ಯಶ್​ ಜೊತೆ ಏನೇನು ಮಾಡ್ಬೇಕೆಂಬ ಮನದಾಸೆ ತೆರೆದಿಟ್ಟ ಬೋಲ್ಡ್​ ನಟಿ ಚೈತ್ರಾ ಆಚಾರ್​

Published : Sep 23, 2024, 12:02 PM ISTUpdated : Sep 23, 2024, 12:04 PM IST
ಯಶ್​ ಜೊತೆ ಏನೇನು ಮಾಡ್ಬೇಕೆಂಬ ಮನದಾಸೆ  ತೆರೆದಿಟ್ಟ ಬೋಲ್ಡ್​ ನಟಿ ಚೈತ್ರಾ ಆಚಾರ್​

ಸಾರಾಂಶ

ಚಿತ್ತಾರ ರೈಸಿಂಗ್​ ಸ್ಟಾರ್​ ಅವಾರ್ಡ್​ ಪಡೆದುಕೊಂಡಿರೋ ನಟಿ, ಗಾಯಕಿ ಚೈತ್ರಾ ಜೆ. ಆಚಾರ್​ ಅವರು ಯಶ್​ ಜೊತೆ ನಟಿಸುವ ಆಸೆ ವ್ಯಕ್ತಪಡಿಸುತ್ತಲೇ ಹೇಳಿದ್ದೇನು?  

ಗಾಯಕಿಯಾಗಿ, ನಟಿಯಾಗಿ ಮಿಂಚುತ್ತಿರುವ ಚೈತ್ರಾ ಜೆ. ಆಚಾರ್​ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದು ಮಾಡುತ್ತಿರುವುದಕ್ಕೆ ಕಾರಣ ಅವರ ಬೋಲ್ಡ್​ ಫೋಟೋಶೂಟ್​ನಿಂದಾಗಿ. ಅತ್ಯಂತ ಕಡಿಮೆ ಬಟ್ಟೆ ಹಾಕಿಕೊಂಡು ದಿನನಿತ್ಯವೂ ಟ್ರೋಲ್​ ಆಗುತ್ತಲೇ ಸೋಷಿಯಲ್​ ಮೀಡಿಯಾದಲ್ಲಿ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದಾರೆ ಚೈತ್ರಾ. ದೊಡ್ಡ ದೊಡ್ಡ ಸಮಾರಂಭಗಳಲ್ಲಿಯೂ ಅಭಿಮಾನಿಗಳಿಗೂ ತೀರಾ ಮುಜುಗರ, ಶಾಕಿಂಗ್​ ಆಗುವಂಥ ಬಟ್ಟೆ ಧರಿಸುವುದು ಈಕೆಗೆ ಈಗ ಮಾಮೂಲಾಗಿದೆ. ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿರೋ ನಟಿ, ಇಂಥ ಬಟ್ಟೆ ತೊಟ್ಟು ಬಿಂದಾಸ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ನಟಿ, ‘ಮಾರ್ನಮಿ’ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಕಿರುತೆರೆ ನಟ ರಿತ್ವಿಕ್‌ ನಾಯಕನಾಗಿರುವ ಈ ಸಿನಿಮಾದ ಟೀಸರ್​ ಈಚೆಗೆ ಬಿಡುಗಡೆಯಾಗಿದೆ.  ರಿಶಿತ್ ಶೆಟ್ಟಿ ಈ ಚಿತ್ರದ ನಿರ್ದೇಶಕರು. ಶಿಲ್ಪಾ ನಿಶಾಂತ್ ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ರಿಶಿತ್‌, ‘ಕರಾವಳಿ ಭಾಗದ ಹುಲಿವೇಷದ ಹಿನ್ನೆಲೆ ಹಾಗೂ ಹುಲಿವೇಷದ ಸಂಸ್ಕೃತಿಯ ಎಳೆ ಚಿತ್ರದಲ್ಲಿದೆ. ಇದೊಂದು ಲವ್‌ಸ್ಟೋರಿ. ಆ್ಯಕ್ಷನ್, ಎಮೋಷನ್, ಕಾಮಿಡಿಯ ಕಥಾಹಂದರವಿದೆ’ ಎಂದಿದ್ದಾರೆ.
 

ಇದೀಗ ಚಿತ್ತಾರ  ರೈಸಿಂಗ್​ ಸ್ಟಾರ್​ ಅವಾರ್ಡ್​ ರೈಸಿಂಗ್​ ಸ್ಟಾರ್​ ಪ್ರಶಸ್ತಿಗೆ ಚೈತ್ರಾ ಆಚಾರ್​ ಭಾಜನರಾಗಿದ್ದಾರೆ. ಈ ಸಂದರ್ಭದಲ್ಲಿ ಅವರು ಯಶ್​ ಜೊತೆಗೆ ತಾವು ನಟನೆ ಮಾಡಬೇಕು ಎನ್ನುವ ಆಸೆಯನ್ನು ಹೊರಕ್ಕೆ ಹಾಕಿದರು. ಇಂಥ ಪ್ರಶಸ್ತಿ ಪಡೆದುಕೊಳ್ಳುವಾಗ ಶಿಫಾರಸು ಮಾಡಬೇಕು ಎಂದೆಲ್ಲಾ ಆರಂಭದಲ್ಲಿ ಕೇಳಿದ್ದೆ. ಆದರೆ ಈಗ ನನಗೂ ಈ ಅವಾರ್ಡ್​ ಬಂದ ಕಾರಣದಿಂದ ಅವೆಲ್ಲಾ ಸುಳ್ಳು ಎಂದು ಗೊತ್ತಾಯಿತು. ನಮ್ಮ ಕೆಲಸವನ್ನು ನಮ್ಮ ಪಾಡಿಗೆ ಮಾಡಿಕೊಂಡು ಹೋದರೆ ಎಲ್ಲರೂ ಗುರುತಿಸುತ್ತಾರೆ ಎಂದು ತಿಳಿಯಿತು. ಅವಾರ್ಡ್​ ಪಡೆಯಬೇಕು ಎಂದು ನಾನು ನಟಿಸಿಲ್ಲ. ಆದರೆ ಅದೇ ನನ್ನನ್ನು ಹುಡುಕಿ ಬಂದಿರುವುದು ಖುಷಿ ಕೊಟ್ಟಿದೆ ಎಂದಿದ್ದಾರೆ ಚೈತ್ರಾ.

ಆಟೋದವ ಪ್ಯಾಂಟ್​ ಜಿಪ್​ ತೆರೆದ, ಟೈಲರ್​ ತಬ್ಬಿಕೊಂಡ... ಭಯಾನಕ ಘಟನೆ ನೆನಪಿಸಿಕೊಂಡ 'ವೀರ ಕನ್ನಡಿಗ' ನಟಿ ಅನಿತಾ
 
ಇದೇ ವೇಳೆ, ಯಾವ ನಟ ನಿಮಗೆ ಇಷ್ಟ ಎಂಬ ಪ್ರಶ್ನೆ ಎದುರಾದಾಗ, ತುಂಬಾ ನಟರು ಇದ್ದಾರೆ. ಆದರೆ ಸದ್ಯ ಯಶ್​ ಎಂದಿರೋ ಚೈತ್ರಾಗೆ, ಅವರ ಜೊತೆ ಏನೆಲ್ಲಾ ನಟನೆ ಮಾಡಬೇಕು ಎಂಬ ಆಸೆ ಇದೆ ಎನ್ನೋದನ್ನು ತಿಳಿಸಿದ್ದಾರೆ. ಯಶ್​ ನನ್ನ ಫೆವರೆಟ್​ ನಟ. ಅವರ ಎಲ್ಲಾ ಸಿನಿಮಾಗಳನ್ನೂ ನೋಡಿದ್ದೇನೆ. ಯಾವ ಪಾತ್ರ ಕೊಟ್ಟರೂ ಅವರ ಜೊತೆ ಮಾಡಲು ರೆಡಿ ಎಂದಿದ್ದಾರೆ. ಹಾಗಿದ್ದರೆ ಅಕ್ಕ-ತಂಗಿ, ಚಿಕ್ಕಮ್ಮ ಇಂಥ ಪಾತ್ರ ಓಕೆನಾ ಎಂದಾಗ ಇಲ್ಲಪ್ಪಾ ಅವೆಲ್ಲಾ ಬೇಡ, ಎದುರು ಮನೆ, ಹಿಂದಿನ ಮನೆ, ಅತ್ತೆ-ಮಗಳು ಇಂಥ ಪಾತ್ರಗಳು ನನಗೆ ಬೇಕು ಎನ್ನುವ ಮೂಲಕ ಯಶ್​ ಜೊತೆ ನಾಯಕಿಯಾಗಿ ಕಾಣಿಸಿಕೊಳ್ಳುವ ಆಸೆಯನ್ನು ಚೈತ್ರಾ ಹೊರಕ್ಕೆ ಹಾಕಿದ್ದಾರೆ. ಮುಂಬರುವ ಟಾಕ್ಸಿಕ್​ ಚಿತ್ರದಲ್ಲಿ ತಮಗೆ ಅವಕಾಶ ಸಿಗಲಿ ಎಂದು ಆಸೆ ಪಟ್ಟಿದ್ದಾರೆ ಚೈತ್ರಾ.   

ಅಂದಹಾಗೆ ಚೈತ್ರಾ ಅವರ ಸಿನಿ ಜರ್ನಿ ಕುರಿತು ಹೇಳುವುದಾದರೆ,  ಇವರು 'ಮಹಿರಾ' ಎಂಬ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟರು. ಅಲ್ಲಿಂದ ಅವರಿಗೆ ತುಂಬಾ ಆಫರ್​ ಸಿಕ್ಕಿದೆ. 'ತಲೆ ದಂಡ', 'ಗಿಲ್ಕಿ', 'ಅದೃಶ್ಯ' ಮೊದಲಾದ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.  'ಟೋಬಿ' ಮತ್ತು 'ಸಪ್ತಸಾಗರದಾಚೆ ಎಲ್ಲೋ' ಚಿತ್ರಗಳು ಚೈತ್ರಾಗೆ ದೊಡ್ಡ ಬ್ರೇಕ್​ ಕೊಟ್ಟಿವೆ.  ಅದರಲ್ಲಿಯೂ  'ಟೋಬಿ' ಚಿತ್ರದಲ್ಲಿನ ಇವರ ನಟನೆಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಈ ಚಿತ್ರಕ್ಕಾಗಿ ನಟಿಗೆ  ಫಿಲಂ ಫೇರ್ ಅವಾರ್ಡ್‌ ಕೂಡ ಸಿಕ್ಕಿದೆ. ಕೇವಲ ನಟಿ ಮಾತ್ರವಲ್ಲದೇ, ಈಕೆ ಗಾಯಕಿಯೂ ಹೌದು.  'ಗರುಡ ಗಮನ ವೃಷಭ ವಾಹನ' ಚಿತ್ರದ ಸೋಜುಗಾದ ಸೂಜು ಮಲ್ಲಿಗೆ ಹಾಡು ಇಂದಿಗೂ ಎಲ್ಲರ ಬಾಯಲ್ಲಿ ನಲಿದಾಡುತ್ತಿದೆ.  ಇಂತಿಪ್ಪ ನಟಿಗೆ ಯಶ್​ ಜೊತೆ ನಟಿಸುವ ಭಾಗ್ಯ ಸಿಗುವುದೋ ಕಾದು ನೋಡಬೇಕಿದೆ. 

ಪ್ರೀತಿಯಲ್ಲಿ ಬಿದ್ದಾಗ ಧರ್ಮದ ತಲೆ ಕೆಡಿಸಿಕೊಳ್ಳಲಿಲ್ಲ, ಆದ್ರೆ ಆಮೇಲೆ ಆಗಿದ್ದೇ ಬೇರೆ... ವೀರ ಕನ್ನಡಿಗ ನಟಿ ಅನಿತಾ ಓಪನ್​ ಮಾತು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ