ಬೆಂಗಳೂರು ಮೆಟ್ರೋದಲ್ಲಿ ಚಿತ್ರೀಕೃತವಾಗಿರುವ ಕನ್ನಡ ಸಿನಿಮಾಗಳ ಝಲಕ್!

Published : Apr 19, 2025, 04:34 PM ISTUpdated : Apr 19, 2025, 05:05 PM IST
ಬೆಂಗಳೂರು ಮೆಟ್ರೋದಲ್ಲಿ ಚಿತ್ರೀಕೃತವಾಗಿರುವ ಕನ್ನಡ ಸಿನಿಮಾಗಳ ಝಲಕ್!

ಸಾರಾಂಶ

ಬೆಂಗಳೂರು ಮೆಟ್ರೋದಲ್ಲಿ 'ರಣವಿಕ್ರಮ', 'ಭರ್ಜರಿ', 'ಯಾಣ' ಸೇರಿದಂತೆ ಕೆಲವು ಕನ್ನಡ ಚಿತ್ರಗಳ ಚಿತ್ರೀಕರಣ ನಡೆದಿದೆ. ನಟ ಶಂಕರ್ ನಾಗ್ ಅವರು ಬೆಂಗಳೂರಿನಲ್ಲಿ ಮೆಟ್ರೋ ನಿರ್ಮಾಣದ ಕನಸು ಕಂಡಿದ್ದರು. ಇತ್ತೀಚೆಗೆ ಮೆಟ್ರೋ ದರ ಹೆಚ್ಚಳವಾಗಿದ್ದು, ಪ್ರಯಾಣಿಕರ ಸಂಖ್ಯೆಯಲ್ಲಿ ತಾತ್ಕಾಲಿಕ ಇಳಿಕೆ ಕಂಡುಬಂದಿತ್ತು. ಈಗ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ.

ಬೆಂಗಳೂರು (ಏ.19): ಬೆಂಗಳೂರಿನಲ್ಲಿ ಸಾರ್ವಜನಿಕರಿಗೆ ಟ್ರಾಫಿಕ್ ಮುಕ್ತ ಹಾಗೂ ಮಾಲಿನ್ಯರಹಿತವಾಗಿ ಆರಾಮದಾಯಕವಾಗಿ ಪ್ರಯಾಣ ಮಾಡುವುದಕ್ಕೆ ಅನುಕೂಲವಾಗಿರುವ ನಮ್ಮ ಮೆಟ್ರೋ ರೈಲಿನಲ್ಲಿ ಯಾವ ಕನ್ನಡ ಸಿನಿಮಾಗಳನ್ನು ಶೂಟಿಂಗ್‌ ಮಾಡಲಾಗಿದೆ.. ನಿಮಗೆಷ್ಟು ಸಿನಿಮಾ ಗೊತ್ತಿವೆ ಥಿಂಕ್ ಮಾಡಿ..

2015ರಲ್ಲಿ ಪುನೀತ್ ರಾಜ್ ಕುಮಾರ್ ಅವರ 'ರಣವಿಕ್ರಮ' ಸಿನಿಮಾವನ್ನು ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಶೂಟಿಂಗ್ ಮಾಡಲಾಗಿದೆ. ಈ ಸಿನಿಮಾದಲ್ಲಿ ಮೆಟ್ರೋಗೆ ಹೋಗಲು ಪುನೀತ್ ಅವರು ಬಂದು ಕುಳಿತಾಗ ಯಾರಾದರೂ ನೀರು ಕೊಡೋರು ಸಿಗ್ತಾರಾ ಎಂದು ಕಾಯುತ್ತಿದ್ದಾಗ ಬಾಲಿವುಡ್ ನಟಿ ಅದಾ ಶರ್ಮಾ ಅವರು ಬಂದು ಪುನೀತ್ ಅವರಿಗೆ ಕುಡಿಯಲು ನೀರನ್ನು ಕೊಟ್ಟು ನೀರಿನ ದಾಹವನ್ನು ತಣಿಸುತ್ತಾರೆ. 

ಇದಾದ ನಂತರ 2017ರಲ್ಲಿ ಲಕ್ನೋ ಟು ಬೆಂಗಳೂರು ಎಂಬ ಹಿಂದಿ ಸಿನಿಮಾವನ್ನು ಬೆಂಗಳೂರಿನ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಶೂಟಿಂಗ್ ಮಾಡಲಾಗಿದೆ. ಮೆಟ್ರೋ ಸಂಚಾರ ಸ್ಥಗಿತಗೊಂಡ ನಂತರ ಮಧ್ಯರಾತ್ರಿ 1 ಗಂಟೆಯ ವೇಳೆ ಈ ಸಿನಿಮಾದ ಕೆಲವು ದೃಶ್ಯಗಳನ್ನು ಇಲ್ಲಿ ಚಿತ್ರೀಕರಣ ಮಾಡಲಾಗಿದೆ.

ಇನ್ನು ಧ್ರುವ ಸರ್ಜಾ ಅವರು ನಟಿಸಿದ ಭರ್ಜರಿ ಸಿನಿಮಾದಲ್ಲಿ ನಟಿ ರಚಿತಾರಾಮ್ ಅವರು ಮೆಟ್ರೋ ರೈಲಿಗಾಗಿ ಓಡಿ ಬರುವುದನ್ನು ಕೂಡ ಮೆಟ್ರೋ ನಿಲ್ದಾಣದಲ್ಲಿ ಶೂಟಿಂಗ್ ಮಾಡಲಾಗಿದೆ. ಆಗ ನಟನಿಗೆ ಇಲ್ಲಿ ಕ್ಷಮೆ ಕೇಳುತ್ತಲೇ ಮೆಟ್ರೋಗೆ ಬಂದು ಹತ್ತಿಕೊಳ್ಳುತ್ತಾರೆ. 

ಇದನ್ನೂ ಓದಿ: ಬೆಂಗಳೂರು ಮೆಟ್ರೋ ನೀಲಿ ಮಾರ್ಗ ಮೊದಲ ಹಂತ ಯಾವಾಗ ಓಪನ್?

2019ರಲ್ಲಿ ಸ್ಯಾಂಡಲ್‌ವುಡ್ ಹಿರಿಯ ನಟ ಜೈಜಗದೀಶ್ ಅವರ ಮೂವರು ಹೆಣ್ಣು ಮಕ್ಕಳಾದ ವೈಭವಿ, ವೈನಿಧಿ ಹಾಗೂ ವೈಸಿರಿ ಅವರು ಸೇರಿ ನಟಿಸಿದ ಯಾಣ ಸಿನಿಮಾದ ದೃಶ್ಯವನ್ನು ಕೂಡ ಮೆಟ್ರೋ ರೈಲಿನಲ್ಲಿ ಶೂಟಿಂಗ್ ಮಾಡಲಾಗಿದೆ. ಇಲ್ಲಿ ವೈಭವಿ ಜಗದೀಶ್ ಅವರು ನಿಂತುಕೊಂಡು ಪ್ರಯಾಣ ಮಾಡುವಾಗ ಒಬ್ಬ ಯುವ ಪ್ರಯಾಣಿಕ ಎದ್ದು ಸೀಟು ಬಿಟ್ಟುಕೊಡುತ್ತಾನೆ.

ಕನ್ನಡ ಸಿನಿಮಾಗಳನ್ನು ಮಾತ್ರವಲ್ಲದೇ ತಮಿಳು ಆಕ್ಷನ್ ಸಿನಿಮಾ ನಟಿ ನಯನತಾರಾ ಹಾಗೂ ಕಶ್ಯಪ್ ಅಭಿನಯದ ಸಿನಿಮಾವನ್ನು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಶೂಟಿಂಗ್ ಮಾಡಿದ್ದಾರೆ. ಇಲ್ಲಿ ಸಿನಿಮಾ ಮಾತ್ರವಲ್ಲದೇ, ಕೆಲವೊಂದು ಡಾಕ್ಯೂಮೆಂಟರಿಗಳನ್ನು ಹಾಗೂ ಜಾಹೀರಾತುಗಳನ್ನು ಮೆಟ್ರೋ ರೈಲುಗಳಲ್ಲಿ ಶೂಟಿಂಗ್ ಮಾಡಲಾಗಿದೆ.

ನಮ್ಮ ಮೆಟ್ರೋ ಚಿತ್ರರಂಗದ ಸ್ಟಾರ್ ನಟ ಶಂಕರ್‌ನಾಗ್ ಕನಸು: 

ಕನ್ನಡ ಚಿತ್ರರಂಗದ ಮೇರು ನಟರಲ್ಲಿ ಒಬ್ಬರಾಗಿದ್ದ ನಟ ಶಂಕರ್ ನಾಗ್ ಅವರು ಬೆಂಗಳೂರಿನಲ್ಲಿ ಮೆಟ್ರೋ ರೈಲು ನಿರ್ಮಾಣ ಮಾಡಬೇಕು ಎಂದು ಅವರೇ ಸ್ವಂತ ಹಣವನ್ನು ಖರ್ಚು ಮಾಡಿ ಒಂದು ನೀಲಿನಕ್ಷೆಯನ್ನೂ ಸಿದ್ಧಪಡಿಸಿದ್ದರು. ಮೆಟ್ರೋ ರೈಲು ಯೋಜನೆಯನ್ನು ಬೆಂಗಳೂರಿಗೆ ತರುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವಂತೆ ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಮನವಿಯನ್ನೂ ಮಾಡಿದ್ದರು. ಆದರೆ, ಅಂದಿನ ರಾಜಕಾರಣಿಗಳಿಗೆ ಹಿತಾಸಕ್ತಿ ಇಲ್ಲದ ಕಾರಣ ಮೆಟ್ರೋ ಬಗ್ಗೆ ಯಾರೊಬ್ಬರೂ ತಲೆ ಕೆಡಿಸಿಕೊಳ್ಳಲಿಲ್ಲ. 

ಶಂಕರ್ ನಾಗ್ ಅವರು ನಂದಿ ಬೆಟ್ಟದಲ್ಲಿ ರೋಪ್‌ವೇ ಮಾಡುವುದಕ್ಕೂ ಚಿಂತನೆ ಮಾಡಿದ್ದರು. ಶಂಕರನಾಗ್ ಸಿನಿಮಾ ಶೂಟಿಂಗ್ ರಜೆ ಇದ್ದರೆ ಅಭಿವೃದ್ಧಿ ಯೋಜನೆಗೆ ಸಂಬಂಧಪಟ್ಟ ವರದಿಗಳನ್ನು ರಚಿಸಿಕೊಂಡು ಸಚಿವರು ಹಾಗೂ ರಾಜಕಾರಣಗಳ ಭೇಟಿ ಮಾಡಿ ಮನವಿ ಕೊಟ್ಟು ಬರುತ್ತಿದ್ದರು. ಕನ್ನಡ ನಾಡಿನ ಅಭಿವೃದ್ಧಿ ಬಗ್ಗೆ ಶಂಕರ್ ನಾಗ್ ಅವರು ಇಟ್ಟುಕೊಂಡಿದ್ದ ಕಾಳಜಿಯನ್ನು ನೋಡಿ ಅಂದಿನ ಚಿತ್ರಂಗದ ಜನರೇ ಶಾಕ್ ಆಗಿದ್ದರು. ಆದರೆ, ದುರಾದೃಷ್ಟವಶಾತ್ ಉತ್ತರ ಕರ್ನಾಟಕದಲ್ಲಿ ಕಾರ್ಯನಿಮಿತ್ತ ಹೋಗಿದ್ದಾಗ ಅಲ್ಲಿಂದ ವಾಪಸ್ ಬರುವ ವೇಳೆ ಕಾರು ಅಪಘಾತವಾಗಿ ರಸ್ತೆಯಲ್ಲಿಯೇ ದಾರುಣವಾಗಿ ಸಾವಿಗೀಡಾಗಿದ್ದಾರೆ. 

ಇದನ್ನೂ ಓದಿ: ಮೆಟ್ರೋದಲ್ಲಿ ನಿದ್ದೆ ಮಾಡುವ ಯುವಕನಿಗೆ ಸೊಂಟದ ಆಸರೆ ಕೊಟ್ಟ ಯುವತಿ!

ಮೆಟ್ರೋ ದರ ಹೆಚ್ಚಳ: 

ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣ ದರವನ್ನು ಕಳೆದ ತಿಂಗಳು ಹೆಚ್ಚಳ ಮಾಡಿದ್ದರಿಂದ ಮೆಟ್ರೋ ಪ್ರಯಾಣಿಕರು ದರ ಹೆಚ್ಚಳದ ವಿರುದ್ಧ ತೀವ್ರ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, ಈ ದರವನ್ನು ಪರಿಶೀಲನೆ ಮಾಡುವುದಾಗಿ ಕೆಲವೊಂದು ನಿಲ್ದಾಣದಲ್ಲಿ ಅವೈಜ್ಞಾನಿಕವಾಗಿ ಹೆಚ್ಚಳ ಮಾಡಲಾಗಿದ್ದ ದರವನ್ನು ತಗ್ಗಿಸಲಾಗಿದೆ. ಒಟ್ಟಾರೆ, ಪ್ರತಿ ಒಂದು ಕಿ.ಮೀ.ಗೆ ದರವನ್ನು ಶೇ.46ರಷ್ಟು ಹೆಚ್ಚಳ ಮಾಡಿದ್ದಾಗಿ ತಿಳಿಸಿದೆ. ಆದರೆ, ಬಹುತೇಕ ನಿಲ್ದಾಣಗಳಲ್ಲಿ ಮೆಟ್ರೋ ಪ್ರಯಾಣ ದರ ಶೇ.70ರಿಂದ ಶೇ.80ರಷ್ಟು ಹೆಚ್ಚಳವಾಗಿದೆ. ಇದರಿಂದ ಒಂದೂವರೆ ತಿಂಗಳ ಕಾಲ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಕಡಿಮೆಯಾಗಿತ್ತು. ಇದೀಗ ಬೆಲೆ ಏರಿಕೆಯನ್ನು ಜನರು ಮರೆತಿದ್ದು, ಪ್ರಯಾಣಿಕರ ಸಂಜಾಚ ಸಹಜ ಸ್ಥಿತಿಗೆ ಬಂದಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!
34th Wedding Anniversary : ಅಂಬಿ ನೆನಪಲ್ಲಿ ಸುಮಲತಾ ಭಾವನಾತ್ಮಕ ಪೋಸ್ಟ್