ವಜ್ರಮುನಿಯಾಗಿ ಎಂಟ್ರಿ ಕೊಟ್ಟ ನಟ ಕೋಮಲ್: 'ಯಲಾ ಕುನ್ನೀ' ಪೋಸ್ಟರ್ ವೈರಲ್

Published : Jul 04, 2023, 05:22 PM IST
ವಜ್ರಮುನಿಯಾಗಿ ಎಂಟ್ರಿ ಕೊಟ್ಟ ನಟ ಕೋಮಲ್: 'ಯಲಾ ಕುನ್ನೀ'  ಪೋಸ್ಟರ್ ವೈರಲ್

ಸಾರಾಂಶ

ಸ್ಯಾಂಡಲ್ ವುಡ್‌ನ ಕಾಮಿಡಿ ಸ್ಟಾರ್ ಕೋಮಲ್ ಹುಟ್ಟುಹಬ್ಬದ ದಿನ ವಜ್ರಮುನಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಯಲಾ ಕುನ್ನಿ ಟೈಟಲ್‌ನಲ್ಲಿ ಸಿನಿಮಾ ಮಾಡುತ್ತಿದ್ದು ಪೋಸ್ಟರ್ ವೈರಲ್ ಆಗಿದೆ. 

ಕನ್ನಡ ಸಿನಿಮಾರಂಗ ಕಂಡ ಖ್ಯಾತ ವಿಲನ್ ವಜ್ರಮುನಿ. ಖಡಕ್ ಡೈಲಾಗ್, ಅಗಲ ಕಣ್ಣು, ಗಂಭೀರ ನೋಟ ತೆರೆಮೇಲೆ ವಜ್ರಮುನಿಯನ್ನು ನೋಡೋದೆ ಅದ್ಭುತ. ತರಹೇವಾರಿ ಪಾತ್ರಗಳ ಮೂಲಕ ಸ್ಯಾಂಡಲ್ ವುಡ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದ ನಟ. ವಜ್ರಮುನಿ ಅವರಿಗೆ ಸರಿಸಮಾನವಾದ ನಟ ಮತ್ತೊಬ್ಬರಿಲ್ಲ ಎಂದರೆ ತಪ್ಪಾಗಲ್ಲ. ವಜ್ರಮುನಿಯವರ ಯಲಾ ಕುನ್ನೀ ಡೈಲಾಗ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ವಿಶೇಷ ಎಂದರೆ ಇದೀಗ ಅದೇ ಹೆಸರಿನಲ್ಲಿ ಸಿನಿಮಾವೊಂದು ಸೆಟ್ಟೇರಿದೆ. ಕಾಮಿಡಿ ಸ್ಟಾರ್ ಕೋಮಲ್ ನಾಯಕನಾಗಿ ನಟಿಸುತ್ತಿದ್ದಾರೆ. ಇಂದು (ಜುಲೈ 4) ಕೋಮಲ್ ಜನ್ಮದಿನ. ಆ ಪ್ರಯುಕ್ತ ಹೊಸ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ವಜ್ರಮುನಿ ಲುಕ್​ನಲ್ಲಿಯೇ ಕೋಮಲ್ ಕಾಣಿಸಿಕೊಂಡಿದ್ದು ಪೋಸ್ಟರ್ ವೈರಲ್ ಆಗಿದೆ. 

‘ಯಲಾ ಕುನ್ನಿ’ ಸಿನಿಮಾವನ್ನು ‘ಸೌಭಾಗ್ಯ ಸಿನಿಮಾಸ್’ ಬ್ಯಾನರ್​ ಮೂಲಕ ಮಹೇಶ್ ಗೌಡ ಅವರು ನಿರ್ಮಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ಎನ್.ಆರ್. ಪ್ರದೀಪ್ ಅವರು ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಹೊಸ ಪೋಸ್ಟರ್​ ಮೂಲಕ ನಟ ಕೋಮಲ್​ ಕುಮಾರ್​ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲಾಗಿದೆ. ವಜ್ರಮುನಿ ಗೆಟಪ್​ನಲ್ಲಿರುವ ಈ ಫಸ್ಟ್​ ಲುಕ್​ ಪೋಸ್ಟರ್​ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. 

ಕೇತು ದೆಸೆ ಇತ್ತು, ದರಿದ್ರ ಅದು; ಸಾವನ್ನು ಗೆದ್ದ ಸಹೋದರ ಕೋಮಲ್ ಬಗ್ಗೆ ಜಗ್ಗೇಶ್ ಮಾತು

ಅಭಿಮಾನಿಗಳು ಮಾತ್ರವಲ್ಲದೇ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಕೂಡ ‘ಎಲಾ ಕುನ್ನಿ’ ಚಿತ್ರದ ಪೋಸ್ಟರ್ ಶೇರ್​ ಮಾಡಿಕೊಂಡಿದ್ದಾರೆ. ಕಾಮಿಡಿ ಸ್ಟಾರ್ ಕೋಮಲ್​ ಅವರನ್ನು ವಜ್ರಮುನಿ ಸ್ಟೈಲ್​ನಲ್ಲಿ ನೋಡಿದ ಮೇಲೆ ಈ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ವಿಶೇಷ ಏನೆಂದರೆ, ಬರೀ ಪೋಸ್ಟರ್​ನಲ್ಲಿ ಮಾತ್ರವಲ್ಲದೇ ‘ಎಲಾ ಕುನ್ನಿ’ ಸಿನಿಮಾದ ಬಹುತೇಕ ದೃಶ್ಯಗಳಲ್ಲಿ ಕೋಮಲ್​ ಕುಮಾರ್​ ಅವರು ವಜ್ರಮುನಿ ಗೆಟಪ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ದಿನಕ್ಕೆ 4 ಲಕ್ಷ ಸಂಭಾವನೆ, ಈಗ ಲೆಕ್ಕ ವಿಚಾರ ಇಷ್ಟವಿಲ್ಲ: ನಟ ಕೋಮಲ್ ಶಾಕಿಂಗ್ ಹೇಳಿಕೆ

ಇನ್ನು ವಿಶೇಷ ಎಂದರೆ ಈ ಸಿನಿಮಾದಲ್ಲಿ ಕೋಮಲ್ ಅವರ ಸಹೋದರ ‘ನವರಸ ನಾಯಕ’ ಜಗ್ಗೇಶ್ ಅವರ ಮಗ ಯತಿರಾಜ್ ಹಾಗೂ ವಜ್ರಮುನಿ ಅವರ ಮೊಮ್ಮಗ ಆಕರ್ಶ್ ಸಹ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ‘ಎಲಾ ಕುನ್ನಿ’ ಈ ಶೀರ್ಷಿಯೇ ಈಗ ಗಮನ ಸೆಳೆಯುತ್ತಿದೆ. ಅಷ್ಟೇ ಅಲ್ಲದೇ, ‘ಮೇರಾ ನಾಮ್ ವಜ್ರಮುನಿ’ ಎಂಬ ಟ್ಯಾಗ್​ ಲೈಗ್​ ಕೂಡ ಹೈಲೈಟ್​ ಆಗಿದೆ. ‘ನರಕ ತುಂಬಿ ಮರಳಿ ಬಂದ ರಾಮನ ಗುಣದ ರಾವಣ’ ಎಂಬ ಸಾಲು ಈ ಪೋಸ್ಟರ್​ನಲ್ಲಿದೆ. ಅನೇಕ ಕಾರಣಕ್ಕೆ ‘ಎಲಾ ಕುನ್ನಿ’ ಸಿನಿಮಾ ನಿರೀಕ್ಷೆ ಮೂಡಿಸಿದ್ದು ಕೋಮಲ್ ವಜ್ರಮುನಿಯಾಗಿ ಹೇಗೆ ಮಿಂಚಲಿದ್ದಾರೆ ಎಂದು ಕಾದು ನೋಡಬೇಕು.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Kichcha Sudeep: ರಣಹದ್ದಿನ ಬಗ್ಗೆ ಕಿಚ್ಚ ಸುದೀಪ್‌ ಹೇಳಿದ್ದೇನು? ನಿಜ ಏನು?
BBK 12 ಫಿನಾಲೆ ಬೆನ್ನಲ್ಲೇ ಹೊಸ ವಿವಾದ, ಗಿಲ್ಲಿ ನಟ ಅಶ್ವಿನಿ ಗೌಡ ಫ್ಯಾನ್ಸ್ ನಡುವೆ ಭಾಷೆ ಜೊತೆ ಜಾತಿ ಜಗಳ..!