ಪುನೀತ್ ರಾಜ್‌ಕುಮಾರ್ ಜನ್ಮದಿನ ಇನ್ಮುಂದೆ 'ಸ್ಫೂರ್ತಿ ದಿನ'; ಸಿಎಂ ಬೊಮ್ಮಾಯಿ ಘೋಷಣೆ

Published : Sep 16, 2022, 03:38 PM ISTUpdated : Sep 16, 2022, 03:39 PM IST
ಪುನೀತ್ ರಾಜ್‌ಕುಮಾರ್ ಜನ್ಮದಿನ ಇನ್ಮುಂದೆ 'ಸ್ಫೂರ್ತಿ ದಿನ'; ಸಿಎಂ ಬೊಮ್ಮಾಯಿ ಘೋಷಣೆ

ಸಾರಾಂಶ

ಯುವಕರ ಪಾಲಿಗೆ ಸ್ಪೂರ್ತಿಯಾಗಿದ್ದ ಪುನೀತ್ ರಾಜ್ ಕುಮಾರ್ ಅವರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಅತ್ಯುನ್ನತ ಗೌರವ ಸಿಗುತ್ತಿದೆ. ಅವರ ಜನ್ಮ ದಿನವಾದ ಮಾರ್ಚ್ 17ನ್ನು ಇನ್ನು ಮುಂದೆ ಸ್ಫೂರ್ತಿ ದಿನವಾಗಿ ಸರ್ಕಾರದ ವತಿಯಿಂದ ಆಚರಿಸಲು ಸರ್ಕಾರ ನಿರ್ಧರಿಸಿದೆ

ಅಕ್ಟೋಬರ್ 29 ಬಂದರೆ ಪವರ್ ಸ್ಟಾರ್  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಒಂದು ವರ್ಷ ಕಳೆಯಲಿದೆ. ಆದರೂ ಅವರ ನೆನಪು ಮಾತ್ರ ಕೊಂಚವು ಮಾಸಿಲ್ಲ. ಕನ್ನಡಿಗರ ಮನೆ ಮನಗಳಲ್ಲಿ ಅವರು ಚಿರಸ್ಥಾಯಿಯಾಗಿ ನೆಲೆಸಿದ್ದಾರೆ. ಪುನೀತ್ ಸಾಕ್ಷಾತ್ ದೇವರಾಗಿದ್ದಾರೆ. ಅಭಿಮಾನಿಗಳು ಅಪ್ಪು ಫೋಟೋ ಇಟ್ಟು ಪೂಜಿಸುತ್ತಿದ್ದಾರೆ. ಅಪ್ಪು ಹೆಸರಲ್ಲಿ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದಾರೆ. ವೈಯಕ್ತಿಕ ಹಾಗೂ ಸಾಮಾಜಿಕ ಕಾರ್ಯಗಳಿಂದಾಗಿ ದೇಶದೆಲ್ಲೆಡೆ ಅಪಾರ ಜನರ ಪ್ರೀತಿ ಗಳಿಸಿದ್ದ ಪುನೀತ್ ರಾಜ್ ಕುಮಾರ್ ಅವರಿಗೆ ಸರ್ಕಾರ ಹಾಗೂ ಸಂಘ ಸಂಸ್ಥೆಗಳಿಂದ ಗೌರವಗಳು ಮುಂದುವರೆದಿವೆ.

ಯುವಕರ ಪಾಲಿಗೆ ಸ್ಪೂರ್ತಿಯಾಗಿದ್ದ ಪುನೀತ್ ರಾಜ್ ಕುಮಾರ್ ಅವರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಅತ್ಯುನ್ನತ ಗೌರವ ಸಿಗುತ್ತಿದೆ.  ಅವರ ಜನ್ಮ ದಿನವಾದ ಮಾರ್ಚ್ 17ನ್ನು ಇನ್ನು ಮುಂದೆ ಸ್ಫೂರ್ತಿ ದಿನವಾಗಿ ಸರ್ಕಾರದ ವತಿಯಿಂದ ಆಚರಿಸಲು ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಘೋಷಿಸಿದ್ದಾರೆ. 

ಮಾರ್ಚ್‌ 17 ಪುನೀತ್ ರಾಜ್ ಕುಮಾರ್ ಅವರ ಹುಟ್ಟಿದ ದಿನ. ಸಿನಿಮಾಗಳ ಹೊರತಾಗಿ ಬದುಕಿನಲ್ಲಿ ಮೌಲ್ಯಯುತವಾಗಿ, ಸಮಾಜಮುಖಿಯಾಗಿ, ಲಕ್ಷಾಂತರ ಮಂದಿಗೆ ಸ್ಫೂರ್ತಿಯಾಗಿದ್ದ ಪುನೀತ್ ಹಠಾತ್ ನಿಧನ ಅಭಿಮಾನಿಗಳು ಇನ್ನು ಅರಗಿಸಿಕೊಂಡಿಲ್ಲ. ಇದೀಗ ಪುನೀತ್ ಹುಟ್ಟುಹಬ್ಬದ ದಿನವನ್ನು ಸ್ಫೂರ್ತಿ ಮಾಡುತ್ತಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. 

ದುಬೈ ಸೇರಿದ ಪುನೀತ್ ರಾಜ್‌ಕುಮಾರ್ ಫೇವರಿಟ್ ಲ್ಯಾಂಬೋರ್ಘಿನಿ ಕಾರು

ಈ ಕುರಿತು ಟ್ವೀಟ್ ಮಾಡಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್, ಅಪ್ಪು ಜನ್ಮದಿನ, ಮಾರ್ಚ್ 17  ಇನ್ನು ಮುಂದೆ   ಸ್ಪೂರ್ತಿ ದಿನವೆಂದು ಆಚರಿಸುವ ಮೂಲಕ ನಾಡಿನ ಲಕ್ಷಾಂತರ ಯುವಕರಿಗೆ ಸ್ಫೂರ್ತಿಯಾಗಲಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜನ್ಮದಿನವನ್ನು ಸ್ಫೂರ್ತಿ ದಿನ ಎಂದು ಸರಕಾರದ ವತಿಯಿಂದಲೇ ನಡೆಸಬೇಕೆಂಬ ನನ್ನ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದ ಎಂದು ಹೇಳಿದ್ದಾರೆ. 

ಅಪ್ಪು ಅವರನ್ನ ತಬ್ಬಿಕೊಂಡ ಲಕ್ಕಿಮ್ಯಾನ್‌ ನೀವು ಅಂತ ಜನ ತಬ್ಕೊಳ್ತಾರೆ: ಡಾರ್ಲಿಂಗ್‌ ಕೃಷ್ಣ

ಇನ್ನು ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಜನ್ಮದಿನವನ್ನು 'ಸ್ಪೂರ್ತಿ ದಿನ' ಎಂದು ಆಚರಿಸುತ್ತಿರುನಿರ್ಣಯಕ್ಕೆ ಧನ್ಯವಾದ ತಿಳಿಸಿದ್ದಾರೆ. ಕೋಟ್ಯಂತರ ಅಭಿಮಾನಿಗಳ, ಅಪ್ಪು, ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಜನ್ಮದಿನವನ್ನು 'ಸ್ಪೂರ್ತಿ ದಿನ' ಆಚರಿಸುವುದಾಗಿ ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ಮಾಡಿದ ಪ್ರಕಟಣೆ ಶ್ಲಾಘನೀಯ. ಕಲಾಸೇವೆಯೊಂದಿಗೆ ಸಮಾಜ ಸೇವೆ ಮಾಡಿದ ಶ್ರೀ ಪುನೀತ್‌ ಅವರಿಗೆ ಇದು ಉತ್ತಮ ಗೌರವ' ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಕೂ ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ