ಉಗ್ರರ ಗುಂಡಿಗೆ ಅಪ್ಪ ಬಲಿಯಾಗಿ ಹುತಾತ್ಮರಾದರು, ನಂಗೀಗ ಅಮ್ಮನೇ ಎಲ್ಲವೂ: ನಟಿ ರುಕ್ಮಿಣಿ ವಸಂತ್

By Shriram Bhat  |  First Published Jun 28, 2024, 4:15 PM IST

ನಟಿ ರುಕ್ಮಿಣಿ ವಸಂತ್ ಅವರಿಗೆ, ನಟ-ನಿರ್ದೇಶಕ ರಕ್ಷಿತ್ ಶೆಟ್ಟಿ ನಾಯಕತ್ವದ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ, ಪಾರ್ಟ್ 1 ಹಾಗು ಪಾರ್ಟ್ 2 ಒಳ್ಳೆಯ ರಿಕಗ್ನಿಷನ್ ಹಾಗು ಖ್ಯಾತಿ ತಂದುಕೊಟ್ಟಿವೆ. ಕೇವಲ ಈ ಎರಡೇ ಸಿನಿಮಾಗಳ ಮೂಲಕ ನಟಿ ರುಕ್ಮಿಣಿ ವಸಂತ್..


ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ನಾಯಕಿ ನಟಿ ರುಕ್ಮಿಣಿ ವಸಂತ್ (Rukmini Vasanth) ಅವರು ರ್‍ಯಾಪಿಡ್ ರಶ್ಮಿ ನಡೆಸಿಕೊಡುವ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಅಲ್ಲಿ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ನಟಿ ರುಕ್ಮಿಣಿ ವಸಂತ್ ಅವರು ನಿರೂಪಕಿ ರ್‍ಯಾಪಿಡ್ ರಶ್ಮಿ (Rapid Rashmi) ಕೇಳಿ ದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ 'ನನಗೆ ನನ್ನ ಅಮ್ಮನೇ ಎಲ್ಲವೂ, ಅಮ್ಮನಿಂದಲೇ ನಾನು ಇಲ್ಲಿ ತಲುಪಲು ಸಾಧ್ಯವಾಗಿದ್ದು' ಎಂದಿದ್ದಾರೆ. 

ನಟಿ ರುಕ್ಮಿಣಿ ವಸಂತ್ ತಮ್ಮ ಲೈಫ್ ಜರ್ನಿ ಬಗ್ಗೆ ಹೇಳಿಕೊಂಡಿದ್ದಾರೆ. '31 ಜುಲೈ 2007ರಲ್ಲಿ ನಾನು 10 ವರ್ಷದ ಹುಡುಗಿಯಾಗಿದ್ದಾಗ, ನನ್ನ ತಂದೆ ಕೊಲೋನೆಲ್ ವಸಂತ್ ವೇಣುಗೋಪಾಲ್ ಅವರು  ಜಮ್ಮು ಅಂಡ್ ಕಾಶ್ಮೀರದ ಉರಿ ಹೆಸರಿನ, ಭಾರತ-ಪಾಕಿಸ್ತಾನ ಬಾರ್ಡರ್‌ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ. ಅಂದಿನಿಂದ ಇಂದಿನವರೆಗೂ ನನಗೆ ಎಲ್ಲವೂ ಆಗಿ ನನ್ನ ತಾಯಿಯೇ ನೋಡಿಕೊಂಡಿದ್ದಾರೆ. ನನ್ನ ವಿದ್ಯಾಭ್ಯಾಸ, ಈಗ ಸಿನಿಮಾ ಕೆರಿಯರ್ ಎಲ್ಲವೂ ನನ್ನ ಹಾಗೂ ತಾಯಿಯ ನಡುವೆ ನಡೆದ ಚರ್ಚೆ ಹಾಗೂ ನಿರ್ಧಾರದ ಫಲವೇ ಆಗಿದೆ' ಎಂದಿದ್ದಾರೆ. 

Tap to resize

Latest Videos

ಇದೇನ್ ಮಾತು ಗುರೂ.. ನಿನ್ನೆಗಿಂತ ಇಂದು, ಇಂದಿಗಿಂತ ನಾಳೆ ಚೆನ್ನಾಗಿರಿ; ರಾಕಿಂಗ್ ಸ್ಟಾರ್ ಯಶ್!

ನಟಿ ರುಕ್ಮಿಣಿ ವಸಂತ್ ಅವರಿಗೆ, ನಟ-ನಿರ್ದೇಶಕ ರಕ್ಷಿತ್ ಶೆಟ್ಟಿ ನಾಯಕತ್ವದ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ, ಪಾರ್ಟ್ 1 ಹಾಗು ಪಾರ್ಟ್ 2 ಒಳ್ಳೆಯ ರಿಕಗ್ನಿಷನ್ ಹಾಗು ಖ್ಯಾತಿ ತಂದುಕೊಟ್ಟಿವೆ. ಕೇವಲ ಈ ಎರಡೇ ಸಿನಿಮಾಗಳ ಮೂಲಕ ನಟಿ ರುಕ್ಮಿಣಿ ವಸಂತ್ ಅವರನ್ನು ಕನ್ನಡ ನಾಡು ಗುರುತಿಸುವಷ್ಟರ ಮಟ್ಟಿಗೆ ಅವರು ಬೆಳೆದಿದ್ದಾರೆ. ಅಂದಹಾಗೆ, ನಟಿ ರುಕ್ಮಿಣಿ ವಸಂತ್ ಅವರ ತಂದೆಗೆ ಮರಣೋತ್ತರವಾಗಿ ಅಶೋಕ ಚಕ್ರ ಬಿರುದು ನೀಡಿ ಸನ್ಮಾನಿಸಲಾಗಿದೆ. ಕರ್ನಾಟಕದಲ್ಲಿ ಮೊದಲ ಅಶೋಕ ಚಕ್ರ ಪಡೆದ ಖ್ಯಾತಿ ವಸಂತ್ ವೇಣುಗೋಪಾಲ್ ಅವರದು. 

ನಟ ದರ್ಶನ್ ಖೈದಿ ನಂಬರ್ 6106 ಈಗ ಭಾರೀ ಟ್ರೆಂಡ್, ಬೈಕ್ ಕಾರು ಆಟೋ ಮೇಲೆ ಸ್ಟಿಕ್ಕರ್!

ಒಟ್ಟಿನಲ್ಲಿ, ಸ್ಯಾಂಡಲ್‌ವುಡ್ ಸಿಂಪಲ್ ಸ್ಟಾರ್ ಖ್ಯಾತಿಯ ನಟ ರಕ್ಷಿತ್ ಶೆಟ್ಟಿ ಜೋಡಿಯಾಗಿ ನಟಿಸಿ ರುಕ್ಮಿಣಿ ವಸಂತ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಸದ್ಯ ಕೆಲವು ಆಫರ್‌ಗಳು ಕೈನಲ್ಲಿದ್ದು ಶೂಟಿಂಗ್ ಹಂತದಲ್ಲಿವೆ. ಒಳ್ಳೆಯ ಕಥೆ, ಟೀಮ್ ಸಿಕ್ಕಾಗ ಸಿನಿಮಾ ಒಪ್ಪಿಕೊಂಡು ಮಾಡುವ ಮನಸ್ಥಿತಿಯ ನಟಿ ರುಕ್ಮಿಣಿ ವಸಂತ್, ಜನಮಾನಸದಲ್ಲಿ ಯಾವತ್ತೂ ಉಳಿಯುವಂಥ ಪಾತ್ರದಲ್ಲಿ ನಟಿಸುವ ಬಯಕೆ ಹೊಂದಿದ್ದಾರಂತೆ. ಮುಂದೆ ಯಾವ ಚಿತ್ರದ ಮೂಲಕ ನಟಿ ರುಕ್ಮಿಣಿ ವಸಂತ್ ಕನ್ನಡ ಸಿನಿಪ್ರೇಕ್ಷಕರಿಗೆ ದರ್ಶನ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಅಭಿಮಾನಿಗಳು ಯಾರೂ ಜೈಲಿನ ಬಳಿ ಬರಬೇಡಿ, ಜೈಲ್‌ನಿಂದಲೇ ಫ್ಯಾನ್ಸ್‌ಗೆ ನಟ ದರ್ಶನ್ ಮನವಿ! 

click me!