'ಮುಂದಿನ ಆರಾಧನೆಗೆ ಬರ್ತೆನೆ' ಪುನೀತ್ ಮಾತಾಡ್ತಿದ್ದಂತೆ ಕೆಟ್ಟ ಸುದ್ದಿಯ ಸೂಚನೆ ಸಿಕ್ಕಿತ್ತಾ?

By Suvarna News  |  First Published Oct 30, 2021, 11:56 PM IST

* ಪುನೀತ್ ರಾಜ್‍ಕುಮಾರ್ ನಿಧನಕ್ಕೆ ಮುಂಚಿಯೇ ಸಿಕ್ಕಿತ್ತಾ ಸೂಚನೆ?

* ರಾಯರ ಸನ್ನಿಧಾನದಲ್ಲಿ ನಡೆದ ಪವಾಡದ ಘಟನೆ ವೈರಲ್

* ಸುಭುದೇಂದ್ರ ತೀರ್ಥರ ಸಮಕ್ಷಮದಲ್ಲಿ ನಡೆದ ಆ ಪವಾಡ ಏನನ್ನು ಸೂಚಿಸಿತ್ತು?

*  ಕಳೆದ ಬಾರಿ ಮಂತ್ರಾಲಯಕ್ಕೆ ಭೇಟಿ ನೀಡಿದ್ದ ಪುನೀತ್ ರಾಜ್‍ಕುಮಾರ್


ಬೆಂಗಳೂರು(ಅ. 30)  ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್   ರಾಜ್ ಕುಮಾರ್ ನಿಧನದ (Puneeth Rajkumar)  ನಂತರ ದೊಡ್ಡದೊಂದು ಶೂನ್ಯ ಆವರಿಸಿದೆ.  ಸ್ಯಾಂಡಲ್ ವುಡ್ (Sandalwood) ನಟರು, ಟಾಲಿವುಡ್ ಮತ್ತು ಬಾಲಿವುಡ್ ಸ್ನೇಹಿತರು ಪುನೀತ್ ಅಂತಿಮ ದರ್ಶನ ಪಡೆದುಕೊಳ್ಳುತ್ತಿದ್ದಾರೆ.

"

Tap to resize

Latest Videos

ಪುನೀತ್ ರಾಜ್‍ಕುಮಾರ್ ನಿಧನಕ್ಕೆ ಮುಂಚಿಯೇ ಸಿಕ್ಕಿತ್ತಾ ಸೂಚನೆ? ಎನ್ನುವ ಪ್ರಶ್ನೆ ಈ ವಿಡಿಯೋ ನೋಡಿದಾಗ ಕಾಡುತ್ತದೆ. ರಾಯರ ಸನ್ನಿಧಾನದಲ್ಲಿ ನಡೆದ ಪವಾಡ ಈಗ ವೈರಲ್ ಆಗುತ್ತಿದೆ.

ಸುಭುದೇಂದ್ರ ತೀರ್ಥರ ಸಮಕ್ಷಮದಲ್ಲಿ ನಡೆದ  ಘಟನೆ ಇದು. ಕಳೆದ ಬಾರಿ ಮಂತ್ರಾಲಯಕ್ಕೆ (Mantralaya) ಭೇಟಿ ನೀಡಿದ್ದ ಪುನೀತ್ ರಾಜ್‍ಕುಮಾರ್ ಮಾತನಾಡಿದ್ದರು. ಕಳೆದ ತಿಂಗಳಷ್ಟೇ ಮಂತ್ರಾಲಯದ ರಾಯರ ಸನ್ನಿಧಾನಕ್ಕೆ ಭೇಟಿ ನೀಡಿದ್ದ ಪುನೀತ್ ರಾಜ್‍ಕುಮಾರ್ ಭಾಗ್ಯವಂತ ಸಿನಿಮಾ ಬಗ್ಗೆ ವಿವರವಾಗಿ ಮಾತನಾಡಿದ್ದರು.

undefined

ಮುಂದಿನ ಬಾರಿ ರಾಯರ ಆರಾಧನೆ ಬರುತ್ತೇನೆ ಎಂದು ಪುನೀತ್ ಹೇಳುತ್ತಿದ್ದಾಗಲೆ  ರಾಯರ ಮುಖವಾಡ ಅಲುಗಾಡಿತ್ತು. ವೀಣೆ ಸೆಹ ಕೆಳಕ್ಕೆ ಬಿಳುವ ಸಾಧ್ಯತೆ ಇದ್ದು ಸರಿ ಮಾಡಲಾಗಿತ್ತು. ಇದೊಂದು ಕೆಟ್ಟ ಸೂಚನೆ ಸಿಕ್ಕಿತ್ತಾ ಎನ್ನುವ ಮಾತನ್ನು ಅಭಿಮಾನಿಗಳು ಆಡಿಕೊಳ್ಳುತ್ತಿದ್ದಾರೆ. 

ನಾಳೆ(ಭಾನುವಾರ) ಬೆಳಗ್ಗೆ 11.30ರೊಳಗೆ ನಟ ಪುನೀತ್ ಅಂತ್ಯಕ್ರಿಯೆ ನೆರವರೇರಲಿದೆ. ಅಪ್ಪ-ಅಮ್ಮನ ಪಕ್ಕದಲ್ಲೇ ಪುನೀತ್ ಅಂತ್ಯಸಂಸ್ಕಾರ ನಡೆಯಲಿದ್ದು,  ಕುಟುಂಬಸ್ಥರು ಮತ್ತು ಅವರ ಆಪ್ತ ವಲಯಕ್ಕೆ ಮಾತ್ರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ಇದೆ.

ಅಮೆರಿಕಾದಿಂದ ಬಂದು ಅಪ್ಪನ ​​ ತಲೆ ಸವರಿ ಅಂತಿಮ ದರ್ಶನ ಪಡೆದ ಪುತ್ರಿ ಧೃತಿ

ಪುನೀತ್ ರಾಜಕುಮಾರ್ ಅವರಿಗೆ ಸಕಲ ಸರ್ಕಾರಿ​ ಗೌರವಗಳೊಂದಿಗೆ ಅಂತ್ಯಕ್ರಿಯೆಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಪುನೀತ್‌ ರಾಜ್​ಕುಮಾರ್‌ ಅವರಿಗೆ ಇಬ್ಬರೂ ಹೆಣ್ಣು ಮಕ್ಕಳು. ಹಿಂದೂ ಧರ್ಮದ ಪ್ರಕಾರ ಹೆಣ್ಣುಮಕ್ಕಳು ಅಂತಿಮ ಸಂಸ್ಕಾರ ಮಾಡುವಂತಿಲ್ಲ. ಹೀಗಾಗಿ, ರಾಘವೇಂದ್ರ ರಾಜ್‌ಕುಮಾರ್ ಅವರ ಪುತ್ರ ವಿನಯ್ ರಾಜ್​ಕುಮಾರ್ ಅವರು ಚಿಕ್ಕಪ್ಪನ ಕೊನೆಯ ಕಾರ್ಯಗಳನ್ನು ನೆರವೇರಿಸಲಿದ್ದಾರೆ.

ಭಾನುವಾರ ಬೇಗ ಅಂತ್ಯಸಂಸ್ಕಾರ ನಡೆಯುವುದರಿಂದ ಬೆಳಗ್ಗೆ 6 ಗಂಟೆಗೆ ಕಂಠೀರವ ಸ್ಟೇಡಿಯಂನಿಂದ ಅಂತಿಮಯಾತ್ರೆ ಆರಂಭವಾಗಲಿದೆ ಎಂದು ತಿಳಿದು ಬಂದಿದೆ.  ಹಿರಿಯ ಪುತ್ರಿ ಧೃತಿ ಅಮೆರಿಕಾದಲ್ಲಿದ್ದರು. ಈ ಹಿನ್ನಲೆಯಲ್ಲಿ ಅವರ ಬಂದ ಬಳಿಕ ಅಂತ್ಯಕ್ರಿಯೆ ಮಾಡಲು ತೀರ್ಮಾನಿಸಲಾಗಿತ್ತು. ಇದೀಗ ಧೃತಿ ಅಮೆರಿಕಾದಿಂದ ಬಂದಿದ್ದು, ಅಪ್ಪನ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ.

ಮೆರವಣಿಗೆ ಮಾರ್ಗ
ಕಂಠೀರವ ಕ್ರೀಡಾಂಗಣದಿಂದ ಆರ್​ಆರ್​ಎಂಆರ್​ ರಸ್ತೆ, ಹಡ್ಸನ್ ಸರ್ಕಲ್, ಪೊಲೀಸ್ ಕಾರ್ನರ್, ಕೆ.ಜಿ.ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಪೋಸ್ಟ್ ಆಫೀಸ್ ರಸ್ತೆ, ಕೆ.ಆರ್.ಸರ್ಕಲ್ ಎಡ ತಿರುವು, ಶೇಷಾದ್ರಿ ರಸ್ತೆ, ಮಹಾರಾಣಿ ಮೇಲ್ಸೇತುವೆ, ಸಿಐಡಿ ಜಂಕ್ಷನ್, ಚಾಲುಕ್ಯ ವೃತ್ತ, ಹಳೇ ಹೈಗ್ರೌಂಡ್ಸ್ ಜಂಕ್ಷನ್, ಟಿ.ಚೌಡಯ್ಯ ರಸ್ತೆ, ವಿಂಡ್ಸರ್ ಮ್ಯಾನರ್ ಜಂಕ್ಷನ್, ಬಿಡಿಎ ಅಪ್ ಱಂಪ್, ಪಿ.ಜಿ.ಹಳ್ಳಿ ಕ್ರಾಸ್, ಕಾವೇರಿ ಜಂಕ್ಷನ್, ಬಾಷ್ಯಂ ಸರ್ಕಲ್, ಸ್ಯಾಂಕಿ ರಸ್ತೆ, ಮಲ್ಲೇಶ್ವರಂ 18ನೇ ಕ್ರಾಸ್, ಮಾರಮ್ಮ ವೃತ್ತ, ಬಿಹೆಚ್‌ಇಎಲ್ ಸರ್ವೀಸ್ ರಸ್ತೆ, ಬಿಹೆಚ್‌ಇಎಲ್ ವೃತ್ತ, ಯಶವಂತಪುರ ವೃತ್ತ, ಮೆಟ್ರೋ ಷಾಪ್, ಮಾರಪ್ಪನ ಪಾಳ್ಯ, ಗೋವರ್ಧನ್ ಥಿಯೇಟರ್ ಜಂಕ್ಷನ್, ಆರ್​ಎಂಸಿ ಯಾರ್ಡ್ ಪೊಲೀಸ್ ಠಾಣೆ, ಎಂಇಐ ಬಸ್ ನಿಲ್ದಾಣ, ಗೊರಗುಂಟೆಪಾಳ್ಯ ಜಂಕ್ಷನ್, ಸಿಎಂಟಿಐ ಜಂಕ್ಷನ್, ಲಾರಿ ಅಸೋಸಿಯೇಷನ್ ಕಚೇರಿ, ಎಫ್‌ಟಿಐ ವೃತ್ತ ಮಾರ್ಗದಲ್ಲಿ ಕಂಠೀರವ ಸ್ಟುಡಿಯೋಗೆ ಸ್ಥಳಾಂತರ ಮಾಡಲಾಗುತ್ತದೆ.

"

 

click me!