ಪ್ರೊಡಕ್ಷನ್ ಹೌಸ್ ಶುರು ಮಾಡಿ ಯಶಸ್ಸು ಗಳಿಸುತ್ತಿರುವ ನಟಿ ಶರ್ಮಿಳಾ ಮಾಂಡ್ರೆ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಅವರು ಹೇಳಿದ್ದೇನು?
ಕನ್ನಡ, ತಮಿಳು ಮತ್ತು ತೆಲುಗು ಭಾಷಾ ಚಿತ್ರಗಳಲ್ಲಿ ನಟಿಸಿರುವ ಬಹುಭಾಷಾ ನಟಿ ಶರ್ಮಿಳಾ ಮಾಂಡ್ರೆ (Sharmila Mandre). ಮಹಾರಾಷ್ಟ್ರದ ಮೂಲದ ಶರ್ಮಿಳಾ, ಹುಟ್ಟಿದ್ದು, ಕಾಲೇಜು ಕಲಿತದ್ದು ಎಲ್ಲವೂ ಬೆಂಗಳೂರಿನಲ್ಲಿಯೇ ಆದರೂ ವಿದೇಶದಲ್ಲಿಯೇ ಹೆಚ್ಚಾಗಿ ನೆಲೆಸಿದ್ದರಿಂದ ನಿರರ್ಗಳವಾಗಿ ಕನ್ನಡ ಮಾತನಾಡಲೂ ಬರದಿದ್ದರೂ, ಸ್ಯಾಂಡಲ್ವುಡ್ನಲ್ಲಿ ಬಹಳ ದೊಡ್ಡ ಹೆಸರು ಮಾಡಿದ್ದಾರೆ ಇವರು. ನಟಿ ಶರ್ಮಿಳಾ ನಿರ್ಮಾಣದತ್ತಲೂ ತಮ್ಮ ಚಿತ್ರ ಹರಿಸಿ ಕೆಲ ವರ್ಷಗಳೇ ಕಳೆದಿವೆ. ತಮ್ಮ ಹೆಸರಿನಲ್ಲೇ ಪ್ರೊಡಕ್ಷನ್ ಹೌಸ್ ಪ್ರಾರಂಭಿಸಿದ್ದಾರೆ. 'ಸಜನಿ' ಸಿನಿಮಾದ ಮೂಲಕ ಕನ್ನಡಕ್ಕೆ ಕಾಲಿಟ್ಟ ಶರ್ಮಿಳಾ ಮಂಡ್ರೆ ಮುಂದೆ ಅನೇಕ ಸಿನಿಮಾ ಮಾಡಿದರು. ಅದೇಕೋ ಹಿಟ್ ಗಿಂತ ಹೆಚ್ಚು ಫ್ಲಾಪ್ ಸಿನಿಮಾಗಳನ್ನೇ ನೀಡಿದರು. ಆದರೆ ನಂತರ ನಿರ್ಮಾಪಕಿ ಆಗಿ ಶರ್ಮಿಳಾ ಮಂಡ್ರೆ ಅದೃಷ್ಟ ಪರೀಕ್ಷೆಗೆ ಇಳಿದರು. ಈಗಾಗಲೇ ತಮ್ಮ ನಿರ್ಮಾಣ ಸಂಸ್ಥೆಗೆ 'ಶರ್ಮಿಳಾ ಮಂಡ್ರೆ ಪ್ರೊಡಕ್ಷನ್ಸ್' ಎಂಬ ಹೆಸರು ಇಟ್ಟಿದ್ದಾರೆ. ಅಷ್ಟಕ್ಕೂ ಚಿತ್ರ ನಿರ್ಮಾಣ ಶರ್ಮಿಳಾಗೆ ಹೊಸ ಕ್ಷೇತ್ರವೇನಲ್ಲ. ಅವರ ಕುಟುಂಬ ಮೊದಲಿನಿಂದ ನಿರ್ಮಾಣ ಕ್ಷೇತ್ರದಲ್ಲಿದ್ದಾರೆ. ಅವರ ತಂದೆ ದಯಾನಂದ್ ಮಾಂಡ್ರೆ ಚಿತ್ರ ವಿತರಕರು. ತಾತ ಮತ್ತು ಮಾವ ಕೂಡಾ ಚಲನಚಿತ್ರ ನಿರ್ಮಾಪಕರಾಗಿದ್ದರು. 'ಚಿತ್ರ ನಿರ್ಮಾಣ ಮಾಡುವುದನ್ನು ಮೊದಲಿನಿಂದ ನೋಡಿಕೊಂಡು ಬಂದವಳು ನಾನು. ನಮ್ಮ ಕುಟುಂಬದ ಬೇರಿನಲ್ಲೇ ಇದೆ. ಈ ಉದ್ಯಮವನ್ನು ನಾನು ಮುಂದುವರಿಸಬೇಕೆಂದಿದ್ದೇನೆ' ಎಂದಿದ್ದಾರೆ ಶರ್ಮಿಳಾ. ಇದು ಒಂದೆಡೆಯಾದರೆ, ವರ್ಷ 33 ಆದರೂ ಇನ್ನೂ ಮದುವೆಯಾಗಿಲ್ಲ ಶರ್ಮಿಳಾ.
ಇಂತಿಪ್ಪ ಶರ್ಮಿಳಾ ಅವರು ಖಾಸಗಿ ಟಿವಿಯೊಂದಕ್ಕೆ ಸಂದರ್ಶನ (Interview) ನೀಡಿದ್ದು, ಅದರಲ್ಲಿ ತಮ್ಮ ಪ್ರೊಡಕ್ಷನ್ ಹೌಸ್ ಮತ್ತು ತಮ್ಮ ಮದುವೆಯ ಕುರಿತು ಕೆಲವೊಂದು ವಿಷಯಗಳನ್ನು ಶೇರ್ ಮಾಡಿಕೊಂಡಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಸದ್ಯ ಬಾಲಿವುಡ್‌ನಲ್ಲಿ ಬಿಝಿಯಾಗಿರುವ ಶರ್ಮಿಳಾ, ತಮ್ಮ ಬ್ಯಾನರ್‌ನಿಂದ ಉತ್ತಮ ಚಿತ್ರಗಳನ್ನು ನಿರ್ಮಾಣ ಮಾಡುವ ಆಸೆ ಹೊಂದಿದ್ದಾರೆ. ಹೊಸಬರಿಗೆ ಅವಕಾಶ ನೀಡುವ ನಿರ್ಧಾರ ಮಾಡಿದ್ದಾರೆ. ಈ ಕುರಿತು ಸಂದರ್ಶನದಲ್ಲಿ ಅವರು ಹೇಳಿದ್ದಾರೆ. ಯಾರಾದರೂ ಉತ್ತಮ ಕಥೆಗಳನ್ನು ಕೊಟ್ಟರೆ ಅದು ಚಿತ್ರ ಮಾಡುವ ಅವಕಾಶವನ್ನೂ ತಾವು ಕೊಡುವುದಾಗಿ ನಟಿ ಶರ್ಮಿಳಾ ಹೇಳಿದರು ಇದೇ ವೇಳೆ ಮದುವೆಯ ಕುರಿತು ನಟಿ ಮಾತನಾಡಿದ್ದಾರೆ. \
undefined
ಪ್ರೀ ಹನಿಮೂನ್ ಬಳಿಕ ಮದುಮಗಳಾಗಲು ರೆಡಿಯಾದ ನಟಿ ಮಲೈಕಾ!
ನನಗೆ ಯಾವುದೇ ಮದುವೆಗೆ (Marriage) ಹೋಗುವುದು ಎಂದರೆ ಭಯವಾಗುತ್ತದೆ. ಏಕೆಂದರೆ ಅಲ್ಲಿರುವ ಎಲ್ಲಾ ಆಂಟಿಯರ ಕಣ್ಣು ನನ್ನ ಮೇಲೆ ಬೀಳುತ್ತದೆ. ಅವರ ನೋಟ ನೋಡಿದರೇನೇ ನನಗೆ ಮುಂದೇ ಏನು ಪ್ರಶ್ನೆ ಎದುರಾಗುತ್ತದೆ ಎನ್ನುವುದು ಅರ್ಥವಾಗುತ್ತದೆ. ಅದಕ್ಕಾಗಿಯೇ ಮದುವೆಯ ಮನೆಗೆ ಹೋಗುವುದು ಎಂದರೆ ಕಿರಿಕಿರಿ ಎನಿಸುತ್ತದೆ. ಅಷ್ಟಕ್ಕೂ ಆ ಆಂಟಿಯರ ಮುಂದಿನ ಪ್ರಶ್ನೆ ಬರುವುದೇ ನಿನ್ನ ಮದುವೆ ಯಾವಾಗ ಎನ್ನುವುದು. ಮದುವೆ ಯಾವಾಗ ಆಗುತ್ತಿ? ಮದುವೆಯ ಯೋಚ್ನೆ ಇಲ್ವಾ ಅಂತ ಪ್ರಶ್ನಿಸ್ತಾರೆ. ಅದಕ್ಕೆ ಯಾವುದೇ ಫಂಕ್ಷನ್ಗೆ ಹೋಗುವುದರಿಂದ ತಪ್ಪಿಸಿಕೊಳ್ಳುತ್ತೇನೆ, ಮದುವೆ ಮನೆಗಳಿಗೆ ಹೋಗುವುದು ಎಂದರೆ ಭಯ ಎಂದಿದ್ದಾರೆ ಶರ್ಮಿಳಾ.
ಅಷ್ಟಕ್ಕೂ ತಮಗೆ ಮದುವೆ ಆಗುವುದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದೂ ಇದೇ ವೇಳೆ ನಟಿ ಶರ್ಮಿಳಾ ಹೇಳಿದ್ದಾರೆ. ಈಗ ಅನೇಕ ಮಂದಿ ಹುಡುಗಿಯರು ಮದುವೆಯಾಗಲು ಹಿಂಜರಿಯುತ್ತಾರೆ. ತಮಗೆ ಮದುವೆ ಬೇಡ ಎಂದು ಹೇಳುತ್ತಾರೆ. ಆದರೆ ನಾನು ಅಂತವಳಲ್ಲ, ನಾನು ಮದುವೆಯಾಗುವುದಿಲ್ಲ ಎಂದು ಯಾವಾಗಲೂ ಹೇಳಿಲ್ಲ. ಮದುವೆಯಾಗುತ್ತೇನೆ ಎಂದಿದ್ದಾರೆ. ಎಂಥ ಹುಡುಗ ಬೇಕು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶರ್ಮಿಳಾ, ಚಿಕ್ಕವಳಿರುವಾಗ ಹುಡುಗ ಹಾಗಿರಬೇಕು, ಹೀಗಿರಬೇಕು ಎಂದು ಅಂದುಕೊಂಡಿದ್ದೆ. ಈಗ ಅದ್ಯಾವುದೂ ಆಸೆ ಇಲ್ಲ. ಅವೆಲ್ಲಾ 23-24ನೇ ವಯಸ್ಸಿಗೆ ಮುಗಿದುಹೋದವು. ಈಗ ಸ್ವೀಟ್, ನೈಸ್ ಮತ್ತು ಒಳ್ಳೇ ಪರ್ಸನ್ಯಾಲಿಟಿ (Personality) ಇರೋ ಹುಡುಗ ಬೇಕು ಅಷ್ಟೇ ಎಂದಿದ್ದಾರೆ. ಸಿನಿಮಾ ಇಂಡಸ್ಟ್ರಿಯ ಹುಡುಗನೇ ಬೇಕೆಂದೇನೂ ಇಲ್ಲ, ಯಾವ ಕ್ಷೇತ್ರದವನಾದರೂ ಓಕೆ ಎಂದಿದ್ದಾರೆ.
ಅನುಷ್ಕಾ ಕರಿಯರ್ ಹಾಳು ಮಾಡಲು ಹೊರಟಿದ್ದ ಕರಣ್ ಜೋಹರ್! ಶಾಕಿಂಗ್ ವಿಡಿಯೋ ವೈರಲ್
ಇದೇ ವೇಳೆ ತಾವು ಬೆಂಗಳೂರಿನಲ್ಲಿ ಕಲಿತ ಮೌಂಟ್ ಕಾರ್ಮೆಲ್ (Mount Carmel) ಕಾಲೇಜಿನ ಕುರಿತು ಮಾತನಾಡಿದ ಅವರು, ದೀಪಿಕಾ ಪಡುಕೋಣೆ ನನಗಿಂತ ಎರಡು ವರ್ಷ ಹಿರಿಯರು. ಅನುಷ್ಕಾ ಶರ್ಮಾ ನನ್ನ ಕ್ಲಾಸ್ಮೇಟ್. ಇವರು ಇಲ್ಲಿಯೇ ಕಲಿತವರು. ಸಿನಿಮಾ ಇಂಡಸ್ಟ್ರಿಗೆ ಬಂದ ಮೇಲೂ ಇವರನ್ನು ಭೇಟಿಯಾಗಿದ್ದೇನೆ. ಸ್ಕೂಲ್ ಡೇಸ್ಗಳನ್ನು ನೆನಪಿಸಿಕೊಂಡಿದ್ದೇವೆ. ಕಾಲೇಜು ದಿನಗಳು ಒಳ್ಳೆಯ ಎಕ್ಸ್ಪೀರಿಯನ್ಸ್ ಕೊಟ್ಟಿದೆ ಎಂದರು.