
ಬೆಂಗಳೂರು: ನಟರಾದ ಸಾಹಸಸಿಂಹ ವಿಷ್ಣುವರ್ಧನ್ ಮತ್ತು ರೆಬೆಲ್‌ಸ್ಟಾರ್ ಅಂಬರೀಶ್ ಗೆಳೆತನ ಒಂದೇ ಜೀವ ಎರಡು ದೇಹದಂತಿತ್ತು. ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿಲ್ಲ ಅನ್ನೋದು ಬಿಟ್ಟರೆ, ಒಡಹುಟ್ಟಿದವರ ರೀತಿಯಲ್ಲಿ ವಿಷ್ಣುವರ್ಧನ್ ಮತ್ತು ಅಂಬರೀಶ್ ಇದ್ದರು. ಅಂಬಿ ನನ್ನ ರಾಯಲ್ ಆಂಡ್ ಲಾಯಲ್ ಫ್ರೆಂಡ್ ಎಂದು ವಿಷ್ಣುವರ್ಧನ್ ಹೇಳಿದ್ದರು. ಇಬ್ಬರ ಗೆಳೆತನ ಕಂಡವರು ಗೆಳೆಯರು ಅಂದ್ರೆ ಹೀಗಿರಬೇಕು ಅಂತಿದ್ದರು. ವಿಷ್ಣುವರ್ಧನ್ ಸುದ್ದಿ ತಿಳಿದು ಅಳುತ್ತಲೇ ಅಂಬರೀಶ್ ಬಂದಿದ್ದರು. ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿಯೂ ಕರುವನ್ನು ಕಳೆದುಕೊಂಡ ಹಸುವಿನಂತೆ ಅಂಬರೀಶ್ ಗಳಗಳನೇ ಕಣ್ಣೀರು ಹಾಕಿದ್ದರು.
ವಿಷ್ಣುವರ್ಧನ್ ಸಾವಿನ ಸುದ್ದಿ ಸಿಗುತ್ತಿದ್ದಂತೆ ಅಂಬರೀಶ್ ನಂಬಿರಲಿಲ್ಲ. ಆಗ ಆ ಸುದ್ದಿ ಸುಳ್ಳು ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಲೇ ವಿಷ್ಣು ಅಂಕಲ್ ಮನೆಗೆ ಫೋನ್ ಮಾಡಿದಾಗ ನಿಜ ಎಂದು ಗೊತ್ತಾಯ್ತು. ಅಷ್ಟು ಆಪ್ತ ಗೆಳೆಯನ ನಿಧನದ ಸುದ್ದಿ ಹೇಳೋದು ಹೇಗೆ ಅಂತ ನಮಗೆ ತೋಚಲಿಲ್ಲ ಎಂದು ಅಂಬರೀಶ್ ಮಗ ಅಭಿಷೇಕ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಆ ವೇಳೆ ನಾವಿನ್ನೂ ಚಿಕ್ಕವರು. ನನ್ನನ್ನು ಬಿಟ್ಟು ಅಪ್ಪ-ಅಮ್ಮ ಅಂಬರೀಶ್ ಮನೆಗೆ ಹೋದರು. ನಾನು ಮನೆಯಲ್ಲಿಯೇ ಕುಳಿತು ವಿಷ್ಣು ಅಂಕಲ್ ಮನೆ ಬಳಿ ಏನು ನಡೆಯುತ್ತಿದೆ ಎಂದು ಟಿವಿಗಳಲ್ಲಿ ನೋಡುತ್ತಾ ಕುಳಿತಿದ್ದೆ ಎಂದು ಅಭಿಷೇಕ್ ಹೇಳಿದ್ದರು.
ಅಲ್ಲಿಗೆ ತೆರಳಿದ ಬಳಿಕ, ನನಗೆ ಬರಬೇಡ. ಇಲ್ಲಿ ತುಂಬಾ ಜನರಿದ್ದಾರೆ ಎಂದು ಅಮ್ಮ ಹೇಳಿ ಕಳುಹಿಸಿದರು. ಅಂದು ರಾತ್ರಿ ಮನೆಯಲ್ಲಿ ನಾನು ಮತ್ತು ಇಬ್ಬರು ಕೆಲಸದವರಿದ್ದರು. ನಾವು ಊಟ ಮಾಡದೇ ಅಪ್ಪ ಬರೋದನ್ನೇ ಕಾಯುತ್ತಾ ಕುಳಿತಿದ್ದೇವು. ಸಾಮಾನ್ಯ ದಿನಗಳಲ್ಲಿ ರಾತ್ರಿ ಎಷ್ಟೇ ಗಂಟೆಗೂ ಬಂದರೂ ಅಪ್ಪ, ಕೆಲ ಸಮಯ ಸ್ಪೋರ್ಟ್ಸ್ ಚಾನೆಲ್ ನೋಡುತ್ತಾರೆ. ಅದರಿಂದ ಅವರಿಗೆ ಒಂದು ರೀತಿಯಲ್ಲಿ ರಿಲ್ಯಾಕ್ಸ್ ಆಗುತ್ತಿತ್ತು. ಲೈವ್ ಮ್ಯಾಚ್ ಇರಬೇಕು ಅಂತೇನಿರಲಿಲ್ಲ, ಟೆನ್ನಿಸ್, ಕ್ರಿಕೆಟ್ ಹೀಗೆ ಯಾವುದೇ ಒಂದು ಪಂದ್ಯ ನೋಡುತ್ತಿದ್ದರು. ವಿಷ್ಣು ಅಂಕಲ್ ಅವರ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದಾಗ ಅವರು ಹೇಳುವೆ ಮುಂಚೆಯೇ ಸ್ಪೋರ್ಟ್ಸ್ ಚಾನೆಲ್ ಹಾಕಿದ್ದೆ. ಅಂದು ಮನೆಗೆ ಬಂದ ಅಪ್ಪಾ. ಒಂದು ನಿಮಿಷ ಸುಮ್ಮನೆ ಕುಳಿತರು. ಟಿವಿ ನೋಡಲಿಲ್ಲ ಎಂದು ಅಭಿಷಕ್ ಹೇಳಿದರು.
ಇದನ್ನೂ ಓದಿ: ವಿಷ್ಣುವರ್ಧನ್‌ಗೆ 'ಕೈ ಕಡಗ' ಸಿಕ್ಕಿದ್ದು ಎಲ್ಲಿ? ಅದರ ಹಿಂದಿದೆ ಬಲು ರೋಚಕ ಕಹಾನಿ!
ಮನೆಗೆ ಬಂದ ಕೂಡಲೇ ಅಪ್ಪಾ ಏನು ಮಾತನಾಡಲಿಲ್ಲ. ಟಿವಿಯನ್ನು ನೋಡದೇ ಆಫ್ ಮಾಡಿದರು. ನಾನು ಊಟ ಮಾಡ್ತೀರಾ ಅಂತ ಕೇಳಿದೆ. ಅದಕ್ಕೂ ಏನು ಹೇಳಲಿಲ್ಲ. ಬೆಡ್‌ರೂಮ್‌ಗೆ ಹೋಗುವಾಗ, ಹುಷಾರು ಇರಲಿಲ್ಲ ಅಂತ ಕಣೋ, ನನಗೆ ಹೇಳೇ ಇರಲಿಲ್ಲ ಎಂದು ಹೇಳಿ ಅಪ್ಪ ಹೋಗಿ ಮಲಗಿದರು. ಅದೇ ಕೊನೆ, ಅದಾದ ಬಳಿಕ ಅಪ್ಪಾ ಇರೋವರೆಗೂ ವಿಷ್ಣು ಅಂಕಲ್ ನಮ್ಮೊಂದಿಗೆ ಇಲ್ಲ ಎಂದು ಒಮ್ಮೆಯೂ ಹೇಳಿಲ್ಲ. ನಮ್ಮ ಜೊತೆಯಲ್ಲಿಯೇ ಇದ್ದಾರೆ ಎಂಬ ರೀತಿಯಲ್ಲಿಯೇ ಮಾತನಾಡುತ್ತಿದ್ದರು ಎಂದು ಅಭಿಷೇಕ್ ಅಂಬರೀಶ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ತಮ್ಮ ಅನಾರೋಗ್ಯದ ವಿಷಯವನ್ನು ಅಂಬರೀಶ್ ಬಳಿಯೂ ವಿಷ್ಣುವರ್ಧನ್ ಹೇಳಿಕೊಂಡಿರಲಿಲ್ಲ.
ಅವನು ರಾಯಲ್ ಆಂಡ್ ಲಾಯಲ್ ಗೆಳೆಯ
ಅಂಬರೀಶ್ ಬಗ್ಗೆ ಕೇವಲ ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಅಂಬರೀಶ್ ಅನ್ನೋದು ಒಂದು ಫೀಲಿಂಗ್, ಭಾವನೆ. ಅಂಬರೀಶ್‌ನನ್ನು ಎಂಜಾಯ್ ಮಾಡೋಕೆ ಮಾತ್ರ ಸಾಧ್ಯ. ಒಂದೇ ತಾಯಿ ಹೊಟ್ಟೆಯಲ್ಲಿ ಹುಟ್ಟಿಲ್ಲ ಅನ್ನೋದನ್ನು ಬಿಟ್ರೆ ಜೀವನದಲ್ಲಿ ಒಟ್ಟಿಗೆ ಇದ್ದೇವೆ. ಅವನು ನನ್ನ ರಾಯಲ್ ಆಂಡ್ ಲಾಯಲ್ ಫ್ರೆಂಡ್ ಅಂತಾನೇ ಕರೆಯುತ್ತೇನೆ ಎಂದು ವಿಷ್ಣುವರ್ಧನ್ ಹೇಳಿದ್ದರು.
ಇದನ್ನೂ ಓದಿ: ಸಾಯುವ ಹಿಂದಿನ ದಿನ ಮಗಳು ಕೀರ್ತಿಗೆ ಫೋನ್ ಮಾಡಿ ವಿಷ್ಣುವರ್ಧನ್ ಹೇಳಿದ್ದೇನು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.