
ಸ್ಯಾಂಡಲ್‌ವುಡ್‌ನಲ್ಲಿ ಗಾಯಕ, ಯುವ ಸಂಗೀತ ನಿರ್ದೇಶಕ, ನಟ ವಾಸುಕಿ ವೈಭವ್ ಅವರು ಇಂದು (ನವೆಂಬರ್ 16) ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬಹುಕಾಲದ ಗೆಳತಿ ಬೃಂದಾ ವಿಕ್ರಮ್ ಜೊತೆ ಅವರು ಹಸೆಮಣೆ ಏರುತ್ತಿದ್ದಾರೆ. ಕೇವಲ ಕುಟುಂಬದವರು, ಆಪ್ತರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಮದುವೆ ಕಾರ್ಯಗಳು ನಡೆಯುತ್ತಿವೆ. ಹೆಚ್ಚು ಆಡಂಬರ ಇಲ್ಲದೇ, ಸಂಪ್ರದಾಯ ಬದ್ಧವಾಗಿ ವಾಸುಕಿ ವೈಭವ್ ಮತ್ತು ಬೃಂದಾ ವಿಕ್ರಮ್ ಅವರು ಮದುವೆ ಆಗುತ್ತಿದ್ದಾರೆ. ಹೊಸ ಜೀವನ ಆರಂಭಿಸುತ್ತಿರುವ ಈ ಜೋಡಿಗೆ ಎಲ್ಲರೂ ಶುಭ ಹಾರೈಸುತ್ತಿದ್ದಾರೆ.
ವಾಸುಕಿ ವೈಭವ್ ಮತ್ತು ಬೃಂದಾ ವಿಕ್ರಮ್ ಅವರು ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಬೃಂದಾ ವಿಕ್ರಮ್ ಅವರು ರಂಗಭೂಮಿ ಹಿನ್ನೆಲೆ ಹೊಂದಿದ್ದಾರೆ. ಶಿಕ್ಷಕಿ ಆಗಿಯೂ ಅವರು ಕೆಲಸ ಮಾಡುತ್ತಿದ್ದಾರೆ. ಹೆಚ್ಚಾಗಿ ಅವರು ಮಾಧ್ಯಮಗಳ ಎದುರು ಕಾಣಿಸಿಕೊಂಡಿಲ್ಲ. ವಾಸುಕಿ ಮತ್ತು ಬೃಂದಾ ಅವರು ತಮ್ಮ ಪ್ರೀತಿಯ ಬಗ್ಗೆ ಸಾರ್ವಜನಿಕವಾಗಿ ಹೆಚ್ಚೇನೂ ಹೇಳಿಕೊಂಡಿರಲಿಲ್ಲ. ಈಗ ಅವರು ಬದುಕಿನ ಪ್ರಮುಖ ಘಟ್ಟಕ್ಕೆ ಬಂದಿದ್ದಾರೆ. ಚಿತ್ರರಂಗದಲ್ಲಿ ಬ್ಯುಸಿ ಆಗಿರುವ ವಾಸುಕಿ ವೈಭವ್ ಅವರು ವೈವಾಹಿಕ ಜೀವನ ಆರಂಭಿಸಿದ್ದಾರೆ.
ಮೇಕಪ್ ಇಲ್ಲ, ಲಿಪ್‌ಸ್ಟಿಕ್ಕೂ ಇಲ್ಲ: ಲಂಗ ದಾವಣಿಯಲ್ಲಿ ಥೇಟ್ ಹಳ್ಳಿ ಹುಡುಗಿಯಾದ ಮಗಳು ಜಾನಕಿ!
ಬೃಂದಾ ವಿಕ್ರಮ್ ರೀತಿಯೇ ವಾಸುಕಿ ವೈಭವ್ ಕೂಡ ರಂಗಭೂಮಿಯಲ್ಲಿ ಅನುಭವ ಗಳಿಸಿದ್ದಾರೆ. ನಂತರ ಚಿತ್ರರಂಗದಲ್ಲಿ ವಾಸುಕಿ ವೈಭವ್ ಅವರಿಗೆ ಅವಕಾಶಗಳು ಸಿಕ್ಕವು. 'ಬಿಗ್ ಬಾಸ್ ಕನ್ನಡ' ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ ಬಳಿಕ ಅವರ ಖ್ಯಾತಿ ಹೆಚ್ಚಾಯಿತು. ಗಾಯಕನಾಗಿ, ಸಂಗೀತ ನಿರ್ದೇಶಕನಾಗಿ ಮಾತ್ರವಲ್ಲದೇ ನಟನಾಗಿಯೂ ಅವರು ಬೇಡಿಕೆ ಹೆಚ್ಚಿಸಿಕೊಂಡರು. ಇತ್ತೀಚೆಗೆ ರಿಲೀಸ್ ಆದ 'ಟಗರು ಪಲ್ಯ' ಸಿನಿಮಾಗೆ ಸಂಗೀತ ನಿರ್ದೇಶನ ಮಾಡುವುದರ ಜೊತೆಗೆ ಒಂದು ಮುಖ್ಯವಾದ ಪಾತ್ರಕ್ಕೂ ಅವರು ಬಣ್ಣ ಹಚ್ಚಿದ್ದಾರೆ. ಮದುವೆ ಸಲುವಾಗಿ ಅವರು ಸಣ್ಣ ಬ್ರೇಕ್ ಪಡೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.