ಬ್ಲೂ ಫಿಲ್ಮ್‌ನಲ್ಲಿ ನಟಿಸುತ್ತೀರಾ? ಯೂಟ್ಯೂಬರ್ ಪ್ರಶ್ನೆಗೆ ಕನ್ನಡ ನಟಿ ತನಿಷಾ ಗರಂ

Published : Apr 02, 2023, 10:50 AM ISTUpdated : Apr 02, 2023, 10:55 AM IST
ಬ್ಲೂ ಫಿಲ್ಮ್‌ನಲ್ಲಿ ನಟಿಸುತ್ತೀರಾ? ಯೂಟ್ಯೂಬರ್ ಪ್ರಶ್ನೆಗೆ ಕನ್ನಡ ನಟಿ ತನಿಷಾ ಗರಂ

ಸಾರಾಂಶ

ಬ್ಲೂ ಫಿಲ್ಮ್‌ ಮಾಡ್ತೀರಾ? ಯೂಟ್ಯೂಬರ್ ಪ್ರಶ್ನೆಗೆ ಕನ್ನಡದ ನಟಿ ತಮಿಷಾ ಗರಂ ಆಗಿದ್ದಾರೆ. 

ಕನ್ನಡ ಕಿರುತೆರೆಯ ಖ್ಯಾತ ನಟಿ ತನಿಷಾ ಕುಪ್ಪಂಡ ಸದ್ಯ 'ಪೆಂಟಗನ್' ಸಿನಿಮಾದ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಪೆಂಟಗನ್, ಐದು ಕಥೆಗಳಿರುವ, ಐದು ಮಂದಿ ನಿರ್ದೇಶಕರಿಂದ ಮೂಡಿಬಂದಿರುವ ಸಿನಿಮಾ. ವಿಭಿನ್ನವಾಗಿರುವ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.  ಈ ಸಿನಿಮಾದಲ್ಲಿ ನಟಿ ತನಿಷಾ ಹಾಟ್, ಅಂಡ್ ಬೋಲ್ಡ್ ಲುಕ್‌ನಲ್ಲಿ ಮಿಂಚಿದ್ದಾರೆ. ಲಿಪ್‌ಲಾಕ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಟ್ ನಟಿ ತನಿಷಾ ಅವರಿಗೆ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮುಜುಗರದ ಸನ್ನಿವೇಶ ಎದುರಾಗಿದೆ. ಯೂಟ್ಯೂಬ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ನಟಿ ತನಿಷಾ ಅವರಿಗೆ ಬ್ಲೂ ಫಿಲ್ಮ್ಸ್ ಬಗ್ಗೆ ಪ್ರಶ್ನೆ ಎದುರಾಗಿದೆ. ಯೂಟ್ಯೂಬರ್ ಪ್ರಶ್ನೆಗೆ ಗರಂ ಆದ ತನಿಷಾ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. 

ನಟಿ ತನಿಷಾ ಅವರಿಗೆ ಯೂಟ್ಯೂಬರ್‌, ನೀವು ಬ್ಲೂ ಫಿಲಂ ಮಾಡ್ತೀರಾ ಅಂತ ಪ್ರಶ್ನೆ ಕೇಳಿದ್ದಾರೆ. ಬ್ಲೂ ಫಿಲ್ಮ್ಸ್ ಮಾಡೋದು ಪೋರ್ನ್ ಸ್ಟಾರ್ ಎಂದು ನಟಿ ತನಿಷಾ ಉತ್ತರ ನೀಡಿ ಗರಂ ಆದರು. ಸಿಟ್ಟಿಗೆದ್ದ ನಟಿ ತನಿಷಾ ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ಮಾತ್ರಕ್ಕೆ ಬ್ಲೂ ಫಿಲಂ ಮಾಡೋಕೆ ಆಗುತ್ತಾ? ನಾವು ಪೋರ್ನ್ ಸ್ಟಾರ್ ಅಲ್ಲ. ಮಾತನಾಡುವ ಮುನ್ನ ಎಚ್ಚರ ಇರಲಿ. ಕನ್ನಡ ಸಿನಿಮಾ ಇಂಡಸ್ಟ್ರೀಯಲ್ಲಿ ಯಾವ ನಟಿಯೂ ಪೋರ್ನ್ ಮಾಡಿಲ್ಲ. ಈ ರೀತಿ ಅಸಭ್ಯವಾಗಿ ಮಾತನಾಡಬೇಡಿ ಎಂದು ಸರಿಯಾಗಿ ಕ್ಲಾಸ್ ತೆಗೆದುಕೊಂಡರು.



ಒಂದೇ ಸಿನಿಮಾ 5 ಕಥೆ, 5 ನಿರ್ದೇಶಕರು... ಕನ್ನಡ ಟ್ರೇಲರ್‌ಗೆ ತೆಲುಗು ನಿರ್ದೇಶಕ ಫಿದಾ..!

ಈ ವಿಡಿಯೋ ನೋಡಿದ ಅನೇಕರು ಯೂಟ್ಯೂಬರ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ರೀತಿ ಕೇಳುವುದು ಸರಿಯಲ್ಲ ಎಂದು ಹೇಳುತ್ತಿದ್ದಾರೆ. ತನಿಷಾ ಹಾಗು ಚಿತ್ರತಂಡ ಯೂಟ್ಯೂಬರ್‌ ಮೇಲೆ ಆಕ್ರೊಶ ವ್ಯಕ್ತಪಡಿಸಿದ್ದು ತರಾಟೆ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ ಕೆಲವರು ಈ ವಿಡಿಯೋ ನೋಡಿ ಇದು ಸಿನಿಮಾ ಪ್ರಚಾರದ ಗಿಮಿಕ್ ಅಂತನು ಹೇಳುತ್ತಿದ್ದಾರೆ. 

ಕನ್ನಡ ಹೋರಾಟಗಾರರ ಬಗ್ಗೆ ಅವಹೇಳನಕಾರಿ ಪದ ಬಳಕೆ; ಪೆಂಟಗನ್‌ ಸಿನಿಮಾ ವಿರುದ್ಧ ರೂಪೇಶ್ ರಾಜಣ್ಣ ಆಕ್ಷೇಪ

ಪೆಂಟಗನ್ ಸಿನಿಮಾದ ಬಗ್ಗೆ ಹೇಳುವುದಾದರೆ ಐದು ಕತೆಗಳಿರುವ, ಐದು ಮಂದಿ ನಿರ್ದೇಶಕರಿಂದ ಮೂಡಿ ಬಂದಿರುವ ಸಿನಿಮಾ. ಈಗಾಗಲೇ ಟೈಟಲ್ ಮೂಲಕವೇ ಭಾರೀ ಕುತೂಹಲ ಹೆಚ್ಚಿಸಿರುವ ಪೆಂಟಗನ್ ಏಪ್ರಿಲ್ 7ರಂದು ರಿಲೀಸ್ ಆಗುತ್ತಿದೆ. ಪೆಂಟಗನ್ ಸಿನಿಮಾದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಆಗುವ ಮೋಸ, ಅಪರಾಧ ಜಗತ್ತು, ಯವ ಪೀಳಿಗೆಯ ಭವಿಷ್ಯದ ಕುರಿತು ಈ ಸಿನಿಮಾ ಬೆಳಕು ಚೆಲ್ಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದೊಡ್ಮನೆ ಮೂಲ ನಿಯಮ ಉಲ್ಲಂಘಿಸಿದ ಕ್ಯಾಪ್ಟನ್‌ ಕಾವ್ಯಾ ಕುಟುಂಬ, ಎಚ್ಚರಿಕೆ ನೀಡಿ ಹೊರಕಳಿಸಿದ್ರಾ ಬಿಗ್‌ಬಾಸ್‌ ?
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್ ಕೇಸ್, ಅಶ್ಲೀಲ ಮೇಸಜ್‌ ಖಾತೆಗೆ ಬಿಸಿ ಮುಟ್ಟಿಸಲು ಮಂದಾದ ಸಿಸಿಬಿ