ಶಿವರಾಜ್ ಕುಮಾರ್ ಸಿನಿಮಾಗೆ ನಾಯಕಿಯಾದ 'ನನ್ನರಸಿ ರಾಧೆ' ನಟಿ ಕೌಸ್ತುಭಾ

By Shruthi KrishnaFirst Published Apr 1, 2023, 12:12 PM IST
Highlights

ನನ್ನರಸಿ ರಾಧೆ ಧಾರಾವಾಹಿ ಖ್ಯಾತಿಯ ನಟಿ ಕೌಸ್ತುಭಾ ಮಣಿ ಶಿವರಾಜ್ ಕುಮಾರ್ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. 

ಹ್ಯಾಟಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಅರ್ಜುನ್ ಜನ್ಯ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಮೂಡಿ ಬರುತ್ತಿದೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶಕಕ್ಕೆ ಇಳಿದಿದ್ದು ಶಿವರಾಜ್ ಕುಮಾರ್ ಅವರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎನ್ನುವುದು ಈಗಾಗಲೇ ಗೊತ್ತಿರುವ ವಿಚಾರ. ಸಿನಿಮಾ ಅನೌನ್ಸ್ ಆಗಿ ಅನೇಕ ತಿಂಗಳೇ ಆಗಿದೆ. ಆದರೆ ಈ ಸಿನಿಮಾದ ಬಗ್ಗೆ ಹೆಚ್ಚಿನ ಅಪ್‌ಡೇಟ್ ಬಂದಿರಲಿಲ್ಲ. ಇದೀಗ ಈ ಸಿನಿಮಾದ ಬಗ್ಗೆ ಇಂಟ್ರಸ್ಟಿಂಗ್ ಮಾಹಿತಿ ಬಹಿರಂಗವಾಗಿದೆ. ಈ ಸಿನಿಮಾಗೆ ನಾಯಕಿ ಎಂಟ್ರಿಯಾಗಿದೆ. ಅದು ಮತ್ಯಾರು ಅಲ್ಲ ಕನ್ನಡ ಕಿರುತೆರೆಯ ಖ್ಯಾತ ನಟಿ ಕೌಸ್ತುಭಾ ಮಣಿ. ಹೌದು ನನ್ನರಸಿ ರಾಧೆ ಧಾರಾವಾಹಿ ಮೂಲಕ ಕನ್ನಡ ಪ್ರೇಕ್ಷಕರ ಹೃದಯ ಗೆದ್ದಿದ್ದ ನಟಿ ಕೌಸ್ತುಭಾ ಇದೀಗ ಸಿನಿಮಾದಲ್ಲಿ ಮಿಂಚಲು ಸಜ್ಜಾಗಿದ್ದಾರೆ. 

ಅರ್ಜುನ್ ಜನ್ಯ ನಿರ್ದೇಶನದ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆಗೆ ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೂವರು ಕಲಾವಿದರು ಒಟ್ಟಿಗೆ ನಟಿಸುತ್ತಿರುವ ಈ ಸಿನಿಮಾಗೆ ಈಗ ನಾಯಕಿ ಎಂಟ್ರಿಯಾಗಿದೆ. ಅರ್ಜುನ್ ಜನ್ಯ ತನ್ನ ಚೊಚ್ಚಲ ನಿರ್ದೇಶನದ ಚಿತ್ರ ಭಾರಿ ಕುತೂಹಲ ಮೂಡಿಸಿದೆ. ಅಂದಹಾಗೆ ಸಿನಿಮಾಗೆ 45 ಎಂದು ಟೈಟಲ್ ಇಟ್ಟಿದ್ದಾರೆ. ಈಗಾಗಲೇ ಶೂಟಿಂಗ್ ಪ್ರಾರಂಭಿಸಿರುವ ಸಿನಿಮಾತಂಡ ನಾಯಕಿ ಹುಡುಕಾಟದಲ್ಲಿ ತೊಡಗಿದೆ. 

ಅಂದಹಾಗೆ ಕೌಸ್ತಭಾಗೆ ಇದು ಮೊದಲ ಸಿನಿಮಾವಲ್ಲ. ಈಗಾಗಲೇ ಕೌಸ್ತಭಾ  'ರಾಮಾಚಾರಿ 2.0' ಚಿತ್ರದಲ್ಲಿ ನಟಿಸಿದ್ದರು. ಇದೀಗ ದೊಡ್ಡ ಸಿನಿಮಾ ಸಿಕ್ಕಿರುವುದು ಕೌಸ್ತಭಾ ಖುಷಿಗೆ ಪಾರವೇ ಇಲ್ಲದಂತೆ ಆಗಿದೆ. ನನ್ನರಸಿ ರಾಧೆ ಧಾರಾವಾಹಿ ಬಳಿಕ ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದ ಕೌಸ್ತುಭಾ ಇದೀಗ ಸಿನಿಮಾದಲ್ಲಿ ಬ್ಯುಸಿಯಾಗುತ್ತಿದ್ದಾರೆ. ಇದೀಗ ದೊಡ್ಡ ಕಲಾವಿದರ ಜೊತೆ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. 

Kabzaa ಬಿಗ್ ಅಪ್‌ಡೇಟ್; ಉಪೇಂದ್ರ-ಸುದೀಪ್ ಚಿತ್ರದಲ್ಲಿ ಶಿವರಾಜ್ ಕುಮಾರ್,ಲುಕ್ ರಿವೀಲ್

ಅಂದಹಾಗೆ 45 ಸಿನಿಮಾದಲ್ಲಿ ಕೌಸ್ತುಭಾ ನಟ ರಾಜ್ ಬಿ ಶೆಟ್ಟಿ ಅವರಿಗೆ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸಿನಿಮಾತಂಡ ಹೆಚ್ಚಿನ  ಮಾಹಿತಿ ರಿವೀಲ್ ಮಾಡಿಲ್ಲ. ರಾಜ್ ಬಿ ಶೆಟ್ಟಿ ಕೌಸ್ತುಭಾ ಜೋಡಿಯಾಗಿ ಪ್ರೇಕ್ಷರನ್ನು ಮೋಡಿ ಮಾಡಲು ಸಜ್ಜಾಗಿದ್ದಾರೆ. ಅಂದಹಾಗೆ ಶಿವರಾಜ್‌ಕುಮಾರ್ ನಟನೆಯ '45' ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿದ್ಧಗೊಳ್ಳಲಿದೆ. ಈ ಸಿನಿಮಾಗೆ ರಮೇಶ್ ರೆಡ್ಡಿ ನಿರ್ಮಾಣ ಮಾಡ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಆರಂಭ ಆಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ಸಿನಿಮಾ ತೆರೆಕಾಣಿಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಅರ್ಜುನ್ ಜನ್ಯ ಅವರೇ ಕಥೆ-ಚಿತ್ರಕಥೆ ಬರೆದಿದ್ದು, ನಿರ್ದೇಶನದ ಜೊತೆಗೆ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ಕೂಡ ವಹಿಸಿಕೊಂಡಿದ್ದಾರೆ.

'ಆನಂದ್' ಚಿತ್ರದ ಮೊದಲ ದೃಶ್ಯ ಕಣ್ಣಿಗೆ ಕಟ್ಟಿದಂತಿದೆ; 37 ವರ್ಷ ಪೂರೈಸಿದ ಶಿವಣ್ಣ ಹೃದಯಸ್ಪರ್ಶಿ ಪತ್ರ

ಶಿವರಾಜ್ ಕುಮಾರ್ ಬಳಿ ಅನೇಕ ಸಿನಿಮಾಗಳಿವೆ. ಸಾಲು ಸಾಲು ಸಿನಿಮಾಗಳಲ್ಲಿ ಶಿವಣ್ಣ ಬ್ಯುಸಿಯಾಗಿದ್ದಾರೆ. ಇದೀಗ 45 ಸಿನಿಮಾದ ಶೂಟಿಂಗ್ ಪ್ರಾರಂಭಿಸಿದ್ದಾರೆ. ಈ ಸಿನಿಮಾದಲ್ಲಿ ಶಿವಣ್ಣ ಮತ್ತು ಉಪೇಂದ್ರ ಅವರಿಗೆ ಯಾರು ಜೋಡಿಯಾಗ್ತಾರೆ ಎಂದು ಕಾದು ನೋಡಬೇಕಿದೆ.  

click me!