
ಕೆಜಿಎಫ್-1 ಮತ್ತು 2 ಬಳಿಕ ಅಭಿಮಾನಿಗಳು 3ನೇ ಭಾಗಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಇದಾಗಲೇ ಈ ಚಿತ್ರದ ಶೂಟಿಂಗ್ ಕೂಡ ಆರಂಭವಾಗಿರುವ ಬಗ್ಗೆ ಸುಳಿವು ನೀಡಲಾಗಿದೆ. ಆದರೆ ಸದ್ಯ ಚಿತ್ರದ ಬಗ್ಗೆ ಸಸ್ಪೆನ್ಸ್ ಇಡಲಾಗಿದೆ. ಅದೇ ಇನ್ನೊಂದೆಡೆ, ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ ಇಬ್ಬರು ಪುಟಾಣಿಗಳಾದ ಮಕ್ಕಳು ಆಯ್ರಾ, ಯಥರ್ವ್ ಜೊತೆ ಖುಷಿಯ ಸಂಸಾರ ಮಾಡುತ್ತಿದ್ದಾರೆ. ರಾಧಿಕಾ ಬಣ್ಣದ ಲೋಕದಿಂದ ದೂರವೇ ಆಗಿ ಮಕ್ಕಳ ಪಾಲನೆಯಲ್ಲಿ ತೊಡಗಿದ್ದಾರೆ. ಆಗಾಗ ಪತಿ ಯಶ್ ಜೊತೆಗೆ ಜಾಹೀರಾತುಗಳಲ್ಲಿ ಮಾತ್ರ ಕಾಣಿಸಿಕೊಳ್ತಾರೆ. ಮೊನ್ನೆಯಷ್ಟೇ ಇವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಯಶ್ ಅವರು ಪತ್ನಿ ರಾಧಿಕಾಗೋಸ್ಕರ ʼಜೊತೆಯಲಿ ಜೊತೆಯಲಿʼ ಎಂದು ಹಾಡು ಹಾಡಿದ್ದರು. ಯಶ್ ಹಾಡು ಕೇಳಿದವರು ಖುಷಿಯಿಂದ ಕೂಗಿದ್ದಾರೆ. ಇನ್ನು ಪತಿಯ ಹಾಡು ಕೇಳಿ ರಾಧಿಕಾ ಹೃದಯ ತುಂಬಿ ಬಂದಿರುವ ವಿಡಿಯೊ ವೈರಲ್ ಆಗಿತ್ತು.
ಇದು ರಾಧಿಕಾ ಮಾತಾದರೆ, ಕೆಜಿಎಫ್ ನಟಿ ಮೌನಿ ರಾಯ್ ಬಗ್ಗೆಯೂ ಸಿನಿ ಪ್ರಿಯರಿಗೆ ಚೆನ್ನಾಗಿಯೇ ತಿಳಿದಿದೆ. ಈಕೆ ಖ್ಯಾತ ಕಿರುತೆರೆ ನಟಿ. ಈಕೆ ಬಾಲಿವುಡ್ ತಾರೆ ಕೂಡ. ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮೌನಿ ಹೆಚ್ಚಾಗಿ ಫೇಮಸ್ ಆಗಿರುವುದು ಹಿಂದಿ ಧಾರಾವಾಹಿಗಳ ಮೂಲಕ. ಪಶ್ಚಿಮ ಬಂಗಾಳದ ಮೂಲದ ಮೌನಿ 2007 ರ ಹಿಂದಿ ಸೀರಿಯಲ್ `ಕ್ಯೂಂಕಿ ಸಾಸ್ ಭಿ ಕಬಿ ಬಹು ಥಿ' ಮೂಲಕ ನಟನೆ ಆರಂಭಿಸಿದವರು. ಆದರೆ ಇವರಿಗೆ ಮೊದಲ ಖ್ಯಾತಿ ಕೊಟ್ಟಿದ್ದು ದೇವೋಂಕೆ ದೇವ ಮಹಾದೇವ ಸೀರಿಯಲ್ನ ಪೌರಾಣಿಕ ಪಾತ್ರದಲ್ಲಿ. ಇದರಲ್ಲಿ ಈಕೆ ಸತಿ ಪಾತ್ರ ವಹಿಸಿದ್ದರು. ನಂತರ ನಾಗಿಣಿ ಧಾರಾವಾಹಿ ಮೂಲಕ ಮತ್ತಷ್ಟು ಖ್ಯಾತಿ ಪಡೆದರು. 2018 ರಲ್ಲಿ ತೆರೆಕಂಡ ಅಕ್ಷಯ ಕುಮಾರ್ ಅಭಿನಯದ `ಗೋಲ್ಡ್' ಚಿತ್ರದ ಮೂಲಕ ಬಾಲಿವುಡ್ಗೆ ಪದಾರ್ಪಣೆ ಮಾಡಿದರು ಮೌನಿ. ನಂತರ ಕನ್ನಡದ ಕೆಜಿಎಫ್ ಚಿತ್ರದಲ್ಲಿ ಯಶ್ ಜೊತೆ ಒಂದು ಗೀತೆಯಲ್ಲಿ ಕಾಣಿಸಿಕೊಂಡರು. 2019 ರಲ್ಲಿ ತೆರೆಕಂಡ ಜಾನ್ ಅಬ್ರಾಹಂ ನಟನೆಯ `ರಾ' ಚಿತ್ರದಲ್ಲೂ ಕೂಡ ಕಾಣಿಸಿಕೊಂಡಿದ್ದಾರೆ. ‘ಕೆಜಿಎಫ್: ಚಾಪ್ಟರ್ 1’ ಸಿನಿಮಾದ ‘ಗಲಿ ಗಲಿ ಮೇ..’ ಹಾಡಿನಲ್ಲಿ ಯಶ್ ಜೊತೆ ಸಕತ್ ಸ್ಟೆಪ್ ಹಾಕಿದ್ದಾರೆ. ನಂತರ ಕಳೆದ ಸೆಪ್ಟೆಂಬರ್ನಲ್ಲಿ ಬಿಡುಗಡೆಗೊಂಡ 'ಬ್ರಹ್ಮಾಸ್ತ್ರ' ಚಿತ್ರದ ಜುನೂನ್ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರದಲ್ಲಿ ಮೌನಿ ಚಿತ್ರದ ಮುಖ್ಯ ಕಲಾವಿದರಾದ ರಣಬೀರ್ ಕಪೂರ್ ಹಾಗೂ ಅಲಿಯಾ ಭಟ್ ಗಿಂತ ಉತ್ತಮ ಪಾತ್ರ ನಿರ್ವಹಿಸಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬಂದವು.
KGF ನಟಿಗೆ ಇದೇನಾಯ್ತು? ಆಸ್ಪತ್ರೆಯಲ್ಲಿ 9 ದಿನ! ಮಾಹಿತಿ ನೀಡಿದ ಮೌನಿ ರಾಯ್
ಈಗ ಕುತೂಹಲ ಎನ್ನುವ ವಿಡಿಯೋ ಒಂದು ವೈರಲ್ ಆಗಿದೆ. ಅದರಲ್ಲಿ ಮೌನಿ ರಾಯ್ ಮತ್ತು ರಾಧಿಕಾ ಪಂಡಿತ್ ಅವರು ಒಂದೇ ರೀತಿಯ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನೀಲಿ ಬಣ್ಣದ ಅಪರೂಪದ ಡ್ರೆಸ್ ಆಗಿರುವ ಕಾರಣ, ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸುಮ್ಮನೇ ವೈರಲ್ ಆಗಿದ್ದರೆ ಪರವಾಗಿರಲಿಲ್ಲ. ಇದಕ್ಕೆ ತಮಾಷೆಯ ಮೀಮ್ಸ್ಗಳೂ ಹರಿದಾಡುತ್ತಿವೆ. ಯಶ್ ಅವರು ತಮ್ಮ ಪತ್ನಿ ರಾಧಿಕಾ ಅವರ ಡ್ರೆಸ್ ಅನ್ನು ನಟಿ ಮೌನಿ ರಾಯ್ ಅವರಿಗೆ ಗಿಫ್ಟ್ ಕೊಟ್ಟಿದ್ದಾರೆ ಎಂದು ಕೆಲವರು ಕಾಲೆಳೆಯುತ್ತಿದ್ದರೆ, ಮತ್ತೆ ಕೆಲವರು ಇಲ್ಲ ಇಲ್ಲ... ಕೆಜಿಎಫ್ ಸಂದರ್ಭದಲ್ಲಿ ಮೌನಿ ಬಟ್ಟೆ ತೊಟ್ಟದ್ದು ನೋಡಿ ಖುಷಿಯಾಗಿ ಅದನ್ನು ಅವರು ರಾಧಿಕಾಗೆ ತಂದುಕೊಟ್ಟಿದ್ದಾರೆ ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ.
ಸಾಮಾನ್ಯವಾಗಿ ಸೆಲೆಬ್ರಿಟಿಗಳು ತಮ್ಮದೇ ಆದ ರೀತಿಯಲ್ಲಿ, ತಮಗಿಷ್ಟದ ಬಟ್ಟೆಗಳನ್ನು ಡಿಸೈನ್ ಮಾಡಿಸಿಕೊಳ್ಳುತ್ತಾರೆ. ಹಾಗೆಂದು ಅವರು ಅಂಗಡಿಗಳಿಂದ ಬಟ್ಟೆ ಖರೀದಿ ಮಾಡುವುದಿಲ್ಲವೆಂದೇನಲ್ಲವಲ್ಲ. ಇದೇ ರೀತಿ ಡ್ರೆಸ್ ಖರೀದಿ ಮಾಡಿದ್ದಾರೆ ಇಬ್ಬರಿಗೂ ಈ ಡ್ರೆಸ್ ಹಿಡಿಸಿದೆ. ಇಬ್ಬರ ಟೇಸ್ಟ್ ಕೂಡ ಒಂದೇ ಆಗಿರಲಿಕ್ಕೆ ಸಾಕು. ಇದೇ ಕಾರಣಕ್ಕೆ, ಇಬ್ಬರೂ ಒಂದೇ ರೀತಿಯ ಔಟ್ಫಿಟ್ ಖರೀದಿ ಮಾಡಿದ್ದಾರೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಇದು ಹೈಲೈಟ್ ಆಗುತ್ತಿದೆ. ಇವರಿಬ್ಬರೂ ಒಂದೇ ರೀತಿಯ ಡ್ರೆಸ್ ಧರಿಸಿರುವುದನ್ನು ನೋಡಿ ಅದ್ಯಾವ ಪುಣ್ಯಾತ್ಮರು ವಿಡಿಯೋ ವೈರಲ್ ಮಾಡಿದ್ದಾರೋ ಗೊತ್ತಿಲ್ಲ, ಅವರಿಗೆ ಹ್ಯಾಟ್ಸ್ಆಫ್ ಹೇಳುತ್ತಿರುವ ನೆಟ್ಟಿಗರು, ತಮಾಷೆಯ ಕಮೆಂಟ್ಗಳನ್ನೂ ಮಾಡುತ್ತಿದ್ದಾರೆ. ಈ ವಿಡಿಯೋ ಅನ್ನು ಜೂಮ್ಔಟ್ ಕನ್ನಡ ಶೇರ್ ಮಾಡಿಕೊಂಡಿದೆ.
Mouni Roy: ಪಾಸ್ಪೋರ್ಟ್ ಮರೆತು ಏರ್ಪೋರ್ಟ್ಗೆ ಹೋದ KGF ನಟಿ: ಮುಂದೇನಾಯ್ತು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.