Badava Rascal: ಲವ್ ಬ್ರೇಕಪ್ ಹಾಡಿನಲ್ಲಿ 'ನಿನ್ನ ಮಕ್ಕೆ ಬೆಂಕಿ ಹಾಕಾ' ಎಂದ ಡಾಲಿ ಧನಂಜಯ್

Suvarna News   | Asianet News
Published : Dec 22, 2021, 09:01 PM IST
Badava Rascal: ಲವ್ ಬ್ರೇಕಪ್ ಹಾಡಿನಲ್ಲಿ 'ನಿನ್ನ ಮಕ್ಕೆ ಬೆಂಕಿ ಹಾಕಾ' ಎಂದ ಡಾಲಿ ಧನಂಜಯ್

ಸಾರಾಂಶ

ಡಾಲಿ ಧನಂಜಯ್‌ ಅಭಿನಯದ 'ಬಡವ ರಾಸ್ಕಲ್‌' ಚಿತ್ರ ತೆರೆಗೆ ಬರಲು ಸಜ್ಜಾಗಿದ್ದು, ಮೊದಲ ಬಾರಿಗೆ ಧನಂಜಯ್ ನಿರ್ಮಾಪಕರಾಗಿ ಹೊಸ ಜವಬ್ದಾರಿ ಹೊತ್ತಿದ್ದಾರೆ. ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಇದೀಗ ಚಿತ್ರದ 'ನಿನ್ನ ಮಕ್ಕೆ ಬೆಂಕಿ ಹಾಕಾ' ಹಾಡು ಬಿಡುಗಡೆಯಾಗಿದೆ.

ಡಾಲಿ ಧನಂಜಯ್ (Dolly Dhananjay) ಅಭಿನಯದ  'ಬಡವ ರಾಸ್ಕಲ್' (Badava Rascal) ಚಿತ್ರ ತೆರೆಗೆ ಬರಲು ಸಜ್ಜಾಗಿದ್ದು, ಚಿತ್ರತಂಡ ಪ್ರಚಾರ ಕಾರ್ಯಗಳನ್ನು ಭರ್ಜರಿಯಾಗಿ ನಡೆಸುತ್ತಿದೆ. ಈಗಾಗಲೇ ಚಿತ್ರದ ಟೀಸರ್, ಪೋಸ್ಟರ್ ಹಾಗೂ ಟ್ರೇಲರ್‌ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿವೆ. ಧನಂಜಯ್ ಹಾಗೂ ಅಮೃತಾ ಅಯ್ಯಂಗಾರ್ (Amrutha Iyengar) ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ಟೈಟಲ್ ಟ್ರ್ಯಾಕ್‌ (Title Track) ಇತ್ತೀಚೆಗೆ ಬಿಡುಗಡೆಯಾಗಿದ್ದು, ಇದೀಗ ಚಿತ್ರದ ಮತ್ತೊಂದು ಸೂಪರ್ ಹಿಟ್ ಹಾಡು ರಿಲೀಸ್ ಆಗಿದೆ.

ಹೌದು! 'ನಿನ್ನ ಮಕ್ಕೆ ಬೆಂಕಿ ಹಾಕಾ' (Nin Makke Benki Haaka) ಎಂಬ ಫೀಲಿಂಗ್ ಅಂಡ್ ಟಪ್ಪಾಂಗುಚ್ಚಿ ಸಾಂಗ್ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು ಈ ಹಾಡಿಗೆ ಡಾಲಿ ಧನಂಜಯ್ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಈ ಹಾಡಿಗೆ ಶಂಕರ್ ಗುರು (Shankar Guru) ಸಾಹಿತ್ಯ ರಚಿಸಿದ್ದು, ಟಗರು ಬಂತು ಟಗರು ಸಾಂಗ್ ಖ್ಯಾತಿಯ ಆಂಥೋನಿ ದಾಸನ್ (Anthony Daasan) ಕಂಠಸಿರಿ ಕೊಟ್ಟಿದ್ದಾರೆ. ವಾಸುಕಿ ವೈಭವ್ (Vasuki Vaibhav) ಸಂಗೀತ ಸಂಯೋಜನೆಯಲ್ಲಿ ಈ ಹಾಡು ಮೂಡಿಬಂದಿದೆ. ಈಗಾಗಲೇ ಚಿತ್ರದ 'ಉಡುಪಿ ಹೋಟೆಲು', 'ಆಗಾಗ ನೆನಪಾಗುತಾಳೆ' ಮತ್ತು ಟೈಟಲ್ ಟ್ರ್ಯಾಕ್‌ ಹಾಡುಗಳು ಬಿಡುಗಡೆಯಾಗಿ ಸಿನಿಮಂದಿಯಿಂದ ಮೆಚ್ಚುಗೆಯನ್ನು ಪಡೆದಿದೆ.

Badava Rascal: ಶಂಕರ್ ಅಲಿಯಾಸ್ ಡಾಲಿ ಧನಂಜಯ್‌ ಚಿತ್ರದ ಟ್ರೇಲರ್ ರಿಲೀಸ್

ಸದ್ಯ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಧನಂಜಯ್ ಅವರ 'ಬಡವ ರಾಸ್ಕಲ್‌' ಚಿತ್ರವು ಇದೇ ಡಿಸೆಂಬರ್ 24 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಈ ಚಿತ್ರಕ್ಕೆ ಶಂಕರ್‌ ಗುರು (Shankar Guru) ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ಧನಂಜಯ್ ಸ್ನೇಹಿತರಿಗಾಗಿ ಪ್ರಾಣ ಬೇಕಾದರೂ ಕೊಡೋಕೆ ಸಿದ್ಧನಿರುವ ಮಧ್ಯಮ ವರ್ಗದ ಯುವಕನಾಗಿ ಕಾಣಿಸಿಕೊಂಡಿದ್ದು, ಆಟೋ ಓಡಿಸುವ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದಾರೆ. ತನ್ನ ಗೆಳೆಯರಿಗಾಗಿ ಏನು ಮಾಡೋಕೂ ಧನಂಜಯ್ ರೆಡಿ ಇರುತ್ತಾನೆ. ವಿಶೇಷವಾಗಿ ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್‌ ಕೊನೆಯಲ್ಲಿ 'ಫಿಲ್ಮ್ ಹೋಗೋಣ್ವಾ..? ಹೇ ಎಲ್ಲ ನೋಡಿದ್ದಿವಲ್ಲ ಪಾರ್ಕ್​ಗೆ ಹೋಗೋಣ್ವಾ..? ನಾವೇನ್ ಪೊದೆ ಪ್ರೇಮಿಗಳಾ ಪಾರ್ಕ್​ಗೆ ಹೋಗೋಕೆ? ಅಲ್ವಾ...ಎಣ್ಣೆ ಹೊಡೆಯೋಣ..? ನಾ ಯಾವತ್ತಾದ್ರೂ ನಿನ್ನ್ ಮಾತ್ ಮೀರಿದ್ದೀನಾ ಎಂಬ ಡೈಲಾಗ್​​ಗಳು ಸಿನಿರಸಿಕರಿಗೆ ಸಖತ್​ ಕಿಕ್​​​ ಕೊಡುತ್ತಿವೆ. 



'ಡಾಲಿ ಪಿಕ್ಚರ್' (Dolly Picture) ಬ್ಯಾನರ್‌ನಲ್ಲಿ ಸಾವಿತ್ರಮ್ಮ ಅಡವಿ ಸ್ವಾಮಿ ನಿರ್ಮಿಸುತ್ತಿರುವ 'ಬಡವ ರಾಸ್ಕಲ್‌' ಚಿತ್ರಕ್ಕೆ ಶಂಕರ್‌ ಗುರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಈ ಚಿತ್ರದಲ್ಲಿ 'ಮಠ' ಗುರುಪ್ರಸಾದ್‌ (Guruprasad) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಕತೆಗೆ ತಿರುವು ಕೊಡುವ ಪಾತ್ರ ಇದಾಗಿದ್ದು, ಚಿತ್ರದಲ್ಲಿನ ಅವರ ಗೆಟಪ್‌ ಈ ಹಿಂದೆ ರಿವೀಲ್ ಆಗಿತ್ತು. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ವಾಸುಕಿ ವೈಭವ್‌ (Vasuki Vaibhav) ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಪ್ರೀತ ಜಯರಾಮನ್‌ ಛಾಯಾಗ್ರಹಣ, ನಿರಂಜನ್‌ ದೇವರಮನೆ ಸಂಕಲನ ಹಾಗೂ ವಿನೋದ್‌ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

Badava Rascal: ಟೈಟಲ್‌ ಟ್ರ್ಯಾಕ್‌ಗೆ ಟಪ್ಪಾಂಗುಚ್ಚಿ ಸ್ಟೆಪ್ ಹಾಕಿದ ಡಾಲಿ ಧನಂಜಯ್

ಇನ್ನು 'ಬಡವ ರಾಸ್ಕಲ್‌' ಮಿಡಲ್‌ ಕ್ಲಾಸ್‌ ಮಾಸ್‌ ಎಂಟರ್‌ಟೈನರ್‌. ಮಿಡಲ್‌ ಕ್ಲಾಸ್‌ ಮಕ್ಕಳಿಗೆ ತಂದೆ ತಾಯಿನೇ ಹೀರೋ ಹೀರೋಯಿನ್‌. ಇಂಥಾ ಪ್ರತೀ ಹುಡುಗನ ಲೈಫಲ್ಲೂ ಎಜುಕೇಶನ್‌ ಮುಗಿಸಿದ, ಕೆಲಸ ಇನ್ನೂ ಸಿಗದ ಪೇಸ್‌ ಬಹಳ ಚಾಲೆಂಜಿಂಗ್‌. ಆ ಸೂಕ್ಷ್ಮ ಎಳೆಯಿಟ್ಟುಕೊಂಡು ಮಾಡಿದ ಚಿತ್ರವಿದು. ನಗಿಸುವ, ಕಣ್ಣಂಚು ಒದ್ದೆ ಮಾಡೋ ಈ ಸಿನಿಮಾವನ್ನು ಗೆಳೆಯರನ್ನು ಬೆಳೆಸಿ ನಾನೂ ಬೆಳೆಯಬೇಕು ಅಂತ ಮಾಡಿದ್ದು. ಬಡವ ರಾಸ್ಕಲ್‌ ನಮ್ಮನ್ನೆಲ್ಲ ಬೆಳೆಸುವ ಚಿತ್ರವಾಗಲಿ' ಎಂದು ಧನಂಜಯ್ ಇತ್ತೀಚೆಗೆ ನಡೆದ ಚಿತ್ರದ ಟ್ರೈಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ತಿಳಿಸಿದರು.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ