
ಕನ್ನಡ ಚಿತ್ರರಂಗ ಕ್ರಶ್, ನಿಧಿಮಾ ಹಾಗೂ ಕೃಷ್ಣ ಹಾರ್ಟ್ ಕದ್ದ ಡಾರ್ಲಿಂಗ್ ಮಿಲನಾ ನಾಗರಾಜ್ ಹೆಣ್ಣು ಮಕ್ಕಳು ಆರ್ಥಿಕಾವಗಿ ಎಷ್ಟು ಸ್ಟ್ರಾಂಗ್ ಇರಬೇಕು ಎಂದು ಹೇಳಿದ್ದಾರೆ. ಅಲ್ಲದೆ ಆರಂಭದಲ್ಲಿ ನಾನು ಹಣಕ್ಕಾಗಿ ಸಿನಿಮಾ ಮಾಡಿಲ್ಲ ಎಂದು ತಮಗೆ ತಾವೇ ಹಾಕಿಕೊಂಡಿರುವ ರೂಲ್ಸ್‌ಗಳನ್ನು ಹಂಚಿಕೊಂಡಿದ್ದಾರೆ.
'ಕಾಲೇಜ್ ಮುಗಿಯುತ್ತಿದ್ದಂತೆ ದುಡಿಯಲು ಶುರು ಮಾಡಿದೆ. ಸಿನಿಮಾ ಇಲ್ಲದಿದ್ದರೂ ನಾನು ಜಾಹೀರಾತುಗಳನ್ನು ಮಾಡುತ್ತಿದ್ದೆ ಹೀಗಾಗಿ ಆರ್ಥಿಕವಾಗಿ ನನಗೆ ಕಷ್ಟ ಇರಲಿಲ್ಲ. ತಂದೆ ಬಳಿ ಹಣ ಪಡೆದರೂ ಕೂಡ ಅವರಿಗೆ ವಾಪಸ್ ಕೊಡುತ್ತಿದ್ದೆ. ಈ ಸಮಯದಲ್ಲಿ ನನಗೆ ತಾಳ್ಮೆ ಕಲಿಸಿಕೊಟ್ಟಿದ್ದು ಕೃಷ್ಣ. ನನಗೆ ಅಂತ ಕೆಲವೊಂದು ಬೌಂಡ್ರಿಗಳು ಹಾಕಿಕೊಂಡಿದ್ದೀನಿ. ನಾನಾಗಿ ಕೆಲಸ ಕೇಳುವುದಿಲ್ಲ, ಸಿನಿಮಾಗೋಸ್ಕರ ಪರಿಚಯ ಮಾಡಿಕೊಂಡು ಅವರೊಟ್ಟಿಗೆ ಚೆನ್ನಾಗಿ ಇರುವುದು ಅಥವಾ ಉದ್ದೇಶ ಇಟ್ಟುಕೊಂಡು ಮಾತನಾಡುವುದು ಇದ್ಯಾವುದು ನಾನು ಮಾಡಲ್ಲ. ಒಂದು ಅರ್ಥ ಮಾಡಿಕೊಂಡಿರುವುದು ಏನೆಂದರೆ ನನಗೆ ಟ್ಯಾಲೆಂಟ್ ಇದ್ದಾರೆ ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತದೆ. ಬೇರೆ ಯಾವ ರೀತಿಯಲ್ಲಿ ನಾನು ಶ್ರಮ ಹಾಕುವುದಿಲ್ಲ. ನಿನ್ನ ದಾರಿ ನಿನಗೆ ಬೇರೆ ಅವರ ದಾರಿ ಬೇರೆಯವರಿಗೆ, ಯಾವತ್ತೂ ಕಂಪೇರ್ ಮಾಡಬಾರದು ಎಂದು ಹೇಳುತ್ತಿದ್ದರು. ಕಂಪೇರ್ ಮಾಡಿಕೊಂಡಿಲ್ಲ ಅಂದರೂ ತಲೆಗೆ ಅದು ಬರುತ್ತಿತ್ತು' ಎಂದು ರ್ಯಾಪಿಡ್ ರಶ್ಮಿ ಸಂದರ್ಶನದಲ್ಲಿ ಮಿಲನಾ ನಾಗರಾಜ್ ಮಾತನಾಡಿದ್ದಾರೆ.
ನನ್ನನ್ನು ನಂಬಿ ಇಂಡಸ್ಟ್ರಿಗೆ ಕರ್ಕೊಂಡು ಬಂದಿದ್ದೇ ಚಿಕ್ಕಣ್ಣ, ಅಪ್ಪು ಸರ್ ಮಾತು ಮರೆತಿಲ್ಲ: ದರ್ಶಿನಿ
'ಹೀರೋಯಿನ್‌ಗಳಿಗೆ ಲೈಫ್ ಸ್ಪ್ಯಾನ್ ತುಂಬಾನೇ ಕಡಿಮೆ ಅಂತಿದ್ದರು ಆದರೆ ಓಟಿಟಿ ಬಂದಿರುವ ಕಾರಣ ಅವಕಾಶಗಳು ಜಾಸ್ತಿ ಆಗಿದೆ. 10 ವರ್ಷಗಳ ಹಿಂದೆ ನನಗೂ ಅದೇ ಯೊಚನೆ ಇತ್ತು, 8 ವರ್ಷಗಳು ಅಷ್ಟೇ ಹೆಣ್ಣುಮಕ್ಕಳಿಗೆ ಇಂಡಸ್ಟ್ರಿಯಲ್ಲಿ ಅವಕಾಶ ಸಿಗುವುದು ಎಂದು. ಇದು ರನ್ನಿಂಗ್ ರೇಸ್ ಅಲ್ಲ ಕೆಲವರಿಗೆ ಹಿಟ್ ಮತ್ತು ಅವಕಾಶಗಳು 2 ವರ್ಷಕ್ಕೆ ಸಿಗುತ್ತದೆ ಕೆಲವರಿಗೆ 20 ವರ್ಷಕ್ಕೆ ಸಿಗುತ್ತದೆ. ಕೃಷ್ಣ ಸಿಕ್ಕ ಮೇಲೆ ನನಗೆ ತುಂಬಾ ಕಂಫರ್ಟ್ ಸಿಕ್ತು. ಆರಂಭದಲ್ಲಿ ಸಂಪೂರ್ಣವಾಗಿ ಒಪ್ಪಿಕೊಂಡಿರಲಿಲ್ಲ ಆದರೆ ತಂದೆ ಯೋಚನೆ ಮಾಡಿದ್ದರು ಅನ್ಸುತ್ತೆ ಒಂದೇ ವೃತ್ತಿ ಆಗಿರುವ ಕಾರಣ ಸರಿ ಹೋಗುತ್ತದೆ. ನನಗೆ ಮನೆಯಲ್ಲಿ ಸಮಯ ಕೊಟ್ಟ ಕಾರಣ ನಾವು ಸಮಯ ತೆಗೆದುಕೊಂಡು ಮುಂದುವರೆಗೂ ಮದುವೆ ಆಗಿದ್ದು. ಬ್ರೇಕಪ್ ಆಗಬೇಕು ದೂರ ಆಗಬೇಕು ಅನ್ನೋದು ಆಗಿದ್ದರೆ ಆ ಸಮಯಲ್ಲಿ ಆಗಬೇಕಿತ್ತು' ಎಂದು ಮಿಲನಾ ಹೇಳಿದ್ದಾರೆ.
ಪೋಲಿಗಳಿಂದ ಸೇಫ್ ಆಗಲು ಈ ಪಿನ್ ಬಳಸಬೇಕು ಎಂದು ನಟಿ ಜಯಮಾಲಾಗೆ ಟಿಪ್ಸ್ ಕೊಟ್ಟರಂತೆ ಲೀಲಾವತಿ!
'ಇಂಡಸ್ಟ್ರಿಯಲ್ಲಿ ಉಳಿಯುವುದಕ್ಕೆ ಕೃಷ್ಣನೇ ಕಾರಣ. ನಾನು ಯಾವತ್ತಿದ್ದರೂ ಪರ್ಸನಲ್ ಲೈಫ್‌ನ ಪ್ರೊಫೆಶನಲ್ ಲೈಫ್‌ಗಿಂತ ಮುಂದೆ ಇಡುತ್ತೀನಿ. ಸಿನಿಮಾ ಮಾಡಬೇಕು ಎಂದು ಮನೆಯಲ್ಲಿ ಹೇಳಿಕೊಂಡು ರಬ್ ಮಾಡಿಕೊಂಡಾಗ ಕಷ್ಟ ಅರ್ಥ ಆಗಿತ್ತು ಹೀಗಾಗಿ ಫ್ಯಾಮಿಲಿ ಮುಖ್ಯ. ಹಾಗೂ ಕೃಷ್ಣ ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ಮತ್ತು ಕ್ರೆಡಿಟ್ ಕೊಡುತ್ತೀನಿ' ಎಂದಿದ್ದಾರೆ ಮಿಲನಾ.
ಸಪ್ತಮಿ ಗೌಡ ಪ್ರೀತಿಯ ಸಿಂಬಾ ಗುಂಡು ಇನ್ನಿಲ್ಲ; ಫೋಟೋ ಹಂಚಿಕೊಂಡು ಕಣ್ಣೀರಿಟ್ಟ ನಟಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.