ಆಟೋದವ ಪ್ಯಾಂಟ್ ಜಿಪ್ ತೆರೆದ, ಟೈಲರ್ ತಬ್ಬಿಕೊಂಡ... ಎನ್ನುತ್ತಲೇ ತಮ್ಮ ಜೀವನದಲ್ಲಿ ಆಗಿರುವ ಭಯಾನಕ ಘಟನೆಗಳನ್ನು 'ವೀರ ಕನ್ನಡಿಗ' ನಟಿ ಅನಿತಾ ಹಸನಂದಾನಿ ಹೀಗೆ ನೆನಪಿಸಿಕೊಂಡಿದ್ದಾರೆ.
ಲವ್-ಬ್ರೇಕಪ್, ಮದುವೆ, ಮಗು ಇವೆಲ್ಲವುಗಳಿಂದ ಐದಾರು ವರ್ಷ ಬಣ್ಣದ ಲೋಕದಿಂದ ದೂರವೇ ಉಳಿದಿದ್ದ ಬಹುಭಾಷಾ ನಟಿ, ಖ್ಯಾತ ಕಿರುತೆರೆ ಕಲಾವಿದೆ ಅನಿತಾ ಹಸಾನಂದನಿ, ಅವರು ಈಗ ಮತ್ತೆ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕನ್ನಡದ ವೀರ ಕನ್ನಡಿಗ, ಗಂಡುಗಲಿ ಕುಮಾರರಾಮ, ಹುಡುಗ ಹುಡುಗಿ, ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದಾಗಲೇ ಹಿಂದಿ, ತಮಿಳು, ಮರಾಠಿ ಸೇರಿದಂತೆ ಹಲವಾರು ಭಾಷೆಗಳ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಇವರು, ಈಗ 'ಸುಮನ್ ಇಂದೋರಿ' ಎಂಬ ಮರಾಠಿ ಸೀರಿಯಲ್ ಮೂಲಕ ಪುನಃ ಕಮ್ಬ್ಯಾಕ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಇವರು ತಮ್ಮ ಜೀವನದ ಹಲವಾರು ಮಜಲುಗಳ ಬಗ್ಗೆ ಮಾತನಾಡಿದ್ದಾರೆ. ಲೈಂಗಿಕ ದೌರ್ಜನ್ಯ, ಮೀ ಟು ಇತ್ಯಾದಿಗಳು ಸಿನಿ ಇಂಡಸ್ಟ್ರಿಯಲ್ಲಿ ಬಹಳ ಸದ್ದು ಮಾಡುತ್ತಿರುವ ಈ ಹೊತ್ತಿನಲ್ಲಿ ತಮ್ಮ ಜೀವನದ ಕರಾಳ ಘಟನೆಯನ್ನು ನಟಿ ತೆರೆದಿಟ್ಟಿದ್ದಾರೆ.
ಶಾಲಾ ದಿನಗಳಲ್ಲಿ ನಡೆದ ಘಟನೆ ಇದಾಗಿದೆ, ನನಗಾಗ 9-10 ವರ್ಷ ವಯಸ್ಸಾಗಿತ್ತು ಅಷ್ಟೆ. ಶಾಲೆಗೆ ಆಟೋದಲ್ಲಿ ಹೋಗುತ್ತಿದ್ದೆ. ಅಮ್ಮ 10 ರೂಪಾಯಿ ಕೊಡುತ್ತಿದ್ದರು. ಆದರೆ ಶಾಲೆಗೆ ಹೋಗುವಾಗ ಮಾತ್ರ ಆಟೋದಲ್ಲಿ ಹೋಗಿ, ಬರುವಾಗ ನಡೆದುಕೊಂಡು ಸ್ನೇಹಿತೆಯರ ಜೊತೆ ಬರುತ್ತಿದ್ದೆ. ಆ ಉಳಿದ ದುಡ್ಡಿನಲ್ಲಿ ಸಮೋಸಾ ಅದೂ ಇದೂ ತಿನ್ನುತ್ತಿದ್ದೆ. ಆದರೆ ಮನೆಗೆ ಬರುವಾಗ ಮಾತ್ರ ಭಯಾನಕ ಘಟನೆ ಎದುರಾಗುತ್ತಿತ್ತು ಎಂದು ಹೇಳಿದ್ದಾರೆ. ಪ್ರತಿ ದಿನ ಅದೇ ರಸ್ತೆಯಲ್ಲಿ ಒಬ್ಬ ಆಟೋರಿಕ್ಷಾದವ ನಿಲ್ಲುತ್ತಿದ್ದ. ನಮ್ಮನ್ನು ನೋಡುತ್ತಿದ್ದಂತೆಯೇ ಪ್ಯಾಂಟ್ ಜಿಪ್ ಓಪನ್ ಮಾಡಿಕೊಂಡು ಅಂಗ ಹೊರಕ್ಕೆ ಹಾಕಿ ಅಸಹ್ಯವಾಗಿ ವರ್ತಿಸುತ್ತಿದ್ದ. ಏನೇನೋ ಮಾಡುತ್ತಿದ್ದ. ಆಗ ಅದು ಏನು ಎಂದೇ ಅರ್ಥ ಆಗ್ತಿರಲಿಲ್ಲ. ಆದರೆ ನೋಡಲು ಮಾತ್ರ ಅಸಹ್ಯ ಎನಿಸುತ್ತಿತ್ತು ಎಂದು ಅನಿತಾ ಹೇಳಿದ್ದಾರೆ.
undefined
ಕೆಲವು ದಿನ ಇದೇ ಮುಂದುವರೆಯಿತು. ಆಮೇಲೆ ನಾವೆಲ್ಲಾ ದಾರಿಯನ್ನೇ ಬದಲಾಯಿಸಿಬಿಟ್ಟೆವು. ಆದರೆ ಆ ದಾರಿಯಲ್ಲಿನ ಆಟೋ ನೋಡಿದಾಗೆಲ್ಲಾ ಇವನೇ ಇದ್ದಾನೋ ಎಂಬ ಭಯ ಕಾಡುತ್ತಿತ್ತು. ಆಮೇಲೆ ನಾನು ಬೇರೆ ಶಾಲೆಗೆ ಸೇರಿದೆ. ಅಲ್ಲಿ ಕೂಡ ಈತ ಎಲ್ಲಿ ಹಿಂಬಾಲಿಸಿಕೊಂಡು ಬರುತ್ತಾನೋ ಎಂದು ಎನ್ನಿಸುತ್ತಿತ್ತು. ಭಯದಿಂದಲೇ ಮನೆಗೆ ಹೋಗುತ್ತಿದ್ದೆ ಎಂದು ನಟಿ ಹೇಳಿದ್ದಾರೆ. ಇದೇ ವೇಳೆ ಚಿಕ್ಕ ವಯಸ್ಸಿನಲ್ಲಿಯೇ ಆದ ಇನ್ನೊಂದು ಭಯಾನಕ ಅನುಭವವನ್ನೂ ಅವರು ಹೇಳಿದ್ದಾರೆ. ಟೈಲರ್ ಅಂಗಡಿಗೆ ಬಟ್ಟೆ ಹೊಲಿಸಲು ಹೋದ ಸಂದರ್ಭದಲ್ಲಿ ಆ ಟೈಲರ್ ನನ್ನ ಅಳತೆ ತೆಗೆದುಕೊಳ್ಳುವ ಸಮಯದಲ್ಲಿ, ಬಿಗಿದಪ್ಪಿಕೊಂಡು ಬಿಟ್ಟ. ನನಗೆ ತುಂಬಾ ಭಯವಾಯಿತು. ಹೇಗೋ ತಪ್ಪಿಸಿಕೊಂಡೆ ಎಂದಿದ್ದಾರೆ.
ಅಂದಹಾಗೆ, ಈ ಘಟನೆ ನಡೆದದ್ದು ಮುಂಬೈನಲ್ಲಿ. ಮುಂದೆ ಬೇರೆ ಶಾಲೆಗೆ ಹೋದಾಗಲೂ ಆತ ಒಮ್ಮೆ ಕಾಣಿಸಿಕೊಂಡಿದ್ದ. ಅವನಿಗೆ ನಮ್ಮ ಸ್ಕೂಲ್ ದಾರಿಯೂ ಗೊತ್ತಿತ್ತು. ಆದ್ದರಿಂದ ಶಾಲೆಯ ಆವರಣದಲ್ಲಿ ಕೂಡ ಯಾವುದೇ ಆಟೋ ನಿಂತರೂ ಹೆದರಿಕೆ ಆಗುತ್ತಿತ್ತು ಎಂದಿರು ನಟಿ, ಮಕ್ಕಳು ಕೂಡ ಸೇಫ್ ಅಲ್ಲ. ಆಗಿನ ಟೈಮ್ನಲ್ಲಿಯೇ ಹೇಗಾಗುತ್ತಿತ್ತು ಎಂದರೆ ಈಗ ಇನ್ನೂ ಪರಿಸ್ಥಿತಿ ಕಷ್ಟವಿದೆ ಎಂದಿದ್ದಾರೆ. ಪಾಲಕರು ತಮ್ಮ ಮಕ್ಕಳನ್ನು ಅದರಲ್ಲಿಯೂ ಹೆಣ್ಣುಮಕ್ಕಳನ್ನು ಎಷ್ಟು ಜೋಪಾನ ಮಾಡಿದರೂ ಸಾಲದು ಎನ್ನಿಸುತ್ತದೆ. ಪಾಲಕರು ಈ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ಹೇಳಿದಷ್ಟೂ ಕಡಿಮೆಯೇ ಎಂದು ಅನಿತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಎರಡು ಷರತ್ತು ಒಪ್ಪಿಕೊಂಡ್ರೆ ತಂದೆ- ಮಗಳು ಮದ್ವೆಯಾಗ್ಬೋಕೆ ಸರ್ಕಾರದಿಂದಲೇ ಗ್ರೀನ್ ಸಿಗ್ನಲ್!