ಜಯಂತಿ ಅಮ್ಮನ ಜೊತೆ ಕಳೆದ ಅಷ್ಟೂ ವರ್ಷ ನನ್ನ ಜೀವನದ ಬೆಸ್ಟ್ ಕ್ಷಣಗಳು ಎಂದ ಅನು ಪ್ರಭಾಕರ್. ಮಲ್ಲಿಗೆ ಹೂವು ಅಂದ್ರೆ ಸಿಕ್ಕಾಪಟ್ಟೆ ಇಷ್ಟವಂತೆ.....
ಕನ್ನಡ ಚಿತ್ರರಂಗದ ಅದ್ಭುತ ನಟಿ ಅನುಪ್ರಭಾಕರ್ ಮತ್ತು ನಟಿ ಜಯಂತಿ ಅವರ ಪುತ್ರಿ ಹಲವು ವರ್ಷಗಳ ಹಿಂದೆ ಪ್ರೀತಿಸಿ ಮದುವೆ ಮಾಡಿಕೊಂಡರು. ವೈಯಕ್ತಿಕ ಕಾರಣಗಳಿಂದ ಇಬ್ಬರೂ ವಿಚ್ಛೇದನ ಪಡೆದರು. ಈ ಸಣ್ಣ ಅವಧಿಯಲ್ಲಿ ಜಯಂತಿ ಅಮ್ಮನವರ ಜೊತೆ ಹೆಚ್ಚಿಗೆ ಸಮಯ ಕಳೆದಿದ್ದು ನಟಿ ಅನು ಪ್ರಭಾಕರ್. ಎಲ್ಲೇ ಹೋಗದರು ಅತ್ತೆ ಸೊಸೆ ಒಟ್ಟಿಗೆ ಇರುತ್ತಾರೆ ಅನ್ನೋದು ಜನರು ಮಾತಾಗಿತ್ತು ಹಾಗೇ ದೂರವಾದ ಮೇಲೆ ಅನು ಬಿಟ್ಟೇ ಬಿಟ್ಟರು ಅನ್ನೋ ಮಾತು ಇತ್ತು. ಜಯಂತಿ ಅಮ್ಮನ ಜೊತೆ ತಮ್ಮ ಸಂಬಂಧ ಹೇಗಿತ್ತು ಎಂದು ಅನು ಹಂಚಿಕೊಂಡಿದ್ದಾರೆ.
'ನಾನು ಮದುವೆಯಾಗಿ ಜಯಂತಿ ಅಮ್ಮ ಅವರ ಜೊತೆ ಆ ಮನೆಯಲ್ಲಿ ಖುಷಿಯಾಗಿದ್ದೆ. ಕೆಲಸದಲ್ಲಿ ಟಾಪ್ ಇದ್ದಾಗ ಮದುವೆ ಆಗಬೇಕು ಅನ್ನೋ ನಿರ್ಧಾರಕ್ಕೆ ತಂದೆ ತಾಯಿ ಸಪೋರ್ಟ್ ಕೊಟ್ಟರು ಆದರೆ ಜನರು ಮಾತನಾಡಲು ಶುರು ಮಾಡಿದ್ದರು ಆದರೆ ನಾನು ಸಂತೋಷದಿಂದ ಈ ನಿರ್ಧಾರ ತೆಗೆದುಕೊಂಡೆ. ಮದುವೆ ಆದ ಮೇಲೆ ಕೆಲಸಗಳಲ್ಲಿ ಬ್ಯುಸಿಯಾಗಿದ್ದರೆ ಅಲ್ಲದೆ ಮದುವೆ ನಂತರ ಜಯಂತಿ ಅಮ್ಮನವರ ಜೊತೆ ಹೆಚ್ಚಿಗೆ ಸಮಯ ಕಳೆಯಲು ಅವಕಾಶ ಸಿಕ್ಕಿತ್ತು. ಜಯಂತಿ ಅಮ್ಮನವರಿಗೆ ನಾನ್ ವೆಚ್ ಅಂದ್ರೆ ತುಂಬಾನೇ ಇಷ್ಟ ಆದರೆ ನಾನು ಯಾವತ್ತೂ ತಿಂದಿರಲಿಲ್ಲ ಆದರೂ ಅವರಿಗಾಗಿ ಅಡುಗೆ ಮಾಡಲು ಕಲಿತೆ. ನಾನು ಮಾಡಿದ್ದ ನಾನ್ ವೆಚ್‌ನ ತುಂಬಾ ಖುಷಿಯಿಂದ ತಿನ್ನುತ್ತಿದ್ದರು' ಎಂದು ಕನ್ನಡ ಖಾಸಗಿ ಟಿವಿ ಸಂದರ್ಶನದಲ್ಲಿ ಅನು ಪ್ರಭಾಕರ್ ಮಾತನಾಡಿದ್ದಾರೆ.
undefined
ಹೈದರಾಬಾದ್ ಥಿಯೇಟರ್‌ನಲ್ಲಿ ಕಿರುತೆರೆ ನಟನಿಗೆ ಕಪ್ಪಾಳಮೋಕ್ಷ; ನಿಜಕ್ಕೂ ಆಗಿದ್ದು ಏನೆಂದು
'ನನ್ನ ಬಳಿ ತುಂಬಾ ಬೇಜಾರಿನಲ್ಲಿ ಹೇಳಿಕೊಳ್ಳುತ್ತಿದ್ದರು ಯಾರೂ 10 ರೂಪಾಯಿ ಕೊಟ್ಟು ನನಗೆ ಮಲ್ಲಿಗೆ ಹೂವು ತಂದುಕೊಡುತ್ತಿಲ್ಲ ಎಂದು ಹೀಗಾಗಿ ಯಾವುದೇ ಸಿಗ್ನಲ್‌ನಲ್ಲಿ ನಾನು ಮಲ್ಲಿಗೆ ಹೂವ ನೋಡಿದರೆ ತೆಗೆದುಕೊಂಡು ಕೊಡುತ್ತಿದೆ...ಆ ದಿನ ಮಲ್ಲಿಗೆ ಹೂವನ್ನು ಬಿಡಿಸಿ ತಮ್ಮ ಹಾಸಿಗೆ ಮೇಲೆ ಹಾಕಿಕೊಂಡು ಮಲಗುತ್ತಿದ್ದರು, ನನ್ನ ಸೊಸೆ ತಂದುಕೊಟ್ಟಳು ಎಂದು. ಜಯಂತಿ ಅಮ್ಮ ಜೊತೆ ಒಳ್ಳೆ ನೆನೆಪುಗಳು ತುಂಬಾ ಇದೆ. ನನ್ನ ತಾಯಿ ಮತ್ತು ಜಯಂತಿ ಅಮ್ಮ ಒಟ್ಟಿಗೆ ನಿಂತು ಸಮಸ್ಯೆಗಳನ್ನು ಸರಿ ಮಾಡೋಣ ಎಂದು ಮುಂದಾದರೆ ಆದರೆ ಯಾವುದೂ ಬದಲಾಗದ ಕಾರಣ ಕಷ್ಟ ಪಟ್ಟು ಒಟ್ಟಿಗೆ ಇರುವ ಬದಲು ದೂರವಾಗಿ ಖುಷಿಯಾಗಿ ಇರೋಣ ಎಂದು ದೂರವಾಗಿದ್ದು, ಇದರಿಂದ ನನ್ನ ತಾಯಿ ಮತ್ತು ಅಮ್ಮನಿಗೆ ಬೇಸರ ಆಗಿತ್ತು ನಿಜ. ಅಷ್ಟು ಬೇಗ ಮದುವೆ ಮಾಡಿಕೊಂಡಿದ್ದಕ್ಕೆ ನನಗೆ ಯಾವುದೇ ಬೇಸರ ಇಲ್ಲ. ಹೆಣ್ಣು ಮಕ್ಕಳಾಗಿ ನಾವು ಇಂಡಿಪೆಂಡೆಂಟ್ ಆಗಿ ಇರಬೇಕು ಅನ್ನೋದು ಜಯಂತಿ ಅಮ್ಮ ಹೇಳುತ್ತಿದ್ದರು. ಅವರು ಜೀವನದಲ್ಲಿ ತುಂಬಾ ನೋವುಗಳನ್ನು ತಿಂದಿದ್ದಾರೆ ಆ ನೋವುಗಳನ್ನು ನನ್ನ ಜೊತೆ ಹಂಚಿಕೊಂಡು ಕಣ್ಣೀರಿಟ್ಟಿದ್ದರು' ಎಂದು ಅನು ಪ್ರಭಾಕರ್ ಹೇಳಿದ್ದಾರೆ.
10 ಸಲ ಸೋತು 1 ಸಲ ಗೆದ್ದಿರುವೆ; ಬೆಸ್ಟ್ ಎಂಟರ್ಟೈನರ್ ಅವಾರ್ಡ್ ಪಡೆದ ಗಿಲ್ಲಿ ನಟ!