ರಂಜನಿ ರಾಘವನ್ ಸಿನಿಮಾದಲ್ಲಿ ಗಣೇಶ್ ಮಗ ವಿಹಾನ್, ಲಕ್ಕಿ ಚಾರ್ಮ್ ಎಂದ ನಟಿ

Published : Apr 18, 2025, 07:32 PM ISTUpdated : Apr 18, 2025, 08:13 PM IST
ರಂಜನಿ ರಾಘವನ್ ಸಿನಿಮಾದಲ್ಲಿ ಗಣೇಶ್ ಮಗ ವಿಹಾನ್, ಲಕ್ಕಿ ಚಾರ್ಮ್ ಎಂದ ನಟಿ

ಸಾರಾಂಶ

ನಿರ್ದೇಶಕಿಯಾಗಿ ರಂಜನಿ ರಾಘವನ್ ಚೊಚ್ಚಲ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಪುತ್ರ ವಿಹಾನ್ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇಳೆಯರಾಜ ಸಂಗೀತ ನೀಡುತ್ತಿದ್ದು, ವಿಹಾನ್ ಆಯ್ಕೆ ಕುರಿತು ರಂಜನಿ ವಿಶೇಷ ಮಾಹಿತಿ ಹಂಚಿಕೊಂಡಿದ್ದಾರೆ. ಈ ಹಿಂದೆ ವಿಹಾನ್, ತಂದೆಯ ಚಿತ್ರಗಳಲ್ಲಿ ಬಾಲನಟನಾಗಿ ನಟಿಸಿದ್ದರು.

ಕನ್ನಡತಿ ರಂಜನಿ ರಾಘವನ್ (Kannadathi Ranjani Raghavan)  ನಿರ್ದೇಶಕಿಯಾಗಿ ಬಡ್ತಿ ಪಡೆದಿದ್ದು ನಿಮಗೆ ಗೊತ್ತೇ ಇದೆ. ಇಂದು ರಂಜನಿ ತಮ್ಮ ಸಿನಿಮಾದ ಪೋಸ್ಟರ್ ಲಾಂಚ್ (poster launch) ಮಾಡಿದ್ದಾರೆ. ಈ ಲಾಂಚ್ ಸಂಭ್ರಮದಲ್ಲಿ ಸಾಕಷ್ಟು ವಿಶೇಷತೆಗಳಿವೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟ ಪ್ರೇಮ್ ಸೇರಿದಂತೆ ಅನೇಕ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಸಮಯದಲ್ಲಿ  ರಂಜನಿ ರಾಘವನ್  ಸಿನಿಮಾದಲ್ಲಿ ಯಾರೆಲ್ಲ ಕಲಾವಿದರು ನಟಿಸ್ತಿದ್ದಾರೆ ಎಂಬ ಅಪ್ಡೇಟನ್ನು ನೀಡಿದ್ದಾರೆ. ವಿಶೇಷ ಅಂದ್ರೆ ರಂಜನಿ ಮೊದಲು ನಿರ್ದೇಶನ ಮಾಡ್ತಿರುವ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ ಪುತ್ರ ವಿಹಾನ್ ನಟಿಸುತ್ತಿದ್ದಾರೆ. 

ಪೋಸ್ಟರ್ ಲಾಂಚ್ ಕಾರ್ಯಕ್ರಮಕ್ಕೆ ರಂಜನಿ ರಾಘವನ್  ಕೈ ಹಿಡಿದು ಬಂದ ಪುಟಾಣಿ ವಿಹಾನ್ ಪರಿಚಯವನ್ನು ರಂಜನಿ ರಾಘವನ್  ಮಾಡಿಸಿದ್ದಾರೆ. ನಮ್ಮ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರ ವಿಹಾನ್ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಅವನದ್ದು ಮುಖ್ಯ ಪಾತ್ರ ಎಂದು ರಂಜನಿ ರಾಘವನ್ ಹೇಳಿದ್ದಾರೆ. ಅಷ್ಟೇ ಅಲ್ಲ ವಿಹಾನ್ ನನಗೆ ಲಕ್ಕಿ ಚಾರ್ಮ್ ಎಂದಿರುವ ರಂಜನಿ ರಾಘವನ್ , ವಿಹಾನ್ ಹೇಗೆ ಆಯ್ಕೆಯಾದ ಎಂಬ ವಿಷ್ಯವನ್ನು ಕೂಡ ತಿಳಿಸಿದ್ದಾರೆ.

ಒಂದ್ವೇಳೆ ಹುಡುಗಿಯಾಗಿ ಹುಟ್ಟಿದ್ರೆ... ಅವ್ರನ್ನು... ಮನದ ಆಸೆ ತೆರೆದಿಟ್ಟ ಶಿವರಾಜ್​ ಕುಮಾರ್​!

ಗಣೇಶ್ ಮನೆಗೆ ಹೋದಾಗ ವಿಹಾನ್ ಆರಂಭದಲ್ಲಿ ಹೊರಗೆ ಬಂದಿರಲಿಲ್ಲವಂತೆ. ಬಂದಿದ್ದು ವ್ಯರ್ಥವಾಯ್ತು, ವಿಹಾನ್ ಗೆ ಆಕ್ಟಿಂಗ್ ಇಷ್ಟವಿಲ್ಲ ಅನ್ನಿಸುತ್ತೆ ಎನ್ನುವ ನಿರಾಸೆ ರಂಜನಿಗೆ ಆರಂಭದಲ್ಲಿ ಮೂಡಿತ್ತಂತೆ. ಸಮಯ ಹೋಗ್ತಿದ್ದಂತೆ ರಂಜನಿ ಬಳಿ ಬಂದ ವಿಹಾನ್, ಟ್ಯಾಬ್ ನಲ್ಲಿದ್ದ ತನ್ನ ಫೊಟೋ ಹಾಗೂ ತಾನು ಮಾಡಿದ ವಿಡಿಯೋಗಳನ್ನು ರಂಜನಿಗೆ ತೋರಿಸಿದ್ದನಂತೆ. ಅದನ್ನು ನೋಡಿ, ವಿಹಾನ್ ಗೆ ಆಕ್ಟಿಂಗ್ ಇಷ್ಟವಿದೆ ಎಂಬುದನ್ನು ತಿಳಿದ ರಂಜನಿ, ಸಿನಿಮಾದಲ್ಲಿ ಅವಕಾಶ ನೀಡಿದ್ದಾರೆ.

ಸ್ಟಾರ್ ಕಿಡ್ ವಿಹಾನ್ ಗೆ ಇದು ಮೊದಲ ಚಿತ್ರವಲ್ಲ. ವಿಹಾನ್, ಅಪ್ಪ ಗಣೇಶ್ ಜೊತೆ ಒಂದೆರಡು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಸಖತ್ ಸಿನಿಮಾದಲ್ಲಿ ವಿಹಾನ್ ಬಾಲ ನಟನಾಗಿ ನಟಿಸಿದ್ದರು. ಚಿತ್ರದಲ್ಲಿ ನಾಯಕನ ಬಾಲ್ಯದ ಪಾತ್ರದಲ್ಲಿ ವಿಹಾನ್ ಕಾಣಿಸಿಕೊಂಡಿದ್ದರು. ಅದಕ್ಕೂ ಮುನ್ನ ಗೀತಾ ಸಿನಿಮಾದಲ್ಲೂ ಗಣೇಶ್ ಜೊತೆ ವಿಹಾನ್ ನಟಿಸಿದ್ದರು. ವಿಹಾನ್ ಅಪ್ಪನ ಜೊತೆ ಡಬ್ಬಿಂಗ್ ಮಾಡುವ ಫೋಟೋ ಹಾಗೂ ವಿಡಿಯೋಗಳನ್ನು ಚಿತ್ರತಂಡ ಹಂಚಿಕೊಂಡಿತ್ತು.

ಇನ್ನು ರಂಜನಿ ರಾಘವನ್ ಸಿನಿಮಾಕ್ಕೆ ಬರೋದಾದ್ರೆ ವರ್ಷದ ಆರಂಭದಲ್ಲಿಯೇ ರಂಜನಿ ಗುಡ್ ನ್ಯೂಸ್ ನೀಡಿದ್ದರು. ಇಳೆಯರಾಜ ಜೊತೆಗಿರುವ ಫೋಟೋ ಹಂಚಿಕೊಂಡಿದ್ದ ರಂಜನಿ, ತಾವು ಸಿನಿಮಾ ಮಾಡ್ತಿರೋದಾಗಿ ತಿಳಿಸಿದ್ದರು. ಎಲ್ಲ ತಯಾರಿ ನಡೆಯುತ್ತಿದೆ, ಸಿನಿಮಾ ಬಗ್ಗೆ ಶೀಘ್ರವೇ ಮಾಹಿತಿ ನೀಡ್ತೇನೆ ಎಂದಿದ್ದರು. ಮೂರ್ನಾಲ್ಕು ದಿನಗಳ ಹಿಂದೆ ರಂಜನಿ ರಾಘವನ್   ನಿರ್ದೇಶನ ಮಾಡ್ತಿರುವ ವಿಡಿಯೋ ಹಂಚಿಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದಿದ್ದ ರಂಜನಿ ಸಿನಿಮಾ ಬಗ್ಗೆ ಮತ್ತೊಂದಿಷ್ಟು ಮಾಹಿತಿಯನ್ನು ಮೊನ್ನೆ ನೀಡಿದ್ದರು. ಸಿನಿಮಾ ಪೋಸ್ಟರ್ ಏಪ್ರಿಲ್ 18ಕ್ಕೆ ಬಿಡುಗಡೆ ಆಗ್ತಿದೆ, ಅಲ್ಲಿ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ನೀಡ್ತೇನೆ ಎಂದಿದ್ದರು. 

ದೀಕ್ಷಿತ್ ಶೆಟ್ಟಿ ಜೊತೆ ನಟಿ ಬೃಂದಾ ಆಚಾರ್ಯ ಕಂಡಿದ್ದೆಲ್ಲಿ? ಅಸಲಿ

ರಂಜನಿ ರಾಘವನ್ ಸಿನಿಮಾಕ್ಕೆ ಇಳೆಯರಾಜ ಸಂಗೀತವಿದೆ. ನಿರ್ದೇಶಕಿಯಾಗಬೇಕೆಂದು ಕನಸು ಕಂಡಿದ್ದ ರಂಜನಿ ಒಂದೂವರೆ ವರ್ಷಗಳ ಹಿಂದಿನಿಂದಲೇ ಅದಕ್ಕೆ ತಯಾರಿ ನಡೆಸಿದ್ದರು. ಕಥೆ ಬರೆದು ತಿದ್ದಿದ್ದ ಅವರು ಅನೇಕರ ಸಹಾಯ ಪಡೆದಿದ್ದರು. ಈಗ ಅವರ ಸಿನಿಮಾ ಶೂಟಿಂಗ್ ಶುರುವಾಗಿದೆ.  ಸಿನಿಮಾ ಬಗ್ಗೆ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡ್ತೇನೆ ಎಂದಿರುವ ರಂಜನಿ, ಸಿನಿಮಾ ಮೇಲೆ ಸಾಕಷ್ಟು ಹೊಸ ಪ್ರಯೋಗ ಶುರು ಮಾಡಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ