ನಾನು ಕೆಜಿಎಫ್ ಹುಡುಗಿ ಎಂದಿರುವ ನಟಿ ಕರೀನಾ ಕಪೂರ್ಗೆ ನಟ ಯಶ್ ಜೊತೆ ನಟಿಸುವ ಆಸೆಯಂತೆ. ಅವರು ಹೇಳಿದ್ದೇನು?
ರಾಕಿಂಗ್ ಸ್ಟಾರ್ ಯಶ್ (Yash) ಇಂದು ಕನ್ನಡ ಮಾತ್ರವಲ್ಲದೇ ವಿಶ್ವ ಮಟ್ಟದಲ್ಲಿಯೂ ಬೆಳೆದು ನಿಂತಿದ್ದಾರೆ. ಕೆಜಿಎಫ್ ಚಿತ್ರದ ಮೂಲಕ ಸ್ಯಾಂಡಲ್ವುಡ್ ಸಿನಿಮಾ ಮಾರುಕಟ್ಟೆಯನ್ನು ರಾಷ್ಟ್ರವ್ಯಾಪಿ ವಿಸ್ತರಿಸಿದ ಯಶ್, ನ್ಯಾಷನಲ್ ಸ್ಟಾರ್ ಆಗಿ ಹೊಮ್ಮಿದ್ದಾರೆ. ಈ ಮೂಲಕ ಸ್ಯಾಂಡಲ್ವುಡ್ನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೆಳೆದು ನಿಂತಿರುವ ನಟ ಯಶ್, ದೇಶ ಮಾತ್ರವಲ್ಲದೇ ವಿದೇಶದಲ್ಲಿಯೂ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಚಿತ್ರರಂಗದಲ್ಲಿ ಈ ಮಟ್ಟಕ್ಕೆ ಏರುವುದು ಸುಲಭದ ಮಾತಲ್ಲ. ಅದರಲ್ಲಿಯೂ ಯಾವುದೇ ಗಾಡ್ ಫಾದರ್ ಇಲ್ಲದೇ ಇಂಥದ್ದೊಂದು ಯಶಸ್ಸು ಗಳಿಸುವುದು ಹಲವರಿಗೆ ಕನಸಿನ ಮಾತೇ. ನುರಿತ ಕೌಶಲ, ಅದ್ಭುತ ಅಭಿನಯದ ಪ್ರತಿಭೆ ಏನೇ ಇದ್ದರೂ ಎಷ್ಟೋ ಮಂದಿಗೆ ಚಿತ್ರರಂಗಕ್ಕೆ ಎಂಟ್ರಿ ಸಿಗುವುದೇ ಕಷ್ಟ. ಒಂದೇ ಗಾಡ್ ಫಾದರ್ ಇರಬೇಕು ಇಲ್ಲವೇ ಸ್ಟಾರ್ ಕಿಡ್ ಆಗಿರಬೇಕು ಎನ್ನುವ ಸ್ಥಿತಿ ಇದೆ. ಆದರೆ ನಟ ಯಶ್ ಅವರು ಕಷ್ಟದಿಂದ ಹಂತಹಂತವಾಗಿ ಮೇಲೆ ಬಂದವರು.
ಅವರ ಕೆಜಿಎಫ್ ಸರಣಿ ಸಿನಿಮಾಗಳು ಬಂದು ಹೋಗಿ ಒಂದೂವರೆ ವರ್ಷ ಕಳೆದರೂ ಅದರ ಕ್ರೇಜ್ ಕಮ್ಮಿಯಾಗಿಲ್ಲ. ಯಶ್-19ಗಾಗಿ ಫ್ಯಾನ್ಸ್ ಕಾಯುತ್ತಿರುವುದು ಒಂದೆಡೆಯಾದರೆ, ಕೆಜಿಎಫ್ ಗುಂಗಿನಲ್ಲಿಯೇ ಅವರ ಫ್ಯಾನ್ಸ್ ಇದ್ದಾರೆ. ಸದ್ಯ ಹೊಂಬಾಳೆ ಸಂಸ್ಥೆಯ 'ಸಲಾರ್' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಚಿತ್ರದಲ್ಲಿ ಯಶ್ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ ಎನ್ನಲಾಗುತ್ತಿದ್ದರೂ ಈ ಬಗ್ಗೆ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಇದರ ನಡುವೆಯೇ ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ ಯಶ್ ಕುರಿತು ಮಾತನಾಡಿದ್ದಾರೆ.
ಮಕ್ಕಳು ಬೇಕಂತ ಸೈಫ್ನ ಮದ್ವೆಯಾದೆ... ಇಲ್ಲದಿದ್ರೆ... ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟ ಕರೀನಾ ಕಪೂರ್!
ಕಾಫಿ ವಿತ್ ಕರಣ್ ಷೋನಲ್ಲಿ ಇದಾಗಲೇ ಹಲವಾರು ಚಿತ್ರತಾರೆಯರು ಬಂದು ಹೋಗಿದ್ದಾರೆ. ಅವರಲ್ಲಿ ಈಗ ಕರೀನಾ ಕಪೂರ್ ಅವರೂ ಕಾಣಿಸಿಕೊಂಡಿದ್ದರು. ಆಲಿಯಾ ಭಟ್ ಕೂಡ ಕರೀನಾ ಜೊತೆ ಬಂದಿದ್ದರು. ಈ ಸಂದರ್ಭದಲ್ಲಿ ಇಬ್ಬರಿಗೂ ಕರಣ್ ಅವರು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ರ್ಯಾಪಿಡ್ ಫೈರ್ (Rapid Fire) ರೌಂಡ್‌ನಲ್ಲಿ ಸೌತ್ ಸ್ಟಾರ್ ನಟರಲ್ಲಿ ಯಾರೊಟ್ಟಿಗೆ ನಟಿಸೋಕೆ ಇಷ್ಟ ಎನ್ನುವ ಪ್ರಶ್ನೆಗೆ ಕರೀನಾ ಅವರು ಯಶ್ ಅವರ ಹೆಸರು ಹೇಳಿದ್ದಾರೆ. ಆ ಪೈಕಿ, ಸೌತ್‌ನ ಯಾವ ಸ್ಟಾರ್ ಜತೆಗೆ ನೀವು ಜೋಡಿಯಾಗಿ ನಟಿಸಲು ಬಯಸುತ್ತೀರಿ? ಎಂದು ಕರಣ್ ಪ್ರಶ್ನೆ ಮಾಡಿದ್ದಾರೆ. ಆಯ್ಕೆ ರೂಪದಲ್ಲಿ ಪ್ರಭಾಸ್, ರಾಮ್ ಚರಣ್, ವಿಜಯ್ ದೇವರಕೊಂಡ, ಅಲ್ಲು ಅರ್ಜುನ್, ಯಶ್ ಅವರ ಹೆಸರನ್ನು ಸೂಚಿಸಿದ್ದಾರೆ. ಇವುಗಳ ಪೈಕಿ ಯಶ್ ಹೆಸರನ್ನು ಆಯ್ದುಕೊಂಡ ಕರೀನಾ, ನಾನು ಕೆಜಿಎಫ್ ಹುಡುಗಿ ಎಂದಿದ್ದಾರೆ. ಅದಕ್ಕೆ ನಿಮ್ಮನ್ನು ನೀವು ಕೆಜಿಎಫ್ ಹುಡುಗಿ ಎನ್ನುತ್ತೀರಾ ಎಂದು ಇನ್ನೊಮ್ಮೆ ಕರಣ್ ಕೇಳಿದಾಗ, ಹೌದು ಎಂದು ಕರೀನಾ ಹೇಳಿದ್ದಾರೆ.
ನಾನು ಕೆಜಿಎಫ್ ಸಿನಿಮಾ ನೋಡಿದ್ದೇನೆ. ಈ ಚಿತ್ರ ನನಗೆ ಇಷ್ಟವಾಗಿದೆ. ನಾನು ಕೆಜಿಎಫ್ ಗರ್ಲ್, ಕೆಜಿಎಫ್ ಸಿನಿಮಾ ಹೀರೋ ಯಶ್ ಜೊತೆಗೆ ನಾನು ಪೇರ್ ಆಗಲು ಇಷ್ಟ ಪಡುತ್ತೇನೆ ಎಂದು ಕರೀನಾ ಹೇಳಿದ್ದಾರೆ. ಈ ವಿಡಿಯೋ ಸಕತ್ ವೈರಲ್ ಆಗಿದ್ದು, ಯಶ್ ಫ್ಯಾನ್ಸ್ ಸಕತ್ ಖುಷಿಯಾಗಿದ್ದಾರೆ. ಇನ್ನು ಯಶ್ ಅವರು ಸದ್ಯ ಮೌನವಾಗಿದ್ದಾರೆ. ಅವರ ಸಿನಿಮಾ ವಿಚಾರಕ್ಕೆ ಬಂದರೆ, ಕೆಜಿಎಫ್ ಸಿನಿಮಾ ಬಳಿಕ ನಟ ಯಶ್ ಮುಂದಿನ ಸಿನಿಮಾ ಯಾವುದು ಎಂಬ ಬಗ್ಗೆ ಸಣ್ಣ ಸುಳಿವೂ ಸಿಕ್ಕದೇ ಫ್ಯಾನ್ಸ್ ಬೇಸರದಿಂದ ಇದ್ದಾರೆ. ರಾಕಿಂಗ್ ಸ್ಟಾರ್ ಅವ್ರನ್ನು ಸಿನಿಮಾದಲ್ಲಿ ನೋಡಲು ಕಾಯುತ್ತಿದ್ದಾರೆ. ಇನ್ನು ಕರಿನಾ ಕಪೂರ್ ಅವರ ಕುರಿತು ಹೇಳುವುದಾದರೆ, ಸೆಪ್ಟೆಂಬರ್‌ನಲ್ಲಿ ಜಾನೇ ಜಾನ್ ಸಿನಿಮಾ ಮೂಲಕ ನೆಟ್‌ಪ್ಲಿಕ್ಸ್‌ಗೆ ಎಂಟ್ರಿಕೊಟ್ಟಿದ್ದ ಕರೀನಾ, ದಿ ಬಕಿಂಗ್‌ಹ್ಯಾಮ್ ಮರ್ಡರ್ಸ್ ಸಿನಿಮಾದಲ್ಲಿ ನಟಿಸಿದ್ದಾರೆ. ಜತೆಗೆ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ.
ಭಾರತ ವಿಶ್ವಕಪ್ ಗೆದ್ರೆ ಈ ನಟಿ ಬೆತ್ತಲಾಗ್ತಾರಂತೆ! ಮುಂದೇನು ಮಾಡ್ತಾರೆಂದು ಹೇಳಿದ್ದಾರೆ ಕೇಳಿ...