Puneeth Rajkumar: ಅಪ್ಪು ಫೋಟೋ ಹಿಡಿದು ಶಬರಿಮಲೆಗೆ ಬಂದ ಭಕ್ತ

By Suvarna NewsFirst Published Nov 27, 2021, 1:24 PM IST
Highlights

ಪುನೀತ್ ರಾಜ್ ಕುಮಾರ್(Puneeth Rajkumar) ಅಗಲಿದ ನೋವು ಹಾಗೆಯೇ ಇದೆ. ಅವರ ಅಭಿಮಾನಿಗಳು ಇನ್ನೂ ಆ ಶಾಕ್‌ನಿಂದ ಹೊರಬಂದಿಲ್ಲ. ಇದೇ ಸಂದರ್ಭ ಮಾಲೆ ಧರಿಸಿದ ಶಬರಿಮಲೆ(Shabarimala) ಭಕ್ತ ಅಪ್ಪು ಫೋಟೋ ಹಿಡಿದು ಸನ್ನಿಧಾನಕ್ಕೆ ಹೋಗೋ ವಿಡಿಯೋ ವೈರಲ್ (Viral video)ಆಗಿದೆ.

ಸ್ಯಾಂಡಲ್‌ವುಡ್ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್(Puneeth Rajkumar) ಅಗಲಿಕೆ ನೋವಿನಿಂದ ಇನ್ನೂ ಜನರು ಹೊರಬಂದಿಲ್ಲ. ಜನರ ಪ್ರೀತಿಯ ಅಪ್ಪುವಿನ ಅಕಾಲಿಕ ಸಾವು ಚಿತ್ರರಂಗಕ್ಕೂ, ಕುಟುಂಬ, ಮಿತ್ರರು, ಅಭಿಮಾನಿಗಳಿಗೆ ಅತೀವ ನೋವು ಕೊಟ್ಟಿದೆ. ದಿನನಿತ್ಯ ಸಾವಿರಾರು ಜನರು ಅಪ್ಪು ಸಮಾಧಿಗೆ ಭೇಟಿ ಕೊಟ್ಟು ನಮನ ಸಲ್ಲಿಸುತ್ತಿದ್ದಾರೆ. ಸ್ಟಾರ್ ನಟ ಅಗಲಿದರೂ ಅಭಿಮಾನಿಗಳಲ್ಲಿ ಮಾತ್ರ ಅಪ್ಪು ನೆನಪು ಹಸಿರಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಘಟನೆಯೊಂದು ನಡೆದಿದ್ದು ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಪುನೀತ್ ಅವರ ಭಾವಚಿತ್ರವನ್ನು ಹಿಡಿದುಕೊಂಡು ಮಾಲಾಧಾರಿಯೊಬ್ಬರು ನಡೆಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ, ಈ ವಿಡಿಯೋವನ್ನು ಬಹಳಷ್ಟು ಜನರು ಶೇರ್ ಮಾಡಿಕೊಂಡಿದ್ದಾರೆ.

ಈಗಾಗಲೇ ಶಬರಿಮಲೆ ಸನ್ನಿಧಾನ ಭೇಟಿಗಾಗಿ ದೇಶಾದ್ಯಂತ ಶಬರಿಮಲೆ ಅಯ್ಯಪ್ಪ ಸ್ವಾಮಿ ಭಕ್ತರು ಮಾಲಾಧಾರಿಗಳಾಗಿ ವೃತ ನಡೆಸುತ್ತಿದ್ದು ಬಹಳಷ್ಟು ಜನರು ಮಕರಜ್ಯೋತಿಗೆ ಮುನ್ನವೇ ಸನ್ನಿಧಾನ ಭೇಟಿ ಮುಗಿಸಿಬರುತ್ತಾರೆ. ಮಕರ ಮ್ಯೋತಿ ಸಂದರ್ಭ ಜನ ದಟ್ಟಣೆ ಹೆಚ್ಚಿರುವ ಕಾರಣದಿಂದಲೂ ಬಹಳಷ್ಟು ಜನ ಮುನ್ನವೇ ಬಂದು ಸನ್ನಿಧಾನ ಭೇಟಿ ಮಾಡಿಹೋಗುತ್ತಾರೆ. ಈಗ ಮಾಲಾಧಾರಿಯೊಬ್ಬರು ಅಪ್ಪು ಫೋಟೋ ಹಿಡಿದುಕೊಂಡಿರೋ ವಿಡಿಯೋ ಎಲ್ಲೆಡೆ ಓಡಾಡುತ್ತಿದೆ.

Puneeth Rajkumar: ಅಪ್ಪು ನಿಧನದ ಬಳಿಕ ಶಕ್ತಿಧಾಮಕ್ಕೆ ಭೇಟಿ ನೀಡಿದ ಶಿವರಾಜ್‍ಕುಮಾರ್ ದಂಪತಿ

ಮಾಲೆ ಧರಿಸಿ, ಕಪ್ಪು ಉಡುಗೆ ಉಟ್ಟು ತಲೆಮೇಲೆ ಇರುಮುಡಿ ಕಟ್ಟು ಇಟ್ಟು ಪುನೀತ್ ರಾಜ್‌ಕುಮಾರ್ ಅವರ ದೊಡ್ಡ ಫೋಟೋಪ್ರೇಮ್‌ನನ್ನು ಕೈಯಲ್ಲಿ ಹಿಡಿದು ಸಾಗಿದ್ದಾರೆ ಭಕ್ತ. ಈ ವಿಡಿಯೋಗೆ ಬಹಳಷ್ಟು ಕಮೆಂಟ್ ಬಂದಿದ್ದು, ಸುಧಾ ಮೂರ್ತಿ ಎಂಬ ಎಕೌಂಟ್‌ನಿಂದ ಶೇರ್ ಮಾಡಲಾಗಿದೆ. ಸ್ವಾಮಿಯೇ ಶರಣಂ ಅಯ್ಯಪ್ಪ... ಧನ್ಯವಾದಗಳು ಸ್ವಾಮಿಗಳೇ ನಮ್ಮ ಸ್ವಾಮಿಗಳಿಗೂ ದರ್ಶನ ಮಾಡಿಸಿದ್ದಕ್ಕೆ..ಎಂದು ನೆಟ್ಟಿಗರು ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ಕನ್ನಡದ ಕೋಟ್ಯಾಧಿಪತಿ ಶೋ ನಡೆಸಿಕೊಡುವಾಗ ಅಪ್ಪು ಕಾಣಸಿಕೊಳ್ಳುತ್ತಿದ್ದ ಅದೇ ಲುಕ್‌ನ ಫೋಟೋ ಫ್ರೇಮ್ ಮಾಡಲಾಗಿದೆ.

ವರನಟ ರಾಜ್‌ಕುಮಾರ್ ಅವರ ಪುತ್ರ ಪುನೀತ್ ಅವರು ಅ.29ರಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸುಸ್ತು ಕಾಣಿಸಿಕೊಂಡು ಹಿನ್ನೆಲೆ ಹತ್ತಿರದ ಕ್ಲಿನಿಕ್‌ಗೆ ಭೇಟಿಕೊಟ್ಟ ನಟ ವಿಕ್ರಮ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಸುಮಾರು 11.30ರ ವೇಳೆಗೆ ನಟನ ಸಾವನ್ನು ಅಧಿಕೃತವಾಗಿ ತಿಳಿಸಲಾಗಿತ್ತು. ಬಹಳಷ್ಟು ಅಭಿಮಾನಿಗಳು ನಟನ ಅಂತಿಮ ದರ್ಶನ ಪಡೆದಿದ್ದರು.

‘ಪುನೀತ್‌ ನನ್ನ ಫ್ಯಾಮಿಲಿ ಫ್ರೆಂಡ್‌ ಥರ ಇದ್ದರು. ಪ್ರತೀ ವರ್ಷ ಜೊತೆಯಾಗಿ ಶಬರಿಮಲೆ ಹೋಗುತ್ತಿದ್ದೆವು. ಎಲ್ಲಾ ಕಡೆ ಅವರ ಅಗಲಿಕೆಯ ನೋವು ತುಂಬಿಕೊಂಡಿದೆ. ಅವರಿಲ್ಲ ಅನ್ನುವುದನ್ನು ಅರಗಿಸಿಕೊಳ್ಳುವುದೇ ಕಷ್ಟವಾಗಿದೆ’ ಎಂದು ಇತ್ತೀಚೆಗೆ ನಟ ನೆನಪಿರಲಿ ಪ್ರೇಮ್ ನೆನಪಿಸಿಕೊಂಡಿದ್ದರು.

ಭಕ್ತಾದಿಗಳಿಗಾಗಿ ಸನ್ನಿಧಾನ ಈಗ ಓಪನ್:

ಕೇರಳದ (Kerala) ಶಬರಿಮಲೆಯ ಅಯ್ಯಪ್ಪ ದೇವಾಲಯವು (Sabarimala ayyappa Temple) ನ. 15 ರಿಂದ ಎರಡು ತಿಂಗಳು ತೀರ್ಥಯಾತ್ರೆಗಾಗಿ ತೆರೆಯಲಿದೆ ಎಂದು ದೇವಾಲಯದ ದೈನಂದಿನ ಕಾರ್ಯಚಟುವಟಿಕೆಗಳನ್ನು ನೋಡಿಕೊಳ್ಳುವ ತಿರುವಾಂಕೂರು ದೇವಸ್ವಂ ಬೋರ್ಡ್‌ (TDB) ತಿಳಿಸಿತ್ತು.

ಈ ವೇಳೆ ಭಕ್ತಾದಿಗಳು ತಮ್ಮೊಂದಿಗೆ ಕೋವಿಡ್‌ ಲಸಿಕೆಯ (Covid vaccine) ಪ್ರಮಾಣಪತ್ರವನ್ನು, ಜತೆಗೆ 72 ಗಂಟೆಗಳೊಳಗಿನ ಕೋವಿಡ್‌ ನೆಗೆಟಿವ್‌ (Covid Negetive) ಆರ್‌ಟಿ-ಪಿಸಿಆರ್‌ (RTPCR) ವರದಿಯನ್ನು ಕಡ್ಡಾಯವಾಗಿ ಹಾಜರು ಪಡಿಸಬೇಕು ಎಂದು ಟಿಡಿಬಿ (TDB) ತಿಳಿಸಿತ್ತು.

ಕೇರಳದ ಪಟ್ಟನಂತಿಟ್ಟ ಜಿಲ್ಲೆಯ ದೇವಾಲಯವು ಬುಧವಾರ ಚಿತಿರಾ ಅಟ್ಟವಿಶೇಷ ಪೂಜೆಗಾಗಿ ಭಕ್ತಾದಿಗಳಿಗೋಸ್ಕರ (Devotees) ತೆರೆಯಲ್ಪಟ್ಟಿತ್ತು. ಪೂಜೆಯ ನಂತರ ರಾತ್ರಿ 9 ಘಂಟೆಗೆ ಮುಚ್ಚಲಾಯಿತು. ಭಕ್ತಾದಿಗಳನ್ನು ವರ್ಚುವಲ್‌ ಕ್ಯೂ ಬುಕಿಂಗ್‌ (Booking) ವ್ಯವಸ್ಥೆಯ ಮೂಲಕ ಅನುಮತಿಸಲಾಗಬಹುದು ಎಂದು ಬೋರ್ಡ್‌ (Board) ತಿಳಿಸಿದೆ.

click me!