ರಾಕಿಭಾಯ್ ನನಗೆ ಸಹೋದರ ಅಲ್ಲ; ಯಶ್ ನೋಡಿ ಸನ್ನಿ ಲಿಯೋನ್ ಹೀಗಂದಿದ್ದೇಕೆ?

Published : Jul 05, 2022, 01:36 PM IST
ರಾಕಿಭಾಯ್ ನನಗೆ ಸಹೋದರ ಅಲ್ಲ; ಯಶ್ ನೋಡಿ ಸನ್ನಿ ಲಿಯೋನ್ ಹೀಗಂದಿದ್ದೇಕೆ?

ಸಾರಾಂಶ

ನಿರೂಪಕಿ ಅನುಶ್ರೀ ಯೂಟ್ಯೂಬ್ ಚಾನೆಲ್ ಗೆ ಸನ್ನಿ ಲಿಯೋನ್ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಸನ್ನಿ ಲಿಯೋನ್ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಸಂದರ್ಶನದ ಪ್ರೋಮೋ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಸದ್ಯ ರಿಲೀಸ್ ಆಗಿರುವ ಪ್ರೋಮೋದಲ್ಲಿ ಸನ್ನಿ ಲಿಯೋನ್, ಅನುಶ್ರೀಯನ್ನು ಹಾಡಿ ಹೊಗಳಿದ್ದಾರೆ.

ಬಾಲಿವುಡ್ ನಟಿ,  ಮಾಜಿ ನೀಲಿತಾರೆ ಸನ್ನಿಲಿಯೋನ್ (Sunny Leone) ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಈಗಾಗಲೇ ಕನ್ನಡದ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಕನ್ನಡ ಸಿನಿ ಪ್ರೇಕ್ಷಕರನ್ನು ರಂಜಿಸಿದ್ದ ಸನ್ನಿ ಲಿಯೋನ್ ಇದೀಗ ಮತ್ತೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಚಾಂಪಿಯನ್ ಸಿನಿಮಾ ಮೂಲಕ ಸನ್ನಿ ಮತ್ತೆ ಕನ್ನಡಿಗರನ್ನು ಮೋಡಿ ಮಾಡಲು ಸಜ್ಜಾಗಿದ್ದಾರೆ. ಈಗಾಗಲೇ ಚಾಂಪಿಯನ್ ಹಾಡಿಗೆ ಹೆಜ್ಜೆ ಹಾಕಿರುವ ಸನ್ನಿ ಕನ್ನಡದ ಯೂಟ್ಯೂಬ್ ಚಾನೆಲ್ ಗೆ ಸಂದರ್ಶನ ನೀಡಿದ್ದಾರೆ. ಸನ್ನಿ ಸಂದರ್ಶನದಲ್ಲಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. 

ಅಂದಹಾಗೆ ಸನ್ನಿ ಲಿಯೋನ್ ಕನ್ನಡದಲ್ಲಿ ಸಂದರ್ಶನ ನೀಡಿರುವುದು ಖ್ಯಾತ ನಿರೂಪಕಿ ಅನುಶ್ರೀ (Anushree) ಅವರಿಗೆ. ನಿರೂಪಕಿ ಅನುಶ್ರೀ ಯೂಟ್ಯೂಬ್ ಚಾನೆಲ್ ಗೆ ಸನ್ನಿ ಲಿಯೋನ್ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಸನ್ನಿ ಲಿಯೋನ್ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಸಂದರ್ಶನದ ಪ್ರೋಮೋ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಸದ್ಯ ರಿಲೀಸ್ ಆಗಿರುವ ಪ್ರೋಮೋದಲ್ಲಿ ಸನ್ನಿ ಲಿಯೋನ್, ಅನುಶ್ರೀಯನ್ನು ಹಾಡಿ ಹೊಗಳಿದ್ದಾರೆ. ಲವ್ ಯು ಅನುಶ್ರೀ, ನನ್ನನ್ನು ಈ ಶೋಗೆ ಕರೆದಿದ್ದಕ್ಕೆ ಧನ್ಯವಾದ ಎಂದು ಹೇಳುತ್ತಾರೆ. ಸನ್ನಿ ಲಿಯೋನ್ ಮಾತಿಗೆ ಅನುಶ್ರೀ ಫುಲ್ ಖುಷ್ ಆಗಿದ್ದಾರೆ. 

ಇದೇ ಸಮಯದಲ್ಲಿ ಸನ್ನಿಲಿಯೋನ್ ರಾಕಿಂಗ್ ಸ್ಟಾರ್ ಯಶ್ (Yash) ಬಗ್ಗೆ ಹೇಳಿರುವ ಮಾತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅನುಶ್ರೀ ಯಶ್ ನಟನೆಯ ಕೆಜಿಎಫ್ ಸಿನಿಮಾದ ಫೋಟೋ ತೋರಿಸಿ ಯಾವ ಸಿನಿಮಾದು, ಯಾರು ಎಂದು ಕೇಳುತ್ತಾರೆ. ಇದಕ್ಕೆ ಉತ್ತರ ನೀಡಿದ ಸನ್ನಿ ಲಿಯೋನ್ ಇದು ರಾಕಿ ಭಾಯ್ ಎಂದು ಹೇಳುತ್ತಾರೆ. ರಾಕಿಭಾಯ್ ಇದು ಆದರೆ ನನಗೆ ಭಾಯ್ (ಸಹೋದರ) ಅಲ್ಲ ಎಂದು ಹೇಳಿದ್ದಾರೆ. ಸನ್ನಿಯ ಈ ಮಾತು ಅಭಿಮಾನಿಗಳ ಹೃದಯ ಗೆದ್ದಿದೆ. 

ಬೆಂಗಳೂರಿನಲ್ಲಿ ಸೇಸಮ್ಮನ ಸಂಭ್ರಮ: ಮಳೆಯ ಮಧ್ಯೆ ಹಾಟ್ ಆಗಿ ಕಂಡ ಸನ್ನಿ ಲಿಯೋನ್!

ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಸಿನಿಮಾ ಮೂಲಕ ದೇಶ-ವಿದೇಶಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಯಶ್, ರಾಕಿ ಭಾಯ್ ಆಗಿ ಎಲ್ಲರಿಗೂ ಚಿರಪರಿಚಿತ. ಕರ್ನಾಟಕ ಮಾತ್ರವಲ್ಲದೇ ದೇಶ ವಿದೇಶಗಳಲ್ಲೂ ಅಪಾರ ಸಂಖ್ಯೆಯ ಅಭಿಮಾನಿ ಬಳಗಹೊಂದಿರುವ ಯಶ್ ಯಾರಿಗೆ ತಾನೆ ಗೊತ್ತಿಲ್ಲ. ಇದೀಗ ಸನ್ನಿ ಲಿಯೋನ್ ಸಹ ರಾಕಿ ಭಾಯ್ ಬಗ್ಗೆ ಗುಣಗಾನ ಮಾಡಿದ್ದಾರೆ.

ಮಂಡ್ಯ ಜನರ ಅಭಿಮಾನಕ್ಕೆ‌ ಮನಸೋತ ಹಾಟ್‌ ನಟಿ ಸನ್ನಿ ಲಿಯೋನ್..!

ಚಾಂಪಿಯನ್ ಸಿನಿಮಾ ಬಗ್ಗೆ 

ಸನ್ನಿ ಲಿಯೋನ್ ಕನ್ನಡದ ಸ್ಪೋರ್ಟ್ಸ್ ಕಥೆ ಆಧಾರಿತ ಚಾಂಪಿಯನ್ ಸಿನಿಮಾದ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ.  ಸಚಿನ್ ಧನಪಾಲ್ ನಾಯಕನಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿನ ವಿಶೇಷ ಹಾಡಿಗೆ ಸನ್ನಿಲಿಯೋನ್ ಹೆಜ್ಜೆ ಹಾಕುವ ಮೂಲಕ ಮತ್ತೊಮ್ಮೆ ಕನ್ನಡಕ್ಕೆ ವಾಪಸಾಗಿದ್ದಾರೆ. ಡಿಂಗರ್ ಬಿಲ್ಲಿ ಅನ್ನೋ ಹಾಡಿಗೆ ಸನ್ನಿ ಹೆಜ್ಜೆ ಹಾಕಿದ್ದು ಈಗಾಗಲೇ ಈ ಹಾಡು ರಿಲೀಸ್ ಆಗಿದ್ದು ಅಭಿಮಾನಿಗಳ ಹೃದಯ ಗೆದ್ದಿದೆ. ಡಿಂಗರ ಬಿಲ್ಲಿಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಶಶಾಂಕ್ ಮತ್ತು ಇಂದು ನಾಗರಾಜ್ ಹಾಡಿಗೆ ಕಂಠದಾನ ಮಾಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?