Yash 19: ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾಗೆ ಲೇಡಿ ನಿರ್ದೇಶಕಿ, ಇಂಟ್ರಸ್ಟಿಂಗ್ ವಿಚಾರ ವೈರಲ್

Published : Apr 01, 2023, 01:22 PM IST
Yash 19: ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾಗೆ ಲೇಡಿ ನಿರ್ದೇಶಕಿ, ಇಂಟ್ರಸ್ಟಿಂಗ್ ವಿಚಾರ ವೈರಲ್

ಸಾರಾಂಶ

ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷೆಯ 19ನೇ ಸಿನಿಮಾಗೆ ಲೇಡಿ ನಿರ್ದೇಶಕಿ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 

ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ರಾಕಿಭಾಯ್ ಯಾವಾಗ ಹೊಸ ಸಿನಿಮಾ ಘೋಷಣೆ ಮಾಡುತ್ತಾರೆ ಎಂದು ಅಭಿಮಾನಿಗಳು ಹೋದಲ್ಲಿ ಬಂದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಯಶ್ ಮಾತ್ರವಲ್ಲದೇ ಪತ್ನಿ ರಾಧಿಕಾ ಅವರನ್ನು ಅಭಿಮಾನಿಗಳು ಕಾಡಿಸುತ್ತಿದ್ದಾರೆ. ಸಿನಿಮಾ ಘೋಷಣೆ ಮಾಡದಿದ್ದರೇ ಮನೆ ಮುಂದೆ ಧರಣಿ ಕೂರುವುದಾಗಿ ಹೇಳುದ್ದಾರೆ. ಈ ನಡುವೆ ಯಶ್ ಮುಂದಿನ ಸಿನಿಮಾ ಬಗ್ಗೆ ಹೊಸ ಸುದ್ದಿ ವೈರಲ್ ಆಗಿದೆ. ರಾಕಿಂಗ್ ಸ್ಟಾರ್ 19ನೇ ಸಿನಿಮಾಗೆ ಲೇಡಿ ನಿರ್ದೇಶಕಿ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. 

ಅಂದಹಾಗೆ ಯಶ್ ಮುಂದಿನ ಸಿನಿಮಾಗೆ ಯಾರು ಆಕ್ಷನ್ ಕಟ್ ಹೇಳುತ್ತಾರೆ ಎನ್ನುವ ಬಗ್ಗೆ ಈಗಾಗಲೇ ಅನೇಕ ಚರ್ಚೆಗಳಾಗಿವೆ. ಅಲ್ಲದೇ ಅನೇಕರ ಹೆಸರುಗಳು ಸಹ ಕೇಳಿ ಬಂದಿದೆ. ಮಫ್ತಿ ಖ್ಯಾತಿಯ ನರ್ತನ್, ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಸೇರಿದಂತೆ ಅನೇಕರ ಹೆಸರು ಕೇಳಿ ಬಂದಿತ್ತು. ಆದರೀಗ ಲೇಡಿ ಹೆಸರು ಕೇಳಿ ಬರುತ್ತಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಜೊತೆಗೆ ಕುತೂಹಲ ಹೆಚ್ಚಾಗಿದೆ. ಡಿಸೆಂಬರ್ ನಲ್ಲಿ ಸಿನಿಮಾ ಪ್ರಾರಂಭವಾಗಲಿದೆ ಎನ್ನಲಾಗಿದೆ. ಆದರೆ ಯಾರು ಆ  ಲೇಡಿ ಡೈರೆಕ್ಟರ್ ಎನ್ನುವುದು ಬಹಿರಂಗವಾಗಿಲ್ಲ. 

ಅತ್ತಿಗೆ, ಯಶ್ 19 ಸಿನಿಮಾ ಘೋಷಿಸಿ ಇಲ್ಲಾಂದ್ರೆ ಸ್ಟ್ರೈಕ್ ಮಾಡ್ತೀವಿ - ರಾಧಿಕಾಗೆ ಯಶ್ ಫ್ಯಾನ್ಸ್ ಆವಾಜ್

ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಯಶ್ 19ನೇ ಸಿನಿಮಾದ ಬಗ್ಗೆ ಇದೇ ತಿಂಗಳು ಏಪ್ರಿಲ್ 14ರಂದು ಮಾಹಿತಿ ಸಿಗಲಿದೆ ಎನ್ನಲಾಗಿದೆ. ಏಪ್ರಿಲ್ 14ರಂದು ರಾಕಿಂಗ್ ಸ್ಟಾರ್ ಪಾಲಿಗೆ ವಿಶೇಷವಾದ ದಿನ. ಹಾಗಾಗಿ ಏಪ್ರಿಲ್ 14ರಂದೇ ಹೊಸ ಸಿನಿಮಾದ ಬಗ್ಗೆ ಇಂಟ್ರಸ್ಟಿಂಗ್ ಮಾಹಿತಿ ರಿವೀಲ್ ಮಾಡುವ  ಸಾಧ್ಯತೆ ಇದೆ ಎನ್ನಲಾಗಿದೆ. ಏಪ್ರಿಲ್ 14 ಕೆಜಿಎಫ್-2 ಸಿನಿಮಾ ರಿಲೀಸ್ ಆದ ದಿನ. ಕೆಜಿಎಫ್ -2 ರಿಲೀಸ್ ಆದ ದಿನವೇ ಹೊಸ ಸಿನಿಮಾದ ಅಪ್‌ಡೇಟ್ ನೀಡುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. 

ಇದು ಯಶ್ 19 ಪೋಸ್ಟರ್ ಅಲ್ಲವೇ ಅಲ್ಲ: ರಾಕಿ ಬಾಯ್ ಎಂದು ಕನ್‌ಫ್ಯೂಸ್ ಆದ್ರಾ ಫ್ಯಾನ್ಸ್‌?

ಮುಂದಿನ ಸಿನಿಮಾಗೆ ಯಶ್ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ಪಕ್ಕಾ ಆಕ್ಷನ್ ಸಿನಿಮಾ ಆಗಿರಲಿದೆ ಎನ್ನಲಾಗಿದೆ. ಇತ್ತೀಚೆಗಷ್ಟೆ ಯಶ್ ಹಾಲಿವುಡ್ ಸ್ಟಂಟ್‌ಮ್ಯಾನ್, ನಿರ್ದೇಶಕ ಜೆಜೆ ಪೆರ್ರಿ ಅವರನ್ನು ಭೇಟಿಯಾಗಿದ್ದರು. ಕಳೆದ ಕೆಲವು ತಿಂಗಳ ಹಿಂದೆ ಯಶ್ ಮತ್ತು ಜೆಜೆ ಪೆರ್ರಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಬಂದೂಕಿನ ತರಬೇತಿ ನಡೆಸುತ್ತಿದ್ದ ಯಶ್ ಫೋಟೋ  ಭಾರಿ ಕುತೂಹಲ ಮೂಡಿಸಿತ್ತು. ಮುಂದಿನ ಸಿನಿಮಾಗೆ ದೊಡ್ಡ ಮಟ್ಟದ ತಯಾರಿ ಎನ್ನಲಾಗಿತ್ತು. ಇದೀಗ ಲೇಡಿ ನಿರ್ದೇಶಕಿ ಎನ್ನುವ ಸುದ್ದಿ ವೈರಲ್ ಆಗಿದೆ. ಏಪ್ರಿಲ್ 14ಕ್ಕೆ ಬಿಗ್ ಅಪ್‌ಡೇಟ್ ನೀಡುತ್ತಾರಾ? ಲೇಡಿ ನಿರ್ದೇಶಕಿಯೇ ಫೈನಲ್ ಆಗ್ತಾರಾ ಕಾದುನೋಡಬೇಕಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ