ಬೀಗುತ್ತಿದ್ದ ದರ್ಶನ್‌ ಅಭಿಮಾನಿಗಳಿಗೆ ಉತ್ತರ ಕೊಟ್ಟ 'ಭೀಮಾ'; ಅಖಾಡಕ್ಕೆ ಇಳಿದ ದುನಿಯಾ ವಿಜಯ್!

By Asianet Kannada  |  First Published Aug 12, 2024, 2:27 PM IST

ಮತ್ತೆ ಬಾಕ್ಸ್‌ ಅಫೀಸ್‌ ಓಪನ್ ಮಾಡಿದ ಕನ್ನಡ ಚಿತ್ರರಂಗ....ಬೀಗುತ್ತಿದ್ದ ಅಭಿಮಾನಿಗಳಿಗೆ ಸಿಕ್ತು ಉತ್ತರ..... 


ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟ-ನಟಿಯರ ಸಿನಿಮಾ ರಿಲೀಸ್ ಅಗುತ್ತಿಲ್ಲ ಅನ್ನೋ ಬೇಸರದಲ್ಲಿ ಇದ್ದ ವೀಕ್ಷಕರಿಗೆ ದುನಿಯಾ ವಿಜಯ್ ನಟನೆಯ ಭೀಮಾ ಸಿನಿಮಾ ಬಿಗ್ ಟ್ರೀಟ್ ಕೊಟ್ಟಿದೆ. ಬಿಡುಗಡೆ ಕಂಡ ದಿನದಿಂದ ಕೋಟಿ ಕೋಟಿ ಬಾಕ್ಸ್‌ ಆಫೀಸ್‌ ಕಲೆಕ್ಷನ್ ಮಾಡುತ್ತಿದೆ. ಮೊದಲನೇ ದಿನವೇ 3 ಕೋಟಿ ಕಲೆಕ್ಷನ್ ಮಾಡಿದ ಸಿನಿಮಾ ಮೂರನೇ ದಿನಕ್ಕೆ 11 ಕೋಟಿಗೆ ಬಂದು ನಿಂತಿದೆ. ಖಂಡಿತಾ 25 ದಿನಗಳ ಯಶಸ್ವಿ ಪ್ರದರ್ಶನ ಕಾಣಲಿದೆ ಎಂದು ಎಲ್ಲೆಡೆ ಸುದ್ದಿಯಾಗುತ್ತಿದೆ. ಈ ಹ್ಯಾಪಿ ನ್ಯೂಸ್ ವಿಚಾರದ ನಡುವೆ ದರ್ಶನ್ ಅಭಿಮಾನಿಗಳು ಕೊಟ್ಟ ಹೇಳಿಕೆನೂ ವೈರಲ್ ಆಗುತ್ತಿದೆ.

ಕೊಲೆ ಪ್ರಕರಣದ ಮೇಲೆ ಪರಪ್ಪನ ಅಗ್ರಹಾರ ಸೇರಿರುವ ದರ್ಶನ್ ಬಿಡುಗಡೆಯಾಗಿ ಬರುವವರೆಗೂ ನಾವು ಯಾವುದೇ ಸಿನಿಮಾ ನೋಡಲ್ಲ ಎಂದು ದರ್ಶನ್ ಅಭಿಮಾನಿಗಳು ಶಪಥ ಮಾಡಿದ್ದರು. ಅದಾದ ಮೇಲೆ ತೆರೆಕಂಡ ಯಾವ ಸಿನಿಮಾನೂ ಓಡಲಿಲ್ಲ ಹೀಗಾಗಿ ಕೆಲವೇ ದಿನಗಳಲ್ಲಿ ಓಟಿಟಿಯಲ್ಲಿ ಬಿಡುಗಡೆ ಕಂಡಿತ್ತು. ದರ್ಶನ್ ಅಭಿಮಾನಿಗಳು ಸಿನಿಮಾಗಳನ್ನು ನೋಡಲು ನಿಲ್ಲಿಸಿದರಿಂದ ಯಾವ ಸಿನಿಮಾನೂ ಚಿತ್ರಮಂದಿರಗಳಲ್ಲಿ ಹೆಚ್ಚಿನ ದಿನ ಓಡುತ್ತಿಲ್ಲ ಅಂತ ಹೇಳಿಕೊಂಡು ಬೀಗುತ್ತಿದ್ದರು. ಆದರೆ ಭೀಮಾ ಎಂಟ್ರಿ ಕೊಟ್ಟ ಮೇಲೆ ಎಲ್ಲರೂ ಮೌನವಾಗಿಬಿಟ್ಟಿದ್ದಾರೆ.

Tap to resize

Latest Videos

undefined

ಇದ್ದಕ್ಕಿದ್ದಂತೆ ಸಣ್ಣಗಾದ ಮೇಘನಾ ಗಾಂವ್ಕರ್; ಬಾಲ್ಕನಿಯಲ್ಲಿ ವರ್ಕೌಟ್ ಮಾಡುತ್ತಿದ್ದ ಫೋಟೋ ಲೀಕ್?

ಹೌದು! ಜನರು ಭೀಮಾ ಸಿನಿಮಾ ನೋಡಲು ಆಸಕ್ತಿ ತೋರಿಸುತ್ತಿದ್ದಾರೆ. ಬಿಡುಗಡೆಯಾಗಿ ಮೂರು ದಿನದಲ್ಲಿ 11 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹಲವು ಜಿಲ್ಲೆಗಳಲ್ಲಿ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ ಟಿಕೆಟ್‌ ಸಿಗದಷ್ಟು ಹೌಸ್‌ಪುಲ್ ಆಗಿದೆ. ಒಬ್ಬ ಸ್ಟಾರ್ ನಟನ ಸಿನಿಮಾವನ್ನು ಮತ್ತೊಬ್ಬ ಸ್ಟಾರ್ ನಟನ ಅಭಿಮಾನಿಗಳು ನೋಡಿವುದು ಕಾಮನ್ ನೋಡೋದೇ ಇಲ್ಲ ಓಡೋದೇ ಇಲ್ಲ ಅನ್ನೋದು ಸುಳ್ಳು ಅಲ್ಲದೆ ಭೀಮಾ ಸಿನಿಮಾದಲ್ಲಿ ಹೊಸ ಕಲಾವಿದರನ್ನು ಸೇರಿಸಿಕೊಂಡು ಮಾಡಿರುವದರಿಂದ ಜನರು ದುಡ್ಡು ಕೊಟ್ಟು ಪ್ರೀತಿಯಿಂದ ಬರುತ್ತಿದ್ದಾರೆ. ಒಳ್ಳೆ ಸಿನಿಮಾ ಬಂದರೆ ಜನರು ಚಿತ್ರಮಂದಿರಕ್ಕೆ ಬಂದೇ ಬರುತ್ತಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. 

ಪುಷ್ಪ 2 ವಿಶೇಷ ಸಾಂಗ್‌ನಲ್ಲಿ ಕನ್ನಡದ ನಟಿ; ಈಕೆಯಿಂದ ರಶ್ಮಿಕಾ ಮಂದಣ್ಣನನ್ನು ಹೊರ ಹಾಕಿದ್ರ ಅಲ್ಲು ಅರ್ಜುನ್?

ಭೀಮಾ ಸಿನಿಮಾ ರಿಲೀಸ್ ಬೆನ್ನಲೆ ಶಿವರಾಜ್‌ಕುಮಾರ್ ನಟನೆಯ ಬೈರತಿ ರಣಗಲ್, ಧ್ರುವ ಸರ್ಜಾ ನಟನೆಯ ಮಾರ್ಟಿನ್ ಮತ್ತು ದಿಗಂತ್ ನಟನೆಯ ಪೌಡರ್ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. 

click me!