ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ Me Too ಸದ್ದು; ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ 'ರೋಡ್ ರೋಮಿಯೋ' ನಟಿ ಆಶಿತಾ

Published : Sep 16, 2022, 01:43 PM ISTUpdated : Sep 16, 2022, 02:17 PM IST
ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ Me Too ಸದ್ದು; ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ 'ರೋಡ್ ರೋಮಿಯೋ' ನಟಿ ಆಶಿತಾ

ಸಾರಾಂಶ

ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಮೀ ಟೂ ಸದ್ದು ಮಾಡುತ್ತಿದೆ. ಈಗಾಗಲೇ ನಟಿ ಶ್ರುತಿ ಹರಿಹರನ್ ಸೇರಿದಂತೆ ಕೆಲವು ನಟಿಯರು ಮೀ ಟೂ ಬಾಂಬ್ ಸಿಡಿಸಿದ್ದರು. ಇದೀಗ ಮತ್ತೋರ್ವ ಕನ್ನಡದ ನಟಿ ಮೀ ಟೂ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ತನಗೂ ಕೆಟ್ಟ ಅನುಭವವಾಗಿತ್ತು ಎಂದು ಬಹಿರಂಗ ಪಡಿಸಿದ್ದಾರೆ. ಸ್ಯಾಂಡಲ್ ವುಡ್ ನ ಕರಾಳ ಮುಖ ಬಿಚ್ಚಿಟ್ಟ ನಟಿ ಮತ್ಯಾರು ಅಲ್ಲ ಬಾ ಬಾರೋ ರಸಿಕ ಖ್ಯಾತಿಯ ನಟಿ ಆಶಿತಾ.

ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಮೀ ಟೂ ಸದ್ದು ಮಾಡುತ್ತಿದೆ. ಈಗಾಗಲೇ ನಟಿ ಶ್ರುತಿ ಹರಿಹರನ್ ಸೇರಿದಂತೆ ಕೆಲವು ನಟಿಯರು ಮೀ ಟೂ ಬಾಂಬ್ ಸಿಡಿಸಿದ್ದರು. ಇದೀಗ ಮತ್ತೋರ್ವ ಕನ್ನಡದ ನಟಿ ಮೀ ಟೂ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ತನಗೂ ಕೆಟ್ಟ ಅನುಭವವಾಗಿತ್ತು ಎಂದು ಬಹಿರಂಗ ಪಡಿಸಿದ್ದಾರೆ. ಸ್ಯಾಂಡಲ್ ವುಡ್ ನ ಕರಾಳ ಮುಖ ಬಿಚ್ಚಿಟ್ಟ ನಟಿ ಮತ್ಯಾರು ಅಲ್ಲ ಬಾ ಬಾರೋ ರಸಿಕ ಖ್ಯಾತಿಯ ಆಶಿತಾ. ಅನೇಕ ಸಿನಿಮಾಗಳಲ್ಲಿ ಮಿಂಚಿರುವ ನಟಿ ಆಶಿತಾ ಸದ್ಯ ಚಿತ್ರರಂಗದಿಂದ ದೂರ ಇದ್ದಾರೆ. ಇದೀಗ ಅನೇಕ ವರ್ಷದ ಬಳಿಕ ಮತ್ತೆ ಕ್ಯಾಮರಾ ಮುಂದೆ ಬಂದಿರುವ ಆಶಿತಾ ಚಿತ್ರರಂಗದ ಕರಾಳಮುಖ ಬಹಿರಂಗ ಪಡಿಸಿದ್ದಾರೆ. ರಘುರಾಮ್ ಅವರ ಯೂಬ್ಯೂಬ್ ವಾಹಿನಿ ಜೊತೆ ಮಾತನಾಡಿದ ನಟಿ ಆಶಿತಾ ಸಾಕಷ್ಟು ವಿಚಾರಗಳನ್ನ ರಿವೀಲ್ ಮಾಡಿದ್ದಾರೆ. ಸಿನಿಮಾರಂಗದಿಂದ ದೂರ ಉಳಿಯಲು ಪ್ರಮುಖ ಕಾರಣ ಕೆಟ್ಟ ಅನುಭವವಾಗಿರುವುದು ಎಂದು ನೇರವಾಗಿ ಹೇಳಿದ್ದಾರೆ. 

ಸಿನಿಮಾ ರಂಗದಿಂದ ದೂರವಾಗಿದ್ದಕ್ಕೆ ನನಗೇನೂ ಬೇಸರವಿಲ್ಲ ಎಂದಿರುವ ನಟಿ ಆಶಿತಾ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡ ಮೇಲೂ ಕೆಟ್ಟ ಅನುಭವಗಳು ಆದವು ಎಂದಿದ್ದಾರೆ. ಸಿನಿಮಾ ಪಯಣ ಪ್ರಾರಂಭ ಆದಾಗ ಅಂತ ಕೆಟ್ಟ ಸಮಸ್ಯೆ ಆಗಿಲ್ಲ. ಸಿನಿಮಾರಂಗದಲ್ಲಿ ಗುರುತಿಸಿಕೊಂಡ ಬಳಿಕ ತನಗೆ ಕೆಟ್ಟ ಅನುಭವವಾಯಿತು ಎಂದು ಹೇಳಿದರು. ಅದಕ್ಕೆಲ್ಲ ನಾನು ಆಸ್ಪದ ಕೊಡಲಿಲ್ಲ. ನನಗೆ ಅಂತ ಅವಕಾಶ ಬೇಕಾಗಿರಲಿಲ್ಲ. ಆ ನಿರ್ದೇಶಕರ ಹೆಸರು ಹೇಳುವುದು ಬೇಡ, ಅವರು ತನ್ನೊಂದಿಗೆ ನನ್ನನ್ನು ಸಲುಗೆಯಿಂದ ಇರಲು ಹೇಳಿದರು. ಅದಕ್ಕೆ ಒಪ್ಪದಾಗ ಏನಲ್ಲ ಅವಮಾನಗಳನ್ನು ಮಾಡಿದ್ದರು. ಟೇಕ್ ಚೆನ್ನಾಗಿ ಬಂದರೂ, ಮತ್ತೆ ರಿಟೇಕ್ ಮಾಡಿಸುತ್ತಿದ್ದರು. ಇದೆಲ್ಲದರಿಂದ ನಾನು ಬೇಸತ್ತಿದ್ದೆ' ಎಂದು ಆಶಿತಾ ಅನೇಕ ವರ್ಷಗಳ ಬಳಿಕ ಬಹಿರಂಗ ಪಡಿಸಿದ್ದಾರೆ. 

ಲೈಂಗಿಕ ಕಿರುಕುಳ ಅರೋಪ ಎದುರಿಸಿದ ಬಾಲಿವುಡ್‌ನ ಸೆಲೆಬ್ರೆಟಿಗಳು!

'ಸರ್, ಸರ್, ಸರ್ ಅನ್ನಬೇಕು, ಮೆಸೇಜ್ ಮಾಡಬೇಕು, ಹಾಯ್ ಅಂತ ಹೇಳ್ತಾ ಇರಬೇಕು ಇದನ್ನೆಲ್ಲ ನಾನು ಮಾಡ್ತಾ ಇರ್ಲಿಲ್ಲ ಅಂತ ಎಷ್ಟು ಕಷ್ಟ ಕೊಟ್ಟಿದ್ದಾರೆ ಎಂದರೆ ಅಷ್ಟು ಕೊಟ್ಟಿದ್ದಾರೆ. ಇದು ನನ್ನ ಜೀವನದಲ್ಲಿ ಪೀಕ್ ನಲ್ಲಿ ಇದ್ದಾಗ ಆಗಿದ್ದು. ದೊಡ್ಡ ದೊಡ್ಡ ಕಲಾವಿದರ ಜೊತೆ ಕೆಲಸ ಮಾಡಿದಾಗ ನನಗೆ ಏನು ಆಗಿರ್ಲಿಲ್ಲ. ಹೊಸಬರು ಜೊತೆ ಕೆಲಸ ಮಾಡುವಾಗ ಇಂಥ ಕೆಟ್ಟ ಅನುಭವವಾಗಿದೆ' ಎಂದು ಹೇಳಿದ್ದಾರೆ.    

ಈಗಲೂ ನಟಿಸುವ ಆಸಕ್ತಿ ಇದೆ ಎಂದಿರುವ ನಟಿ ಆಶಿತಾ ಉತ್ತಮ ಪಾತ್ರ ಸಿಕ್ಕರೆ ಬರುವುದಾಗಿ ಹೇಳಿದ್ದಾರೆ. 'ಸಿನಿಮಾ ರಂಗದಲ್ಲಿ ಗುರುತಿಸಿಕೊಂಡ ನನ್ನಂತವಳಿಗೆ ಹೀಗಾಗಿರುವಾಗ, ಇನ್ನು ಹೊಸ ಹುಡುಗಿಯರು ಎಷ್ಟು ಕಷ್ಟ ಪಟ್ಟಿದ್ದಾರೋ ಗೊತ್ತಿಲ್ಲ. ಈಗಲೂ ನನಗೆ ನಟಿಸುವುದಕ್ಕೆ ಆಸಕ್ತಿ ಇದೆ. ಆದರೆ, ನನಗೆ ಟೀಮ್ ಇಷ್ಟವಾಗಬೇಕು ಮತ್ತು ನನಗೊಪ್ಪುವ ಪಾತ್ರ ಸಿಗಬೇಕು' ಎಂದು ಹೇಳಿದರು. 

ಹಣ ಬೇಕಂದ್ರೆ 'Compromise'ಆಗಿ ಎಂದು ನಟಿಗೆ ಟಾಂಗ್‌ ಕೊಟ್ಟ ಖ್ಯಾತ ನಿರ್ದೇಶಕ!

ರೋಡ್ ರೊಮಿಯೋ ಸಿನಿಮಾ ಬಳಿಕ ಆಶಿತಾ ಮತ್ತೆ ಸಿನಿಮಾ ಮಾಡಿಲ್ಲ. ಉತ್ತಮ ಪಾತ್ರ ಸಿಕ್ಕಿದರೂ ಸಹ ಆಶಿತಾ ಸಿನಿಮಾಗಳಲ್ಲಿ ನಟಸಿಲ್ಲ. ಸದ್ಯ ಸಿನಿಮಾರಂಗದಿಂದ ದೂರ ಇರುವ ಆಶಿತಾ ಮತ್ತೆ ಬಣ್ಣ ಹಚ್ಚುತ್ತಾರಾ, ಯಾವ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ ಎಂದು ಕಾದು ನೋಡಬೇಕಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಕಾಂತಾರ 1' ಚೆಲುವೆ ರುಕ್ಮಿಣಿ ವಸಂತ್ ಹುಟ್ಟುಹಬ್ಬ; ಈ 'ಬೀರಬಲ್' ನಟಿ ಬಗ್ಗೆ ಅದೆಷ್ಟೋ ಸಂಗತಿಗಳು ನಿಮಗೆ ಗೊತ್ತೇ ಇಲ್ಲ!
ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?