ಮೇ.13 ನಟ ಭಯಂಕರ ರಿಲೀಸ್; ಪ್ರಥಮ್‌ ಹಾಡಿನ ಹಬ್ಬ ಜೋರು!

Published : Mar 28, 2022, 11:35 AM IST
ಮೇ.13 ನಟ ಭಯಂಕರ ರಿಲೀಸ್; ಪ್ರಥಮ್‌ ಹಾಡಿನ ಹಬ್ಬ ಜೋರು!

ಸಾರಾಂಶ

ನಟ ಭಯಂಕರ ಚಿತ್ರದ ಪತ್ರಿಕಾಗೋಷ್ಟಿ ಮುಖ್ಯಅತಿಥಿಯಾಗಿ ಶ್ರೀಮುರಳಿ, ಜಿಲ್ಲಾಧಿಕಾರಿ ದಯಾನಂದ್‌, ಗೀತರಚನೆಕಾರ ಡಾ ವಿ ನಾಗೇಂದ್ರಪ್ರಸಾದ್‌, ಗಿರೀಶ್‌, ಅರ್ಜುನ್‌ ಕುಮಾರ್‌ ಬಂಗಾರಪ್ಪ ಹಾಜರಿದ್ದರು.

ತುಂಬಾ ದಿನಗಳ ನಂತರ ಬಿಗ್‌ಬಾಸ್‌ ಪ್ರಥಮ್‌ ಮಾತು ಮತ್ತು ಅವರ ಸಿನಿಮಾ ಮೋಡಿಗೆ ಮಾಧ್ಯಮ ಮಂದಿ ಸಾಕ್ಷಿ ಆದರು. ಅದು ‘ನಟ ಭಯಂಕರ’ ಚಿತ್ರದ ಪತ್ರಿಕಾಗೋಷ್ಟಿ. ಮುಖ್ಯಅತಿಥಿಯಾಗಿ ಶ್ರೀಮುರಳಿ ಆಗಮಿಸಿದ್ದರು. ಹೀಗಾಗಿ ಚಿತ್ರತಂಡದ ಮಾತಿಗೂ ಮುನ್ನ ಚಿತ್ರದ ಹಾಡುಗಳ ಪ್ರದರ್ಶನ ಮಾಡಲಾಯಿತು.

‘ಇದು ನನ್ನ ಮೊದಲ ನಿರ್ದೇಶನದ ಸಿನಿಮಾ. ಇಲ್ಲಿ ಎರಡು ಕತೆಗಳು ಇವೆ. ತುಂಬಾ ಅಹಂಕಾರ ಇರುವ ಒಬ್ಬ ವ್ಯಕ್ತಿ ಒಬ್ಬರಿಗೆ ಮಾತು ಕೊಟ್ಟಮೇಲೆ ಹೇಗೆಲ್ಲ ಬದಲಾಗುತ್ತಾನೆ ಎಂಬುದು ಒಂದು ಕತೆಯಾದರೆ, ಇನ್ನೊಂದು ಸ್ಟುಪಿಡ್‌ ಸೂಪರ್‌ ಸ್ಟಾರ್‌ ಹಾಗೂ ಕುರಿಡಿ ದೆವ್ವದ ನಡುವೆ ನಡೆಯುವ ಪ್ರೇಮ ಕತೆ. ಇವೆರಡನ್ನೂ ಒಟ್ಟಿಗೆ ತೆರೆ ಮೇಲೆ ನೋಡಬಹುದು. ನಮ್ಮ ಆಡಿಯೋ ಬಿಡುಗಡೆಗೆ ಬಂದಿರುವ ಶ್ರೀಮುರಳಿ ಅವರಿಗೆ ನನ್ನ ಕೃತಜ್ಞತೆಗಳು. ರೋರಿಂಗ್‌ ಸ್ಟಾರ್‌ ಬೆಂಬಲ ಇದೆ ಎಂದ ಮೇಲೆ ನಮ್ಮ ಸಿನಿಮಾ ಗೆಲ್ಲುತ್ತದೆ ಎನ್ನುವ ವಿಶ್ವಾಸ ಮೂಡಿದೆ’ ಎಂದರು ಪ್ರಥಮ್‌.

ಮೇ.13ಕ್ಕೆ ಸಿನಿಮಾ ತೆರೆಗೆ ಬರಲಿದೆ. ‘ನನಗೆ ಪ್ರಥಮ್‌ ಅವರ ಕಾನ್ಫಿಡೆನ್ಸ್‌ ಇಷ್ಟಆಗುತ್ತದೆ. ಬಿಗ್‌ಬಾಸ್‌ ಶೋನಲ್ಲಿ ಇವರನ್ನು ನೋಡಿ ಏನಪ್ಪಾ ಹೀಗೆ ಮಾತನಾಡುತ್ತಾನೆ ಎಂದುಕೊಂಡಿದ್ದೆ. ನಂತರ ನಾನೇ ಅವರ ಅಭಿಮಾನಿ ಆದೆ. ಈಗ ನಟನೆ ಜತೆಗೆ ನಿರ್ದೇಶನ ಕೂಡ ಮಾಡಿದ್ದಾರೆ. ಒಂದು ಹಾಡನ್ನು ಉಪೇಂದ್ರ ಅವರು ಹಾಡಿದ್ದಾರೆ. ಸಿನಿಮಾ ಕೂಡ ಎಲ್ಲರಿಗೂ ಇಷ್ಟವಾಗಿ, ಗೆಲ್ಲಲಿ’ ಎಂದು ಶ್ರೀಮುರಳಿ ಹಾರೈಸಿದರು. ‘ಹಾಡುಗಳು ಚೆನ್ನಾಗಿವೆ. ಹೀಗಾಗಿ ಆಡಿಯೋ ಹಕ್ಕುಗಳನ್ನು ತೆಗೆದುಕೊಂಡಿದ್ದೇವೆ’ ಎಂದು ಲಹರಿ ವೇಲು ಹೇಳಿದರು. ಚಿತ್ರದ ನಾಯಕಿಯರಾದ ನಿಹಾರಿಕ, ಚಂದನ, ಸಂಗೀತ ನಿರ್ದೇಶಕ ಪ್ರದ್ಯೋತನ್‌ ಚಿತ್ರದ ಕುರಿತು ಮಾತನಾಡಿದರು.

ಜಿಲ್ಲಾಧಿಕಾರಿ ದಯಾನಂದ್‌, ಗೀತರಚನೆಕಾರ ಡಾ ವಿ ನಾಗೇಂದ್ರಪ್ರಸಾದ್‌, ಗಿರೀಶ್‌, ಅರ್ಜುನ್‌ ಕುಮಾರ್‌ ಬಂಗಾರಪ್ಪ ಹಾಜರಿದ್ದರು.

ನಟ ಭಯಂಕರ ತಂಡದಿಂದ ವಿಶ್ವನಾಥ್‌ ಶೆಟ್ಟಿ ಕುಟುಂಬಕ್ಕೆ ಚೆಕ್‌ ಕೊಟ್ಟ ಪ್ರಥಮ್!

ಸಿದ್ದರಾಮಯ್ಯ ರಾಜಕಾರಣದಲ್ಲಿ ಸದಾ ಕ್ರಿಯಾಶೀಲರಾಗಿದ್ದರೂ ಸಿನಿಮಾ ರಂಗದ ಜತೆ ನಂಟು ಇಟ್ಟುಕೊಂಡಿದ್ದಾರೆ.  ಪ್ರಥಮ್ ಜನ್ಮದಿನ ಫೆಬ್ರವರಿ 24.  ಪ್ರಥಮ್ ಜನ್ಮದಿನದ ಸಂಭ್ರಮದಲ್ಲಿ ನಟ ಭಯಂಕರ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.ಸಿದ್ದರಾಮಯ್ಯ  ಕಾರ್ಯಕ್ರಮದ ನಿಮಿತ್ತ ದೆಹಲಿಗೆ ತೆರಳುವರಿದ್ದರು .  ಅದಕ್ಕೂ ಮೊದಲು ನಮ್ಮನ್ನು ಮನೆಗೆ ಬರಲು ಹೇಳಿದ್ದರು. ಈ ಸಂದರ್ಭ ಚಿತ್ರದಲ್ಲಿ ದೆfವದ ಪಾತ್ರ ಮಾಡಿದವರು ಇದ್ದರು. ಸರ್ ಅವರ ಪಕ್ಕ ನಿಲ್ಲಬೇಡಿ..ದೆವ್ವ ಎಂದೆ... ಆಗ ಇದ್ದಕ್ಕಿದ್ದಂತೆ ಸಿದ್ದರಾಮಯ್ಯ ಒಂದು ಕ್ಷಣ ಬೆಚ್ಚಿದರು.. ಆಮೇಲೆ ಸಾವರಿಸಿಕೊಂಡು ಅವರು ಸಿನಿಮಾದಲ್ಲಿ ಮಾತ್ರ ದೆವ್ವ ಎಂದೆ.. ಇದಾದ  ಮೇಲೆ ಸಿದ್ದರಾಮಯ್ಯ ರಿಲೀಫ್ ಆದರು ಎಂದು ಪ್ರಥಮ್ ಅಂದು ನಡೆದ ಘಟನೆ ವಿವರಿಸಿದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?