777 ಚಾರ್ಲಿಯಿಂದ 150 ಕೋಟಿ ಲಾಭ: ಶೇ. 15ರಷ್ಟು ಹಂಚಿದ ರಕ್ಷಿತ್ ಶೆಟ್ಟಿ

By Vaishnavi ChandrashekarFirst Published Jul 5, 2022, 12:21 PM IST
Highlights

25 ದಿನ ಪೂರೈಸಿದ ಚಾರ್ಲಿ ಸಿನಿಮಾ. 150 ಕೋಟಿ ಲಾಭವನ್ನು ಹಂಚಲು ಮುಂದಾದ ರಕ್ಷಿತ್ ಆಂಡ್ ಟೀಂ...

ಕೆಜಿಎಫ್ ಚಾಪ್ಟರ್ 2 ಚಿತ್ರದ ಬಿಗ್ ಸಕ್ಸಸ್‌ ನಂತರ ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಯಾಗುತ್ತಿದ್ದ ಸಿನಿಮಾಗಳು ಅಷ್ಟಕಷ್ಟೆ ಆಗಿತ್ತು. ಈ ಸಮಯದಲ್ಲಿ ಪರಂವಾ ಸ್ಟುಡಿಯೋ 777 ಚಾರ್ಲಿ ಚಿತ್ರವನ್ನು ಬಿಡುಗಡೆ ಮಾಡಿದ್ದರು. ಮನುಷ್ಯ ಹಾಗೂ ಶ್ವಾನದ ಸಂಬಂಧವನ್ನು ಈ ಸಿನಿಮಾದಲ್ಲಿ ಅದ್ಭುತವಾಗಿ ತೋರಿಸಲಾಗಿದೆ. ಹೀಗಾಗಿ 25 ದಿನ ಯಶಸ್ವಿ ಕಂಡು 150 ಕೋಟಿ ಗಳಿಸಿದೆ ಎಂದು ನಟ ರಕ್ಷಿತ್ ಶೆಟ್ಟಿ ಹೇಳಿದ್ದಾರೆ. 

ಸಿನಿಮಾ ಯಶಸ್ಸಿನಲ್ಲಿ ಉಳಿದವರಿಗೂ ಪಾಲು ನೀಡಲು ಚಿತ್ರತಂಡ ನಿರ್ಧಾರ ಮಾಡಿ ಪತ್ರ ಬಿಡುಗಡೆ ಮಾಡಿದೆ. ಶೇ 10ರಷ್ಟು ಚಿತ್ರದಲ್ಲಿ ಕೆಲಸ ಮಾಡಿದವರಿಗೆ ಮತ್ತು ಶ್ವಾನಗಳ ರಕ್ಷಣೆ ಮಾಡುವ NGOಗಳಿಗೆ ನೀಡಲು ತೀರ್ಮಾನ ಮಾಡಿದ್ದಾರೆ. 

' 777 ಚಾರ್ಲಿ ನಿಮ್ಮನ್ನು ತಲುಪಿ 25 ದಿನಗಳು ಕಳೆದರೂ, ಎಂದಿನಂತೆ ನಿಮ್ಮಿಂದ ನಮಗೆ ಸಿಗುತ್ತಿರೋ ಪ್ರೀತಿ ಅನನ್ಯ. ಈ ಚಿತ್ರದಿಂದ ನಾವು ಗಳಿಸಿರುವ ಮೆಚ್ಚುಗೆ ಮತ್ತು ಮನ್ನಣೆಯಿಂದ ನಾವು ಅತ್ಯಂತ ಧನ್ಯರಾಗಿದ್ದೇವೆ. ಈ ಅಭೂತಪೂರ್ವ ಯಶಸ್ಸಿಗೆ ಬಮ್ಮ ತಂಡದ ಪರಿಶ್ರಮವಿದೆ. ಈ ಚಿತ್ರವನ್ನು ಯಶಸ್ವಿಯಾಗಿ ತೆರೆಗೆ ತರುವಲ್ಲಿ ಹಲವಾರು ರೀತಿಯಲ್ಲಿ ಶ್ರಮಿಸಿರುವ ಚಿತ್ರತಂಡದ ಜೊತೆಗೆ 777 ಚಾರ್ಲಿ ಗಳಿಸಿರುವ ಲಾಭದ ಶೇಕಡಾ 10ರಷ್ಟಯ ಹಂಚಿಕೊಳ್ಳಲು ನಾವು ನಿರ್ಧರಿಸಿದ್ದೇವೆ' ಎಂದು ಬರೆಯಲಾಗಿದೆ.

'777 ಚಾರ್ಲಿ ಚಿತ್ರತಂಡಕ್ಕೆ ಸಾಕುಪ್ರಾಣಿಗಳ ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲು ಬೇಕಾದ ಪರಿಶ್ರಮ ಹಾಗೂ ಸೌಲಭ್ಯಗಳ ಬಗ್ಗೆ ಕಾಳಜಿ ಇದ್ದು ಈ ನಿಟ್ಟಿನಲ್ಲಿ ನಿರಾಶ್ರಿತ ಶ್ವಾನಗಳ ಹಾಗೂ  ಮೂಕಪ್ರಾಣಿಗಳ ರಕ್ಣೆ ಮತ್ತು ಪೋಷಣೆಗೆ ಸಮರ್ಪಿತವಾಗಿ ದೇಶಾದ್ಯಂತ ಕೆಲಸ ಮಾಡುತ್ತಿರುವ NGOಗಳಿಗೆ, 777 ಚಾರ್ಲಿ ಗಳಿಸಿರುವ ಲಾಭದ ಶೇಕಡಾ 5ರಷ್ಟು ತಲುಪಿಸಲು ನಾವು ನಿರ್ಧರಿಸಿದ್ದೇವೆ. ನಮ್ಮ ಈ ಅಳಿಲು ಸೇವೆ ಇನ್ನಿತ್ತರರಿಗೆ ಸ್ಫೂರ್ತಿಯಾಗಬಹುದು. ನಮ್ಮ ಜಗತ್ತನ್ನು ನಿಮ್ಮ ಪ್ರೀತಿಯಿಂದ ಬೆಳಗಿಸಿದಕ್ಕಾಗಿ ತಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾಗಳು' ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ. 

ಮಗಳನ್ನು ಚಾರ್ಲಿ ಪಪ್ಪಿ ಮಾಡಿದ ನಟಿ ಅಮೃತಾ ರಾಮೂರ್ತಿ; ವಿಡಿಯೋ ವೈರಲ್!

777 ಚಾರ್ಲಿಗೆ ರಾಜ್ಯದಲ್ಲಿ ತೆರಿಗೆ ವಿನಾಯಿತಿ ಘೋಷಣೆ: ನಟ ರಕ್ಷಿತ್‌ ಶೆಟ್ಟಿಅವರ ‘777 ಚಾರ್ಲಿ’ ಸಿನಿಮಾಗೆ ಜೂ.19ರಿಂದ ಆರು ತಿಂಗಳ ಅವಧಿಗೆ ಅನ್ವಯವಾಗುವಂತೆ ತೆರಿಗೆ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿನಿಮಾ ವೀಕ್ಷಿಸಿ ಭಾವುಕರಾಗಿ ಕಣ್ಣೀರು ಹಾಕಿದ್ದರು. ಇದೀಗ ಸಿನಿಮಾ ನಿರ್ಮಾಪಕರೂ ಆದ ರಕ್ಷಿತ್‌ ಶೆಟ್ಟಿ ಅವರ ಮನವಿ ಮೇರೆಗೆ ಸಿನಿಮಾಗೆ ರಾಜ್ಯ ಸರಕು ಮತ್ತು ಸೇವಾ ತೆರಿಗೆ ವಿನಾಯಿತಿ ನೀಡಿ ಆರ್ಥಿಕ ಇಲಾಖೆ ಮೂಲಕ ಆದೇಶ ಹೊರಡಿಸಿದ್ದಾರೆ. 

ಮುದ್ದಿನ ನಾಯಿಯೊಂದಿಗೆ '777 ಚಾರ್ಲಿ' ಸಿನಿಮಾ ನೋಡಿದ ಜನಾರ್ದನ ರೆಡ್ಡಿ!

777 ಚಾರ್ಲಿ:
ಶುಕ್ರವಾರ ಬಿಡುಗಡೆಯಾದ ಕನ್ನಡ ಚಿತ್ರ '777 ಚಾರ್ಲಿ' ಮೊದಲ ದಿನವೇ ಹಿಂದಿ ಭಾಷಿಕ ಪ್ರೇಕ್ಷಕರಿಂದ ಸಂಪೂರ್ಣವಾಗಿ ತಿರಸ್ಕರಿಸಲ್ಪಟ್ಟಿದೆ. ಅಂತಿಮ ಅಂಕಿ ಅಂಶಗಳ ಪ್ರಕಾರ, ಚಿತ್ರವು ಮೊದಲ ದಿನದಲ್ಲಿ ಒಟ್ಟು 6.2 ಕೋಟಿ ಗಳಿಸಿದೆ ಮತ್ತು ಅದರ ಹಿಂದಿ ಆವೃತ್ತಿಯ ಪಾಲು ಕೇವಲ 15 ಲಕ್ಷ ರೂಪಾಯಿಗಳು. ಬಿಡುಗಡೆಯಾದ ಎರಡೇ ದಿನದಲ್ಲಿ ಚಿತ್ರವು ಆರಂಭಿಕ ಅಂಕಿಅಂಶಗಳ ಪ್ರಕಾರ 7.60 ಕೋಟಿ ಗಳಿಸಿದೆ. ಬಾಕ್ಸ್ ಆಫೀಸ್‌ನಲ್ಲಿ ಚಿತ್ರದ ಒಟ್ಟು ಗಳಿಕೆ ಈಗ 13.80 ಕೋಟಿ ರೂ.

 

Always thankful, forever grateful🤍 pic.twitter.com/7CYz5mCDCp

— Paramvah Studios (@ParamvahStudios)
click me!