
ಕನ್ನಡ ಜನಪ್ರಿಯ ಕಿರುತೆರೆ ನಟಿ ಕವಿತಾ ಗೌಡ (Kavitha Gowda) ವೃತ್ತಿ ಜೀವನದಲ್ಲಿ ಹಾಗೂ ವೈಯಕ್ತಿಕ ಜೀವನದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಎಲ್ಲೇ ಹೋದರೂ ಅಭಿಮಾನಿಗಳು (fans) ಓಡಿ ಬಂದು ಸೆಲ್ಫಿ (Selfie) ಕೇಳುತ್ತಾರೆ. ಇಲ್ಲವಾದರೆ ಒಂದು ಆಟೋಗ್ರಾಫ್ (Autography) ಕೇಳುತ್ತಾರೆ. ಹೀಗೆ ಕವಿತಾರನ್ನು ನೋಡಿದ ಖುಷಿಯಲ್ಲಿ ಅಭಿಮಾನಿಯೊಬ್ಬರು ಸೆಲ್ಫಿ ಕೇಳಲು ಬಂದು ಏನು ಮಾಡಿದ್ದಾರೆ ನೋಡಿ? ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ, ಅಸಲಿ ಸತ್ಯ ಏನೆಂದು ತಿಳಿದು ಬಂದಿದೆ.
ಬೆಂಗಳೂರಿನ (Bengaluru) ಅಂಗಡಿ ಒಂದರಿಂದ ಹೊರಗಡೆ ಬಂದ ಕವಿತಾ ಗೌಡ ಫುಟ್‌ಪಾತ್ (Footpath) ಮೇಲೆ ನಿಂತು ಮೊಬೈಲ್‌ನಲ್ಲಿ (mobile) ಮಾತನಾಡುತ್ತಿದ್ದರು. ರಸ್ತೆಯಲ್ಲಿ ಸಾಗುತ್ತಿದ್ದ ಬಿಳಿ ಕಾರಿನಿಂದ (Car) ಒಬ್ಬರು ಇಳಿದು ಕವಿತಾ ಅವರನ್ನು ನೋಡಿ ಸೆಲ್ಫಿ ತೆಗೆದುಕೊಳ್ಳಲು ಹತ್ತಿರ ಬರುತ್ತಾರೆ. ಕವಿತಾರನ್ನು ಮಾತನಾಡಿಸಲು ಮುಂದಾಗುತ್ತಾರೆ. ಸೆಲ್ಫಿ ಕ್ಲಿಕ್ ಮಾಡಲು ಇಲ್ಲಿ ಬೆಳಕು ಇಲ್ಲ , ಕಾರಿನ ಬಳಿ ಹೋಗೋಣ ಎಂದು ಕಾರಿನ ಬಳಿ ಕರೆಯುತ್ತಾರೆ. ಅಲ್ಲಿಗೆ ಹೋಗಿ ಕ್ಲಿಕ್ ಮಾಡುವಾಗ ಕಾರಿನಿಂದ ಇಬ್ಬರು ಹೊರ ಬಂದು ಕವಿತಾರನ್ನು ಕಿಡ್ನ್ಯಾಪ್ ಮಾಡಿದ್ದಾರೆ!
ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಯಾವ ಕಾರಣಕ್ಕೆ ಕಿಡ್ನ್ಯಾಪ್ (Kidnap) ಮಾಡಿದ್ದಾರೆ, ಇದರ ಹಿಂದೆ ಯಾವ ಪ್ಲ್ಯಾನ್ ಇದೆ..? ಏನು, ಎತ್ತ, ಎಂದು ತಿಳಿಯದೆ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅಲ್ಲದೇ ಕವಿತಾ ಗೌಡ ಅಭಿಮಾನಿಗಳು ಮತ್ತು ಕುಟುಂಬಸ್ಥರಿಗೆ ಕರೆ ಮಾಡಿ ವಿಚಾರಿಸಿಕೊಳ್ಳುತ್ತಿದ್ದಾರೆ. ಗಾಬರಿ ಹೆಚ್ಚಾಗುತ್ತಿದ್ದಂತೆ, ಘಟನೆಯ ಅಸಲಿ ವಿಚಾರ ರಿವೀಲ್ ಮಾಡಿದ್ದಾರೆ.
ಅಸಲಿ ಕಥೆ:
ನವೆಂಬರ್ 26ರಂದು ಸುಮನ್ ಶೈಲೇಂದ್ರ (Suman Shilendra) ಮತ್ತು ಭಾವನಾ (Bhavana) ನಟನೆಯ 'ಗೋವಿಂದ ಗೋವಿಂದ' (Govinda Govinda) ಸಿನಿಮಾ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಕವಿತಾ ಗೌಡ ಕೂಡ ನಟಿಸಿದ್ದಾರೆ. ಸಿನಿಮಾವನ್ನು ವಿಭಿನ್ನ ರೀತಿಯಲ್ಲಿ ಪ್ರಚಾರ ಮಾಡಬೇಕು ಎನ್ನುವ ಕಾರಣ ಚಿತ್ರದ ಸಣ್ಣ ತುಣುಕನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲದೇ ಈ ವಿಡಿಯೋದಿಂದ ಕವಿತಾ ಅವರು ಎಂತಹ ಪಾತ್ರ ನಿರ್ವಹಿಸಿರಬಹುದು ಎಂಬ ಕುತೂಹಲ ಹೆಚ್ಚಾಗಿತ್ತು.
ಕಾಮಿಡಿ ಥ್ರಿಲ್ಲರ್ (Comedy Thriller) ಸಿನಿಮಾ ಇದಾಗಿದ್ದು, ಕನ್ನಡದಲ್ಲಿ ಮಾತ್ರವಲ್ಲದೇ ತಮಿಳು ಮತ್ತು ಮಲಯಾಳಂ (Mollywood) ಸಿನಿಮಾದಲ್ಲಿಯೂ ಚಿತ್ರ ಬಿಡುಗಡೆ ಆಗಲಿದೆ. ರೂಪೇಶ್ ಶೆಟ್ಟಿ, ಪವನ್ ಕುಮಾರ್, ವಿಜಯ್ ಚೆಂಡೂರ್, ಅಚ್ಯುತ್ ಕುಮಾರ್, ವಿ.ಮನೋಹರ್, ಕೆ ಮಂಜು, ಕಡ್ಡಿಪುಡಿ ಚಂದ್ರು, ಪದ್ಮಾ ವಾಸಂತಿ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.