
ಸತತ 2 ವರ್ಷಗಳಿಂದ ನಿರಂತರವಾಗಿ ಸೂಪರ್ ಹಿಟ್ ಪಿಚ್ಚರ್‌ಗಳು, ಹೊಸ ಹೊಸ ಕಾನ್ಸೆಪ್ಟ್‌ಗಳ ಮೂಲಕ ಅತ್ಯದ್ಭುತ ಸಿನಿಮಾಗಳನ್ನ ವೀಕ್ಷಕರ ಮನೋರಂಜನೆಗೆ ಪ್ರಸಾರ ಮಾಡುತ್ತಾ, ತನ್ನದೇ ಆದ ಸ್ಟೈಲ್‌ನಿಂದ ಹಿಟ್ ದಿನದ ಫಿಲಿಂಗ್ ನೀಡುತ್ತಾ ಬಂದಿರುವ ಜೀ ಪಿಚ್ಚರ್ ಈ ಬಾರಿಯ ಡಾ.ಶಿವರಾಜ್‌ಕುಮಾರ್ ಬರ್ತ್‌ಡೇ ಪ್ರಯುಕ್ತ ವಿನೂತನ ಪ್ರಯೋಗಕ್ಕೆ ಸಜ್ಜಾಗಿದೆ.
ಇದೇ ಜುಲೈ 12ಕ್ಕೆ ಕರುನಾಡ ಚಕ್ರವರ್ತಿ ಡಾ.ಶಿವರಾಜ್‌ಕುಮಾರ್ ತಮ್ಮ 60ನೇ ವರ್ಷದ ಹುಟ್ಟುಹಬ್ಬವನ್ನ ಆಚರಿಸಿಕೊಳ್ತಾ ಇದ್ದಾರೆ. ಈ ಸಂಭ್ರಮಕ್ಕೆ ನಿಮ್ಮ ನೆಚ್ಚಿನ ಜೀ ಪಿಚ್ಚರ್ ಶಿವಣ್ಣನ 60ನೇ ಹುಟ್ಟುಹಬ್ಬಕ್ಕೆ, 60ಗಂಟೆಗಳ ನಾನ್ ಸ್ಟಾಪ್ ಶಿವಣ್ಣನ ಸಿನಿಮಾಗಳ ಪ್ರಸಾರ ಮಾಡುತ್ತಿದೆ . ಶಿವರಾಜ್‌ಕುಮಾರ್ ಅಭಿನಯದ ಬರೋಬ್ಬರಿ 20 ಸಿನಿಮಾಗಳು 3 ದಿನಗಳ ಕಾಲ ನಿರಂತರವಾಗಿ ಜೀ ಪಿಚ್ಚರ್‌ನಲ್ಲಿ ಪ್ರಸಾರವಾಗಲಿದೆ.
ಶಿವಣ್ಣನ ಅಸಲಿ ಹೆಸರೇನು, ಅಣ್ಣಾವ್ರು ಇಟ್ಟ ಹೆಸರನ್ನು ಬದಲಾಯಿಸಿದ್ದೇಕೆ?
ಇದೇ ಭಾನುವಾರ(ಜು.10)ದಂದು ಬೆಳಗ್ಗೆ 9ಕ್ಕೆ ʻಭಾಗ್ಯದ ಬಳೆಗಾರʼ ಸಿನಿಮಾದಿಂದ ಆರಂಭವಾಗುವ ಶಿವಣ್ಣ ನಾನ್ ಸ್ಟಾಪ್ 60 ಮನೋರಂಜನೆ, ಹ್ಯಾಟ್ರಿಕ್ ಹೀರೋ ಹುಟ್ಟುಹಬ್ಬ ಮಂಗಳವಾರ(ಜು.12)ರ ರಾತ್ರಿ 9 ಗಂಟೆಯವರಗೆ ನಿರಂತರವಾಗಿ 60ಗಂಟೆಗಳು ಶಿವರಾಜ್‌ಕುಮಾರ್ ಅಭಿನಯದ ಸಿನಿಮಾಗಳನ್ನೇ ಪ್ರಸಾರ ಮಾಡಿ, ʻಭಜರಂಗಿ-2ʼ ಸಿನಿಮಾ ಮೂಲಕ, ಈ ಬಿಗ್ಗೆಸ್ಟ್ ಮೂವಿ ಮ್ಯಾರಾಥಾನ್ ಮುಕ್ತಾಯವಾಗಲಿದೆ. ಈ ನಾನ್ ಸ್ಟಾಪ್ ಮನೋರಂಜನೆ ಹಗಲು ರಾತ್ರಿ ನಿರಂತರವಾಗಿ ನಡೆಯಲಿದೆ.
ಭಾರತೀಯ ಕಿರುತೆರೆ ಇತಿಹಾಸದಲ್ಲೇ ಈ ಪ್ರಯೋಗ ಪ್ರಪ್ರಥಮವಾಗಿದ್ದು, ಸೂಪರ್ ಸ್ಟಾರ್ ಬರ್ತ್‌ಡೇಯನ್ನ ಹೀಗೆ ನಿರಂತರವಾಗಿ 60 ಗಂಟೆಗಳ ಸಿನಿಮಾ ಪ್ರಸಾರ ಮಾಡುವ ಮೂಲಕ ಆಚರಿಸುತ್ತಿದೆ ಜೀ ಪಿಚ್ಚರ್. ಈ 60 ಗಂಟೆಗಳ ನಾನ್ ಸ್ಟಾಪ್ ಮನೋರಂಜನೆಯಲ್ಲಿ ಶಿವಣ್ಣ ಅವ್ರ ಬ್ಲಾಕ್ ಬಸ್ಟರ್ ಸಿನಿಮಾಗಳಾದ ʻಜೋಗಿʼ, ʻತವರಿನ ಸಿರಿʼ, ʻಭಜರಂಗಿʼ, ʻಪ್ರೀತ್ಸೆʼ, ʻಕುರುಬನ ರಾಣಿʼ, ʻದಿ ವಿಲನ್ʼ, ʻಮಫ್ತಿʼ ಪಿಚ್ಚರ್‌ಗಳು ಪ್ರಸಾರವಾಗಲಿವೆ. ಶಿವರಾಜ್‌ಕುಮಾರ್ ಬರ್ತ್‌ಡೇ ಪ್ರಯುಕ್ತ ಜು.12ರಂದು ರಾತ್ರಿ 9.30ಕ್ಕೆ ಶಿವಣ್ಣ ಅವ್ರ ವೀಕೆಂಡ್ ವಿತ್ ರಮೇಶ್ ಎಪಿಸೋಡ್ ಕೂಡ ಪ್ರಸಾರವಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.