊಂಡಿದ್ದಾರೆ. ಕರ್ನಾಟದಲ್ಲೂ ಶಾಲೆಯೊಂದನ್ನು ದತ್ತು ತೆಗೆದುಕೊಂಡು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದ್ದಾರೆ. ಈಗ ಅಪ್ಪು ಎಕ್ಸ್‌ಪ್ರೆಸ್ ಮೂಲಕ ಮತ್ತಷ್ಟುಸೇವಾ ಕಾರ್ಯಕ್ರಮಗಳನ್ನು ಮಾಡುವುದಕ್ಕೆ ಪ್ರಕಾಶ್ ರೈ ಅವರು ಮುಂದಾಗಿದ್ದಾರೆ.