
ಸ್ಯಾಂಡಲ್ ವುಡ್ ನಟಿ, ನಿರ್ದೇಶಕ ಪವನ್ ಒಡೆಯರ್ ಪತ್ನಿ ಅಪೇಕ್ಷಾ ಪುರೋಹಿತ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇಂದು ಬೆಳಗ್ಗೆ ಮಗುವಿಗೆ ಜನ್ಮ ನೀಡಿದ್ದು ತಾಯಿ ಮತ್ತು ಮಗು ಆರಾಮಾಗಿದ್ದಾರೆ ಇದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮಗಳು ಜನಿಸಿದ ಸಂತಸದ ವಿಚಾರವನ್ನು ನಿರ್ದೇಶಕ ಪವನ್ ಒಡೆಯರ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಅಂದಹಾಗೆ ಪವನ್ ಒಡೆಯರ್ ಮತ್ತು ಅಪೇಕ್ಷಾ ದಂಪತಿಗೆ ಇದು ಎರಡನೇ ಮಗು. ಮಗಳನ್ನು ಸ್ವಾಗತಿಸಿದ ಪವನ್ ಮತ್ತು ಅಪೇಕ್ಷಾ ದಂಪತಿಗೆ ಅಭಿಮಾನಿಗಳು ಹಾಗೂ ಗಣ್ಯರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಾರ್ಟ್ ಇಮೋಜಿ ಇರಿಸಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.
ಅಪೇಕ್ಷಾ ಮತ್ತು ಪವನ್ ದಂಪತಿ 2020 ಡಿಸೆಂಬರ್‌ನಲ್ಲಿ ಮೊದಲ ಮಗುವನ್ನು ಸ್ವಾಗತಿಸಿದ್ದರು. ಮಗನಿಗೆ ಶೌರ್ಯ ಎಂದು ಹೆಸರಿಟ್ಟಿದ್ದಾರೆ. ಇದೀಗ 2ನೇ ಮಗು ಜನಿಸಿದ ಸಂತಸದಲ್ಲಿದ್ದಾರೆ. ಮನೆಗೆ ಲಕ್ಷ್ಮೀ ಬಂದ ಖುಷಿಯನ್ನು ಪವನ್ ಒಡೆಯರ್ ಪತ್ನಿ ಜೊತೆ ಸಲ್ಫಿ ಶೇರ್ ಮಾಡಿ ಬಹಿರಂಗ ಪಡಿಸಿದ್ದಾರೆ.
ನಟಿ ಅಪೇಕ್ಷಾ ಪುರೋಹಿತ್ ಸರಳ ಸೀಮಂತ; ನಿರ್ದೇಶಕ ಪವನ್ ಮನೆಯಲ್ಲಿ ಸಂಭ್ರಮ!
ಇತ್ತೀಚೆಗಷ್ಟೆ ಅಪೇಕ್ಷಾ 2ನೇ ಬಾರಿ ಗರ್ಭಿಣಿ ಆಗಿರುವ ವಿಚಾರವನ್ನು ಬಹಿರಂಗ ಪಡಿಸಿದ್ದರು. ಸುಂದರ ಫೋಟೋಗಳನ್ನು ಶೇರ್ ಮಾಡಿ ಸಂತಸದ ಸುದ್ದಿ ಹಂಚಿಕೊಂಡಿದ್ದರು. ಬಳಿಕ ಸಱಲ ಸೀಮಂತ ಸಂಭ್ರಮದಲ್ಲಿ ಮಿಂಚಿದ್ದರು. ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ಅಪೇಕ್ಷಾ ಸೀಮಂತ ನೆರವೇರಿತ್ತು. ಫೋಟೋಗಳನ್ನು ಶೇರ್ ಮಾಡಿ ಆಶೀರ್ವಾದ ಇರಲಿ ಎಂದು ಕೇಳಿಕೊಂಡಿದ್ದರು. ಅಪೇಕ್ಷಾ ಮತ್ತು ಪವನ್ ಒಡೆಯರ್ ಆಗಸ್ಟ್ 20, 2018ರಲ್ಲಿ ವೈವೈಹಿಕ ಜೀವನಕ್ಕೆ ಕಾಲಿಟ್ಟರು.
ಅಪೇಕ್ಷಾ ಪುರೋಹಿತ್ ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಾಫಿ ತೋಟ ಸಿನಿಮಾ ಮೂಲಕ ಮೊದಲ ಬಾರಿಗೆ ದೊಡ್ಡ ಪರದೆ ಮೇಲೆ ಮಿಂಚಿದರು. ಬಳಿಕ ಸಾಗುತಾ ದೂರ ದೂರಾ ಸಿನಿಮಾದಲ್ಲಿ ಮಿಂಚಿದರು. ಎಡುರು ಸಿನಿಮಾ ಮಾಡುತ್ತಿದ್ದಂತೆ ನಿರ್ದೇಶಕ ಪವನ್ ಒಡಯರ್ ಜೊತೆ ದಾಂಪತ್ಯಕ್ಕೆ ಕಾಲಿಟ್ಟರು. ಬಳಿಕ ಡೊಳ್ಳು ಸಿನಿಮಾ ಮೂಲಕ ನಿರ್ಮಾಪಕಿಯಾಗಿ ಗುರುತಿಸಿಕೊಂಡರು. ಇದೀಗ 2ನೇ ಮಗುವಿಗೆ ಜನ್ಮ ನೀಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.