ಈ ಮ್ಯಾಚ್ ಅಷ್ಟೇಯಲ್ಲ ಇನ್ನೊಂದು ಮ್ಯಾಚ್ ಕೂಡ ಸೋತುಬಿಡಿ ಆದ್ರೆ....; RCBಗೆ ಸಿಂಪಲ್ ಸುನಿ ಮನವಿ

Published : Apr 11, 2023, 10:44 AM ISTUpdated : Apr 11, 2023, 10:57 AM IST
ಈ ಮ್ಯಾಚ್ ಅಷ್ಟೇಯಲ್ಲ ಇನ್ನೊಂದು ಮ್ಯಾಚ್ ಕೂಡ ಸೋತುಬಿಡಿ ಆದ್ರೆ....; RCBಗೆ ಸಿಂಪಲ್ ಸುನಿ ಮನವಿ

ಸಾರಾಂಶ

ಈ ಮ್ಯಾಚ್ ಅಷ್ಟೇಯಲ್ಲ ಇನ್ನೊಂದು ಕೂಡ ಸೋತುಬಿಡಿ ಆದ್ರೆ CSK ವಿರುದ್ಧ ಮ್ಯಾಚ್ ಮಾತ್ರ ಗೆಲ್ಲಲೇ ಬೇಕು ಎಂದು ನಿರ್ದೇಶಕ ಸಿಂಪಲ್ ಸುನಿ ಹೇಳಿದ್ದಾರೆ. 

RCB ಸತತ ಎರಡು ಸೋಲು ಅನುಭನಿಸಿದೆ. ನಿನ್ನೆ (ಏಪ್ರಿಲ್ 10) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ  ರೋಚಕ ಪಂದ್ಯದಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ ಆರ್‌ಸಿಬಿ 1 ವಿಕೆಟ್‌ಗಳ ಸೋಲು ಕಂಡಿದೆ. RCB ನೀಡಿದ 213ರ ಭೃಹತ್ ಮೊತ್ತ ಬೆನ್ನಟ್ಟಿದ ಲಖನೌ ಸೂಪರ್‌ ಜೈಂಟ್ಸ್‌ ಆರಂಭದಲ್ಲಿಯೇ ಹಿನ್ನಡೆ ಕಂಡಿತ್ತು.  23 ರನ್‌ಗೆ ಮೂರು ವಿಕೆಟ್‌ ಕಳೆದುಕೊಂಡರೆ, 99 ರನ್‌ ಬಾರಿಸುವ ವೇಳೆಗೆ 4 ವಿಕೆಟ್‌ ಕಳೆದುಕೊಂಡಿತ್ತು. ಆ ಬಳಿಕ ನಿಕೋಲಸ್‌ ಪೂರನ್‌ ಪಂದ್ಯದ ದಿಕ್ಕನೇ ಬದಲಿಸಿ ತಂಡದ ಗೆಲುವಿಗೆ ಕಾರಣರಾದರು. ಲಖನೌ ಸೂಪರ್‌ ಜೈಂಟ್ಸ್‌ 9 ವಿಕೆಟ್‌ಗೆ 213 ರನ್‌ ಬಾರಿಸಿ ಗೆಲುವು ದಾಖಲಿಸಿತು. 

ಆರ್ ಸಿ ಬಿ ಸೋಲು ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದೆ. ಆದರೂ ನಾವು ಮಾತ್ರ ಆರ್ ಸಿ ಬಿ ಫ್ಯಾನ್ಸ್ ಎಂದು ಹೆಮ್ಮೆ ವ್ಯಕ್ತಿಪಡಿಸುತ್ತಾರೆ ಅಭಿಮಾನಿಗಳು. ಆರ್ ಸಿ ಬಿ ಸೋಲಿನ ಬಗ್ಗೆ ಹಾಗೂ ಮುಂಬರುವ ಸಿಎಸ್‌ಕೆ ವಿರುದ್ಧದ ಪಂದ್ಯದ ಬಗ್ಗೆ ನಿರ್ದೇಶಕ ಸಿಂಪಲ್ ಸುನಿ ಸಾಮಾಜಿಕ ಜಾಲತಾಣದಲ್ಲಿ ಇಂಟ್ರಸ್ಟಿಂಗ್ ಪೋಸ್ಟ್ ಶೇರ್ ಮಾಡಿದ್ದಾರೆ. ಈ ಮ್ಯಾಚ್ ಅಷ್ಟೇಯಲ್ಲ ಇನ್ನೊಂದು ಮ್ಯಾಚ್ ಕೂಡ ಸೋತುಬಿಡಿ ಆದ್ರೆ ಸಿಎಸ್‌ಕೆ ವಿರುದ್ಧದ ಮ್ಯಾಚ್ ಮಾತ್ರ ಗೆಲ್ಲಲೇ ಬೇಕು ಎಂದು ಹೇಳಿದ್ದಾರೆ. 

ಆರ್‌ಸಿಬಿ ಸೋಲಿನ ಬಳಿಕ ನಿರ್ದೇಶಕ ಸುನಿ, 'ಈ ಮ್ಯಾಚ್ ಅಷ್ಟೇ ಅಲ್ಲಾ ಬೇಕಾದರೆ 15ನೇ ತಾರೀಖು ಇರೋ ಇನ್ನೊಂದು ಮ್ಯಾಚ್ ಕೂಡ ಸೋತುಬಿಡಿ. ಆದ್ರೆ 17ನೇ ತಾರಿಖು ನಡೆಯೋ ಮ್ಯಾಚ್ ಮಾತ್ರ ನಮ್ದೆ ಆಗ್ಬೇಕು. RCB ಕೆಂಪು CSK ಹಳದಿ ಸೇರಿದ ಸ್ಟೇಡಿಯಂಲಿ ಶಿಳ್ಳೆ ಎಲ್ಲಾ ನಮ್ ಕಹಳೆನೇ ಮೊಳಗಬೇಕು ಧೋನಿ ಮೇಲೆ ರೆಸ್ಪಕ್ಟ್ ಇದೆ. ಆದರೆ CSK ಮೇಲೆ ಜಿದ್ದಿದೆ. RCB ಮೇಲೆ ಪ್ರಾಣನೇ ಇದೆ' ಎಂದು ಬರೆದುಕೊಂಡಿದ್ದಾರೆ. 

IPL 2023: ಚಿನ್ನಸ್ವಾಮಿಯಲ್ಲಿ ಪೂರನ್‌ ವೈಲೆಂಟ್‌, ಆರ್‌ಸಿಬಿ ಫುಲ್‌ ಸೈಲೆಂಟ್‌!

ಸಿಂಪಲ್ ಸುನಿ ಆರ್ ಸಿ ಬಿಯ ಅಪ್ಪಟ ಅಭಿಮಾನಿ. ಎಷ್ಟೇ ಸೋತರು, ಕಪ್ ಗೆಲ್ಲದಿದ್ದರೂ ಆರ್ ಸಿ ಮೇಲೆ ಪ್ರಾಣನೇ ಇದೆ ಅಂತಾರೆ ಸುನಿ. ಮತ್ತೊಂದು ಸ್ಟೇಟಸ್ ಹಾಕಿರುವ ಸಿಂಪಲ್ ಸುನಿ, 'ವೈಡ್ ಬಾಲ್ ಹಾಕೋದು ಬಿಡೋಲ್ಲ, ಬ್ಯಾಟಿಂಗ್ ಚೆನ್ನಾಗಿ ಮಾಡಿದ್ರೆ ಬೌಲಿಂಗ್ ಮಾಡೋಲ್ಲ. ಬೌಲಿಂಗ್ ಮಾಡಿದ್ರೆ ಬ್ಯಾಟಿಂಗ್  ಆಡೋಲ್ಲ. ಕರ್ನಾಟಕ ಪ್ಲೇಯರ್ಸ್‌ನ ತಗೋಳೊಲ್ಲ ಬ್ಯಾಂಗಳೂರ್‌ನ ಬೆಂಗಳೂರು ಮಾಡೋಲ್ಲ. ಆದರೂ ನಮ್ ಕರ್ಮ ದ್ವೇಷಿಸೋಕೆ ನಮಿಗ್ ಬರೋಲ್ಲ. ನಿಮ್ಮ ಮೇಲೆ ಅಭಿಮಾನ ಕಮ್ಮಿ ಆಗಿಲ್ಲ. ಸ್ಟೇಟಸ್ ಹಾಕ್ದೆ ಮಲಗೋಲ್ಲ' ಎಂದು ಬರೆದುಕೊಂಡಿದ್ದಾರೆ. 

ಇಳಕಲ್‌ ಸೀರೆಯಲ್ಲಿ 'ಈ ಸಲ ಕಪ್‌ ನಮ್ದೇ' ಘೋಷವಾಕ್ಯ! ಆರ್‌ಸಿಬಿ ಅಭಿಮಾನಿ ಸೀರೆಗೆ ಮಹಿಳೆಯರ ಬೇಡಿಕೆ

17ನೇ ತಾರಿಖು CSK ಮತ್ತು RCB ನಡುವೆ ರೋಚಕ ಪಂದ್ಯವಿದೆ. ಈಗಾಗಲೇ ಎರಡು ಪಂದ್ಯ ಸೋತಿರುವ ಆರ್ ಸಿ ಬಿ ಮತ್ತೊಂದು ಪಂದ್ಯ ಸೋತರು ಪರವಾಗಿಲ್ಲ ಆದರೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮಾತ್ರ ಗೆಲ್ಲಲೇ ಬೇಕು ಎನ್ನುತ್ತಿದ್ದಾರೆ. ಆರ್ ಸಿ ಬಿ ಕಪ್ ಗೆಲ್ಲುತ್ತೋ ಇಲ್ವೋ ಗೊತ್ತಿಲ್ಲ ಆದರೆ CSK ವಿರುದ್ಧ ಮಾತ್ರ ಸೋಲಬಾರದು ಎಂದು ಪ್ರಾರ್ಥಿಸುತ್ತಿದ್ದಾರೆ ಆರ್‌ಸಿಬಿ ಫ್ಯಾನ್ಸ್.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೇದಿಕೆ ಮೇಲೆಯೇ 'ಕಚಡಾ ನನ್​ ಮಗನೆ, ಪಾಪಿ ನನ್​ ಮಗನೇ' ಎಂದೆಲ್ಲಾ ಬೈಯೋದಾ ನಟ ಉಪೇಂದ್ರ? ಸ್ಟಾರ್​ ನಟರು ಸುಸ್ತು!
ಚೆಲುವಿನ ಚಿತ್ತಾರ ಕ್ಲೈಮ್ಯಾಕ್ಸ್‌ನಲ್ಲಿ ಅಮೂಲ್ಯ ಕೈಲಿದ್ದ ಮಗು ಈಗ ಹೇಗಾಗಿದ್ದಾನೆ?