ತರುಣ್ ಸುಧೀರ್ ಮದುವೆಯಲ್ಲಿ ದರ್ಶನ್‌ ಹಾಡುಗಳು ಅಬ್ಬರ; ಪುನೀತ್‌ ರಾಜ್‌ಕುಮಾರ್‌ ನಮನ ಸಲ್ಲಿಸಿದ ವಿಡಿಯೋ ವೈರಲ್!

By Vaishnavi Chandrashekar  |  First Published Aug 12, 2024, 5:09 PM IST

ಪ್ರೀತಿಗೆ ಸಹಾಯ ಮಾಡಿದ ನಟನನ್ನು ನೆನೆದ ಜೋಡಿ. ಮದುವೆ ಮನೆಯಲ್ಲಿ ಬರೀ ದರ್ಶನ್ ಚಿತ್ರಗಳ ಹಾಡುಗಳು......


ಸ್ಯಾಂಡಲ್‌ವುಡ್ ಅದ್ದೂರಿ ಮದುವೆಗೆ ಸಾಕ್ಷಿಯಾಗಿದೆ. ನಿರ್ದೇಶಕ ತರಣ್ ಸುಧೀರ್ ಹಾಗು ನಟಿ ಸೋನಲ್ ಮಂಥೋರೋ ಹೊಸ ಬಾಳಿಗೆ ಬಲಗಾಲಿಟ್ಟಿದ್ದಾರೆ. ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದ ತರುಣ್ ಸುಧೀರ್‌ ಕೈಗೆ ಸೋನಲ್ ಕೊರಳೊಡ್ಡಿದ್ದಾರೆ. ಈ ಪ್ರಣಯ ಪಕ್ಷಿಗಳ ವಿವಾಹಕ್ಕೆ ಸ್ಯಾಂಡಲ್ ವುಡ್ ನಟ ನಟಿಯರು ಸಾಕ್ಷಿಯಾಗಿದ್ದಾರೆ. 

ಪೂರ್ಣಿಮಾ ಪ್ಯಾಲೆನ್ಸ್‌ನಲ್ಲಿ ನಡೆದಿದ್ದು ಅದ್ಧೂರಿ ರಿಸೆಪ್ಷನ್, ಅಲ್ಲಿ ಸ್ವರ್ಗವೇ ಧರೆಗಿಳಿದಂತಿತ್ತು. ಶಿವ ಪಾರ್ವತಿನೇ ಹಸೆಮಣೆ ಏರಿದ್ದಾರೇನೋ ಅನ್ನೋ ಹಾಗೆ ಇಡೀ ರಿಸೆಪ್ಷನ್​ ಜಾಗ ಮಗಿಸುತ್ತಿತ್ತು. ಆ ಅದ್ಧೂರಿತನಕ್ಕೆ ಇಡೀ ಸ್ಯಾಂಡಲ್​ವುಡ್​​ ಸಾಕ್ಷಿಯಾಗಿತ್ತು. ತನ್ನ ನೆಚ್ಚಿನ ಗೆಳೆಯ ಗೆಳತಿಗೆ ವಿಶ್ ಮಾಡಲು ತಾರಾ ಬಳಗ ಸಾಲು ಗಟ್ಟಿ ರಂಗೇರಿಸಿತ್ತು. ತರುಣ್ ಸೋನಲ್ ಪ್ರೀತಿ ಮದುವೆಗೆ ಆ ವ್ಯಕ್ತಿ ಒಬ್ಬರು ಕಾರಣ ಎಂದು ಪದೇ ಪದೇ ಹೇಳುತ್ತಿದ್ದಾರೆ. ಆ ವ್ಯಕ್ತಿಯಿಂದಲೇ ನಾವಿಬ್ಬರು ಮದುವೆ ಆಗಿದ್ದೇವೆ ಈ ಜೋಡಿ ಹೇಳುತ್ತಾರೆ. ಹಾಗಾದ್ರೆ ಆ ವ್ಯಕ್ತಿ ಯಾರು..? 

Tap to resize

Latest Videos

ತರುಣ್​ - ಸೋನಲ್​ ಮದುವೆ ಹಿಂದಿದೆ ದೊಡ್ಡ ಕಥೆ; ಚುಡಾಯಿಸುತ್ತಿದ್ದ ಆ ವ್ಯಕ್ತಿ ಯಾರು?

ಹೌದು! ಆ ವ್ಯಕ್ತಿ ಬೇರೆ ಯಾರೂ ಅಲ್ಲ ನಟ ದರ್ಶನ್. ರಾಬರ್ಟ್‌ ಸಿನಿಮಾ ಸಮಯದಲ್ಲಿ ಸೋನಲ್‌ ತರುಣ್ ಸುಧೀರ್ ಮತ್ತು ದರ್ಶನ್‌ಗೆ ಪರಿಚಯ ಆಗಿದ್ದು. ಅಲ್ಲಿಂದ ಪ್ರೀತಿ ಹುಟ್ಟಿಲ್ಲ...ಕಾಟೇರ ಸಿನಿಮಾದಲ್ಲೂ ಪ್ರೀತಿ ಹುಟ್ಟಿಲ್ಲ. ಪ್ರೀತಿ ಹುಟ್ಟಿದ್ದು ಜನರಿಂದ ಆಮೇಲೆ ದರ್ಶನ್ ಸಪೋರ್ಟ್‌ಯಿಂದ ಎನ್ನಬಹುದು. ಸೋನಲ್ ಮತ್ತು ತರುಣ್ ಪ್ರೀತಿಸುತ್ತಿದ್ದಾರೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಎಲ್ಲೆಡೆ ಹರಿದಾಡುತ್ತಿತ್ತು ಈ ವಿಚಾರವನ್ನು ಪಾಪ ಈ ಜೋಡಿಗೆ ಗೊತ್ತಿರಲಿಲ್ಲ. ಹೀಗೆ ಒಂದು ದಿನ ಗಾಸಿಪ್‌ ಕಿವಿಗೆ ಬಿತ್ತು ಎಂದು ಚರ್ಚೆ ಮಾಡಲು ಶುರು ಮಾಡುತ್ತಾರೆ ಅಲ್ಲಿಂದ ಸಂಪರ್ಕ ಗಟ್ಟಿಯಾಗುತ್ತದೆ. 

ಬೀಗುತ್ತಿದ್ದ ದರ್ಶನ್‌ ಅಭಿಮಾನಿಗಳಿಗೆ ಉತ್ತರ ಕೊಟ್ಟ 'ಭೀಮಾ'; ಅಖಾಡಕ್ಕೆ ಇಳಿದ ದುನಿಯಾ ವಿಜಯ್!

ದರ್ಶನ್‌ ಮದುವೆಯಲ್ಲಿ ಭಾಗಿಯಾಗದ ಕಾರಣ ಸಂಗೀತಾ ಮತ್ತು ರಿಸೆಪ್ಶನ್‌ನಲ್ಲಿ ದರ್ಸನ್ ಚಿತ್ರಗಳ ಹಾಡುಗಳನ್ನು ಹಾಕಿದ್ದಾರೆ. ಇನ್ನು ತರುಣ್ ಮದುವೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ವಿಶೇಷ ಗೌರವ ಸಲ್ಲಿಸಿದ್ದಾರೆ.

click me!