ನಟಿ ಹರ್ಷಕಾ ಪೂಣಚ್ಚ ಮನೆಯಲ್ಲಿ ಆಸ್ತಿಗೆ ಜಗಳ; 'ಯಜಮಾನ' ಸಿನಿಮಾ ತೋರಿಸಿದ ತಾತ!

Published : Jul 05, 2023, 09:29 AM IST
ನಟಿ ಹರ್ಷಕಾ ಪೂಣಚ್ಚ ಮನೆಯಲ್ಲಿ ಆಸ್ತಿಗೆ ಜಗಳ; 'ಯಜಮಾನ' ಸಿನಿಮಾ ತೋರಿಸಿದ ತಾತ!

ಸಾರಾಂಶ

ತಾತ ಮಾಡಿದ ಮಹಾ ಕೆಲಸದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡ ನಟಿ ಹರ್ಷಿಕಾ ಪೂಣಚ್ಚ. ಯಾರೆಲ್ಲಾ ಯಜಮಾನ ಸಿನಿಮಾ ನೋಡ್ಬೇಕು? 

ಚಂದನವನದ ಸುಂದರಿ ಹರ್ಷಿಕಾ ಪೂಣಚ್ಚ ಮನೆಯಲ್ಲಿ ವಾದ್ಯಗಳ ಸದ್ದು ಕೇಳಿ ಬರುತ್ತಿದೆ. ಭುವನ್ ಪೊನ್ನಪ್ಪ ಮತ್ತು ಹರ್ಷಿಕಾ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು ಪೋಷಕರ ಅನುಮತಿ ಮೇಲೆ ಅದ್ಧೂರಿಯಾಗಿ ಮದುವೆಯಾಗಲು ಸಜ್ಜಾಗಿದ್ದಾರೆ. ಈ ನಡುವೆ ಹರ್ಷಿಕಾ ಹಳೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿದೆ. ಆಸ್ತಿಗೆ ಮನಸ್ಥಾಪ ಉಂಟಾದರೆ ಏನು ಮಾಡಬೇಕು ಎಂದು ಸಣ್ಣ ಪರಿಹಾರ ಕೊಟ್ಟಿದ್ದಾರೆ.  

'ನನ್ನ ತಂದೆ ಈ ಒಂದು ವಿಚಾರವನ್ನು ನನಗೆ ಸದಾ ಹೇಳುತ್ತಿದ್ದರು. ನನ್ನ ತಂದೆ ಜೊತೆ ಮೂವರು ಸಹೋದರರು, ಮದುವೆ ಸಮಯದಲ್ಲಿ ಮನಸ್ಥಾಪ ಬಂತು ಆಸ್ತಿ ಭಾಗ ಮಾಡಬೇಕು ಯಾರಿಗೆ ಎಷ್ಟು ಕೊಡಬೇಕು ಅನ್ನೋ ಚರ್ಚೆ ಜೋರು ಮಾಡಿದಾಗ ನನ್ನ ತಾಯಿ ಮಕ್ಕಳನ್ನು ಸರಿ ದಾರಿಗೆ ತರಬೇಕು ಎಂದು ಸಿನಿಮಾಗೆ ಕರೆದುಕೊಂಡು ಹೋಗಿದ್ದರಂತೆ. ಮೂವರು ಒಟ್ಟಿಗೆ ಕುಳಿತುಕೊಂಡು ನೋಡಿದ ಸಿನಿಮಾ ಯಜಮಾನ. ಯಜಮಾನ ಸಿನಿಮಾವನ್ನು ಸಂಪೂರ್ಣವಾಗಿ ನೋಡಿ ಜೀವನ ಸಂಬಂಧ ಹೇಗೆ ಅನ್ನೋದನ್ನು ಕಲಿತುಕೊಳ್ಳಿ ಎಂದು ಹೇಳಿದ್ದರಂತೆ. ಯಜಮಾನ ಸಿನಿಮಾ ಅಂದ್ರೆ ಒಗಟ್ಟು ಫ್ಯಾಮಿಲಿಗೆ ಎಷ್ಟು ಪ್ರಮುಖ್ಯತೆ ನೀಡಬೇಕು ಮದುವೆ ಆದ್ಮೇಲೆ ಕುಟುಂಬ ಬಿಟ್ಟು ಮತ್ತೊಂದು ಮನೆ ಮಾಡಬಾರದು ಅನ್ನೋದನ್ನು ತಿಳಿಸಿದ್ದಾರೆ ಅಷ್ಟು ಅರ್ಥ ಪೂರ್ಣವಾದ ಸಿನಿಮಾ' ಎಂದು ಹರ್ಷಿಕಾ ಪೂಣಚ್ಚ ಕಾಸಿನ ಸರ ಸಿನಿಮಾ ಪ್ರೆಸ್‌ಮೀಟ್ ಸಮಯದಲ್ಲಿ ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

ಕನ್ನಡ ಚಿತ್ರರಂಗದ ಸಾಹಸ ಸಿಂಹ ವಿಷ್ಣುವರ್ಧನ್, ಪ್ರೇಮಾ, ರಮೇಶ್ ಭಟ್, ಅವಿನಾಶ್, ಟೆನ್ನಿಸ್ ಕೃಷ್ಣ, ಎಮ್‌ ಎನ್‌ ಲಕ್ಷ್ಮಿ ಮತ್ತು ಪವಿತ್ರಾ ಲೋಕೇಶ್ ಅಭಿನಯಿಸಿರುವ ಯಜಮಾನ ಸಿನಿಮಾ 2000ರಲ್ಲಿ ರಿಲೀಸ್ ಆಗಿತ್ತು. ಶಂಕರ್ ಪಾತ್ರದಲ್ಲಿ ಮಿಂಚಿರುವ ವಿಷ್ಣುವರ್ಧನ್ ತಮ್ಮ ಆಸೆ ಆಕಾಂಕ್ಷೆಗಳನ್ನು ತ್ಯಾಗ ಮಾಡಿ ಸಹೋದರರ ವಿದ್ಯಾಭ್ಯಾಸ ಹಾಗೂ ಮದುವೆ ಕಡೆ ಹೆಚ್ಚಿಗೆ ಗಮನ ಕೊಡುತ್ತಾರೆ. ಮದುವೆ ನಂತರ ನಡೆಯುವ ಕಥೆನೇ ಜನರಿಗೆ ಜೀವನ ಪಾಠ ಹೇಳುತ್ತದೆ. ಪ್ರೇಮಾಚಂದ್ರಮಾ, ಮೈಸೂರು ಮಲ್ಲಿಗೆ, ಶ್ರೀಗಂಧದ ಗೊಂಬೆ, ನಮ್ಮ ಮನೆಯಲ್ಲಿ ದಿನವೂ ಚೈತ್ರವೇ, ಓ ಮೈನಾ ಮತ್ತು ನವೀಲೆ ಪಂಚರಂಗಿ ನವೀಲೆ ಹಾಡುಗಳು ಸಖತ್ ವೈರಲ್ ಆಗಿತ್ತು.

ವಿಜಯ್ ರಾಘವೇಂದ್ರ ಮತ್ತು ಹರ್ಷಿಕಾ ಪೂಣಚ್ಚ ನಟನೆಯ ಕಾಸಿನ ಸರ ಸಿನಿಮಾ ಭರ್ಜರಿ ಓಪನಿಂಗ್ ಪಡೆದುಕೊಂಡು ಬಾಕ್ಸ್‌ ಆಫೀಸ್‌ನಲ್ಲಿ ಕಲೆಕ್ಷನ್ ಮಾಡಿತ್ತು. ‘ಈ ಸಿನಿಮಾದಲ್ಲಿ ಮಾಡಿದ ಮೇಲೆ ನಾನೂ ರೈತನನ್ನೇ ಮದ್ವೆ ಆಗ್ಬೇಕು ಅಂದುಕೊಂಡಿದ್ದೇನೆ’ ಎಂದು ನಟಿ ಹರ್ಷಿಕಾ ಪೂಣಚ್ಚ ಹೇಳಿದ್ದಾರೆ. ಜೊತೆಗೆ ‘ಕಾಫಿ ಪ್ಲಾಂಟರ್‌ನನ್ನೂ ರೈತ ಅಂತಲೇ ಹೇಳಬಹುದಲ್ವಾ?’ ಅಂತ ಪಕ್ಕದಲ್ಲಿದ್ದ ನಿರ್ದೇಶಕರನ್ನು ವಿಚಾರಿಸಿದ್ದಾರೆ. ಸಿಟಿ ಹುಡುಗರನ್ನೇ ಬಯಸ್ತಾರೆ’ ಅಂದದ್ದನ್ನು ಕೇಳಿದ ಹರ್ಷಿಕಾ ತಮ್ಮ ಮಾತಿನ ವೇಳೆ ತಾನು ರೈತನನ್ನು ಮದುವೆ ಆಗೋ ನಿರ್ಧಾರವನ್ನು ಹೇಳಿದರು. ‘ಕಾಸಿನ ಸರ’ ಸಿನಿಮಾ ಮಾಡಿದ ಮೇಲೆ ಅವರು ಈ ನಿರ್ಧಾರಕ್ಕೆ ಬಂದಿದ್ದಾರಂತೆ. ಹೀಗೆ ನೋಡಿದರೆ ನಾಲ್ಕು ತಿಂಗಳು ಮುನ್ನವೇ ಹರ್ಷಿಕಾ ಮದುವೆ ಮುನ್ಸೂಚನೆ ನೀಡಿದ್ದರು ಎನ್ನಬಹುದು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?
ದೈವದ ಮಾತು ನಿಜವಾಯ್ತು, ಹರಕೆ ತೀರಿಸಲು ದಂಪತಿ ಸಮೇತ ಬಂದ ರಿಷಬ್ ಶೆಟ್ಟಿ